ವಿಷಯಕ್ಕೆ ಹೋಗು

ರಾಧಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಂಪ್ರದಾಯಗಳಹಾಡಿನ ರಾಧಮ್ಮನವರು ಇಂದ ಪುನರ್ನಿರ್ದೇಶಿತ)

ಡಿ.ರಾಧಮ್ಮನವರು ಹೊಳಲ್ಮೆರೆಯಲ್ಲಿ ಸಂಪ್ರದಾಯದ ಹಾಡುಗಳನ್ನು ಹೇಳುವುದರಲ್ಲಿ ಪ್ರವೀಣೆಯೆಂದು ಹೆಸರಾದವರು.

ಡಿ.ರಾಧಮ್ಮ
Born
ದೇವನಹಳ್ಳಿ, ಕೋಲಾರ ಜಿಲ್ಲೆ, ಹಳೆ ಮೈಸೂರು ಸಂಸ್ಥಾನ, ೧೬, ಆಗಸ್ಟ್, ೧೯೦೮
Died೧೫,ಆಗಸ್ಟ್,೧೯೯೧
ಬೆಂಗಳೂರು
Occupation(s)ಸದ್ಗೃಹಿಣಿ, ಸಂಪ್ರದಾಯಗಳ ಹಾಡುಗಳಲ್ಲಿ ಪ್ರವೀಣರು. (೧೯೧೫-೧೬)ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆದವರು)
Spouse(s)ಶ್ಯಾನುಭೋಗ, ಲೆಕ್ಖಪತ್ರಗಳಲ್ಲಿ ಪ್ರವೀಣ, ಹೆಸರಾಂತ ಜ್ಯೋತಿಷಿ, ಹೊಳಲ್ಕೆರೆ ವೆಂಕಟನಾರಾಯಣಪ್ಪ ರಂಗರಾವ್
Childrenನಾಗರಾಜ, ರಾಮಕೃಷ್ಣ,ವೆಂಕಟೇಶ,ಚಂದ್ರಶೇಖರ,
Notes
ಬೆಂಗಳೂರು ಆಕಾಶವಾಣಿಯ ಮಹಿಳಾ ಕಾರ್ಯಕ್ರಮದಲ್ಲಿ ಅವರ ಹಾಡುಗಳನ್ನು ಪ್ರಸಾರಮಾಡಿದ್ದರು.

ಜನನ, ಮತ್ತು ಬಾಲ್ಯ

[ಬದಲಾಯಿಸಿ]

ಶ್ರೀಮತಿ ರಾಧಮ್ಮನವರು, [] ದೇವನಹಳ್ಳಿ, ಅಶ್ವಥ್ಥ ನಾರಾಯಣ ರಾವ್, ಮತ್ತು ಶ್ರೀಮತಿ ತಿಮ್ಮಮ್ಮನವರಪುತ್ರಿ, ಶ್ರೀಮತಿ. ರಾಧಮ್ಮನವರು, ಬೆಂಗಳೂರಿನ ಹತ್ತಿರದಲ್ಲಿರುವ, ದೇವನಹಳ್ಳಿಯಲ್ಲಿ, ಆಯಿತುವಾರ, ೧೬, ಆಗಸ್ಟ್, ೧೯೦೮ ರಲ್ಲಿ ಹುಟ್ಟಿದರು.(ಕೀಲಕ ಸಂವತ್ಸರದ ಶ್ರಾವಣ ಬಹುಳ ಪಂಚಮಿ, ರವಿವಾರ) ಅವರ ತಂದೆ, ಶ್ರೀ. ಅಶ್ವತ್ಥನಾರಾಯಣರಾಯರು. ತಾಯಿ, ಮಹಾಸಾಧ್ವಿ, ಶ್ರೀಮತಿ. ತಿಮ್ಮಮ್ಮನವರು. ಇವರು ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡಿದರು. ಪ್ರಾಥಮಿಕಶಾಲೆಯ ಹಂತದಲ್ಲಿ, ಅವರು, ಬೆಂಗಳೂರಿನ ಕಾನ್ವೆಂಟ್ ಶಾಲೆಗೆ ಹೋಗುತ್ತಿದ್ದರು. ಇವರ ವಿವಾಹ, ಹೊಳಲ್ಕೆರೆಯ, ಶ್ಯಾನುಭೋಗರಾಗಿದ್ದ ವೆಂಕಟನಾರಾಯಣಪ್ಪನವರ ಮಗ, ಶ್ರೀ.ಎಚ್.ವಿ.ರಂಗರಾವ್ ಜೊತೆ ನಡೆಯಿತು.

ಸಂಪ್ರದಾಯಗಳ ಹಾಡಿನ ಬಗ್ಗೆ ಒಲವು

[ಬದಲಾಯಿಸಿ]

ರಾಧಮ್ಮನವರು, ಸಂಪ್ರದಾಯದ ಹಾಡುಗಳನ್ನು ಹೇಳುವುದರಲ್ಲಿ ಎತ್ತಿದ ಕೈ. ಅತ್ತುತ್ತಮವಾದ ಕಂಠಶ್ರಿ, ಉಚ್ಚಾರಣೆ, ಇದಲ್ಲದೆ, ಅದ್ಭುತ ಜ್ಞಾಪಕಶಕ್ತಿಗಳಿಂದ, ಎಲ್ಲರಿಗೂ ವಿಸ್ಮಯವಾಗುವರೀತಿಯಲ್ಲಿ, ಮನೆಯಲ್ಲಿ ಜರುಗುವ, ನಾಮಕರಣ, ಅನ್ನಪ್ರಾಷನ, ಮುಂಜಿ, ಮದುವೆ, ಬೀಗರನ್ನು ಕರೆಯುವ ಹಾಡು , ಪ್ರಸ್ತ, ಸೀಮಂತ, ಇತ್ಯಾದಿಗಳನ್ನು ಯಾವಾಗಕೇಳಿದರೂ ತಕ್ಷಣ ಸೊಗಸಾಗಿ ಹೇಳಿಬಿಡುತ್ತಿದ್ದರು. ಎಂದೂ ಕೀರ್ತನೆಗಳಿಗಾಗಿ ಪುಸ್ತಕಗಳನ್ನು ಹುಡುಕಿದವರೇ ಅಲ್ಲ. ಅವರ ಹಾಡಿನ ಪುಸ್ತಕದಲ್ಲಿ, (ಸೆಪ್ಟೆಂಬರ್, ೧೩, ೧೯೩೫ ರಲ್ಲಿ ಬರೆದಿದ್ದ ಅವರ "ನಳಚರಿತ್ರೆ,"[] ಎಂಬ ಹಾಡಿನ ಪುಸ್ತಕದಲ್ಲಿ ಹಲವಾರು ಹಾಡುಗಳನ್ನು ದಾಖಲಿಸಿದ್ದಾರೆ. ಅದು ಈಗಲೂ ಅವರ ಮಕ್ಕಳ ಮನೆಯಲ್ಲಿ ಇದೆ.ಈ ಹಾಡುಗಳ ರಚನೆಕಾರರ ಬಗ್ಗೆ ಎಲ್ಲೂ ಬರೆದಿಲ್ಲ. ಶ್ಲೋಕ ಮುಗಿಯುವ ಮೊದಲು ಏನಾದರೂ ಒಕ್ಕಣಿಲೆ ಇರುತ್ತದೆ. ಅದರಿಂದ ಸ್ವಲ್ಪ ಇಂಗಿತ ತಿಳಿಯುವ ಸಾಧ್ಯತೆಗಳಿವೆ.

ನಳಚರಿತ್ರೆಯ ಪುಸ್ತಕ

[ಬದಲಾಯಿಸಿ]

"ನಳಚರಿತ್ರೆ",[] ರಾಧಮ್ಮನವರ ಕಾಲದಲ್ಲಿ ಬಹಳ ಪ್ರಚಾರದಲ್ಲಿತ್ತಂತೆ. ಅಂತಹ ಅನೇಕ ಹಾಡಿನ ಸಂಗ್ರಹಗಳಲ್ಲಿ ಇದೂ ಪ್ರಮುಖವೆಂದು ಅವರು ಹೇಳುತ್ತಿದ್ದದ್ದನ್ನು, ಅವರ ಮಕ್ಕಳು ಮತ್ತು ಸೊಸೆಯರು ಇಂದಿಗೂ ಜ್ಞಾಪಿಸಿಕೊಳ್ಳುತ್ತಾರೆ. ನಳಚರಿತ್ರೆಯಲ್ಲಿ,

ರಾಧಮ್ಮನವರ, ಅದ್ಭುತ ಜ್ಞಾಪಕ ಶಕ್ತಿ

[ಬದಲಾಯಿಸಿ]

ಇಷ್ಟನ್ನೂ ರಾಧಮ್ಮನವರು ತಮ್ಮ ಜ್ಞಾಪಕಶಕ್ತಿಯಿಂದ ಅತ್ಯಂತ ಹರ್ಷದಿಂದ ಚಾಪೆಯಮೇಲೆ ಕುಳಿತುಕೊಂಡು, ಒಂದಾದ ಮೇಲೆ ಒಂದರಂತೆ, ಸ್ವಲ್ಪವೂ ತಡವರಿಸದೆ, ನಗುಮುಖದಿಂದ ಹಾಡಿದನಂತರ, ಮಂಗಳಾರತಿಯ ಹಾಡನ್ನು ಹೇಳಿ ಆರತಿ ಬೆಳಗಿದ ಮೇಲೆ, ಪೂಜೆ ಮುಕ್ತಾಯವಾಗುತ್ತಿತ್ತು. ಅಲ್ಲಿಯವವರೆಗೂ ಎಲ್ಲರೂ ಭಕ್ತಿಯಿಂದ ಅವರ ಹಾಡಿನಲ್ಲಿ ಮಗ್ನರಾಗುತ್ತಿದ್ದರು. ಮಧ್ಯೆ, ನಳಮಹರಾಯನ ಅವಸ್ಥೆ, ಪರದಾಟಗಳನ್ನೂ, ದಮಯಂತಿ ಆತನನ್ನು ಸಂತೈಸುವ ರೀತಿಯನ್ನೂ ಮನದಟ್ಟಾಗುವಂತೆ ಕನ್ನಡದಲ್ಲಿ ವಿವರಿಸುತ್ತಿದ್ದರು. ಅವರ ಮಂಗಳಾರತಿಯ ಹಾಡು (ಕೀರ್ತನೆ) ಶೇಷಶಯನ ಕೇಶವಗೆ, ಶುಭಮಂಗಳಂ' 'ವಾಸುಕಿ ಶಯನನಿಗೆ ಶುಭಮಂಗಳಂ' []ಎನ್ನುವ ಹಾಡು ಸರ್ವರಿಗೂ ಅಚ್ಚುಮೆಚ್ಚಾದದ್ದು.

ಪತಿ ರಂಗರಾಯರು, ಬರೆದಿಟ್ಟ 'ನಳಚರಿತ್ರೆ,'

[ಬದಲಾಯಿಸಿ]

ರಾಧಮ್ಮವರ ಹಾಡಿನಗೀಳಿಗೆ ಸರಿಯಾಗಿ ಸ್ಪಂದಿಸುವ ಪತಿ,ರಂಗರಾಯರು ರಾಧಮ್ಮನವರ ಹಾಡಿನ ಪುಸ್ತಕದಲ್ಲಿ, ರಾಯರೇ ತಮ್ಮ ಸ್ಫುಟವಾದ ಅಕ್ಷರಗಳಲ್ಲಿ ಎಲ್ಲಾ ಹಾಡುಗಳನ್ನೂ ಚೆನ್ನಾಗಿ ಬರೆದಿಟ್ಟಿದ್ದಾರೆ. ತಮ್ಮ ೪ ಜನ ಮಕ್ಕಳಿಗೆಲ್ಲ ತಲಾ ಒಂದೊಂದು ಪ್ರತಿಮಾಡಿಸಿ ಕೊಟ್ಟಿದ್ದಾರೆ."ತಾಯಿ-ತಂದೆಯವರು ಮಕ್ಕಳಿಗೆ ಕೊಡುವ ಅಮೂಲ್ಯವಾದ ಸಂಪತ್ತಿನಲ್ಲಿ ಇವೂ ಪ್ರಮುಖಪಾತ್ರವಹಿಸಿವೆ."

ಬೇರೆ ಹಾಡುಗಳು

[ಬದಲಾಯಿಸಿ]

ಡಿ.ರಾಧಮ್ಮನವರ ಪುಸ್ತಕದಲ್ಲಿ, ೫ ಶುಕ್ರವಾರದ ಹಾಡುಗಳು, ಬಾಣಂತಿಲೇಹ, ಮಾಡುವ ವಿಧಾನವನ್ನೂ ಬರೆದಿಟ್ಟಿದ್ದಾರೆ. ಆಗ ಈ ಲೇಹ, ಅತ್ಯಂತ ಬೇಡಿಕೆಯಲ್ಲಿತ್ತು. ಅವರಿಗೆ,ಕನ್ನಡಲ್ಲಿ ದಾಸರಕೀರ್ತನೆಗಳು,ತೆಲುಗಿನಲ್ಲಿ,ತಮಿಳಿನಲ್ಲಿ, ಕೀರ್ತನೆಗಳು,ಹಿಂದೂಸ್ಥಾನಿ ಮತ್ತು ಮರಾಠಿಭಕ್ತಿಸಂಗೀತ್,ಮರಾಠಿ ರಂಗಭೂಮಿಯ ಹಾಡುಗಳುಬರುತ್ತಿತ್ತು.

ಎಚ್.ಎಮ್.ವಿ.ಧ್ವನಿಮುದ್ರಿಕೆಗಳು

[ಬದಲಾಯಿಸಿ]

ಗಾದೆಗಳನ್ನು ಆಗಿನಕಾಲದಜನರು, ತಮ್ಮ ಪ್ರತಿದಿನದ ಜೀವನದಲ್ಲಿ ಉಪಯೋಗಮಾಡುತ್ತಿದ್ದರಿಂದ, ರಾಧಮ್ಮನವರಿಗೂ ಅದೇ ರೂಢಿಯಾಗಿತ್ತು. ಮಾತು-ಮಾತಿಗೂ ಅವರು, ಗಾದೆಗಳು, ಉಪಮೆಗಳು, ಪ್ರಸಂಗಗಳನ್ನು ಜ್ಞಾಪಿಸಿಕೊಂಡು, ಹೇಳುತ್ತಿದ್ದದ್ದನ್ನು ಇಂದಿಗೂ ಅವರ ಸೊಸೆ ಮಕ್ಕಳು ಜ್ಞಾಪಿಸಿಕೊಳ್ಳುತ್ತಾರೆ. ತಮ್ಮ ಮನೆಯಲ್ಲಿ, ೧೯೩೫ ನೆಯ ಇಸವಿಯಲ್ಲೇ ಧ್ವನಿಮುದ್ರಿಕೆಗಳು ಇದ್ದವು. ರೆಕಾರ್ಡ್ ಹಚ್ಚಿದಾಗ, ಅದರ ಜೊತೆಜೊತೆಯಾಗಿ ಪ್ರತಿದಿನ ಹಾಡಿ, ಅದು ಅವರಿಗೆ ಕಂಠಪಾಠವಾಗಿತ್ತು.ಈ ಕೆಳಗೆ ದಾಖಲಿಸಿದ ಎಲ್ಲಾ ಹಾಡುಗಳನ್ನೂ ಅವರು ನಿರರ್ಗಳವಾಗಿ ತಮ್ಮ ಮನೆಯಲ್ಲಿ ಮತ್ತು ಕೇಳಲು ಆಶಿಸಿದವರ ಬಳಿ ನಿಗರ್ವಿಗಳಾಗಿ ಹಾಡುತ್ತಿದ್ದರು.

ಗ್ರಾಮಾಫೋನ್ ರೆಕಾರ್ಡಗಳು

[ಬದಲಾಯಿಸಿ]
  • ೧. ಕನ್ನಡ-೧೫
  • ೨. ತೆಲುಗುಮತ್ತು ತಮಿಳು- ೨೩
  • ೩. ಸಂಸ್ಕೃತ/ ಇಂಗ್ಲೀಷ್-೬
  • ೪. ಮರಾಠಿ/ಹಿಂದೂಸ್ತಾನಿ-೭೭
  • ೫. ವಾದ್ಯವೃಂದದ ರೆಕಾರ್ಡಗಳು-6

ರೆಕಾರ್ಡ್ಸ್ ಗಳು ಹೀಗಿದ್ದವು

[ಬದಲಾಯಿಸಿ]
  • ನಗುವ ಹಾಡು,
  • ರೈಲ್ವೆ ಸ್ಟೇಷನ್ ನ ಶಬ್ದ
  • ಉಗಿಬಂಡಿಯ ಇಂಜಿನ್ ಮಾಡುವ ’ಚುಕು-ಚುಕು’ ಶಬ್ದ.
  • ಚಾಯ್, ಚಾಯ್ , ಎಂದು 'ಟೀ ಮಾರುವ ಹುಡುಗರ,' ಕೂಗು.
  • ಗಾರ್ಡ್ ಶೀಟಿ ಹಾಕುವ ಶಬ್ದ ಇತ್ಯಾದಿ.
  • ಹವಾಯಿಜಹಾಜ್, ನೆಲದಿಂದ ಮೆಲಕ್ಕೇರುವವಾಗಿನ ಶಬ್ದ
  • ಹುಟ್ಟುಹಬ್ಬದ ಪಾರ್ಟಿಯಲ್ಲಿ ನಗುವ ಶಬ್ದ.
  • ರೆಕಾರ್ಡ್ ಮುಗಿದಮೇಲೆ, "ಈ ಹಾಡುಹೇಳಿದವಳು, ನಾಗಮ್ಮ, ೧೨ ವರ್ಷದ ಬಾಲೆ", ಎನ್ನುವ ಮಾತೂ ಕೇಳಿಸುತ್ತಿತ್ತು. ಇದು ಅತ್ಯಂತ ವಿಶೇಷವಾದ ಧ್ವನಿ-ಮುದ್ರಿಕೆ.

ಗ್ರಾಮಾಫೋನ್ ರೆಕಾರ್ಡ್ ಗಳ ಬಗ್ಗೆ ಮಾಹಿತಿ

[ಬದಲಾಯಿಸಿ]

ಕೆಲವು ಅಪರೂಪದ ರೆಕಾರ್ಡ್ ಗಳು, ಈ ಧ್ವನಿಮುದ್ರಿಕೆಗಳ ವಿವರಗಳು,ರಾಧಮ್ಮನವರ ಮಕ್ಕಳಬಳಿ ಇವೆ.

  1. ಕೋದಂಡರಾಮಶರ್ಮರ, "ಸಹಸ್ರಶೀರ್ಷ ಪುರುಷಸೂಕ್ತ".
  2. "ರುದ್ರಂ",-ಗೋಪಾಲಶಾಸ್ತ್ರಿ ಮತ್ತು ಸುಬ್ರಹ್ಮಣ್ಯ ಶಾಸ್ತ್ರಿ.
  3. "ಕಲ್ಯಾಣಮಧದಾಶೀರ್ವಾದ,"ಓಂ ನಮೋ ಭಗವತೇ ವಾಸುದೇವಾಯ"-ಕೃಷ್ಣರಾವ್ ಶಿಂಡೆ, ಭೈರವಿ ರಾಗ.
  4. "ನಾದಬಿಂದು ಕಲಾದೀನ ನಮೋ"- ಸುಬ್ಬಯ್ಯ ಭಾಗವತರ್, ತಮಿಳಿನಲ್ಲಿ, ಜಂಜೂಟಿರಾಗ.
  5. ಇಂಗ್ಲೀಷ್."ದುಂಡುಮೇಜಿನ ಸಮ್ಮೇಳನ," ಲಂಡನ್ ನಲ್ಲಿಮಹಾತ್ಮಗಾಂಧಿ,ಯವರ ಭಾಷಣ.
  6. "ವಂದೇ ಮಾತರಂ"-ವಿಷ್ಣು ಪಂಥ್.
  7. "ಪತಿತಂ ದೀನೋದ್ಧರಣಂ"-ವಿಷ್ಣು ಪಂಥ್.

'ರಾಧಮ್ಮ'ನವರು, ಸನ್, ೧೯೯೧ ರ,ಆಗಸ್ಟ್,೧೫ ರಂದು,'ಶಿರಿಯಾಳ್ ಶ್ರಷ್ಠಿ'ಯದಿನ,'ಬೆಂಗಳೂರಿ'ನಲ್ಲಿ ನಿಧನರಾದರು.ಕೆಲವು ತಿಂಗಳುಗಳಿಂದ ಅವರು ಹಾಸಿಗೆ ಹಿಡಿದಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. http://www.shorpy.com/node/19928,
  2. "'ನಳಚರಿತ್ರೆ'ಯ ಪ್ರಸಂಗ.'(ಕರ್ನಾಟಕದಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿ ಹೇಳುವ ಹಾಡುಗಳು)'". Archived from the original on 2008-08-21. Retrieved 2014-07-16.
  3. 'entire-nalacharitre-is-sung-by-heart-by-smt-radhamma-ranga-rao'
  4. ಶೇಷಶಯನ ಕೇಶವಗೆ ಶುಭಮಂಗಳಂ ಹಾಗೂ ಅಹಲ್ಯಾ ದ್ರೌಪದಿ ತಾರಾ,Audio Song
"https://kn.wikipedia.org/w/index.php?title=ರಾಧಮ್ಮ&oldid=1057883" ಇಂದ ಪಡೆಯಲ್ಪಟ್ಟಿದೆ