ಸಂಪಿಗೆ ರಸ್ತೆ

ಸಂಪಿಗೆ ರಸ್ತೆ ಬೆಂಗಳೂರಿನ ಹೃದಯ ಭಾಗದ ಮಲ್ಲೇಶ್ವರಂ ಬಡಾವಣೆಯ ಪ್ರಮುಖ ರಸ್ತೆ. ಇದು ಪ್ರಮುಖ ವ್ಯಾಪಾರೀ ವಹಿವಾಟಿನ ರಸ್ತೆ. ಸದಾ ಇದು ಜನ ಜಂಗುಳಿಯಿಂದ ಕೂಡಿರುತ್ತದೆ. ಇಲ್ಲಿ ಪ್ರಮುಖ ಸಂಸ್ಥೆಗಳ ಕಂಪನಿಯ ಶೋ ರೂಮ್‌ಗಳಿವೆ. ತಿಂಡಿ ತಿನಿಸುಗಳಿಗಾಗಿ ಚಾಟ್ ಸ್ಥಳಗಳಿವೆ. ೧೫ನೇ ಕ್ರಾಸಿನ ಬಳಿ ಮಲ್ಲೇಶ್ವರ ಮಾರುಕಟ್ಟೆಯಿದೆ.ಇಲ್ಲಿ ಮೆಟ್ರೊ ರೈಲು ನಿಲ್ದಾಣವಿದ್ದು ಅದನ್ನು ಮಂತ್ರಿ ಡೆವೆಲಪರ್ಸ್ ರವರು ಮಂತ್ರಿ ಸ್ಕ್ವೇರ್ ಶಾಪಿಂಗ್ ಮಾಲ್[೧] ಬಳಿ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಶಾಪಿಂಗ್ ಮಾಲ್ ನಿಂದ ಮೆಟ್ರೊ ನಿಲ್ದಾಣಕ್ಕೆ ನೇರವಾಗಿ ಸೇತುವೆ ಮೂಲಕ ಹೋಗಬಹುದು,ಇದು ಭಾರತದಲ್ಲಿಯೇ ಮೊದಲನೆಯದ್ದಾಗಿದೆ.[೨][೩]