ಸಂಪತ್ತಿನ ಸೋರಿಕೆಯ ಸಿದ್ಧಾಂತ

ವಿಕಿಪೀಡಿಯ ಇಂದ
Jump to navigation Jump to search

ಸಂಪತ್ತಿನ ಸೋರಿಕೆಯ ಸಿದ್ಧಾಂತವು ಭಾರತದಲ್ಲಿನ ವಸಾಹತುಶಾಹಿ ಆಡಳಿತದ ಬಗ್ಗೆ ರಾಷ್ಟ್ರೀಯವಾದಿಗಳು ಪ್ರತಿಪಾದಿಸಿದ ಆರ್ಥಿಕ ವಿಮರ್ಶೆಯನ್ನು ಉಲ್ಲೇಖಿಸುತ್ತದೆ. ಭಾರತದಿಂದ ಇಂಗ್ಲೆಂಡ್‌ಗೆ ಸಂಪತ್ತಿನ ಒಂದು ಮಾರ್ಗದ ಹರಿವನ್ನು ಅದು ವಿವರಿಸುತ್ತದೆ. ಪ್ರತಿಕೂಲ ವ್ಯಾಪಾರ ಸಮತೋಲನದ ಪರಿಣಾಮವಾಗಿ ದೇಶದಿಂದ ಚಿನ್ನ ಮತ್ತು ಬೆಳ್ಳಿ ಹೊರಗೆ ಹರಿಯುವ ಬಗ್ಗೆ ಈ ಸಿದ್ದಾಂತವು ಪ್ರತಿಪಾದಿಸುತ್ತದೆ.[೧]

ಸಂಪತ್ತಿನ ಸೋರಿಕೆಯ ಸಿದ್ಧಾಂತದ ಮೂಲಗಳು[ಬದಲಾಯಿಸಿ]

೧೭ನೇ ಮತ್ತು ೧೮ನೇ ಶತಮಾನದ ಆರಂಭದಲ್ಲಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಚಿನ್ನ ಮತ್ತು ಬೆಳ್ಳಿಯನ್ನು ೨೦ ಮಿಲಿಯನ್ ಗೆ ಆಮದು ಮಾಡಿಕೊಳ್ಳುತ್ತಿತ್ತು ಮತ್ತು ಭಾರತದಲ್ಲಿ ಸರಕುಗಳನ್ನು ಖರೀದಿಸಲು ಇಂಗ್ಲೆಂಡ್‌ನಿಂದ ಹಣವನ್ನು ಬಳಸುತ್ತಿತ್ತು. ಈ ಸರಕುಗಳನ್ನು ನಂತರ ಮಾರಾಟಕ್ಕಾಗಿ ಯುರೋಪಿಗೆ ರಫ್ತು ಮಾಡಲಾಗುತ್ತಿತ್ತು. ಪ್ಲ್ಯಾಸ್ಸಿ (೧೭೫೭) ಮತ್ತು ಬಕ್ಸಾರ್ (೧೭೬೪) ಕದನಗಳ ನಂತರ, ಅಲಹಾಬಾದ್ ಒಪ್ಪಂದಕ್ಕೆ (೧೭೬೫) ಬ್ರಿಟಿಷರು ಸಹಿ ಹಾಕಿದರು. ಈ ಒಪ್ಪಂದದ ಪ್ರಕಾರ, ಬಂಗಾಳ ಪ್ರಾಂತ್ಯದಿಂದ ಭೂ ಆದಾಯವನ್ನು ಸಂಗ್ರಹಿಸಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಅರ್ಹತೆ ನೀಡಲಾಯಿತು. ಅಂದಿನಿಂದ ಕಂಪನಿಯು ಭಾರತದಿಂದ ಹೆಚ್ಚುವರಿ ಆದಾಯವನ್ನು ಗಳಿಸಲು ಪ್ರಾರಂಭಿಸಿತು. ಕಂಪನಿಯು ಈ ಆದಾಯವನ್ನು ಭಾರತದಲ್ಲಿ ಸರಕುಗಳನ್ನು ಖರೀದಿಸಲು ಬಳಸಿಕೊಂಡಿತು.[೨] ನಂತರ ಅವುಗಳನ್ನು ಯುರೋಪ್ ಮತ್ತು ಇತರೆಡೆ ಮಾರಾಟಕ್ಕಾಗಿ ರಫ್ತು ಮಾಡಲಾಯಿತು. ಭಾರತದಲ್ಲಿ ತನ್ನ ಕಾರ್ಯಾಚರಣೆಗಳಿಗೆ ಹಣಕಾಸು ಒದಗಿಸಲು ಕಂಪನಿಯು ಇಂಗ್ಲೆಂಡ್‌ನಿಂದ ಬುಲಿಯನ್ (ಚಿನ್ನ ಅಥವಾ ಬೆಳ್ಳಿಯ ಗಟ್ಟಿ) ಮತ್ತು ಹಣವನ್ನು ಆಮದು ಮಾಡಿಕೊಳ್ಳುವ ಅಗತ್ಯವನ್ನು ಅಂತಿಮವಾಗಿ ನಿಲ್ಲಿಸಿದರು. ಇದರ ಪರಿಣಾಮವಾಗಿ ಭಾರತೀಯ ಸರಕುಗಳನ್ನು ಖರೀದಿಸಲು ಭಾರತೀಯ ಆದಾಯವನ್ನೇ ಬಳಸಿದರು ಮತ್ತು ನಂತರ ಅದನ್ನು ಭಾರತದಿಂದಲೇ ರಫ್ತು ಮಾಡಲಾಗುತ್ತಿತ್ತು. ಇದರಿಂದ ಭಾರತದ ಸಂಪತ್ತು ಬರಿದಾಗಲು ಪ್ರಾರಂಭವಾಯಿತು.[೩]

ಈಸ್ಟ್ ಇಂಡಿಯಾ ಕಂಪೆನಿಯು ತಾನು ಅನುಭವಿಸುತ್ತಿದ್ದ ಉನ್ನತ ಸ್ಥಾನದಿಂದಾಗಿ ಸಂಪತ್ತಿನ ಸೋರಿಕೆಯು ಸುಗಮಗೊಂಡಿತು

ಕಂಪನಿಯು ಆರಂಭದಲ್ಲಿ ಉಭಯ ಪಾತ್ರವನ್ನು ಹೊಂದಿತ್ತು. ಒಂದು ಕೈಯಲ್ಲಿ, ಇದು ಭೂಮಿ ಆದಾಯದ ತೆರಿಗೆಗಳನ್ನು ಲೆಕ್ಕಹಾಕಲು ಮತ್ತು ಸಂಗ್ರಹಿಸಲು ಶಕ್ತಿಯನ್ನು ಹೊಂದಿದ್ದ ಸರ್ಕಾರಿ ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಮತ್ತೊಂದೆಡೆ ವಾಣಿಜ್ಯ ಘಟಕವಾಗಿ ಕಾರ್ಯನಿರ್ವಹಿಸಿತು ಮತ್ತು ಭಾರತದಲ್ಲಿ ಸಂಗ್ರಹಿಸಿದ ಆದಾಯವನ್ನು, ಅದರ ವ್ಯವಹಾರವನ್ನು ವಿಸ್ತರಿಸಲು ಹೂಡಿಕೆ ಮಾಡುತ್ತಿದ್ದರು. ಕಂಪೆನಿಗೆ ಸಿಗುತ್ತಿದ್ದ ಆದಾಯವು, ಇತಿಹಾಸಕಾರರು ರಾಜಕೀಯ ಗೌರವವೆಂದು ಬಣ್ಣಿಸಿದ್ದಾರೆ. ಕಂಪನಿಯು ಭಾರತೀಯ ಪ್ರದೇಶಗಳಿಂದ ಆದಾಯವನ್ನು ಸೃಷ್ಟಿಸಿದ ಸಾಮರ್ಥ್ಯ ಮತ್ತು ಅದರ ಸಂಪೂರ್ಣ ಆದಾಯದಲ್ಲಿ ಒಂದು ಭಾಗವನ್ನೂ ಭಾರತವು ಪಡೆಯಲು ಸಾಧ್ಯವಾಗಲಿಲ್ಲ ಎಂಬ ಅರ್ಥದಲ್ಲಿ ಈ ಗೌರವವು ವ್ಯಕ್ತವಾಯಿತು. ಇದು ಮುಖ್ಯವಾಗಿ ರಾಜಕೀಯ ವ್ಯಾಪಾರವಾಗಿತ್ತು. ಇದರಿಂದಾಗಿ ಇದು ಒಂದು ಸಾಮಾನ್ಯ ವ್ಯಾಪಾರವಾಗಿರಲಿಲ್ಲ.

ಆದಾಯವು ಹೆಚ್ಚುವರಿಯಾಗಿ ಉತ್ಪತ್ತಿಯಾಗಲು ಮುಖ್ಯ ಕಾರಣಗಳು -

 • ಭೂಮಿ ಆದಾಯ ನೀತಿಗಳ ದಬ್ಬಾಳಿಕೆ
 • ಭಾರತೀಯ ಮಾರುಕಟ್ಟೆಯ ಮೇಲೆ ಏಕೀಕರಣ
 • ಅಧಿಕಾರಿಗಳು ಮಾಡಿದ ಮಾಪಕಗಳು

ಕಂಪನಿಯು ಆದಾಯದ ಹೆಚ್ಚುವರಿ ಬಂಡವಾಳವನ್ನು ಹೂಡಿಕೆಯಾಗಿ ಬಳಸಿದೆ ಮತ್ತು ಅದರೊಂದಿಗೆ ಇತರೆ ಖರೀದಿಗಳನ್ನು ಮಾಡಿದೆ. ಈ ವ್ಯವಸ್ಥೆಯು ೧೮೧೩ ರ ಚಾರ್ಟರ್ ಆಕ್ಟ್ ನಿಂದ ಕೊನೆಗೊಂಡಿತು.

ಸಂಪತ್ತಿನ ಸೋರಿಕೆಯ ಪ್ರಮುಖ ಘಟಕಗಳು[ಬದಲಾಯಿಸಿ]

ಪ್ರಾದೇಶಿಕ ವಿಸ್ತರಣೆ[ಬದಲಾಯಿಸಿ]

ಕಂಪೆನಿಯು ಭಾರತದ ಪ್ರದೇಶಗಳನ್ನು ವಿಸ್ತರಿಸಲು ಆದಾಯವನ್ನು ಬಳಸಿತ್ತು. ಅಂದರೆ, ಸ್ಥಳೀಯ ಆಡಳಿತಗಾರರ ವಿರುದ್ಧ ಕಂಪನಿಯ ಮಿಲಿಟರಿ ಕಾರ್ಯಾಚರಣೆಗಳನ್ನು ಮಾಡಲು ಈ ಹಣಕಾಸನ್ನು ಬಳಸಲಾಗುತ್ತಿತ್ತು.

ಖಾಸಗಿ ಸಂಪತ್ತಿನ ಚಲನೆ[ಬದಲಾಯಿಸಿ]

ಕಂಪನಿಯ ಆದಾಯದ ಹೊರತಾಗಿ, ಭಾರತದ ಖಾಸಗಿ ಹಣವೂ ಇಂಗ್ಲೆಂಡ್ ಸೋರಿಕೆಯಾಗುತಿತ್ತು. ಇದು ಮುಖ್ಯವಾಗಿ ವಿನಿಮಯದ ಮಸೂದೆಗಳ ಮೂಲಕ ಸಂಭವಿಸಿತು. ಕೆಲವು ಖಾಸಗಿ ಹಣವು, ಯುದ್ಧಗಳಲ್ಲಿ ವಿರೋಧಿಯನ್ನು ಸೋಲಿಸಿ ಗಳಿಸಿದ ಹಣ, ಸ್ಥಳೀಯ ರಾಜ್ಯಗಳಿಂದ ಪಡೆದ ಲಂಚ ಮತ್ತು ಸಂಪತ್ತುಗಳು ಹಾಗೂ ಭಾರತೀಯ ವ್ಯಾಪಾರಿಗಳೊಂದಿಗೆ ಮೋಸದ ವ್ಯವಹಾರ ಒಪ್ಪಂದಗಳಿಂದ ಸಂಗ್ರಹಿಸಿರುವ ಹಣವಾಗಿರುತ್ತದೆ.

ಕಂಪೆನಿಯ ಪಾವತಿಗಳು (ಗೃಹ ಶುಲ್ಕ)[ಬದಲಾಯಿಸಿ]

ಇಂಗ್ಲೆಂಡ್ಗೆ ಕಂಪೆನಿಯ ಮಾಡುತ್ತಿದ್ದ ಪಾವತಿಗಳು ಸೋರಿಕೆಯ ಪ್ರಮುಖ ಭಾಗವನ್ನು ರಚಿಸಿತು.

 • ಇಂಗ್ಲೆಂಡ್ ನಲ್ಲಿ ಕಂಪನಿಯ ಉದ್ಯೋಗಿಗಳಿಗೆ ಪಾವತಿಸಿದ ವೇತನಗಳು ಮತ್ತು ಪಿಂಚಣಿಗಳನ್ನು ಒಳಗೊಂಡಿತ್ತು.
 • ಇಂಗ್ಲೆಂಡ್ ನ ಕಂಪೆನಿಯಿಂದ ಬೆಳೆದ ಸಾಲಗಳ ಮೇಲೆ ಬಡ್ಡಿ ಮೊತ್ತ.
 • ಕಂಪೆನಿಯ ಷೇರುಗಳ ಮೇಲಿನ ಲಾಭಾಂಶ.

ವಿದೇಶಿ ಬ್ಯಾಂಕಿಂಗ್ ಮತ್ತು ವಿಮಾ ಕಂಪೆನಿಗಳಿಗೆ ಪಾವತಿಗಳು[ಬದಲಾಯಿಸಿ]

ಇದು ಭಾರತದಿಂದ ಆಗುತ್ತಿದ್ದ ಸಂಪತ್ತಿನ ಸೋರಿಕೆಯ ಮತ್ತೊಂದು ರೂಪವಾಗಿದೆ. ಇದು ಭಾರತದಲ್ಲಿ ನಿರೂಪಿಸುವ ಸೇವೆಗಳಿಗೆ ಇಂಗ್ಲೆಂಡ್ ನಲ್ಲಿ ಬ್ಯಾಂಕುಗಳು, ವಿಮೆ ಕಂಪನಿಗಳು, ಶಿಪ್ಪಿಂಗ್ ಕಂಪನಿಗಳಿಗೆ ಪಾವತಿಸಿದ ಮೊತ್ತವನ್ನು ಒಳಗೊಂಡಿತ್ತು.

ಕಂಪೆನಿಯಿಂದ ಆಗುತ್ತಿದ್ದ ಹಣ ರವಾನೆಯ ಇತರ ರೂಪಗಳು[ಬದಲಾಯಿಸಿ]

ಕಂಪನಿಯು ಹಣವನ್ನು ಇಂಗ್ಲೆಂಡ್‌ಗೆ ರವಾನೆ ಮಾಡುತ್ತಿದ್ದರಿಂದ, ಅದು ಸೋರಿಕೆಯ ಪ್ರಮುಖ ಭಾಗವಾಯಿತು. ಇದರಲ್ಲಿ ಒಳಗೊಂಡ ಸೋರಿಕೆಯ ಪ್ರಮುಖ ರೂಪಗಳು:

 • ಇಂಗ್ಲೆಂಡ್‌ನಲ್ಲಿ ಕಂಪನಿಯ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ಸಂಬಳ ಮತ್ತು ಪಿಂಚಣಿ.
 • ಕಂಪನಿಯು ಇಂಗ್ಲೆಂಡ್‌ನಲ್ಲಿ ಸಂಗ್ರಹಿಸಿದ ಸಾಲಗಳ ಮೇಲಿನ ಬಡ್ಡಿ ಮೊತ್ತ.
 • ಕಂಪನಿಯ ಷೇರುದಾರರಿಗೆ ಪಾವತಿಸಿದ ಲಾಭಾಂಶ.
 • ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟಿಷ್ ನಾಗರಿಕ ಮತ್ತು ಮಿಲಿಟರಿ ಸಿಬ್ಬಂದಿಗೆ ನೀಡಲಾಗುವ ಸಂಬಳ ಮತ್ತು ಪಿಂಚಣಿಗಳು.

ರವಾನೆಯಾಗುವ ಮೊತ್ತವು ಪ್ರತಿವರ್ಷ ಬದಲಾಗುತ್ತಿದ್ದರೂ, ಇದು ವರ್ಷಕ್ಕೆ ಒಂದರಿಂದ ಮೂರು ಕೋಟಿ ರೂಪಾಯಿಗಳ ವ್ಯಾಪ್ತಿಯಲ್ಲಿದೆ ಎಂದು ಅಂದಾಜಿಸಲಾಗಿದೆ.

ಸಂಪತ್ತಿನ ಸೋರಿಕೆಗೆ ಪ್ರಮುಖ ಕಾರಣಗಳು[ಬದಲಾಯಿಸಿ]

"Poverty and un-British rule in India" ಎಂಬ ಪುಸ್ತಕದಲ್ಲಿ ದಾದಾಭಾಯಿ ನೌರೋಜಿಯವರು ಸಂಪತ್ತಿನ ಸೋರಿಕೆಗೆ ಈ ಕೆಳಗಿನ ಕಾರಣಗಳನ್ನು ಗುರುತಿಸಿದ್ದಾರೆ[೪] :

 • ಬ್ರಿಟನ್‌ನ ಎಲ್ಲಾ ನಾಗರಿಕ ಮತ್ತು ಮಿಲಿಟರಿ ವೆಚ್ಚಗಳನ್ನು ಭಾರತ ಭರಿಸುತ್ತಿತ್ತು.
 • ಭಾರತೀಯ ಆದಾಯವು, ಭಾರತದ ಒಳಗೆ ಮತ್ತು ಹೊರಗೆ ಬ್ರಿಟಿಷ್ ಸಾಮ್ರಾಜ್ಯದ ಪ್ರಾದೇಶಿಕ ವಿಸ್ತರಣೆಗೆ ಬಳಸಲಾಗುತ್ತಿತ್ತು.
 • ಭಾರತದಲ್ಲಿ ರೈಲ್ವೆ ಮತ್ತು ನೀರಾವರಿ ಕೆಲಸಗಳಲ್ಲಿ ಪಾವತಿಸಿದ ವರ್ಷಾಶನಗಳು ದುಬಾರಿ ಬ್ರಿಟಿಷ್ ಬಂಡವಾಳದಿಂದ ಹಣಕಾಸು ಒದಗಿಸಲ್ಪಟ್ಟವು.
 • ನಿರ್ಬಂಧಿತ ರಫ್ತು ಮತ್ತು ಮುಕ್ತ ಆಮದುಗಳೊಂದಿಗೆ ಭಾರತದ ಮೇಲೆ ಹೇರಿದ ಮುಕ್ತ ವ್ಯಾಪಾರದ ತಿರುಚಿದ ಸ್ವರೂಪ.

ಸಂಪತ್ತಿನ ಸೋರಿಕೆಯಿಂದ ಆದ ಪರಿಣಾಮಗಳು[ಬದಲಾಯಿಸಿ]

ಭಾರತೀಯ ಆರ್ಥಿಕತೆಯ ಮೇಲೆ[ಬದಲಾಯಿಸಿ]

 • ಇದು ಭಾರತೀಯ ಸಮಾಜದ ಎಲ್ಲಾ ವರ್ಗದವರನ್ನು ಬಡವರನ್ನಾಗಿ ಮಾಡಿತು. ಕಂಪನಿಯು ಭೂಮಿಯ ಆದಾಯದ ರೂಪದಲ್ಲಿ ಸಂಗ್ರಹಿಸಿದ ತೆರಿಗೆಯ ಭಾರವನ್ನು ಭರಿಸುತ್ತಿದ್ದರು.
 • ಇದು ಭಾರತವನ್ನು ತನ್ನ ಅಮೂಲ್ಯ ಬಂಡವಾಳದಿಂದ ಬರಿದು ಮಾಡಿತು. ಅದನ್ನು ಭಾರತದಲ್ಲಿ ಕೈಗಾರಿಕೀಕರಣ ಮತ್ತು ಕೃಷಿಯ ಆಧುನೀಕರಣಕ್ಕೆ ಹೂಡಿಕೆ ಮಾಡಬಹುದಿತ್ತು. ಭಾರತೀಯ ಸಂಪತ್ತಿನ ಹೊರ ಹರಿವು ಇಂಗ್ಲೆಂಡ್‌ನಲ್ಲಿ ಕೈಗಾರಿಕಾ ಕ್ರಾಂತಿಗೆ ಹಣಕಾಸು ಒದಗಿಸುವ ಪ್ರಮುಖ ಮೂಲವಾಯಿತು ಮತ್ತು ಭಾರತದಲ್ಲಿ ಇಂತಹ ಕ್ರಾಂತಿ ನಡೆಯದಿರಲು ಇದೂ ಸಹ ಒಂದು ಕಾರಣವಾಗಿದೆ.
 • ವರ್ಷಕ್ಕೆ ೩೦-೪೦ ಮಿಲಿಯನ್ ಪೌಂಡ್ ಸ್ಟರ್ಲಿಂಗ್ ಮೊತ್ತದಷ್ಟು ಸಂಪತ್ತು ಪ್ರತಿ ವರ್ಷವೂ ಭಾರತೀಯರಿಂದ ಹರಿಯುತ್ತಿತ್ತು ಎಂದು ದಾದಾಭಾಯಿ ನೌರೋಜಿಯವರು ಅಂದಾಜಿಸಿದ್ದಾರೆ. ಭಾರತದ ಬಡತನಕ್ಕೆ ಇದೂ ಮುಖ್ಯ ಕಾರಣವೆಂದು ಅವರು ವಿವರಿಸಿದ್ದಾರೆ.
 • ಇದು ನೈತಿಕ ಸೋರಿಕೆಗೂ ಪ್ರಮುಖ ಕಾರಣವಾಯಿತು. ತಮ್ಮದೇ ಆದ ಭೂಮಿಯಲ್ಲಿ, ನಂಬಿಕೆ ಮತ್ತು ಜವಾಬ್ದಾರಿಯ ಸ್ಥಾನದಿಂದ ಭಾರತೀಯರನ್ನು ಬ್ರಿಟಿಷರು ಹೊರಗಿಡುತ್ತಿದ್ದರು.

ಭಾರತೀಯ ರಾಷ್ಟ್ರೀಯತೆಯ ಮೇಲೆ[ಬದಲಾಯಿಸಿ]

 • ಸೋರಿಕೆಯನ್ನು ಗ್ರಹಿಸಲು ರೈತರಿಗೆ ಸುಲಭವಾಗಿದ್ದರಿಂದ, ಅವರ ಕಲ್ಪನೆಯನ್ನು ಸೆರೆಹಿಡಿಯುವಲ್ಲಿ ಈ ಸಿದ್ದಾಂತವು ಯಶಸ್ವಿಯಾಯಿತು. ಸ್ವಾತಂತ್ರ್ಯ ಹೋರಾಟಕ್ಕೆ ತಳಮಟ್ಟದಲ್ಲಿ ಸಾಮೂಹಿಕವಾಗಿ ವಿಸ್ತರಿಸುವಲ್ಲಿ ಇದು ಸಹಾಯಕವಾಗಿದೆ.
 • ಇದು ಬಾಲಗಂಗಾಧರ ತಿಲಕ್ ರಂತಹ ತೀವ್ರತರವಾದ ನಾಯಕರಿಂದ ಬೆಳೆದ ಸ್ವರಾಜ್ ಬೇಡಿಕೆಗಾಗಿ ಇದು ಅಡಿಪಾಯವನ್ನು ಹಾಕುವಲ್ಲಿ ಕಾರಣವಾಗಿದೆ. ಬನಾರಸ್ ನಲ್ಲಿ ನಡೆದ ಕಾಂಗ್ರೆಸ್ ನ ೧೯೦೬ ರ ಅಧಿವೇಶನದಲ್ಲಿ ಉಲ್ಲೇಖಿಸಲಾದ ಸ್ವರಾಜ್ ನ ಬೇಡಿಕೆಯು ಸೋರಿಕೆಯ ಸಿದ್ಧಾಂತದ ನೇರ ಫಲಿತಾಂಶವೆಂದು ಪರಿಗಣಿಸಬಹುದು.
 • ಬ್ರಿಟಿಷ್ ಆಡಳಿತದ ಮೇಲಿನ ಆರ್ಥಿಕ ಟೀಕೆಯು, ಭಾರತದಲ್ಲಿ ಬ್ರಿಟಿಷರ ಉತ್ತಮ ಆಡಳಿತದ ಎಂಬ ಕಟ್ಟುಕಥೆಯನ್ನು ನಾಶ ಮಾಡಿತು. ಭಾರತದ ಆರ್ಥಿಕ ಅಭಿವೃದ್ಧಿಗೆ ವಸಾಹತುಶಾಹಿ ಆಡಳಿತಗಾರರು ತಮ್ಮ ನಿಯಂತ್ರಣವನ್ನು ಸಮರ್ಥಿಸಿಕೊಂಡಾಗ, ಭಾರತೀಯ ರಾಷ್ಟ್ರೀಯತಾವಾದಿಗಳು ಬ್ರಿಟಿಷ್ ನಿಯಮ, ಬ್ರಿಟಿಷರ ಮುಕ್ತ ವ್ಯಾಪಾರ, ಉದ್ಯಮ ಮತ್ತು ಬಂಡವಾಳದ ಕಾರಣ ಭಾರತ ಆರ್ಥಿಕವಾಗಿ ಹಿಂದುಳಿದಿದೆ ಎಂದು ಸಾಬೀತುಪಡಿಸಲು ಈ ಸಿದ್ದಾಂತವು ಸಹಕಾರಿಯಾಯಿತು.[೫]

ಉಲ್ಲೇಖಗಳು[ಬದಲಾಯಿಸಿ]

 1. https://neostencil.com/drain-wealth-theory
 2. https://m.economictimes.com/a-new-drain-of-wealth/articleshow/3299574.cms
 3. https://selfstudyhistory.com/2015/10/15/drain-of-wealth/
 4. https://www.mapsofindia.com/my-india/history/dadabhai-naoroji-and-his-drain-of-wealth-theory/amp
 5. https://archive.org/details/povertyunbritish00naoruoft