ವಿಷಯಕ್ಕೆ ಹೋಗು

ಸಂಧಿ ವಿಕಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಧಿಯಲ್ಲಿ ಪೂರ್ವ ಪದ+ಉತ್ತರ ಪದ = ಸಂಧಿ ಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಆದಿಯ ಅಕ್ಷರ ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ. ಸಂಧಿ ಎಂದರೆ ಕೂಡುವುದು. ಎಂದರೆ, ಎರಡು ವರ್ಣಗಳು (ಅ+ಕ=ಗ) ಕೂಡಿ ಸಂಧಿಯಾಗುತ್ತದೆ.

ಸಂಧಿ ಎಂದರೇನು?[ಬದಲಾಯಿಸಿ]

  1. ಸ0ಧಿ ಎ0ದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒ0ದಕ್ಕೊ0ದು ಸೇರುವುದಕ್ಕೆ ವರ್ಣಾಕ್ಷರ ಸ0ಧಿ ಎ0ದು ಹೆಸರು”- ಕೇಶಿರಾಜ.
  2. ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸ0ಧಿ ಎ0ದು ಹೆಸರು - ಕ್ಯೆಪಿಡಿಕಾರ.
  3. ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಲಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು. ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ.
  4. ಪೂರ್ವಪದ+ಉತ್ತರಪದ=ಸಂಧಿಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಒ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.

ಸಂಧಿ ವಿಕಲ್ಪ[ಬದಲಾಯಿಸಿ]

ಸಂಧಿಯಾಗಿಯೂ, ಆಗದೆಯೂ ಇದ್ದು ಎರಡು ಸ್ವೀಕೃತವೆಂದಾದರೆ’ ಅದು ಸಂಧಿ ವಿಕಲ್ಪ. ಇದು ದೋಷವಲ್ಲವೆನ್ನುವುದು ಕೇಶಿರಾಜನ ಮತವೆಂದು ಕಾಣುತ್ತದೆ. [೧]

  • ಪದ್ಯಾರ್ಧದಲ್ಲಿ - ವಿಸಂಧಿ - ಉದಾ : ಪದ : ಕರೆ+ಅಲ್ = ಕರೆಅಲ್/ ಕರೆಯಲ್.

ಪದ್ಯ ಅರ್ಥ : ಅಲ್ಲಿ+ಎದುಂಟು=ಅಲ್ಲಿಎದುಂಟು/ಅಲ್ಲಿಯಿದುಂಟು, ಒತ್ತೆ+ಇಟ್ಟಂ=ಒತ್ತಿಟ್ಟಂ-ಒತ್ತಿಯಿಟ್ಟಂ.

  • ವಾಕ್ಯವೇಷ್ಠನ – ಉದಾ : ವಿಸಂಧಿ – ಕ: ಕೇನಾರ್ಥೀಕೋದರಿದ:

ಎನುತುನುನಿತನುಂ
ಧರ್ಮಜಂ ಸೂರಗೊಟ್ಟಂ

  • ಅನುಕರಣ - ವಿಸಂಧಿ : ಉದಾ :

ಗುಳುಗುಳು ಗಳ ಗಳ ಎನುತುಂ
ಕವಕ್ಕವ ಎಲೆ ಎಲೆ

ಉಲ್ಲೇಖ[ಬದಲಾಯಿಸಿ]

  1. ಕೇಶಿರಾಜಶಬ್ದಮಣಿದರ್ಪಣ