ವಿಷಯಕ್ಕೆ ಹೋಗು

ಸಂಧಿ ದೋಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಧಿಯಾಗಬಾರದ ಎಡೆಯಲ್ಲಿ ಸಂಧಿ ಮಾಡಿ ದೋಷಕ್ಕೊಳಗಾದುದು ಸಂಧಿದೋಷ.

ನಾಮರೂಢಿಯಳಿಯದ ಪಕ್ಷಂ ಎಂಬುದು ಕೇಶಿರಾಜನ ಸಾರ್ವತ್ರಿಕ ನಿಯಮ. ಕೆಲವೆಡೆ ಪದಗಳು ಸೇರುವಂತಿದ್ದರೂ ಅರ್ಥಹಾನಿಯಾಗುವುದರಿಂದ ಅವು ಸೇರದೆ ಪ್ರಕೃತಿ ರೂಪದಲ್ಲೇ ಇರುತ್ತದೆ. ಕೆಲವು ಕಡೆ ಪದಗಳೆರಡನ್ನು ಒಂದರ ಮುಂದೆ ಇನ್ನೊಂದು ಇರಿಸುವುದೇ ಸಂಧಿದೋಷವಾಗುತ್ತದೆ.[]

  1. ಪೂರ್ವ ಪದಾಂತ್ಯವು ಹೃಸ್ವ ಅಕ್ಷರವಾಗಿದ್ದು ಪರಪದದ ಆದಿಯು ದ್ವಿತ್ವವಾಗಿದ್ದರೆ ಸಂಧಿದೋಷವಾಗುತ್ತದೆ. ಪೂರ್ವಪದದ ಅಂತ್ಯ ಹೃಸ್ವಾಕ್ಷರವಾಗಿದ್ದು ಮುಂದೆ ರೇಫೆಸಹಿತವಾದ ದ್ವಿತ್ವವಾಗಿದ್ದಲ್ಲಿ ಅದನ್ನು ಶಿಥಿಲದ್ವಿತ್ವವೆಂದು ಭಾವಿಸಿ ಕೆಲವರು ಸಂಧಿಮಾಡುವರು. ಉದಾ : ಬರಸಿ ಪ್ರಧಾನರುಂ ಕುಳ್ಳಿರಿಸಿ ಪ್ರಯವಾರ್ತೆಯಂ ಕೇಳ್ದು
  2. ಹೃಸ್ವವರ್ಣದ ಮುಂದೆ ರೇಫೆ ಬಂದರೆ ಶಿಥಿಲವೆಂದು ಅನುಕರಿಸುವುದು ದೋಷವೇ. ಸತ್ವಹೀನರು ಗದ್ಯದಲ್ಲದ್ದು ಸಲ್ಲುವುದೆಂದು ಹೇಳಿದರೂ ವಿವೇಕಿಗಳು ಗೇಫೆಯು ಕೂಡಾ ದಿತ್ವವೆಂದೇ ತಿಳಿದು, ಪದ್ಯದಲ್ಲೇ ಆಗಲಿ ಗದ್ಯದಲ್ಲೇ ಆಗಲಿ ಇದು ದೋಷವೆಂದು ಹೇಳುವರು. ಉದಾ : ಮಿರುಗುತಿರ್ಪ ತ್ರಿಶೂಲದೆ, ಪ್ರಣಯದೇತ್ರಿಪಥೆಗೆ ನಡೆತರೆ.
  3. ಎರಡು ಪದಗಳ ನಡುವೆ ಅಸಹ್ಯೋಕ್ತಿ ಹುಟ್ಟುವಂತಿದ್ದರೆ ಅದು ಸಂಧಿದೋಷ. ಉದಾ : ಅ] ಹೇ ಲತಾ ಕೋಮಲಾಂಗಿ, ಆ] ಬನ್ನಿಯ ತರುಡಕ್ಕೆಗೆ ಸುರಹೊನ್ನೆಯ ತರುಡಮರುಗಕ್ಕೆ.
  4. ಎರಡು ಪದಗಳ ನಡುವೆ ರೇಫಾಕ್ಷರಗಳು ಬಂದು ಉಚ್ಛಾರಣಾ ದೃಷ್ಟಿಯಿಂದ ಅವು ಶುೃತಿ ಕಷ್ಟವೆನಿಸುತ್ತದೆ. ಅದು ಸಂಧಿದೋಷ. ಉದಾ: ವಿದ್ವಟ್ಸ್ತ್ರೀಯರ್. [ವ್+ಇ+ದ್+ವ್+ಟ್+ಸ್+ತ್+ರ್+ಈ+ಯ್+ಅ+ರ್]

ಉಲ್ಲೇಖ

[ಬದಲಾಯಿಸಿ]
  1. ಕೇಶಿರಾಜಶಬ್ದಮಣಿದರ್ಪಣ
"https://kn.wikipedia.org/w/index.php?title=ಸಂಧಿ_ದೋಷ&oldid=729342" ಇಂದ ಪಡೆಯಲ್ಪಟ್ಟಿದೆ