ಸಂದೀಪ್ ರಾವ್ ಕೊರಡ್ಕಕಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೈಸರ್ಗಿಕ ಸಂಪನ್ಮೂ ಲಗಳ ಸೂಕ್ತ ಬಳಕೆಯಿಂದ ವಿದ್ಯುತ್ ಉತ್ಪಾದಿಸಲು ಪ್ರಯತ್ನಿಸಿ ಸಫಲನಾಗಿರುವ ಅತಿ ಎಳೆವಯಸ್ಸಿನ ವಿಜ್ಞಾನಿ, 'ಸಂದೀಪ್ ರಾವ್ ಕೊಡತ್ಕಲ್', ಕರ್ನಾಟಕದ ಉಡುಪಿ ಪಟ್ಟಣದವ.

ಜನನ, ಬಾಲ್ಯ, ವಿದ್ಯಾಭ್ಯಾಸ[ಬದಲಾಯಿಸಿ]

ಉಡುಪಿಯ ಕಟಪಾಡಿಯ ಡಾ. ಶ್ರೀಶರಾವ್ ಮತ್ತು ಮಮತಾ ಎಸ್. ಕೆ ರವರ ಕಿರಿಯ ಮಗ.ಉಡುಪಿಯ 'ಕನ್ನರ್ಪಾಡಿ ಸೇಂಟ್ ಮೇರಿಸ್ ಶಾಲೆ'ಯ ಪ್ರತಿಭಾವಂತ ವಿದ್ಯಾರ್ಥಿ. ಅಜ್ಜ ಡಾ. ಕೃಷ್ಣರಾವ್ ಕೊರಡ್ಕಲ್, ಅಣ್ಣ 'ಸಂಜಯ್ ರಾವ್' ಹಾಗೂ ಅಕ್ಕ 'ಸಂಧ್ಯಾ ರಾವ್', ಮಂಗಳೂರಿನ ಫಾದರ್ ಮುಲ್ಲರ್ಸ್ ನಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದಾರೆ. ಸಂದೀಪ್ ಒಳ್ಳೆಯ ಮಾತುಗಾರ, ಕತೆಗಾರ. ಅವನಿಗೆ ವೈದ್ಯಕೀಯ ಶಾಸ್ತ್ರದಲ್ಲೂ ಅತಿ ಆಸಕ್ತಿ.

ಸಕಾಲದಲ್ಲಿ ಮಾರ್ಗದರ್ಶನ ಹಾಗೂ ನಿರಂತರ ಓದು[ಬದಲಾಯಿಸಿ]

ಇಷ್ಟು ಚಿಕ್ಕ ಪ್ರಾಯದಲ್ಲಿ ಲಭಿಸಿದ ಯಶಸ್ಸಿನಲ್ಲಿ ಓದು ಪ್ರಮುಖಪಾತ್ರವಹಿಸಿದೆ. ಎಲ್ಲದರ ಹಿಂದೆ ಅಪ್ಪ-ಅಮ್ಮಂದಿರ ದೂರದೃಷ್ಟಿ ,ಅಕ್ಕ ,ಅಣ್ಣನ ಬೆಂಬಲ; ಅವನು ಕಲಿತ ಶಾಲೆಯ ಮುಖ್ಯೋಪಾಧ್ಯಾಯಿನಿ 'ಮರ್ಟಲ್ ಎಲ್.ಎಫ್.ಲೂಯಿಸ್', ಹಾಗೂ ವಿಜ್ಞಾನದ ಶಿಕ್ಷಕಿಯರಾದ 'ಅನಸೂಯ', 'ಪುಷ್ಪಲತಾ'ರಿಂದ ದೊರೆತ ಉತ್ತೇಜನ, ಸಕಾಲಿಕ ಮಾರ್ಗದರ್ಶನ' ಸಂದೀಪನಿಗೆ, 'ಮೊಬೈಲ್' ಮತ್ತು 'ಟೆಲಿವಿಶನ್' ಎಂದರೆ ಅಲರ್ಜಿ. ಪ್ರಾಥಮಿಕಶಾಲೆಯಲ್ಲಿ ಓದುವ ದಿನಗಳಿಂದಲೇ ಸಂದೀಪ್ ವಿಜ್ಞಾನದ ಪ್ರಯೋಗಗಳನ್ನು ಮಾಡುವುದರಲ್ಲಿ ತೀವ್ರ ಆಸಕ್ತಿವಹಿಸುತ್ತಿದ್ದ. ಹಲವಾರು ಸಲ, ಗುರುಗಳಿಂದ ಮತ್ತು ಸಹವಿದ್ಯಾರ್ಥಿಗಳಿಂದ ಮೆಚ್ಚುಗೆಗಳಿಸಿದ್ದರು. ಹೀಗೆ ಶುರುವಾದ ದಾರಿ, 'ಭೂಶಾಖ ವಿದ್ಯುತ್ ಮಾದರಿ'ಯನ್ನು ತಯಾರಿಸಲು ಕಾರಣವಾಯಿತು. ಮನಸ್ಸಿನಲ್ಲಿ ವಿದ್ಯುತ್ ನ ಮಹತ್ವ ಹಾಗೂ ಅದರ ಪೂರ್ತಿಗಾಗಿ ಬೇರೆಬೇರೆ ಮಾದರಿಗಳನ್ನು ಆಸರಿಸಬಹುದೇ ಎನ್ನುವ ಪ್ರಶ್ನೆ ಸದಾ ಕಾಡುತ್ತಿತ್ತು. ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಈಯುವಕ, ಗುರುಗಳೊಂದಿಗೆ ಚರ್ಚಿಸುವಜೊತೆಗೆ ಈ ನಿಟ್ಟಿನಲ್ಲಿ ಹೆಚ್ಚು ಮಾಹಿತಿಗಳನ್ನು ಕಲೆಹಾಕತೊಡಗಿದರು. ವಿದ್ಯುತ್ ಉತ್ಪಾದನಾ ಕೇಂದ್ರದ ವಿಜ್ಞಾನ ಮಾದರಿಯನ್ನು ನಿರ್ಮಿಸಲು ತೊಡಗಿ ಯಶಸ್ಸನ್ನು ಕಂಡರು. ಎಷ್ಟೆಲ್ಲಾ ಮಾಹಿತಿಗಳನ್ನು ಕ್ರೋಢೀಕರಿಸಿ ಅದಕ್ಕೊಂದು ಸ್ಪಷ್ಟ ರೂಪು ಕೊಡುವ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸಮಾಡಿದರು. ಈ ವಿಜ್ಞಾನ ಮಾದರಿ, ದಕ್ಷಿಣ ಭಾರತದ ಪ್ರಮುಖ ವಿಜ್ಞಾನಿಗಳ ಗಮನ ಸೆಳೆದಿದೆ. 'ಹೈದರಾಬಾದ್ ನ ನ್ಯಾಷನಲ್ ಗ್ರೀನ್ ಕಾರ್ಪ್' ನಿಂದ ನಡೆಯುವ ಜೀವ ವೈವಿಧ್ಯ ಕುರಿತ 'ಅಂತಾರಾಷ್ಟ್ರೀಯ ಸಮ್ಮೇಳನ'ದಲ್ಲಿ ಮಾತಾಡುವ ಅವಕಾಶ ಪ್ರಾಪ್ತವಾಯಿತು.

ಜಿಯೋಥರ್ಮಲ್ ಎನರ್ಜಿ, ವಿದ್ಯುತ್ ನ ಮೂಲಸಾಮಗ್ರಿ[ಬದಲಾಯಿಸಿ]

ಭೂಮಿಯ ಅಗಾಧ,ಶಾಖ ವಿದೆ. ಭೂಮಿಯನ್ನು ಅಗೆಯುತ್ತಾ ಹೋದಂತೆ ಒಂದು ನಿರ್ದಿಷ್ಟ ಆಳದಲ್ಲಿ ನೀರನ್ನು ಕೃತಕವಾಗಿ ಸಂಗ್ರಹಿಸಬೇಕು. ಈ ನೀರು ಸಹಜವಾಗಿಯೇ ಬಿಸಿಯಾಗಿ ಆವಿಯಾಗುತ್ತದೆ. ಅಂತಹ ಆವಿಯನ್ನು ಬಳಸಿಕೊಂಡು ಟರ್ಬೈನ್ ಗಳನ್ನು ತಿರುಗಿಸಿ, ವಿದ್ಯುತ್ ಉತ್ಪಾದಿಸಬಹುದು. ಜಿಯೋಥರ್ಮಲ್ ಎನರ್ಜಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದನಡೆಸಲಾಗುವ 'ಯುವ ವಿಜ್ಞಾನಿ ಸ್ಪರ್ಧೆ'ಯಲ್ಲಿ ತಮ್ಮ ಶಾಲೆಯ ಪರವಾಗಿ ಭಾಗವಹಿಸಿದರು. ಮೊದಲು ಜಿಲ್ಲಾಮಟ್ಟದಲ್ಲಿ ರಾಜ್ಯದ ೩೦ ಜಿಲ್ಲೆಯಗಳ ಯುವ ಸ್ಪರ್ಧಾಳುಗಳ ಜೊತೆ ಸ್ಪರ್ಧೆಯ ಬಳಿಕ, ಅಂತಿಮ ಹಂತಕ್ಕೇರಿದ ೬ ಮಂದಿಯಲ್ಲಿ ಸಂದೀಪ್ ಒಬ್ಬರಾದರು. ಈ 'ಜಿಯೋ ಥರ್ಮಲ್ ಎನರ್ಜಿ ಮಾದರಿಯ ಸ್ಪರ್ಧೆಯ ಅಂತಿಮ ಹಂತ' ನಡೆದದ್ದು ಮಡಕೇರಿಯಲ್ಲಿ.

ಪ್ರಶಸ್ತಿಗಳು[ಬದಲಾಯಿಸಿ]

  • ತಿರುಪತಿಯಲ್ಲಿ ಜರುಗಿದ ’ನ್ಯೂ ಟ್ರೆಂಡ್ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ’ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ, ಪ್ರಥಮ ಸ್ಥಾನ.
  • ’ರಾಜ್ಯಮಟ್ಟದ ವಿಜ್ಞಾನ ಕ್ವಿಝ್' ನಲ್ಲೂ ಪ್ರಥಮ ಸ್ಥಾನ.
  • ಸನ್. ೨೦೧೨ ರಲ್ಲಿ, 'ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ'