ಸಂತ ಪ್ಯಾಟ್ರಿಕ್ ಚರ್ಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಈ ಹಳೆಯ ಚರ್ಚನ್ನು ೧೯ನೇ ಶತಮಾನದಲ್ಲಿ ಸ್ಕಾಟಿಷ್ ಸೈನಿಕರು ತಮ್ಮ ಉಪಯೋಗಕ್ಕಾಗಿ ಕಟ್ಟಿಕೊಂಡರು. ಸುಂದರವಾದ ಒಳಾಂಗಣ ವಿನ್ಯಾಸ, ಅಷ್ಟೇ ಸುಂದರವಾದ ಹೊರಾಂಗಣ, ಮುಗಿಲಿಗೆ ಚಾಚಿದ ಎರಡು ಗೋಪುರಗಳು, ಬಲು ವಿಸ್ತಾರವಾದ ಜಗಲಿ ಮತ್ತು ವಿಶಾಲವಾದ ನಿವೇಶನದ ಮಧ್ಯೆಯಿದ್ದು ಪ್ರಶಾಂತವಾಗಿದೆ. ಅವಿಭಜಿತ ಮೈಸೂರು ಡಯಾಸೀಸಿನ ಆಡಳಿತ ಕೇಂದ್ರವು ಇದೇ ಆವರಣದಲ್ಲಿದ್ದುದರಿಂದ ಈ ಚರ್ಚು ಪ್ರಧಾನಾಲಯವಾಗಿ ಸಹ ಕಾರ್ಯನಿರ್ವಹಿಸಿದೆ. ಶೂಲೆ ಎಂದು ಕರೆಯಲಾಗುತ್ತಿದ್ದ ಈ ಪ್ರದೇಶದಲ್ಲಿ ಪ್ಲೇಗು ಮತ್ತು ಬರಗಾಲಗಳಿಂದ ಅನಾಥರಾದ ಮಕ್ಕಳಿಗೆ ಪುನರ್ವಸತಿ ನೀಡಲಾಗಿತ್ತು.