ವಿಷಯಕ್ಕೆ ಹೋಗು

ಸಂತೋಷ ಕುಮಾರ್ ಗುಲ್ವಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಸಂತೋಷ ಕುಮಾರ್ ಗುಲ್ವಾಡಿ'

ಸಂತೋಷ ಕುಮಾರ್ ಗುಲ್ವಾಡಿ(ಜ :೧೯೩೮, ಅಕ್ಟೋಬರ್ ೦೨-ಮ : ೨೦೧೦ ಡಿಸೆಂಬರ್ ೦೭)

[ಬದಲಾಯಿಸಿ]

'ಸಂತೋಷ ಕುಮಾರ್ ಗುಲ್ವಾಡಿ' ಯವರು, ಮುಂಬಯಿನಲ್ಲಿ ಪತ್ರಿಕೋದ್ಯಮ ಹಾಗೂ ಜಾಹೀರಾತು ಕ್ಷೇತ್ರದಲ್ಲಿ 'ಫ್ರಿಲ್ಯಾನ್ಸರ್' ಆಗಿಯೂ ದುಡಿದಿದ್ದರು. ಆ ಸಮಯದಲ್ಲಿ ಅವರು ‘ಪ್ರಜಾವಾಣಿ’ ಮತ್ತು ‘ಸುಧಾ’ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರರಾಗಿಯೂ ಕೆಲಸ ಮಾಡಿದ್ದರು. 'ತರಂಗ ವಾರಪತ್ರಿಕೆ'ಯಿಂದ ನಿರ್ಗಮಿಸಿದ ಬಳಿಕ ೧೯೯೯ ರಲ್ಲಿ 'ವಿಜಯ ಸಂಕೇಶ್ವರ'ರ, ‘ನೂತನ’ ವಾರಪತ್ರಿಕೆಗೆ, ಸಂಪಾದಕರಾಗಿ ಕೆಲ ಕಾಲ ಕಾರ್ಯನಿರ್ವಹಿದ್ದರು. ಇವರ ಅಂಕಣ ಬರಹಗಳ ಸಂಗ್ರಹ ಅಂತರಂಗ ಬಹಿರಂಗ ಕೃತಿಗೆ, ೧೯೯೩ ರಲ್ಲಿ 'ಕರ್ನಾಟಕ ಸಾಹಿತ್ಯ ಅಕಾಡೆಮೆ ಪ್ರಶಸ್ತಿ' ಹಾಗೂ 'ರಾಜ್ಯೋತ್ಸವ ಪ್ರಶಸ್ತಿ' ಸಂದಿದೆ. ಇದಲ್ಲದೆ ಗುಲ್ವಾಡಿಯವರು, 'ವಿಶ್ವೇಶ್ವರಯ್ಯ', 'ವೀರ ಸಾವರ್ಕರ್', 'ಭಾರ್ಗವ', 'ಕೊಂಕಣಿ ಸಾಹಿತ್ಯ', 'ಆಳ್ವಾಸ್ ನುಡಿಸಿರಿ' ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

'ಗುಲ್ವಾಡಿಯವರು'

ಮನೆತನ, ಬಾಲ್ಯ ಹಾಗೂ ವಿದ್ಯಾಭ್ಯಾಸ

[ಬದಲಾಯಿಸಿ]

'ಗುಲ್ವಾಡಿಯವರು' ಒಂದು ಸುಸಂಸ್ಕೃತ ಕುಟುಂಬದಲ್ಲಿ, ಸನ್, ೧೯೩೮ ರ, ಅಕ್ಟೋಬರ್ ೨ ರಂದು, 'ಉಡುಪಿ'ಯಲ್ಲಿ ಜನಿಸಿದರು. ಅವರ ತಂದೆ ’ರತ್ನಾಕರ ಭಟ್ ’ಬಹುಮುಖ ಪ್ರತಿಭೆಯ ವ್ಯಕ್ತಿ. ಹಿಂದೂಸ್ಥಾನಿ ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಿದವರು. ಇವರು ಆಸಕ್ತರಿಗೆ ಹಿಂದೂಸ್ಥಾನಿ ಸಂಗೀತ ಕಲಿಸುತ್ತಿದ್ದರು. ಜೊತೆಗೆ ಬುಕ್ ಬೈಂಡಿಂಗ್, ಸಂಗೀತ ವಾದ್ಯಗಳ ರಚನೆ, ನಾಟಕದ ಪರದೆಗಳನ್ನ ಬರೆಯುವುದು, ರಂಗಮಂದಿರ ನಿರ್ಮಾಣ, ಮೇಕಪ್ ಎಂದೆಲ್ಲ ಹಲವು ಕೆಲಸಗಳಲ್ಲಿ ಪರಿಣಿತರು. ಇವರ ಮನೆ ಸದಾ ಕಲಾವಿದರಿಂದ ಸಾಹಿತಿಗಳಿಂದ ತುಂಬಿ ಕೊಂಡಿರುತ್ತಿತ್ತು. ಗುಲ್ವಾಡಿಯವರ ಬಾಲ್ಯವನ್ನ ರೂಪಿಸಿದ್ದು ಈ ಸಂಸ್ಕಾರ. ಮೈಸೂರು ವಿವಿಯಿಂದ ಬಿಕಾಂ ಪದವಿ, ಮುಂಬಯಿ ವಿವಿಯಿಂದ ಕಾನೂನಿನಲ್ಲಿ ’ಎಲ್.ಎಲ್.ಬಿ ಪರೀಕ್ಷೆ’ಯಲ್ಲಿ ತೇರ್ಗಡೆಯಾದರು. ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದರು. ’ಪತ್ರಿಕೋದ್ಯಮ ವಿಷಯದಲ್ಲಿ ಸ್ವರ್ಣಪದಕ’ ಗಳಿಸಿದರು. ಗುಲ್ವಾಡಿ ಅನೇಕ ಹವ್ಯಾಸಗಳನ್ನು, ಒಂದು ಸ್ಪಷ್ಟ ರೂಪಗೊಡುವ ನಿಟ್ಟಿನಲ್ಲಿ ಪತ್ರಿಕೋದ್ಯಮದ ವೃತ್ತಿ ಉತ್ತಮವೆಂದು ಅನ್ನಿಸಿ ಅದನ್ನೇ ಆಯ್ಕೆ ಮಾಡಿಕೊಂಡರು. ರಾತ್ರಿಹೊತ್ತಿನಲ್ಲಿ ತಮಗೆ ಬಿಡುವಾದಾಗ, ’ನವಭಾರತ’ವೆಂಬ ಪತ್ರಿಕೆಯಲ್ಲಿ ಮೊದಲು ವೇತನವಿಲ್ಲ ಸಹಾಯಕರಾಗಿ ಕೆಲಸ ಮಾಡಿದರು. ೩ ತಿಂಗಳ ನಂತರ ಆವರ ಕೆಲಸ ವೈಖರಿಯನ್ನು ನೋಡಿ ಪ್ರಭಾವಿತರಾಗಿ ಸಂಪಾದಕರು ವೇತನವನ್ನು ನಿಗದಿ ಮಾಡಿದರು. ಗುಲ್ವಾಡಿಯವರದ್ದು ಪುಟ್ಟ ಕುಟುಂಬ. ಬೊಂಬಾಯಿನಲ್ಲಿ ಬರವಣಿಗೆಯನ್ನು ಮುಂದುವರೆಸಿದರು. ’ವ್ಯಂಗ್ಯ ಚಿತ್ರ’ಗಳನ್ನು ರಚಿಸುವ ಗೀಳು ಮೊದಲಿಂದಲೂ ರೂಢಿಸಿತ್ತು. ಅದನ್ನು ಹೆಚ್ಚಾಗಿ ಬೆಳೆಸಲು ಪ್ರಯತ್ನಿಸಿದಾಗ ಅದಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ಬಂದಿತ್ತು. ’ಸಿಂಗರ್ ಕಂಪೆನಿ’ಯಲ್ಲಿ ಸ್ವಲ್ಪ ದಿನ ಕೆಲಸ ಮಾಡಿದರು. ಮಗಳು ಸಂಸ್ಕೃತಿ , ಮಗ ಸಮರ್ಥ. ಅವರ ಮಡದಿ ಸುದೇಷ್ಣೆ. ಸುದೇಷ್ಣೆ ಅವರಿಗೆ ಕೇವಲ ಮಡದಿಯಾಗಿರಲಿಲ್ಲ ಸಲಹೆಗಾರರೂ ಆಗಿದ್ದರು. ಪತ್ರಿಕೆಯ ಬಗ್ಗೆ, ಅದರಲ್ಲಿ ಪ್ರಕಟವಾಗುವ ಲೇಖನಗಳ ಬಗ್ಗೆ ಸಲಹೆ ಸೂಚನೆ ನೀಡುತ್ತಿದ್ದರು.೧೯೮೨ ರಿಂದ ೧೯೯೯ ರ ವರೆಗೂ ‘ತರಂಗ’ ವಾರಪತ್ರಿಕೆ ಸಂಪಾದಕರಾಗಿ ಮಣಿಪಾಲದಲ್ಲಿ ದುಡಿದಿದ್ದರು. ಇವರ ಸಂಪಾದಕೀಯ ಅಂತರಂಗ ಬಹಿರಂಗ ಓದುಗರನ್ನು ಆಕರ್ಷಿಸಿತ್ತು. ಅದಕ್ಕೂ ಮುನ್ನ ಅವರು ವಿವಿಧ ಕ್ಷೇತ್ರಗಳಲ್ಲಿ ಮುಖ್ಯವಾಗಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು.

’ಪ್ರೊ. ಚಿದಂಬರ ದೀಕ್ಷಿತರು’, ಮಿತ್ರ ’ಶಿವಮುಂಜೆ ಪರಾರಿ’, ಹುಟ್ಟು ಹಾಕಿದ ’ಕನ್ನಡ ಸಾಹಿತ್ಯ ಕೂಟ’, ದಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡರು. ಬರಹಗಾರರನ್ನೆಲ್ಲಾ ಕಲೆಹಾಕಿ, ಸಾಹಿತ್ಯದ ಬಗ್ಗೆ ಚರ್ಚೆ, ವಿಚಾರ ವಿನಿಮಯ, ವಿಮರ್ಶೆ, ಮೊದಲಾದ ಶ್ಲಾಘನೀಯ ಕಾರ್ಯ ಗಳನ್ನು ರೂಢಿಸಿಕೊಂಡು ಆ ಪತ್ರಿಕೆ, ಎಲ್ಲರ ಮನ್ನಣೆಗೆ ಪಾತ್ರವಾಗಿತ್ತು.

ತ್ರೈಮಾಸಿಕ ಪತ್ರಿಕೆ, ಕಥಾ ಪ್ರಧಾನವಾದದ್ದು. ಉತ್ತಮ ಸಾಹಿತ್ಯ ಕೃತಿಗಳನ್ನು ಪ್ರಕಾಶಿಸುವ ವಿಮರ್ಶಿಸುವ ನಿಯತಕಾಲಿಕದ ಮೊದಲ ಸಂಚಿಕೆ, ಸನ್, ೧೯೬೭ ರ ಮೇ ತಿಂಗಳಿನಲ್ಲಿ ಗುಲ್ವಾಡಿಯವರ ಚೊಚ್ಚಲ ಕೃತಿ, ’ಮುಗಿಲ ಮೊಗ್ಗ’ ನ್ನು ಪ್ರಕಟಿಸಿತು. ಒಂದು ವರ್ಷದಲ್ಲೇ ಸಾಹಿತ್ಯ ಸಂಗಮ ತನ್ನ ಮೆರುಗನ್ನು ಕಳೆದುಕೊಂಡು ನಿಲ್ಲಿಸುವ ಹಂತವನ್ನು ತಲುಪಿತು. ’ರತ್ನಾಕರ ಶೆಟ್ಟಿ’, ’ಸಂಜೀವ ಶೆಟ್ಟಿ’, ’ರವಿ. ಆರ್. ಅಂಚನ್’, ಮತ್ತು ’ಪ್ರಿಯತಮ’, ಸೇರಿ ಒಟ್ಟು ೧೪ ಪುಸ್ತಕಕಗಳನ್ನು ಬಿಡುಗಡೆ ಮಾಡಲು, ಗೆಳೆಯ, 'ಗುಲ್ವಾಡಿ'ಯವರನ್ನು ಆಹ್ವಾನಿಸಿದರು. ಆಗ ಅವರು, 'ತರಂಗ ಪತ್ರಿಕೆ'ಯ ಬಿಡುವಿಲ್ಲದ ಕೆಲಸದಲ್ಲಿ 'ಮಣಿಪಾಲ್' ನಲ್ಲಿದ್ದರು. [೧೦೮೩] ಉದಯೋನ್ಮುಖ ಲೇಖಕರ ವೇದಿಕೆ, 'ಪ್ರಿಯಾ ತೆಂಡುಲ್ಕರ್' ರವರ ಮರಾಠಿ ಭಾಷೆಯ, ಅನುವಾದ ಅನುಭವ ಕಥನ, ’ಪಂಚ ತಾರಾಂಕಿತ ಧಾರಾವಾಹಿ’ ಪ್ರಕಟವಾಯಿತು. ರಾಷ್ಟ್ರದ ತೀಕ್ಷ್ಣವಾದ ಸಮಸ್ಯೆಗಳನ್ನು ಅವಲೋಕಿಸಿ ಕ್ಷಕಿರಣ ಬೀರುವ ಹಾಗೂ ಪ್ರಜ್ಞಾವಂತರನ್ನು ತೀವ್ರವಾಗಿ ಚಿಂತನೆಗೀಡು ಮಾಡುವ, ಬಹುಮುಖ ಪ್ರತಿಭೆ, ಇಂಗ್ಲೀಷ್ ಪತ್ರಿಕೆಗಳಲ್ಲೂ ಬರೆಯುತ್ತಿದ್ದರು. ಹಿಂದೂಸ್ಥಾನಿ ಸಂಗೀತದಲ್ಲಿ ಅತೀವ ಆಸಕ್ತರು. ಸ್ವತಃ ತಬಲಾವಾದಕರು. ಲಲಿತಕಲೆಗಳು, ಸಿನಿಮಾ, ಜಾನಪದ ಜೀವನ, ಛಾಯಾಚಿತ್ರಗಾರ, ಇತಿಹಾಸ, ವೈದ್ಯಕೀಯ. ಪ್ರತಿಯೊಬ್ಬ ವ್ಯಕ್ತಿಕಂಡ ಹೊಸಮೌಲಿಕ ವಿಚಾರಗಳನ್ನು ಥಟ್ಟನೆ ಗುರುತಿಸುವ ಅದ್ಭುತ ಚಾತುರ್ಯವಿತ್ತು. ಮಗುವಿನ ಕುತೂಹಲ ಅವರ ಪ್ರತಿ ಹೊಸ ಕಾರ್ಯಗಳಲ್ಲಿ ಎದ್ದು ಕಾಣುತ್ತಿತ್ತು. ನಂತರ ಅವರು ಕೇಂದ್ರ ನಾಟಕ ಅಕಾಡೆಮಿಗಾಗಿ ಒಂದು ಸಾಕ್ಷ ಚಿತ್ರ, 'ಬಸರೂರು ದೇವದಾಸಿಯರು, ನಿರ್ಮಿಸಿದರು.

'ಸಂತೋಷ್ ಕುಮಾರ್ ಗುಲ್ವಾಡಿಯವರು, 'ಆಳ್ವಾಸ್ ನುಡಿಸಿರಿ ಪ್ರಶಸ್ತಿಯಿಂದ, ಪುರಸ್ಕೃತರಾದಾಗ'

"ತರಂಗ ಪತ್ರಿಕೆಗೆ ಪಾದಾರ್ಪಣೆ ಮಾಡುವ ಮುನ್ನ"

[ಬದಲಾಯಿಸಿ]

"ಉದಯವಾಣಿ ಕನ್ನಡ ದಿನ ಪತ್ರಿಕೆ" ಗೆ, ಚಲನಚಿತ್ರಗಳ ಬಗ್ಗೆ ಮಾಹಿತಿ ಒದಗಿಸುವ ವರದಿಗಾರರಾಗಿ ದುಡಿಯುತ್ತಿದ್ದರು. ೨ ದಶಕಗಳಿಂತ ಮೊದಲು ಮಣಿಪಾಲ್ ಗ್ರೂಪ್ ಆಫ್ ಪಬ್ಲಿಕೇಷನ್ಸ್ ಯೆಂದು ಹೆಸರು ಮಾಡಿದ್ದು ಸಂಸ್ಥೆಯ ಜೊತೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದರು. ಮುಂದೆ ಅದೇ ಮಣಿಪಾಲ್ ಮೀಡಿಯಾ ನೆಟ್ವರ್ಕ್ ಎಂದು ನಾಮಾಂತರ ಹೊಂದಿತು.

ಬೊಂಬಾಯಿನಲ್ಲಿ ಪತ್ರಿಕೋದ್ಯಮದ ಆರಂಭ

[ಬದಲಾಯಿಸಿ]

ಬೊಂಬಾಯಿನಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಂತೋಷ ಕುಮಾರ ಗುಲ್ವಾಡಿ ಕೇವಲ ಬೊಂಬಾಯಿನ ಕನ್ನಡ ಓದುಗರಿಗೆ ಪರಿಚಿತರಾಗಿದ್ದರು. ಗುಲ್ವಾಡಿ ಇವರ ತಮ್ಮ ಶಿವರಂಜನ್ ಲೇಖನ ಚಿತ್ರಗಳ ಮೂಲಕ ಕನ್ನಡ ಓದುಗರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ವಿಶೇಷವಾಗಿ ಚಲನಚಿತ್ರಗಳಿಗೆ ಸಂಬಂಧಪಟ್ಟ ಲೇಖನಗಳನ್ನ ಇವರು ಬರೆಯುತ್ತಿದ್ದರು. ಈ ಲೇಖಕ ಸಂಪಾದಕನಾಗಿ ಬಂದುದನ್ನ ಕನ್ನಡ ಓದುಗರು ತೆರೆದ ಹೃದಯದಿಂದ ಸ್ವಾಗತಿಸಿದರು. ಮಣಿಪಾಲದಿಂದ ೧೯೮೨ ರ ಹೊತ್ತಿಗೆ ವಾರಪತ್ರಿಕೆಗಳೂ ಬರಲು ಆರಂಭಿಸಿದವು. ಹೊಸ ವಾರಪತ್ರಿಕೆ "ತರಂಗ" ಹೊರ ಬಂದಾಗ, ಕನ್ನಡದಲ್ಲಾಗಲೇ ಸಾಕಾದಷ್ಟು ವಾರಪತ್ರಿಕೆಗಳು ಜನಪ್ರಿಯವಾಗಿದ್ದವು. ಆ ಪತ್ರಿಕೆಗಳ ನಡುವೆ 'ತರಂಗ' ಮೊದಲು ಸ್ವಲ್ಪ ಸಂಘರ್ಷ ಮಾಡ ಬೇಕಾದ ಪ್ರಸಂಗ ಬಂತು. ಹೊಸ ಹೊಸ ವಿಷಯಗಳನ್ನು ಸಮರ್ಥವಾಗಿಯೂ ಕಾಲ ಕಾಲಕ್ಕೆ ಸರಿಯಾಗಿ ಹೊರತರುವ ಮೋಡಿಯನ್ನು ಗುಲ್ವಾಡಿಯವರು ಮೈಗೂಡಿಸಿಕೊಂಡಿದ್ದರಿಂದ, ಸ್ವಲ್ಪ ಸಮಯದಲ್ಲೇ ತರಂಗ ಜನಪ್ರಿಯತೆಯ ಶಿಖರವನ್ನು ಏರಿ, ಅದರದೇ ಆದ ಒಂದು 'ಛಾಪ'ನ್ನು ಉಳಿಸಿ ಬೆಳೆಸಿತು. ತರಂಗ ಹೊರತಂದ,' ಪ್ರಯೋಗ ಸಂಚಿಕೆ' ಯೆನ್ನುವ ಹೆಸರು ಹೊತ್ತು ಹೊರಬಂದ "ತರಂಗ" ಎಲ್ಲರನ್ನೂ ದಿಗ್ಭ್ರಮೆಗೊಳಿಸಿ, ಒಂದು ಹೊಸ ಮೆರುಗನ್ನು ಪತ್ರಿಕಾವಲಯದಲ್ಲಿ ಮೂಡಿಸಿತು. ವಾರದಿಂದ ವಾರಕ್ಕೆ ಇದರಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು ವಿಶಿಷ್ಠ ರೀತಿ ಯಲ್ಲಿ ಮಾಹಿತಿಗಳಿಂದ ತುಂಬಿದ್ದು, ಪತ್ರಿಕೆಯ ವಿನ್ಯಾಸ, ವಿಷಯ ನಿರೂಪಣೆ, ಹೊಸ ಹೊಸ ಅಭಿರುಚಿಗಳನ್ನು ಪ್ರಸ್ತುತ ಪಡಿಸುವ ಸುಂದರ ಶೈಲಿಗಳಿಂದ ಜನರೆಲ್ಲರ ಗಮನ ಸೆಳೆಯಿತು. ಹೊಚ್ಚ ಹೊಸ ಪತ್ರಿಕೆಯೊಂದು ತನ್ನ ಉದಯೋನ್ಮುಖಾವಸ್ಥೆಯಲ್ಲೇ ಹೀಗೆ ವಿಜೃಂಭಿಸುವುದನ್ನು ಕಂಡ ಕನ್ನಡ ಪತ್ರಿಕೋದ್ಯಮ ಅಚ್ಚರಿ ಪಟ್ಟಿತು.

  • ೧. ಓದುಗರ ಭಾವನಾತ್ಮಕ ಮನೋಭಾವವನ್ನು ಮೀಟಿ, ಅವರಿಗೆ ಬೇಕಾದ ಆಸಕ್ತಿಯ ವಿಷಯಗಳನ್ನು ಪಟ್ಟಿ ಮಾಡಿ, ಅವರಿಗೆ ಒದಗಿಸಲು ತೆಗೆದುಕೊಂಡ ಕ್ರಮಗಳು.
  • ೨. ಲೇಖಕನಿಗೆ ಒಂದು ಪತ್ರಿಕೆಯ ಜೊತೆಯಲ್ಲಿ ಇಟ್ಟುಕೊಂಡು ಅದನ್ನು ಸಮಯೋಚಿತವಾಗಿ ತಾಜಾಗೊಳ್ಳಿಸುತ್ತಾ ಮುಂದುವರೆದು, ಸಂಬಂಧಗಳನ್ನು ಗಟ್ಟಿಗೊಳಿಸಿದ ಪರಿ.

ತರಂಗ ಪತ್ರಿಕೆಯ ಅಚ್ಚುಕಟ್ಟುತನ/ ಪ್ರಸ್ತುತ ಪಡಿಸುತ್ತಿದ್ದ ವಿಧಾನಗಳು

[ಬದಲಾಯಿಸಿ]

ಸಾಮಾನ್ಯವಾಗಿ ಆಗ ಪ್ರಚಲಿತದಲ್ಲಿದ್ದ ಪತ್ರಿಕೆಗಳನ್ನು ಪ್ರಮುಖವಾಗಿಟ್ಟುಕೊಂಡು, ಗುಲ್ವಾಡಿಯವರು ತರಂಗದ ಮೊದಲ ಸಂಚಿಕೆಯಲ್ಲಿ ತನ್ನ ಸಹವಾರ ಪತ್ರಿಕೆಗಳ ಸಂಪಾದಕರ ಸಂದರ್ಶನ ಪ್ರಕಟಿಸಿದರು. ಆ ಪತ್ರಿಕೆಗಳ ಬಗ್ಗೆ ಅವರು ಕೊಟ್ಟ ಸದಭಿಪ್ರಾಯಗಳು ಹಾಗೂ ಪತ್ರಿಕೋದ್ಯಮ ಬಗ್ಗೆ ಅವರ ಪ್ರಾಮಾಣಿಕವಾದ ನಿಲವುಗಳು ಸಹಜವಾಗಿ ಓದುಗರನ್ನು ಸೂಜಿಕಲ್ಲಿನಂತೆ ಆಕರ್ಷಿಸಿದವು. ಪತ್ರಿಕೋದ್ಯಮದಲ್ಲಿ ತಮ್ಮ ಕೆರಿಯರ್ ನ್ನು ಶುರು ಮಾಡುವ ವಿದ್ಯಾರ್ಥಿಗಳು ಗಮನಿಸಬೇಕಾದ ಕೆಲವು ಮಹತ್ವದ ವಿಷಯಗಳೆಂದರೆ, ಗುಲ್ವಾಡಿಯವರು ತಮ್ಮ ಹೊಸ ಪತ್ರಿಕೆಯನ್ನು ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿಸುವ ಸಮಯದಲ್ಲಿ ತೆಗೆದುಕೊಂಡ ಕ್ರಮಗಳು, ದಾಖಲಿಸಲು ಯೋಗ್ಯವಾಗಿವೆ.

'ಸಂತೋಷ ಕುಮಾರ್ ಗುಲ್ವಾಡಿಯವರ ವ್ಯಕ್ತಿತ್ವ'

[ಬದಲಾಯಿಸಿ]
  • ಗುಲ್ವಾಡಿಯವರ ವ್ಯಕ್ತಿತ್ವ ನಿಜವಾಗಿಯೂ ಶ್ಲಾಘಿಸುವಂತಹುದು. ಬಹುಮುಖ ಪ್ರತಿಭೆಯ ಆಗರವಾಗಿದ್ದ, ಪತ್ರಿಕೋದ್ಯಮಿ, ಸಾಹಿತಿ, ಕಲಾರಾಧಕ, ಗುಲ್ವಾಡಿಯವರು, ಬದುಕಿನ ಅತಿ ಸಣ್ಣದಾದ ಆದರೆ ಸುಂದರವಾದ ಕ್ಷಣಗಳನ್ನ ಕಂಡು, ಗುರುತಿಸಿ, ಅದಕ್ಕೆ ಪತ್ರಿಕೆಯಲ್ಲಿ ಒಂದು ಸ್ಥಾನ ನೀಡಿ ಓದುಗರನ್ನ ಭಾವಪರವಶತೆಗೆ ಕೊಂಡೊಯ್ಯುತ್ತಿದ್ದರು. ಆದು ಚಿತ್ರ, ನೃತ್ಯ, ಸಂಗೀತ, ಸಾಹಿತ್ಯ, ಶಿಲ್ಪ, ಅಭಿನಯ, ಮಾನವೀಯ ಸ್ವಭಾವ, ಯಾವುದೇ ಇರಲಿ ಅದಕ್ಕೆ ಗುಲ್ವಾಡಿ ಮನಸೋಲುತ್ತಿದ್ದರು. ಅವರ ಕಣ್ಣಿನ ಅಂಚಿಗೆ ಒಂದು ಹನಿ ಬಂದು ನಿಲ್ಲುತ್ತಿತ್ತು. ಅವರು ಕಾಲ, ಸಂದರ್ಭ, ಎಲ್ಲವನ್ನ ಮರೆತು ಅದರ ಆಸ್ವಾದನೆಗೆ ನಿಲ್ಲುತ್ತಿದ್ದರು. ಇದೇ ಪ್ರಪಂಚಕ್ಕೆ ತಮ್ಮ ಓದುಗರನ್ನ ಅವರು ಕರೆದುಕೊಂಡು ಹೋದರು.
  • ‘ತರಂಗ’ ಪತ್ರಿಕೆ ಓದುಗರ ಪಾಲಿಗೆ ಕೇವಲ ಓದುವ ಒಂದು ವಸ್ತು ಆಗಲಿಲ್ಲ. ಅದು ಓದುಗರ ಅನುಭವವನ್ನ, ಜ್ಞಾನವನ್ನ, ತಿಳುವಳಿಕೆ, ಮಾನವೀಯತೆಯನ್ನು ಹೆಚ್ಚಿಸುವ ಒಂದು ಸಾಧನವಾಯಿತು.ಗುಲ್ವಾಡಿ ಲೇಖಕರನ್ನು ತಮ್ಮ ಬಳಿಗೆ ತೆಗೆದುಕೊಂಡರು. ಲೇಖನದ ಜೊತೆಯಲ್ಲಿ ಅವರ ಭಾವಚಿತ್ರ, ಅವರ ಕೈ ಬರಹ, ಅವರ ವಿಳಾಸ, ಅವರ ಪರಿಚಯ ಪ್ರಕಟಿಸಿದರು.
  • ತಮ್ಮ ಪತ್ರಿಕೆಯ ಲೇಖಕರೇ ತಮ್ಮ ಆಸ್ತಿ ಅನ್ನುವ ಮನೋಭಾವ ತಾಳಿದರು. ತರಂಗದ ಲೇಖಕರನ್ನ 'ಮಣಿಪಾಲ'ಕ್ಕೆ ಬರಮಾಡಿಕೊಂಡು 'ಒಂದು ಐಷಾರಾಮಿ ಹೋಟೆಲಿ'ನಲ್ಲಿ ಅವರನ್ನ ಅವರ ಕುಟುಂಬವರ್ಗದವರನ್ನ ಇರಿಸಿ, ಅವರನ್ನ ನೋಡಿಕೊಂಡಿತು ತರಂಗ. ಈ ಅನುಕೂಲತೆ ಪಡೆದವರಲ್ಲಿ 'ಟಿ.ಕೆ.ರಾಮರಾವ್', ಮುಂತಾದವರೂ ಸೇರಿದರು.
  • ಲೇಖಕರನ್ನು ಅವರ ಕುಟುಂಬದ ಸಮೇತ ಪರಿಚಯ ಮಾಡಿ ಕೊಡುವ ಪರಿಪಾಠ ಜಾರಿಗೆ ಬಂದಿತು. ಕೆಲ ಬುದ್ಧಿಜೀವಿ ಲೇಖಕರು ‘ತರಂಗ’ವನ್ನ ಜನಪ್ರಿಯ ಪತ್ರಿಕೆ ಎಂದು ಜರಿದರು. ಆದರೆ ಇವರು ತಮ್ಮ ಪರಿಚಯ, ಫೋಟೋ ತರಂಗದಲ್ಲಿ ಬರಲಿ ಎಂದು ಬಯಸಿದರು. ಇದಕ್ಕಾಗಿ ದಂಬಾಲು ಬಿದ್ದರು. ತರಂಗ ಬಂದ ನಂತರ ಹಳೆಯ ಪತ್ರಿಕೆಗಳ ಸಂಪಾದಕ ಮಂಡಳಿಯವರು ಲೇಖಕರ ಮನೆಗಳಿಗೆ ಭೇಟಿ ನೀಡಿ ನಮಗೂ ಬರೆಯಿರಿ ಎಂದು ಕೇಳಿಕೊಂಡರು. ಇತರೇ ಪತ್ರಿಕೆಗಳು ತಮ್ಮ ಧೋರಣೆ ಬದಲಾಯಿಸಿ ಕೊಂಡವು, ತಮಗೆ ಅರಿವಿಲ್ಲದೆ ತರಂಗದ ಹಲವು ಶೀರ್ಷಿಕೆ ಗಳನ್ನ ತಮ್ಮಲ್ಲಿ ಅಳವಡಿಸಿಕೊಂಡವು.ಗುಲ್ವಾಡಿ ಹೊಸ ಶೀರ್ಷಿಕೆಗಳನ್ನ, ಹೊಸ ವಿಷಯಗಳನ್ನ ಪತ್ರಿಕೆಯ ಮೂಲಕ ಪ್ರಕಟಿಸಿದರು.
  • ಮಲೆನಾಡಿನ ಒಂದು ಮಠ ಒಂದು ಅಪರೂಪದ ದಂತದ ಸಿಂಹಾಸನವನ್ನ ಹೊರಗೆ ಪ್ರದರ್ಶಿಸದೆ ಇರಿಸಿಕೊಂಡಾಗ ಅದರ ಕುರಿತು ನಾನೊಂದು ಲೇಖನ ಬರೆದು ಅದನ್ನ ಜನರ ಮುಂದೆ ಇಡಿ ಎಂದು ಕೋರಿ ಕೊಂಡಿದ್ದೆ. ಆ ಲೇಖನವನ್ನ ಗುಲ್ವಾಡಿ ತುಸು ಖಾರವಾದ ಶೀರ್ಷಿಕೆಯ ಮೂಲಕ ಪ್ರಕಟಿಸಿ ಆ ಮಠದ ಕೆಂಗಣ್ಣಿಗೆ ಗುರಿಯಾದರು. ಆ ಶೀರ್ಷಿಕೆಯನ್ನು ಲೇಖನಕ್ಕೆ ನೀಡಿದವನು ತಾನೇ ಎಂದು ಒಪ್ಪಿಕೊಂಡರು. ಇದೀಗ ಈ ಸಿಂಹಾಸನ ಮಠದಲ್ಲಿ ಹೊರಗೆ ಪ್ರದರ್ಶನಕ್ಕೆ ಇರಿಸಲಾಗಿದೆ. ಇಂತಹಾ ಹಲವು ಕೆಲಸಗಳನ್ನು ‘ತರಂಗ’ ಮಾಡಿತು. ಅವರ ಸಂಪಾದಕೀಯ "ಅಂತರಂಗ ಬಹಿರಂಗ ಓದುಗರಲ್ಲಿ ಸಂಚಲನವನ್ನು ಉಂಟು ಮಾಡಿತು.
  • ಗುಲ್ವಾಡಿ ಕೇವಲ ಪತ್ರಿಕೆಗಳ ಸಂಪಾದನೆಯೊಂದರಲ್ಲೇ ತೊಡಗಿರಲಿಲ್ಲ. ಅವರ ಅಧ್ಯಯನ, ಓದು, ತಿರುಗಾಟ, ಹಲವರ ಭೇಟಿ, ಸಂದರ್ಶನ, ಸಂವಾದ ‘ತರಂಗ’ದ ಓದುಗರಿಗೆ ಪ್ರಯೋಜನಕರವಾಯಿತು. ಪತ್ರಿಕೆಯನ್ನು ಶೀಘ್ರವಾಗಿ ಬೆಳೆಸಲು ನೆರವಾಯಿತು. ದೇಶದ ಪ್ರಖ್ಯಾತ ರಾಜಕೀಯ ಮುತ್ಸದ್ದಿಗಳನ್ನ, ಕಲಾವಿದರನ್ನ, ಪತ್ರಿಕೋದ್ಯಮಿಗಳನ್ನು, ಲೇಖಕರನ್ನು, ಸಂಗೀತಗಾರರನ್ನು ಅವರು ಭೇಟಿಯಾಗಿ ಬಂದರು.
  • ಫ್ರಾನ್ಸ್, ಇಟಲಿ, ರೋಮ್, ಜಪಾನ್ ಮುಂತಾದ ಕಡೆಗಳಲ್ಲೆಲ್ಲಾ ತಿರುಗಾಡಿ ಬಂದರು. ಈ ತರಹದ ಓಡಾಟ ಕೇವಲ ಮೇಲು ಮೇಲಿನ "ಹೋದ ಪುಟ್ಟ ಬಂದ ಪುಟ್ಟ" ಎಂಬಂತಿರಲಿಲ್ಲ. ಆ ದೇಶದ ಜನರ ಸಂಸ್ಕೃತಿ, ಜನ ಜೀವನ, ರಾಜಕೀಯ, ಸಿದ್ಧಾಂತ ಎಲ್ಲವನ್ನ ದಾಖಲೆ ಸಹಿತ ತಂದು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಬೇರೆ ಸಂಪಾದಕರು ತಮ್ಮ ಸಿಬ್ಬಂದಿಗಳ ಮೂಲಕ ಮಾಡಿಸುತ್ತಿದ್ದ ಕೆಲಸಗಳೆಲ್ಲವನ್ನೂ ಸ್ವತಃ ಗುಲ್ವಾಡಿಯವರೇ ಮಾಡುತ್ತಿದ್ದರು.
  • ಹೊಸ ಹೊಸ ಪ್ರಯೋಗಗಳಿಗೆ ‘ತರಂಗ’ ಸದಾ ತೆರೆದುಕೊಂಡಿರುತ್ತಿತ್ತು. ಹೊಸ ಲೇಖಕರನ್ನ ಬೆಳಕಿಗೆ ತಂದರು. ಮುದ್ದು ಮರಿ ಚಿತ್ರ ಬರಿ ಅನ್ನುವ ತಲೆಬರಹ ಅವರದ್ದೇ. ನನ್ನ ಒಂದು ಮಕ್ಕಳ ಕಾದಂಬರಿಗೆ ಮಕ್ಕಳಿಂದಲೇ ಚಿತ್ರಗಳನ್ನ ಬರೆಸಿದರು. ‘ಇನ್ನು ಲೇಖನಗಳನ್ನು ಕಳುಹಿಸ ಬೇಡಿ’ ಎಂದು ಓದುಗರಲ್ಲಿ ವಿನಂತಿ ಮಾಡಿಕೊಂಡ ಏಕೈಕ ಪತ್ರಿಕೆ ತರಂಗ. ಅಂದರೆ ತರಂಗದ ಪುಟಗಳಲ್ಲಿ ಲೇಖಕನಾಗಿ ಕಾಣಿಸಿಕೊಳ್ಳಬೇಕು ಅನ್ನುವ ಹಂಬಲ ಲೇಖಕರಲ್ಲಿ ಹುಟ್ಟು ಹಾಕಿದವರು ಗುಲ್ವಾಡಿ. 'ಮೊದಲ ಮೊಗ್ಗು' ಯೆಂಬ ಕಥಾಸಂಕಲನವನ್ನು ಹೊರತಂದರು.
  • ಇದು ಬಹುಶಃ ಎಲ್ಲ ಪತ್ರಿಕಾ ಸಂಪಾದಕರಂತೆ, ಪತ್ರಿಕೆಯನ್ನು ಒಂದು ಜಿಗಿ ಹಲಗೆಯನ್ನಾಗಿ ಮಾಡಿ ಕೊಂಡ ಬಹಳ ಜನ, ನಂತರದ ದಿನಗಳಲ್ಲಿ ಆ ಪತ್ರಿಕೆಯನ್ನೇ ನೆನೆಯುವುದೇ ಕಡಿಮೆ. ಗುಲ್ವಾಡಿಯವರ ವಿಷಯದಲ್ಲೂ ಹೀಗೆಯೇ ಆಯಿತು. ತರಂಗವನ್ನು ಬಿಟ್ಟ ನಂತರ, ಅವರ ನೂತನದ ಪ್ರಕಟಣೆಯೂ ನಿಂತ ಮೇಲೆ ಗುಲ್ವಾಡಿ ಜನಮನದಿಂದ ಹಿಂದೆ ಸರಿದರು.

ರಾಜೀವ್ ಗಾಂಧಿಯವರ ಜೊತೆಯಲ್ಲಿ ಪ್ರವಾಸ

[ಬದಲಾಯಿಸಿ]

ಸನ್, ೧೯೮೬ ರಲ್ಲಿ ರಾಜೀವ್ ಗಾಂಧಿಯವರ ಜೊತೆ ಪ್ರವಾಸಮಾಡಿದ್ದ ಪತ್ರಿಕಾ ಕರ್ತರ ಮಧ್ಯೆ, ಮಾರಿಷಸ್, ಸಿಂಗಾಪುರ, ಹಾಂಗ್ ಕಾಂಗ್, ಧಾಯ್ ಲ್ಯಾಂಡ್, ಮಲೇಶಿಯ, ಅಮೆರಿಕ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ ಡಂ, ಕೆನಡ, ಇತ್ಯಾದಿ ಪಾಲ್ಗೊಂಡಿದ್ದರು. ಪತ್ರಿಕಾರಂಗದಲ್ಲಿ ಒಂದು ಹೊಸ ಛಾಪನ್ನು ಮೂಡಿಸಿದ, ತಾವೂ ಬೆಳೆಯುತ್ತಾ, ತಮ್ಮ ಜೊತೆಯವರನ್ನೂ ಬೆಳೆಯಲು ಅನುವುಮಾಡಿಕೊಡುತ್ತಾ, ಕನ್ನಡ ನಾಡಿನ ಸಾಹಿತ್ಯ ವಲಯದಲ್ಲಿ ಹೊಸಮಿರುಗನ್ನು ಕೊಡುವ ಬರಹಗಾರರನ್ನು ಗುರುತಿಸಿ, ಪ್ರಕಟಿಸುವ ಸಾಹಸ ಮಾಡಿ ಯಶಸ್ವಿಯಾದರು.

"ಗುಲ್ವಾಡಿ ವೆಂಕಟರಾಯರು", ಗುಲ್ವಾಡಿಯವರ ಅಜ್ಜನ ಸೋದರ ಮಾವ. ಅವರು, ವಿಧವಾ ವಿವಾಹವನ್ನ ಬೆಂಬಲಿಸಿದ ಕನ್ನಡದ ಮೊದಲ ಕಾದಂಬರಿಗಳಲ್ಲಿ ಒಂದಾದ "ಇಂದಿರಾ ಬಾಯಿ" ಯೆಂಬ ಕೃತಿಯನ್ನು ಬರೆದವರು. ಕರ್ನಟಕ ಸರ್ಕಾರ ಈ ಕಾದಂಬರಿಯನ್ನ ಪ್ರಕಟಿಸಿ ಗೌರವಧನವನ್ನು ಗುಲ್ವಾಡಿಯವರಿಗೆ ನೀಡಿದಾಗ, ಆ ಗೌರವ ಧನದ ಜೊತೆಗೆ ತರಂಗದ ಓದುಗರು ಪ್ರೀತಿಯಿಂದ ಸಂಗ್ರಹಿಸಿ ಕೊಟ್ಟ ದೇಣಿಗೆಯ ಹಣ ವನ್ನೂ ಸೇರಿಸಿ, "ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ" ಯನ್ನು ಸ್ಥಾಪಿಸಿ, ಕನ್ನಡದ ಕೆಲವು ಸಮರ್ಥ ಲೇಖಕರಿಗೆ ಈ ಪ್ರಶಸ್ತಿ ನೀಡುವ ಕೆಲಸವನ್ನು ಗುಲ್ವಾಡಿಯವರು, ಕೈಗೊಂಡರು.

'ತರಂಗ ಮಾಸಪತ್ರಿಕೆ'ಯ ಸಮರ್ಥ ವೇದಿಕೆಯಿಂದ ನಿರ್ಗಮನ

[ಬದಲಾಯಿಸಿ]

'ತರಂಗದ ಸಂಪಾದಕತ್ವ'ವನ್ನು ಒಂದು ನೆಲೆಗೆ ತಂದು ಬಿಟ್ಟ ನಂತರ, ಅವರು 'ಬೆಂಗಳೂರಿಗೆ' ಬಂದು ನೆಲಸಿದರು. ಮತ್ತೊಂದು ಪತ್ರಿಕೆ '(ವಿ. ಆರ್. ಎಲ್. ಗುಂಪಿನ)' "ನೂತನ" ಯೆಂಬ ಪತ್ರಿಕೆಗೆ ಸಂಪಾದಕರಾದರು. ಆದರೆ ಕಾರಣಾಂತರಗಳಿಂದ ಈ ಪತ್ರಿಕೆ ಹೆಚ್ಚು ಸಮಯ ನಡೆಯಲಿಲ್ಲ. ನಂತರ ಗುಲ್ವಾಡಿ ತಮ್ಮನ್ನ ತೊಡಗಿಸಿಕೊಂಡಿದ್ದು ಲೇಖನಗಳನ್ನ ಬರೆಯುವ ಕಾಯಕಕ್ಕೆ. ಮೊದಲು ಕೂಡ ಅವರು ಕಥಾಸಂಕಲನ, ಕಾದಂಬರಿ, ಜೀವನ ಚರಿತ್ರೆ, ಹಲವು ಸಂಶೋಧನಾತ್ಮಕ ಲೇಖನಗಳನ್ನ ಬರೆದಿದ್ದರು. ಕೊಂಕಣಿ ಮಕ್ಕಳ ಹಾಡುಗಳ ಒಂದು ಸಂಕಲನ ಹೊರ ತಂದಿದ್ದರು. "ಕೇಂದ್ರ ಸಂಗೀತ ನಾಟಕ ಅಕಾಡೆಮಿ"ಗಾಗಿ "ಬಸರೂರು ದೇವದಾಸಿಯರು" ಯೆನ್ನುವ ಸಾಕ್ಷ್ಯಚಿತ್ರವನ್ನು ತೆಗೆದು ಪ್ರಸ್ತುತ ಪಡಿಸಿದ್ದರು. ಅವರ ತರಂಗದ ಸಂಪಾದಕೀಯ, "ಅಂತರಂಗ ಬಹಿರಂಗ ಪುಸ್ತಕ" ರೂಪದಲ್ಲಿ ಬಂದು ಜನಪ್ರಿಯತೆ ಯನ್ನು ಗಳಿಸಿತ್ತು.

ರಥೋತ್ಸವಕ್ಕೆ ತಪ್ಪದೆ ಹಾಜರಾಗುತ್ತಿದ್ದರು

[ಬದಲಾಯಿಸಿ]

"ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯ ಚಿತ್ರಾಪುರ ಮಠಕ್ಕೆ ನಡೆದುಕೊಳ್ಳುತ್ತಿದ್ದ ಗುಲ್ವಾಡಿಯವರು, ರಥೋತ್ಸವಕ್ಕೆ ತಪ್ಪದೆ ಪ್ರತಿ ವರ್ಷ ಬರುತ್ತಿದ್ದರು. ಹೀಗೆ ಬರುತ್ತಿದ್ದವರು ಬೆಂಗಳೂರು ಬಸ್ಸು ಜೋಗ ಹತ್ತಿರದ ಕಾರ್ಗಲ್ಲಿಗೆ ಬಂದಾಗ, ಆ ಪ್ರದೇಶದ ಗೆಳೆಯರನ್ನೆಲ್ಲಾ ಭೆಟ್ಟಿ ಮಾಡುತ್ತಿದ್ದರು. ಅವರ ಸ್ನೇಹದ ವ್ಯಾಪ್ತಿ ಅಪಾರವಾಗಿತ್ತು. ಒಂದು ಕಲಾ ಪ್ರಪಂಚವನ್ನೇ ಸುತ್ತಿ ಬಂದಷ್ಟು ಅನುಭವಸಾರ ಅದರಲ್ಲಿರುತ್ತಿತ್ತು.

ಪ್ರಶಸ್ತಿ/ಗೌರವ/ಪುರಸ್ಕಾರ

[ಬದಲಾಯಿಸಿ]

'ಅಭಿನಂದನಾ ಗ್ರಂಥದ ಪ್ರಸ್ತಾಪ'

[ಬದಲಾಯಿಸಿ]

೫೦ ವರ್ಷ ತುಂಬಿದ ನೆನಪಿಗಾಗಿ ೧೯೯೩ ರಲ್ಲಿ ಗುಲ್ವಾಡಿಯವರಿಗೆ ಮೈಸೂರಿನ ಅವರ ಕೆಲ ಸ್ನೇಹಿತರು ಅವರಿಗೊಂದು ಅಭಿನಂದನಾ ಗ್ರಂಥವನ್ನು ನೀಡುವ ಪ್ರಯತ್ನ ಮಾಡಿದರು. ಈ ಗ್ರಂಥಕ್ಕೆ ಲೇಖನ ಕೋರಿ ಗುಲ್ವಾಡಿಯವರ ಸುಮಾರು ೯೫ ಅಭಿಮಾನಿಗಳಿಗೆ ಕಾಗದ ಬರೆಯ ಲಾಯಿತು. ಆದರೆ ಬಂದ ಪ್ರತಿಕ್ರಿಯೆ ನಿರಾಶಾದಾಯಕವಾಗಿತ್ತು. ೯೫ ಜನರಲ್ಲಿ ಕೇವಲ ೨೦ ಜನರ ಲೇಖನಗಳನ್ನು ಮಾತ್ರ ಪಡೆಯುವಲ್ಲಿ ಸಮಾಧಾನ ಹೊಂದಬೇಕಾಯಿತು. ಗುಲ್ವಾಡಿಯವರ ‘ತರಂಗ’ದ ಪುಟಗಳ ಮೂಲಕ ಖ್ಯಾತಿಯನ್ನೂ ಜನಪ್ರಿಯತೆಯನ್ನೂ ಗಳಿಸಿದ ಬಹಳ ಜನ ಗುಲ್ವಾಡಿ ಕುರಿತಂತೆ ಲೇಖನ ಬರೆಯಲು ಹಿಂಜರಿದರು. ಇಲ್ಲವೆ ಅವರಿಗೆ ಗುಲ್ಬಾಡಿಯವರ ಸಾಧನೆ ಹೆಚ್ಚೆಂದು ಅನ್ನಿಸಿರಲಿಕ್ಕಿಲ್ಲ.

'ಹೃದಯ ಚಿಕಿತ್ಸೆಗೊಳಗಾದರು'

[ಬದಲಾಯಿಸಿ]

ಗುಲ್ವಾಡಿಯವರಿಗೆ ೧೯೬೫ ರಲ್ಲಿ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ, ಪ್ರ ಪ್ರಥಮವಾಗಿ 'ಹೃದಯದ ಶಸ್ತ್ರಚಿಕಿತ್ಸೆ'ಯನ್ನು ಮಾಡಲಾಯಿತು. ಈ ಚಿಕಿತ್ಸೆಯಲ್ಲಿ ಗುಣಮುಖರಾಗುತ್ತಿದ್ದಂತೆಯೇ, ಅವರ ತಲೆಯಲ್ಲಿ ಅದರ ಅನುಭವಗಳನ್ನೇಕೆ ದಾಖಲಿಸಿ ಒಂದು ಲೇಖನ ಬರೆಯಬಾರದು ಎಂಬ ಯೋಚನೆ ಬಂತು. ಗುಲ್ವಾಡಿಯವರು ಆ ಸಂದರ್ಭದಲ್ಲಿ ತಮಗಾದ ವಿಶೇಷ ಅನುಭವಗಳನ್ನೆಲ್ಲಾ ಜ್ಞಾಪಿಸಿಕೊಂಡು, ಬರೆದು ಪ್ರಕಟಿಸಿದ ಲೇಖನ, "ನಾನು ಹೃದಯ ಚಿಕಿತ್ಸೆ ಮಾಡಿಸಿಕೊಂಡೆ" ಓದುಗರ ಮನಸ್ಸನ್ನು ತಟ್ಟಿ ಅಪಾರ ಜನಮನ್ನಣೆ ದೊರೆಕಿಸಿಕೊಟ್ಟಿತು.

ಗುಲ್ವಾಡಿಯವರು ಬರೆದ ಪುಸ್ತಕಗಳು

[ಬದಲಾಯಿಸಿ]

'ಮೊದಲ ಶಸ್ತ್ರಚಿಕಿತ್ಸೆ'ಯ ಬಳಿಕ, ಹೃದಯವೇನೋ ನಿಯಮಿತ ರೀತಿಯಲ್ಲಿ ಹೆಚ್ಚಿಗೆ ತೊಂದರೆ ಕೊಡದೆ, ಕೆಲಸ ಮಾಡುತ್ತಿತ್ತು. ಆದರೆ ಅದರ ಬಡಿತ ಇದ್ದಕ್ಕಿಂದ್ದಂತೆಯೇ ಸನ್, ೨೦೧೦ ರ, ಡಿಸೆಂಬರ್, ೭ ರಂದು ಸ್ಥಬ್ದವಾಯಿತು. ಉತ್ತರ ಬೆಂಗಳೂರಿನ ಉಪನಗರ, ಮಲ್ಲೇಶ್ವರಂ ನ, 'ಎವರೆಸ್ಟ್ ಆಪಾರ್ಟ್ಮೆಂಟ್ಸ್ ನಲ್ಲಿ ವಾಸಿಸುತ್ತಿದ್ದ ಸಂತೋಷ ಕುಮಾರ ಗುಲ್ವಾಡಿಯವರು ಡಿಸೆಂಬರ್ ೭ರ ಮಂಗಳವಾರದಂದು ಸಾಯಂಕಾಲ ೦೭-೩೦ ಕ್ಕೆ, ಬೆಂಗಳೂರಿನ, 'ಎಂ.ಎಸ್.ರಾಮಯ್ಯ ಆಸ್ಪತ್ರೆ'ಯಲ್ಲಿ 'ಹೃದಯಾಘಾತ'ದಿಂದ ನಿಧನರಾದರು. ಗುಲ್ವಾಡಿಯವರಿಗೆ ಆಗ ೭೨ ವರ್ಷದ ಪ್ರಾಯ. ಕಣ್ಮರೆಯಾದ, ಬುದ್ಧಿಜೀವಿ, ಗುಲ್ವಾಡಿಯವರ ಸಾಹಿತ್ಯದ ಕೊಡುಗೆಗಳು ಇಂದಿಗೂ ಓದುಗರ ನೆನಪಿನಾಳದಲ್ಲಿ ಹಸಿರಾಗಿವೆ. ಮೃತರು ಪತ್ನಿ, 'ಸುದೇಷ್ಣೆ', ಮಗ, 'ಸಮರ್ಥ', ಹಾಗೂ ಮಗಳು, 'ಸಂಸ್ಕೃತಿ,' ತಮ್ಮ 'ಶಿವರಂಜನ ಗುಲ್ವಾಡಿ', ಯನ್ನು ಅಗಲಿ ಹೋಗಿದ್ದಾರೆ. ಮಗಳು 'ಪಶ್ಚಿಮ ಏಷಿಯಾ'ದಲ್ಲಿ ಕೆಲಸ ಮಾಡುತ್ತಿದ್ದಾರೆ.