ಸಂಘಟಿಸುವಿಕೆ
ಪೀಠಿಕೆ
[ಬದಲಾಯಿಸಿ]ಸಂಸ್ಥೆಯ ಉದ್ದೇಶಗಳನ್ನು ನಿರ್ಧರಿಸಿ ಯೋಜನೆಯನ್ನು ಸಿದ್ಧಪಡಿಸಿದ ನಂತರ ಮುಂದಿನ ಹಂತವೆಂದರೆ ಸಂಸ್ಥೆಯ ಉದ್ದೇಶಗಳನ್ನು ಇಡೇರಿಸಲು ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿದೆ.ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ವಿವಿಧ ಚಟುವಟಿಕೆಗಳ ಸಂಘಟನೆ ಅತಿ ಮುಖ್ಯ ಕಾರ್ಯವಾಗಿದೆ.ಈ ಸಂಬಂಧ ಸಂಘಟಿಸುವಿಕೆಯು ಮಹತ್ವದ ಪಾತ್ರ ವಹಿಸುತ್ತದೆ.
ನಿರ್ವಹಣೆಯ ಕಾರ್ಯದಲ್ಲಿ ಸಂಘಟಿಸುವಿಕೆಯ ಪಾತ್ರವೆಂದರೆ ಸಂಸ್ಥೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಪನ್ಮೂಲಗಳನ್ನು ದಕ್ಷತೆಯಿಂದ ಬಳಸುವುದು ಸಿಬ್ಬಂದಿಯನ್ನು ಒಂದಾಗಿಸುವುದು ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.ಈ ಸಂಬಂಧ ಪರಿಣಾಮಕಾರಿ ನಿರ್ವಹಣೆಗೆ ಸಂಘಟಿಸುವಿಕೆಯು ಮುಖ್ಯ ಪಾತ್ರ ವಹಿಸುತ್ತದೆ.ಇದರ ಅರ್ಥ ಯೋಜನೆಗಳನ್ನು ಕಾರ್ಯರೂಪಗೊಳಿಸುವುದು.
ಸಂಘಟಿಸುವಿಕೆಯ ಅರ್ಥ
[ಬದಲಾಯಿಸಿ]ಸಂಘಟಿಸುವಿಕೆ ಎಂದರೆ ಯೋಜನೆಯ ಕಾರ್ಯಗಳನ್ನು ಗುರುತಿಸುವುದು ಹಾಗೂ ಒಂದುಗೂಡಿಸುವ ಪ್ರಕ್ರಿಯೆಯಾಗಿದೆ.ಈ ಸಂಬಂಧ ಉದ್ದೇಶಗಳ ಈಡೇರಿಕೆಗಾಗಿ ಅಧಿಕಾರ ಸಂಬಂಧಗಳ ಗುರುತಿಸುವಿಕೆ ಹಾಗೂ ಜವಬ್ದಾರಿಗಳ ಹಂಚಿಕೆಯಾಗಿದೆ.ಇದರಿಂದ ಸಿಬ್ಬಂದಿಗಳ ಕಾರ್ಯವು ಯಶಸ್ವಿಯಾಗಿ ಉದ್ದೇಶಗಳ ಈಡೇರಿಕೆಯಾಗುತ್ತದೆ.
ಸಂಘಟಿಸುವುಕೆಯು ನಿರ್ವಹಣೆಯ ಎರಡನೇ ಮುಖ್ಯ ಕಾರ್ಯವಾಗಿದೆ.ಇದು ಸಂಸ್ಥೆಯಲ್ಲಿರುವ ವಿವಿಧ ಚಟುವಟಿಕೆಗಳ ನಡುವೆ ಸಂಬಂಧ ಏರ್ಪಡಿಸುತ್ತದೆ.ಇದರ ಉದ್ದೇಶ ವಿವಿಧ ಸಂಪನ್ಮೂಲಗಳನ್ನು ಅಂದರೆ ಸಿಬ್ಬಂದಿವರ್ಗ,ಯಂತ್ರಗಳು,ಕಚ್ಚಾ ಸಾಮಗ್ರಿ,ಬಂಡವಾಳ ಇವುಗಳ ನಡುವೆ ಸಂಬಂಧ ಏರ್ಪಡಿಸಿ,ಅವುಗಳನ್ನು ಒಂದುಗೂಡಿಸಿ ನಿಗದಿತ ಉದ್ದೇಶಗಳನ್ನು ಸಾಧಿಸುವುದಾಗಿದೆ.
ವ್ಯಾಖ್ಯೆ
[ಬದಲಾಯಿಸಿ]ಥಿಯೋ ಹೈಮನ್ರವರ ಪ್ರಕಾರ "ಸಂಘಟಿಸುವಿಕೆಯು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಅರ್ಥೈಸಿ ಒಂದುಗೂಡಿಸುವ ಹಾಗೂ ಅಧಿಕಾರ ಜವಾಬ್ದಾರಿ ಸಂಬಂಧಗಳನ್ನು ಸ್ಥಾಪಿಸುವ ಪ್ರಕ್ರಿಯೆಯಾಗಿದೆ."
ಸಂಘಟಿಸುವಿಕೆಯ ಪ್ರಾಮುಖ್ಯತೆಗಳು
[ಬದಲಾಯಿಸಿ]೧. ವಿಶಿಷ್ಟತೆಯ ಉಪಯೋಗಗಳು
ಸಂಘಟಿಸುವಿಕೆಯು ನೌಕರರಿಗೆ ವ್ಯವಸ್ಥಿತವಾಗಿ ಕಾರ್ಯಗಳನ್ನು ಹಂಚಿಕೆ ಮಾಡುವುದು,ಸರಿಯಾದ ಕೆಲಸಕ್ಕೆ ಸರಿಯಾದ ನೌಕರ,ಇದರಿಂದ ನೌಕರರ ದಕ್ಷತೆ ಹೆಚ್ಚುವುದು.ನಿಗದಿತ ಕಾರ್ಯವನ್ನು ಪ್ರತಿಬಾರಿ ನಿರ್ವಹಿಸುವುದರಿಂದ ನೌಕರರಿಗೆ ಅನುಭವ ಹೆಚ್ಚಾಗಿ ಕಾರ್ಯಗಳನ್ನು ನಿರ್ವಹಿಸಲು ವಿಶಿಷ್ಟತೆಯ ಉಪಯೋಗಗಳು ದೊರೆಯುತ್ತವೆ.
೨. ಕಾರ್ಯ ಸಂಬಂಧಗಳ ನಿಖರತೆ
ಸಂಘಟಿಸುವಿಕೆಯು ನೌಕರರಲ್ಲಿ ಸಂವಹನ ಕ್ರಿಯೆಯನ್ನು ಜಾರಿಗೊಳಿಸಿ ಅವರ ನಡುವೆ ಕಾರ್ಯಚಟುವಟಿಕೆಗಳ ಸಂಬಂಧವನ್ನು ಏರ್ಪಡಿಸುತ್ತದೆ.ಇದರ ಸಹಾಯದಿಂದ ಯಾರು ಯಾರಿಗೆ ವರದಿ ಮಾಡಬೇಕು ಎಂದು ಅವರಲ್ಲಿ ಜವಾಬ್ದಾರಿ ನಿಗದಿಗೊಳಿಸಿ ಅವರ ಅಧಿಕಾರ ವ್ಯಾಪ್ತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ.
೩. ಸಂಪನ್ಮೂಲಗಳ ಅಪೇಕ್ಷಿತ ಬಳಕೆ
ಸಂಘಟಿಸುವಿಕೆಯು ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೋಳ್ಳಲು ಸಹಾಯ ಮಾಡುತ್ತದೆ.ಕಾರ್ಯಗಳನ್ನು ಸರಿಯಾಗಿ ಹಂಚಿಕೆ ಮಾಡುವುದರಿಂದ ಕಾರ್ಯಗಳ ಪುನರಾವರ್ತನೆ ಅಥವಾ ಸರಿಯಾಗಿ ನಿರ್ವಹಿಸದಿರುವುದು ನಿಲ್ಲುತ್ತದೆ.ಇದರಿಂದ ಸಂಪನ್ಮೂಲಗಳು ಹಾಳಾಗದಂತೆ ಅಪೇಕ್ಷಿತ ಬಳಕೆಯಾಗುತ್ತದೆ.
೪. ಬದಲಾವಣೆಗೆ ಹೊಂದಿಕೊಳ್ಳುವುದು
ಸಂಘಟಿಸುವಿಕೆಯು,ವ್ಯವಹಾರ ಸಂಸ್ಥೆಗಳ ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲು ಸಹಕರಿಸುತ್ತದೆ.ಸಂಸ್ಥೆಯ ಸಂಘಟನಾ ಕಾರ್ಯಕ್ಕೆ ಅಗತ್ಯ ಬದಲಾವಣೆ ಮಾಡಿ,ಅವುಗಳನ್ನು ಪರಿಷ್ಕರಿಸಿ ನಿರ್ವಾಹಕರ ನಡುವೆ ಉತ್ತಮ ಸಂಬಂಧ ಏರ್ಪಡಿಸುತ್ತದೆ.ಇದರಿಂದ ಬದಲಾದ ಸನ್ನಿವೇಶದ ನಡುವೆಯೂ ಸಂಸ್ಥೆಯ ಉಳಿವು ಹಾಗೂ ಬೆಳೆವಣಿಗೆಗೆ ಸಹಕಾರಿಯಾಗಿದೆ.
೫. ಪರಿಣಾಮಕಾರಿ ಆಡಳಿತ
ಸಂಘಟಿಸುವಿಕೆಯು ಕಾರ್ಯಗಳ ವಿವರ ಹಾಗೂ ಅದರ ಕರ್ತವ್ಯಗಳನ್ನು ವಿವರಿಸುತ್ತದೆ.ಇದರಿಂದ ಕಾರ್ಯಗಳ ಪುನರಾವರ್ತನೆ ಹಾಗೂ ಗೊಂದಲ ನಿವಾರಿಸಬಹುದು.ಕಾರ್ಯಗಳ ನಡುವೆ ಸ್ಪಷ್ಟತೆ ಇದ್ದಾಗ ಅದನ್ನು ಅಚರಣೆಗೆ ತರುವುದು ಸುಲಭ.ಇದರಿಂದ ಸಂಸ್ಥೆಯ ನಿರ್ವಹಣೆ ಸುಲಭವಾಗುವುದು ಹಾಗೂ ಪರಿಣಾಮಕಾರಿ ಆಡಳಿತ ಜಾರಿಯಾಗುವುದು.
೬. ನೌಕರರ ಪ್ರಗತಿಗೆ ಸಹಾಯಕ
ಸಂಘಟಿಸುವಿಕೆಯು ನಿರ್ವಾಹಕರಲ್ಲಿ ಕ್ರಿಯಾತ್ಮಕತೆಯನ್ನು ಉತ್ತೇಜಿಸುತ್ತದೆ.ಪರಿಣಾಮಕಾರಿ ಪ್ರತಿನಿಯೋಜನೆಯು,ದಿನ ನಿತ್ಯದ ಕರ್ತವ್ಯಗಳನ್ನು ಕೆಳಹಂತದ ನೌಕರರಿಗೆ ವಹಿಸುವುದರಿಂದ ನಿರ್ವಾಹಕರ ಕೆಲಸದ ಒತ್ತಡ ಕಡಿಮೆಯಾಗುವುದು.
೭. ವಿಸ್ತರಣೆ ಹಾಗೂ ಬೆಳವಣಿಗೆ
ಸಂಘಟಿಸುವಿಕೆಯು ಸಂಸ್ಥೆಯ ವಿಸ್ತರಣೆ ಹಾಗೂ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.ಇದರಿಂದ ಸಂಸ್ಥೆಯು ಹೊಸ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುವುದು.
ಸಂಘಟಿಸುವಿಕೆಯ ಪ್ರಕ್ರಿಯೆ
[ಬದಲಾಯಿಸಿ]೧. ಕಾರ್ಯಗಳ ಗುರುತಿಸುವಿಕೆ ಮತ್ತು ಶ್ರಮವಿಭಜನೆ
ಸಂಘಟಿಸುವಿಕೆಯ ಪ್ರಕ್ರಿಯೆಯು,ಕಾರ್ಯಗಳ ಗುರುತಿಸುವಿಕೆ ಹಾಗೂ ಶ್ರಮವಿಭಜನೆಯಿಂದ ಪ್ರಾರಂಭವಾಗುತ್ತದೆ.ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಬಹುದಾದ ಕಾರ್ಯಗಳಾಗಿ ವಿಂಗಡಿಸಲಾಗುತ್ತದೆ.ಇದರಿಂದ ಕಾರ್ಯಗಳ ಪುನರಾವರ್ತನೆ ತಪ್ಪುತ್ತದೆ.ಮತ್ತು ಪೂರ್ವನಿಯೋಜನೆಯಂತೆ ಕಾರ್ಯಗಳು ನಡೆಯುತ್ತದೆ.ಇದರಿಂದ ಶ್ರಮವಿಭಜನೆಯಾಗಿ ಕಾರ್ಯದಕ್ಷತೆ ಹೆಚ್ಚುತ್ತದೆ.
೨. ವಿಭಾಗೀಕರಣ
ಒಂದೇ ರೀತಿಯ ಚಟುವಟಿಕೆಗಳನ್ನು ವಿಭಾಗೀಕರಣಗೊಳಿಸುವುದು.ಇದರಿಂದ ಹೊಂದಾಣಿಕೆ ಹಾಗೂ ವಿಶಿಷ್ಟತೆ ಮೂಡುವುದು.ಈ ಕೆಳಕಂಡ ರೀತಿಯಲ್ಲಿ ವಿಭಾಗೀಕರಣ ಸಾಧ್ಯ.
- ನಿರ್ದಿಷ್ಟ ಕಾರ್ಯದ ಆಧಾರ
- ಉತ್ಪಾದಿಸಿದ ಸರಕಿನ ಆಧಾರ
- ಪ್ರಾದೇಶಿಕ ಆಧಾರ
೩. ಕರ್ತವ್ಯಗಳ ವಹಿಸುವಿಕೆ
ನೌಕರರ ಅರ್ಹತೆ ಹಾಗೂ ಕೌಶಲ್ಯವನ್ನು ಆಧರಿಸಿ ಕರ್ತವ್ಯಗಳನ್ನು ವಹಿಸಲಾಗುವುದು.ಇದರಿಂದ ಸಂಸ್ಥೆಯ ಕಾರ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲ್ಪಡಿತ್ತದೆ.ಇದಕ್ಕಾಗಿ ನೌಕರರ ಕಾರ್ಯಗಳ ಸ್ವರೂಪ ಹಾಗೂ ಅವರ ಅರ್ಹತೆಯ ನಡುವೆ ಸಮತೋಲನ ಏರ್ಪಡಿಸುವುದು ಅವಶ್ಯಕವಾಗಿದೆ.
೪. ವರದಿ ಮಾಡುವ ಸಂಬಂಧಗಳನ್ನು ಕಲ್ಪಿಸುವುದು
ಕಾರ್ಯಗಳ ಹಂಚಿಕೆಯ ಜೊತೆಗೆ ಒಬ್ಬ ವ್ಯಕ್ತಿಯು ಯಾರಿಂದ ಕೆಲಸದ ಅಜ್ಞೆಗಳನ್ನು ತೆಗೆದುಕೊಳ್ಳಬೇಕು,ಯಾರಿಗೆ ಜವಾಬ್ದಾರನಾಗಿರಬೇಕು ಎಂಬುದನ್ನು ತಿಳಿದಿರಬೇಕು.ಈ ರೀತಿಯ ಸ್ಪಷ್ಟತೆಯಿಂದ ವಿವಿಧ ವಿಭಾಗಗಳ ನಡುವೆ ಉತ್ತಮ ಸಂಬಂಧ ರಚನೆಯಾಗಿ ಹೊಂದಾಣಿಕೆ ಮೂಡುವುದು.
ಉಲ್ಲೇಖ
[ಬದಲಾಯಿಸಿ]
- ವ್ಯವಹಾರ ಅಧ್ಯಯನ,ದ ಪ್ರಥಮ ಪಿ.ಯು.ಸಿ ಪಠ್ಯಪುಸ್ತಕ,ಕರ್ನಾಟಕ ಸರ್ಕಾರ