ಸಂಗೀತ ಶೈಲಿ
ಗೋಚರ
ಸಂಗೀತ ಶೈಲಿ/ಸಂಗೀತ ಪ್ರಕಾರ ಎಂಬುದು ಒಂದು ಸಾಂಪ್ರದಾಯಿಕ ವರ್ಗವಾಗಿದ್ದು, ಕೆಲವು ತುಣುಕುಗಳನ್ನು ಹಂಚಿಕೊಂಡ ಸಂಪ್ರದಾಯ ಅಥವಾ ಸಂಪ್ರದಾಯಗಳ ಗುಂಪಿಗೆ ಸೇರಿದೆ ಎಂದು ಗುರುತಿಸುತ್ತದೆ.[೧] ಇದನ್ನು ಸಂಗೀತ ರೂಪ ಮತ್ತು ಸಂಗೀತ ಶೈಲಿ ನಿಂದ ಪ್ರತ್ಯೇಕಿಸಬೇಕಾಗಿದೆ, ಆದರೂ ಆಚರಣೆಯಲ್ಲಿ ಈ ಪದಗಳನ್ನು ಕೆಲವು ಬಾರಿ ಪರಸ್ಪರ ಬದಲಿಯಾಗಿ ಬಳಸಲಾಗುತ್ತದೆ.[೨]
ಸಂಗೀತವನ್ನು ವಿಭಿನ್ನ ರೀತಿಯಲ್ಲಿ ವಿಂಗಡಿಸಬಹುದು. ಸಂಗೀತದ ಕಲಾತ್ಮಕ ಸ್ವಭಾವವೆಂದರೆ ಈ ವರ್ಗೀಕರಣಗಳು ಆಗಾಗ್ಗೆ ವ್ಯಕ್ತಿನಿಷ್ಠ ಮತ್ತು ವಿವಾದಾತ್ಮಕವಾಗಿದ್ದು, ಕೆಲವು ಪ್ರಕಾರಗಳು ಅತಿಕ್ರಮಿಸುತ್ತವೆ. "ಪ್ರಕಾರದ" ಪದದ ವಿವಿಧ ಶೈಕ್ಷಣಿಕ ವ್ಯಾಖ್ಯಾನಗಳು ಸಹ ಇವೆ. ಅವರ ಪುಸ್ತಕ "ಫಾರ್ಮ್ ಇನ್ ಟೋನಲ್ ಮ್ಯೂಸಿಕ್" ನಲ್ಲಿ ಡಗ್ಲಾಸ್ ಎಂ. ಗ್ರೀನ್ ಪ್ರಕಾರ ಮತ್ತು ಮ್ಯೂಸಿಕಲ್ ಫಾರ್ಮ್ ನಡುವಿನ ವ್ಯತ್ಯಾಸವನ್ನು ಗುರುತಿಸಿದ್ದಾರೆ. ಅವರು ಮಡರಿಗಲ್, ಮೋಟೆಲ್, ಕ್ಯಾಂಜೊನಾ, ರಿಷರ್ಕರ್, ಮತ್ತು ನವೋದಯ ಸಂಗೀತ ಅವಧಿಯ ಪ್ರಕಾರಗಳ ಉದಾಹರಣೆಗಳ ಸಹಿತ ವಿಶ್ಲೇಷಿಸಿದ್ದಾರೆ. [೩]
ಸಂಗೀತ ಶೈಲಿಗಳು
[ಬದಲಾಯಿಸಿ]- ಭಾರತೀಯ ಸಂಗೀತ
- ಶಾಸ್ತ್ರೀಯ ಸಂಗೀತ
- ಚಲನಚಿತ್ರ ಸಂಗೀತ
- ಪಾಪ್ ಸಂಗೀತ
- ಕ್ರಿಶ್ಚಿಯನ್ ಸಂಗೀತ
ಉಲ್ಲೇಖಗಳು
[ಬದಲಾಯಿಸಿ]- ↑ ಸ್ಯಾಮ್ಸನ್, ಜಿಮ್. "Genre". ಗ್ರೂವ್ ಮ್ಯೂಸಿಕ್ ಆನ್ಲೈನ್. ಆಕ್ಸ್‌ಫರ್ಡ್ ಮ್ಯೂಸಿಕ್. Accessed ೪,ಮಾರ್ಚ್, ೨೦೧೪.
- ↑ ಜಾನಿಸ್ ವಾಂಗ್ (೨೦೧೧). "Visualising Music: The Problems with Genre Classification".
- ↑ ಗ್ರೀನ್, ಡಾಗ್ಲಸ್ (೧೯೬೫). Form in Tonal Music. ಹೋಲ್ಟ್,ರಿಚರ್ಟ್ ಐಎನ್ಸಿ. p. 1. ISBN 0-03-020286-8.