ಸಂಗಮೇಶ್ವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಗಮೇಶ್ವರ್ ತಾಲ್ಲೂಕು ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ರತ್ನಗಿರಿ ಉಪವಿಭಾಗದಲ್ಲಿನ ಒಂದು ತಾಲ್ಲೂಕಾಗಿದೆ. ತಾಲ್ಲೂಕಿನ ಮುಖ್ಯಸ್ಥಾನ ದೇವ್‍ರುಖ್ ಪಟ್ಟಣವಾಗಿದೆ.[೧] ಸಂಗಮೇಶ್ವರ್‌ನಲ್ಲಿ ಸೋನಾವಿ ಮತ್ತು ಶಾಸ್ತ್ರಿ ನದಿಗಳು ಒಟ್ಟಾಗಿ ಹರಿಯುತ್ತವೆ. ಹೀಗೆ ಎರಡು ನದಿಗಳು ಕೂಡುವುದರಿಂದ "ಸಂಗಮೇಶ್ವರ್" ಎಂಬ ಹೆಸರು ಬಂದಿದೆ. ಇದು ಛತ್ರಪತಿ ಶಿವಾಜಿಯ ಮಗ ಸಾಂಭಾಜಿಯನ್ನು ಮುಘಲ್ ಸಾಮ್ರಾಟ ಔರಂಗ್‍ಜ಼ೇಬ್ ಸೆರೆಹಿಡಿದ ಸ್ಥಳವೆಂದು ಐತಿಹಾಸಿಕವಾಗಿ ಮಹತ್ವದ್ದಾಗಿದೆ.[೨] ಛತ್ರಪತಿ ಸಾಂಭಾಜಿಗೆ ತುಳಾಪುರ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಅವನನ್ನು ಗಲ್ಲಿಗೇರಿಸಲಾಯಿತು.

ಆಕರ್ಷಣೆಗಳು[ಬದಲಾಯಿಸಿ]

ಮಾರ್ಲೇಶ್ವರ್ ದೇವಾಲಯದ ಪ್ರವೇಶದ್ವಾರ.
  • ಮಾರ್ಲೇಶ್ವರ್ ಗುಹಾ ಶಿವ ದೇವಸ್ಥಾನ, ದೇವ್‍ರುಖ್‍ನಿಂದ ೧೭ ಕಿ.ಮಿ. ದೂರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಸ್ಥಿತವಾಗಿರುವ ಒಂದು ಗುಹಾ ದೇವಾಲಯ.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. The headquarters was moved from the village of Sangameshwar to Devrukh in 1878."Devrukh". Ratnagiri District. Archived from the original on 2018-02-27. Retrieved 2020-06-30.
  2. Alexander Mikaberidze (31 July 2011). Conflict and Conquest in the Islamic World: A Historical Encyclopedia. ABC-CLIO. p. 609. ISBN 978-1-59884-337-8. Retrieved 6 March 2012.