ವಿಷಯಕ್ಕೆ ಹೋಗು

ಷ್ಯಾರನ್ ಟರ್ನರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಷ್ಯಾರನ್ ಟರ್ನರ್ (1768-1847). ಇಂಗ್ಲಿಷ್ ಇತಿಹಾಸಕಾರ.

ಲಂಡನಿನಲ್ಲಿ ಜನಿಸಿದ. ಲಂಡನ್ ನಗರದಲ್ಲಿ ಸಾಲಿಸಿಟರ್ (ಸಲಹೆ ವಕೀಲ) ಆಗಿ ಕೆಲಸಮಾಡಿ 1829ರಲ್ಲಿ ನಿವೃತ್ತನಾದ. ಹಿಸ್ಟೊರಿ ಆಫ್ ದಿ ಆಂಗ್ಲೋ-ಸ್ಯಾಕ್ಸನ್ಸ್ (1799-1805) ಎಂಬ ನಾಲ್ಕು ಸಂಪುಟಗಳ ಸಂಶೋಧನಾತ್ಮಕ ಇತಿಹಾಸಗ್ರಂಥದಿಂದ ಪ್ರಸಿದ್ಧನಾದ. ಈ ವಿಷಯದ ಮೇಲೆ ಉತ್ತಮ ದರ್ಜೆಯ ಕೃತಿಯೆಂದು ಇದು ಅನೇಕ ವರ್ಷಗಳ ಕಾಲ ಪ್ರಸಿದ್ಧವಾಗಿತ್ತು. ಹಿಸ್ಟೊರಿ ಆಫ್ ಇಂಗ್ಲೆಂಡ್ (1814-29), ಸೇಕ್ರೆಡ್ ಹಿಸ್ಟೊರಿ ಆಫ್ ದಿ ವಲ್ರ್ಡ್ (1832) ಎಂಬವು ಟರ್ನರನ ಇತರ ಕೃತಿಗಳು. ಟರ್ನರನ ಪಾಂಡಿತ್ಯ ಹಾಗೂ ಲಲಿತವಾದ ಶೈಲಿ ಈ ಕೃತಿಗಳಲ್ಲಿ ಸ್ಫುಟವಾಗಿ ಮೂಡಿವೆ. ಆಳವಾದ ಸಂಶೋಧನೆಯ ಫಲವಾದ ಈ ಗ್ರಂಥಗಳು ಇಂಗ್ಲೆಂಡಿನ ಇತಿಹಾಸ ಬರವಣಿಗೆಯಲ್ಲಿ ತಮ್ಮವೇ ಆದ ಸ್ಥಾನ ಗಳಿಸಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: