ವಿಷಯಕ್ಕೆ ಹೋಗು

ಷ್ಟುತ್ವ ಸಂಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಸ್ಕೃತ ಪದಗಳು ಸಂಧಿಯಾಗುವಾಗ 'ಸ'ಕಾರ 'ತ' ವರ್ಗಾಕ್ಷರಗಳಿಗೆ 'ಷ'ಕಾರ 'ಟ'ವರ್ಗಾಕ್ಷರಗಳು ಸೇರಿದರೆ ಸಕಾರ ತವರ್ಗಾಕ್ಷರಗಳ ಜಾಗದಲ್ಲಿ ಷ ಕಾರ ಟ ವರ್ಗಾಕ್ಷರಗಳೇ ಆದೇಶವಾಗುತ್ತವೆ. ಇದು ಸಂಸ್ಕೃತ ಸಂಧಿ. ಸಂಸ್ಕೃತ ವ್ಯಾಕರಣದಲ್ಲಿ ಈ ಸಂಧಿಯ ನಿಯಮ ಹೀಗಿದೆ:

ष्टुना ष्टुः|

(ಪಾಣಿನೀಯ ಸೂತ್ರ)

सकारतवर्गयोः षकार-तवर्गे परे षकार-तवर्गे आदिष्टे भवतः|

ಉದಾಹರಣೆ:

  1. ವಿದ್ವತ್ + ಟೀಕೆ = ವಿದ್ವಟ್ಟೀಕೆ
 (ವಿದ್ವ)ತ್ + ಟ್(ಈಕೆ)   
 (ವಿದ್ವ)ಟ್ + ಟ್(ಈಕೆ)
     = ವಿದ್ವಟ್ಟೀಕೆ
  1. ರಾಮಸ್ + ಷಷ್ಟಃ
 (ರಾಮ)ಸ್ + ಷ್(ಅಷ್ಟಃ)
 (ರಾಮ)ಷ್ + ಷ್(ಅಷ್ಟಃ)
      = ರಾಮಷ್ಷಷ್ಟಃ
  1. ಶಾರ್ಙಿನ್ + ಢೌಕಸೇ
 (ಶಾರ್ಙಿ)ನ್ + ಢ್(ಔಕಸೇ)
 (ಶಾರ್ಙಿ)ಣ್ + ಢ್(ಔಕಸೇ)
    = ಶಾರ್ಙಿಣ್ಢೌಕಸೇ
  1. ತತ್ + ಟೀಕಾ
 (ತ)ತ್ + ಟ್(ಈಕಾ)
 (ತ)ಟ್ + ಟ್(ಈಕಾ)
     = ತಟ್ಟೀಕಾ