ಶ್ವೇತ ಕ್ರಾಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

ಭೂಮಿ ದಸ್ತೈವಜುಗಳನ್ನು ಷಾ ವಿತರಿಸುತ್ತಿರುವುದು

ಶ್ವೇತ ಕ್ರಾಂತಿ (ಪರ್ಷಿಯನ್:انقلاب سفید ಎಂಘೆಲ್ಯಾಬ್‌-ಇ ಸೆಫಿದ್‌ ) ಎಂಬುದು

ಇರಾನ್‌‌‌ನಲ್ಲಿ ಷಾ ಮೊಹಮ್ಮದ್‌ ರೆಝಾ ಪಹ್ಲಾವಿ ಎಂಬಾತನಿಂದ 1963ರಲ್ಲಿ ಪ್ರಾರಂಭಿಸಲ್ಪಟ್ಟ ಒಂದು ಬಹು ವ್ಯಾಪಕವಾದ ಸುಧಾರಣೆಗಳ ಸರಣಿಯಾಗಿತ್ತು. ಸಾಂಪ್ರದಾಯಿಕ ವ್ಯವಸ್ಥೆಯನ್ನು ಬೆಂಬಲಿಸಿದಂಥ ವರ್ಗಗಳನ್ನು ಬಲಗೊಳಿಸಲು ಮುಹಮ್ಮದ್‌ ರೆಜಾ ಷಾನ ಸುಧಾರಣಾ ಕಾರ್ಯಸೂಚಿಯು ವಿಶೇಷವಾಗಿ ರೂಪಿಸಲ್ಪಟ್ಟಿತ್ತು. ಆಧುನಿಕೀಕರಣದೆಡೆಗಿನ ಒಂದು ಹೆಜ್ಜೆಯಾಗಿ ಶ್ವೇತ ಕ್ರಾಂತಿಯನ್ನು ಷಾ ಜಾಹೀರುಗೊಳಿಸಿದನಾದರೂ, ಷಾ ರಾಜಕೀಯ ಉದ್ದೇಶಗಳನ್ನೂ ಸಹ ಹೊಂದಿದ್ದ ಎಂಬುದರ ಬಗ್ಗೆ ಒಂದಷ್ಟು ಸಂದೇಹ ತೋರುತ್ತದೆ: ಪಹ್ಲಾವಿ ರಾಜವಂಶವನ್ನು ನ್ಯಾಯಸಮ್ಮತವಾಗಿಸುವುದಕ್ಕೆ ಸಂಬಂಧಿಸಿದಂತೆ ಶ್ವೇತ ಕ್ರಾಂತಿಯು ಅವನಿಗೊಂದು ಮಾರ್ಗವಾಗಿತ್ತು. ಭೂಮಾಲೀಕರ ಪ್ರಭಾವವನ್ನು ತೊಡೆದುಹಾಕಲು ಮತ್ತು ರೈತರು ಹಾಗೂ ಶ್ರಮಿಕ ವರ್ಗದವರ ನಡುವೆ ಬೆಂಬಲದ ಒಂದು ಹೊಸ ನೆಲೆಯನ್ನು ಸೃಷ್ಟಿಸಲು ಷಾ ಆಶಿಸಿದ್ದು ಶ್ವೇತ ಕ್ರಾಂತಿಯನ್ನು ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತಿದ್ದ ಕಾರಣದ ಒಂದು ಭಾಗವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಕಾರ್ಯಸೂಚಿಯ ಬಹುಭಾಗವು ಇರಾನ್‌ನ ರೈತ ಸಮುದಾಯದೆಡೆಗೆ ಗುರಿಯನ್ನಿಟ್ಟುಕೊಂಡಿತ್ತು; ಅತೀವವಾಗಿ ಹಗೆತನವನ್ನು ಹೊರಹೊಮ್ಮಿಸುತ್ತಿದ್ದ ಮಧ್ಯಮ ವರ್ಗದ ಬೆದರಿಕೆಗೆ ಅಡ್ಡಿಯಾಗಲು ರೈತ ಸಮುದಾಯದ ಮಿತ್ರತ್ವವನ್ನು ಗಳಿಸಲು ಷಾ ಆಶಿಸಿದ್ದು ಇದಕ್ಕೆ ಕಾರಣವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಈ ರೀತಿಯಾಗಿ ಮೇಲೆ ಉಲ್ಲೇಖಿಸಲಾದ ಸ್ಥಿತಿಯಿಂದ ಆಚೆಬಂದು ಸುಧಾರಣೆಯನ್ನು ಪರಿಚಯಿಸುವ ಮತ್ತು ಸಾಂಪ್ರದಾಯಿಕ ಅಧಿಕಾರ ಮಾದರಿಗಳನ್ನು ಸಂರಕ್ಷಿಸುವ ಒಂದು ಹೊಸ ಪ್ರಯತ್ನವಾಗಿ ಇರಾನ್‌ನಲ್ಲಿನ ಶ್ವೇತ ಕ್ರಾಂತಿಯು ಪ್ರತಿನಿಧಿಸಲ್ಪಟ್ಟಿತು. ಶ್ವೇತ ಕ್ರಾಂತಿಯ ಮೂಲತತ್ತ್ವವಾದ ಭೂಸುಧಾರಣೆಯ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ರೈತ ಸಮುದಾಯದೊಂದಿಗೆ ಸ್ವತಃ ಮಿತ್ರತ್ವವನ್ನು ಗಳಿಸಿಕೊಳ್ಳಲು ಷಾ ಆಶಿಸಿದ, ಮತ್ತು ನಗರದಲ್ಲಿನ ಶ್ರೀಮಂತ ವರ್ಗದೊಂದಿಗೆ ಅವರು ಹೊಂದಿರುವ ಬಾಂಧವ್ಯಗಳನ್ನು ಪ್ರತ್ಯೇಕಿಸುವುದು ಅವನ ಆಶಯವಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಶ್ವೇತ ಕ್ರಾಂತಿಯನ್ನು ನ್ಯಾಯಸಮ್ಮತವಾಗಿಸುವ ದೃಷ್ಟಿಯಿಂದ 1963ರ ಆರಂಭದಲ್ಲಿ ಒಂದು ರಾಷ್ಟ್ರೀಯ ಜನಮತಸಂಗ್ರಹಕ್ಕಾಗಿ ಷಾ ಕರೆನೀಡಿದ; ಇದರಲ್ಲಿ ಪಾಲ್ಗೊಂಡವರ ಪೈಕಿ 5,598,711 ಜನರು ಸುಧಾರಣೆಗಳ ಪರವಾಗಿ ಮತನೀಡಿದರೆ, 4,115 ಜನರು ಸುಧಾರಣೆಗಳ ವಿರುದ್ಧವಾಗಿ ಮತನೀಡಿದರು.[ಸೂಕ್ತ ಉಲ್ಲೇಖನ ಬೇಕು] ದೇಶದ ಬಹುಪಾಲು ಜನಸಮುದಾಯವು ಸುಧಾರಣೆಗಳ ಪರವಾಗಿತ್ತು ಎಂಬುದನ್ನು ಈ ಅಂಕಿ-ಅಂಶವು ಸೂಚಿಸುವಂತೆ ತೋರುತ್ತದೆಯಾದರೂ, ಇದರ ನಿಖರತೆಯ ಕುರಿತಾಗಿ ಹಲವಾರು ವಿವಾದಗಳು ಚಾಲ್ತಿಯಲ್ಲಿದ್ದವು. ಅಷ್ಟೇ ಅಲ್ಲ, ಯಶಸ್ವಿಗೊಳ್ಳಲು ಅತ್ಯಗತ್ಯವಾಗಿದ್ದ ತಾಂತ್ರಿಕ, ನಿರ್ವಹಣಾತ್ಮಕ, ಮತ್ತು ಸಂಘಟನಾತ್ಮಕ ಶಕ್ತಿಯ ಕೊರತೆಯನ್ನು ಶ್ವೇತ ಕ್ರಾಂತಿಯು ಎದುರಿಸುತ್ತಿತ್ತು ಎಂಬುದು ತ್ವರಿತವಾಗಿ ಅರಿತುಕೊಳ್ಳಲಾಯಿತು.[ಸೂಕ್ತ ಉಲ್ಲೇಖನ ಬೇಕು]

ಸುಧಾರಣೆಗಳು[ಬದಲಾಯಿಸಿ]

ಇರಾನ್‌ನ್ನು ಜಾಗತಿಕ ಮಟ್ಟದಲ್ಲಿ ಒಂದು ಆರ್ಥಿಕ ಮತ್ತು ಕೈಗಾರಿಕಾ ಶಕ್ತಿಯಾಗಿ ಮಾರ್ಪಡಿಸುವ ದೀರ್ಘಾವಧಿಯ ಅಂತಿಮ ಗುರಿಯೊಂದಿಗೆ, ಆರ್ಥಿಕ ಹಾಗೂ ಸಾಮಾಜಿಕ ಸುಧಾರಣೆಗಳ ಮೂಲಕ ಇದು ಇರಾನಿಯರ ಸಮಾಜದ ಒಂದು ಅಹಿಂಸಾತ್ಮಕ ಪುನರ್ಜನ್ಮವಾಗಬೇಕು ಎಂದು ಷಾ ಆಶಿಸಿದ್ದ. ಕಾರ್ಮಿಕರಿಗಾಗಿರುವ ಲಾಭ-ಹಂಚಿಕೆಯಂಥ ವಿನೂತನ ಆರ್ಥಿಕ ಪರಿಕಲ್ಪನೆಗಳನ್ನು ಷಾ ಪರಿಚಯಿಸಿದ. ಅಷ್ಟೇ ಅಲ್ಲ, ಬೃಹತ್‌ ಸರ್ಕಾರಿ-ಧನಸಹಾಯದ ಭಾರೀ ಕೈಗಾರಿಕಾ ಯೋಜನೆಗಳು ಹಾಗೂ ಕಾಡುಗಳು ಮತ್ತು ಹುಲ್ಲುಗಾವಲಿನ ರಾಷ್ಟ್ರೀಕರಣಕ್ಕೆ ಅವನು ಚಾಲನೆ ನೀಡಿದ. ಆದಾಗ್ಯೂ, ಇರಾನ್‌ನ ಸಾಂಪ್ರದಾಯಿಕ ಭೂಸ್ವತ್ತುಳ್ಳ ಗಣ್ಯ ಸಮುದಾಯವು ತನ್ನ ಬಹುಪಾಲು ಪ್ರಭಾವ ಮತ್ತು ಶಕ್ತಿಯನ್ನು ಕಳೆದುಕೊಳ್ಳುವುದಕ್ಕೆ ಕಾರಣವಾದ ಭೂಸುಧಾರಣಾ ಕಾರ್ಯಸೂಚಿಗಳು ಅವುಗಳ ಪೈಕಿ ಅತ್ಯಂತ ಪ್ರಮುಖವಾಗಿದ್ದವು. ಇದರ ಪರಿಣಾಮವಾಗಿ ಇರಾನಿನ ಸುಮಾರು 90%ನಷ್ಟು ಗುತ್ತಿಗೆ ಬೇಸಾಯಗಾರರು ಭೂಮಾಲೀಕರಾದರು.

ಸಾಮಾಜಿಕವಾಗಿ, ಈ ವೇದಿಕೆಯು ಮಹಿಳೆಯರಿಗೆ ಹೆಚ್ಚು ಹಕ್ಕುಗಳನ್ನು ನೀಡಿತು ಮತ್ತು ಶಿಕ್ಷಣಕ್ಕೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಣಕ್ಕೆ ಹೇರಳವಾಗಿ ಧನಸಹಾಯವನ್ನು ಮಾಡಿತು. ಲಿಟರೆಸಿ ಕಾರ್ಪ್ಸ್‌‌ ಎಂಬ ದಳವನ್ನೂ ಸಹ ಸ್ಥಾಪಿಸಲಾಯಿತು; ಯುವಜನರು ಹಳ್ಳಿಯ ಸಾಕ್ಷರತಾ ಶಿಕ್ಷಕರಾಗಿ ಕೆಲಸ ಮಾಡುವ ಮೂಲಕ ತಮ್ಮ ಕಡ್ಡಾಯ ಸೇನಾ ಸೇವೆಯನ್ನು ಈಡೇರಿಸಿಕೊಳ್ಳುವಲ್ಲಿ ಇದು ಅನುವುಮಾಡಿಕೊಟ್ಟಿತು.

ಶ್ವೇತ ಕ್ರಾಂತಿಯು 19 ಅಂಶಗಳನ್ನು ಒಳಗೊಂಡಿದ್ದು, ಇವನ್ನು 15 ವರ್ಷಗಳ ಒಂದು ಅವಧಿಯಲ್ಲಿ ಪರಿಚಯಿಸಲಾಯಿತು; ಇವುಗಳ ಪೈಕಿ ಮೊದಲ 6 ಅಂಶಗಳನ್ನು 1963ರಲ್ಲಿ ಪರಿಚಯಿಸಲಾಯಿತು ಮತ್ತು 1963ರ ಜನವರಿ 26ರಂದು ಒಂದು ರಾಷ್ಟ್ರೀಯ ಜನಮತಸಂಗ್ರಹಕ್ಕೆ ಅವನ್ನು ಒಡ್ಡಲಾಯಿತು.

  1. ಭೂಸುಧಾರಣೆಗಳ ಕಾರ್ಯಸೂಚಿ ಹಾಗೂ "ಊಳಿಗಮಾನ್ಯ ಪದ್ಧತಿ"ಯನ್ನು ರದ್ದುಮಾಡುವಿಕೆ : ಊಳಿಗಮಾನ್ಯದ ಜಮೀನ್ದಾರರಿಂದ ಒಂದು ಯಥೋಚಿತ ಬೆಲೆಯಲ್ಲಿ ಜಮೀನನ್ನು ಖರೀದಿಸಿದ ಸರ್ಕಾರವು, ಮಾರುಕಟ್ಟೆ ಬೆಲೆಗಿಂತ 30%ನಷ್ಟು ಕಡಿಮೆ ಬೆಲೆಯಲ್ಲಿ ಅದನ್ನು ರೈತರಿಗೆ ಮಾರಾಟ ಮಾಡಿತು; ಇದಕ್ಕಾಗಿ, ಅತ್ಯಂತ ಕಡಿಮೆ ಬಡ್ಡಿದರಗಳನ್ನು ಹೊಂದಿರುವ ಹಾಗೂ 25 ವರ್ಷಗಳವರೆಗಿನ ಮರುಪಾವತಿ ಆಯ್ಕೆಯನ್ನು ಒಳಗೊಂಡಿರುವ ಸಾಲಸೌಲಭ್ಯವನ್ನೂ ರೈತರಿಗೆ ಕಲ್ಪಿಸಿಕೊಡಲಾಯಿತು. ಈ ಮಹತ್ವದ ಕ್ರಮದಿಂದಾಗಿ, ಒಂದು ಕಾಲಕ್ಕೆ ಗುಲಾಮರಿಗಿಂತ ಸ್ವಲ್ಪವೇ ಮೇಲಿನ ಸ್ಥಿತಿಗತಿಯನ್ನು ಹೊಂದಿದ್ದ 1.5 ದಶಲಕ್ಷದಷ್ಟು ರೈತ ಕುಟುಂಬಗಳು ತಮ್ಮ ಜೀವಮಾನಪರ್ಯಂತ ಉಳುಮೆ ಮಾಡುತ್ತಿದ್ದ ಜಮೀನುಗಳನ್ನು ಸ್ವಂತವಾಗಿಸಿಕೊಳ್ಳಲು ಸಾಧ್ಯವಾಯಿತು. ರೈತ ಕುಟುಂಬವೊಂದರ ಸರಾಸರಿ ಗಾತ್ರವು 5 ಸದಸ್ಯರನ್ನು ಹೊಂದಿತ್ತು ಎಂದು ಪರಿಗಣಿಸಿದರೆ, ಸರಿಸುಮಾರು 9 ದಶಲಕ್ಷ ಜನರಿಗೆ, ಅಥವಾ ಇರಾನ್‌ನ ಜನಸಂಖ್ಯೆಯ 40%ನಷ್ಟು ಭಾಗಕ್ಕೆ ಈ ಭೂಸುಧಾರಣೆಗಳ ಕಾರ್ಯಸೂಚಿಯು ಸ್ವಾತಂತ್ರ್ಯವನ್ನು ತಂದುಕೊಟ್ಟಿತು ಎನ್ನಬಹುದು.
  2. ಕಾಡುಗಳು ಹಾಗೂ ಹುಲ್ಲುಗಾವಲುಗಳ ರಾಷ್ಟ್ರೀಕರಣ : ಇದರಿಂದ ಪರಿಚಯಿಸಲ್ಪಟ್ಟ ಅನೇಕ ಕ್ರಮಗಳು ಕೇವಲ ರಾಷ್ಟ್ರೀಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಹಾಗೂ, ಕಾಡುಗಳು ಮತ್ತು ಹುಲ್ಲುಗಾವಲುಗಳ ನಾಶವನ್ನು ನಿಲ್ಲಿಸುವ ಉದ್ದೇಶವನ್ನು ಮಾತ್ರವೇ ಹೊಂದಿರದೆ, ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮತ್ತು ಬೆಳೆಸುವ ಗುರಿಯನ್ನೂ ಹೊಂದಿದ್ದವು.
26 ಪ್ರದೇಶಗಳಲ್ಲಿ 9 ದಶಲಕ್ಷಕ್ಕೂ ಹೆಚ್ಚಿನ ಮರಗಳನ್ನು ನೆಟ್ಟಪರಿಣಾಮವಾಗಿ, ನಗರಗಳ ಸುತ್ತ ಹಾಗೂ ಪ್ರಮುಖ ಹೆದ್ದಾರಿಗಳ ಗಡಿಗಳ ಮೇಲೆ 70,000 ಎಕರೆಗಳಷ್ಟು (280 km²) ವಿಸ್ತೀರ್ಣದ "ಹಸಿರು ಪಟ್ಟಿಗಳು" ಸೃಷ್ಟಿಯಾದಂತಾದವು.
  1. ಸರ್ಕಾರ ಸ್ವಾಮ್ಯದ ಉದ್ಯಮಗಳ ಖಾಸಗೀಕರಣ : ಸರ್ಕಾರ ಸ್ವಾಮ್ಯದ ಉದ್ಯಮಗಳಷ್ಟೇ ಅಲ್ಲದೇ ತಯಾರಿಕಾ ಘಟಕಗಳು ಮತ್ತು ಕಾರ್ಖಾನೆಗಳ ಷೇರುಗಳನ್ನು ಸಾರ್ವಜನಿಕರಿಗೆ ಹಾಗೂ ಹಳೆಯ ಊಳಿಗಮಾನ್ಯದ ಧಣಿಗಳಿಗೆ ಮಾರಾಟ ಮಾಡುವ ಮೂಲಕ, ಸದರಿ ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದರಿಂದಾಗಿ ಕಾರ್ಖಾನೆ ಮಾಲೀಕರ ಒಂದು ಸಂಪೂರ್ಣ ಹೊಸ ವರ್ಗವೇ ಸೃಷ್ಟಿಯಾದಂತಾಗಿ ಅವರು ಈಗ ದೇಶವನ್ನು ಕೈಗಾರಿಕೀಕರಿಸುವಲ್ಲಿ ನೆರವಾಗಲು ಸಾಧ್ಯವಾಯಿತು.
  2. ಲಾಭ ಹಂಚಿಕೆ : ಖಾಸಗಿ ವಲಯದ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ಕೆಲಸಗಾರರಿಗಾಗಿ ಹಮ್ಮಿಕೊಳ್ಳಲಾದ ಈ ಕ್ರಮದಿಂದಾಗಿ, ಕಾರ್ಖಾನೆಯ ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ಅವರು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿನ ಘಟಕಗಳು ಗಳಿಸಿದ ನಿವ್ವಳ ಲಾಭಗಳ 20%ನಷ್ಟು ಪಾಲು ದಕ್ಕುವಂತಾಯಿತು ಮತ್ತು ಹೆಚ್ಚಿನ ಮಟ್ಟದ ಉತ್ಪಾದಕತೆ ಅಥವಾ ವೆಚ್ಚಗಳಲ್ಲಿನ ಇಳಿಕೆಗಳನ್ನು ಆಧರಿಸಿ ಅವರಿಗೆ ಲಾಭಾಂಶಗಳು (ಬೋನಸ್‌ಗಳು) ದೊರಕುವಂತಾಯಿತು.
  3. ಮತನೀಡುವ ಹಕ್ಕನ್ನು ಮಹಿಳೆಯರಿಗೆ ವಿಸ್ತರಿಸುವಿಕೆ : ಇದಕ್ಕೂ ಮುಂಚೆ ಮಹಿಳೆಯರು ಮತಚಲಾಯಿಸುವ ಹಕ್ಕಿನಿಂದ ವಂಚಿತರಾಗಿದ್ದರು. ಈ ಕ್ರಮವನ್ನು ಕೆಲವೊಂದು ಪಾದ್ರಿಗಳು ಟೀಕಿಸಿದರು.
  4. ಸಾಕ್ಷರತಾ ದಳಗಳ ರೂಪಿಸುವಿಕೆ : ಈ ಕ್ರಮದಿಂದಾಗಿ ಒಂದು ಪ್ರೌಢಶಾಲಾ ಡಿಪ್ಲೊಮಾವನ್ನು ಹೊಂದಿದ್ದು, ಯೋಧರಾಗಿ ತಮ್ಮ ದೇಶಕ್ಕೆ ಸೇವೆ ಸಲ್ಲಿಸಬೇಕಿದ್ದ ಯುವಜನರು ಹಳ್ಳಿಗಳಲ್ಲಿನ ಅನಕ್ಷರತೆಯನ್ನು ತೊಡೆದುಹಾಕುವಲ್ಲಿ ಹೋರಾಡುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಾಯಿತು. 1963ರಲ್ಲಿ ಜನಸಂಖ್ಯೆಯ ಸರಿಸುಮಾರು 2/3ನಷ್ಟು ಭಾಗವು ಅನಕ್ಷರಸ್ಥವಾಗಿದ್ದು, ಆ ಪೈಕಿ ರಾಜಧಾನಿ ನಗರವಾದ ಟೆಹ್ರಾನ್‌‌ನಲ್ಲಿಯೇ 1/3ನಷ್ಟು ಭಾಗವು ಕಂಡುಬಂದಿತ್ತು.
  5. ಆರೋಗ್ಯದ ವಿಶೇಷದಳದ ರೂಪಿಸುವಿಕೆ : ಇರಾನ್‌ನ ಹಳ್ಳಿಗಳು ಹಾಗೂ ಗ್ರಾಮೀಣ ಪ್ರದೇಶಗಳಾದ್ಯಂತ ಸಾರ್ವಜನಿಕ ಆರೋಗ್ಯ ಕಾಳಜಿಯನ್ನು ವಿಸ್ತರಿಸಲು ಈ ಕ್ರಮವನ್ನು ಕೈಗೊಳ್ಳಲಾಯಿತು. 3 ವರ್ಷಗಳಲ್ಲಿ, ಸರಿಸುಮಾರು 4,500 ವೈದ್ಯಕೀಯ ಗುಂಪುಗಳಿಗೆ ತರಬೇತಿ ನೀಡಲಾಯಿತು; ಸುಮಾರು 10 ದಶಲಕ್ಷ ಪ್ರಕರಣಗಳನ್ನು ವಿಶೇಷದಳವು ಉಪಚರಿಸಿತು.
  6. ಮರುನಿರ್ಮಾಣ ಹಾಗೂ ಅಭಿವೃದ್ಧಿಯ ವಿಶೇಷ ದಳದ ರೂಪಿಸುವಿಕೆ : ತೋಟಗಾರಿಕೆಯ ಆಧುನಿಕ ವಿಧಾನಗಳು ಮತ್ತು ಕೌಶಲಗಳನ್ನು ಹಳ್ಳಿಗರಿಗೆ ಬೋಧಿಸಲು ಹಾಗೂ ಜಾನುವಾರು ಸಾಕಣೆಯ ಕುರಿತು ಅವರಿಗೆ ಮಾಹಿತಿ ನೀಡಲು ಈ ಕ್ರಮವನ್ನು ಕೈಗೊಳ್ಳಲಾಯಿತು. 1964 ಮತ್ತು 1970ರ ನಡುವಿನ ಕೃಷಿಯ ಉತ್ಪಾದನೆಯು ಟನ್‌ಮಾನದಲ್ಲಿ 80%ನಷ್ಟು ಹೆಚ್ಚಳವಾಯಿತು ಮತ್ತು ಮೌಲ್ಯದಲ್ಲಿ 67%ನಷ್ಟು ಹೆಚ್ಚಳವಾಯಿತು.
  7. ಧರ್ಮನ್ಯಾಯದ ಸದನಗಳ ರೂಪಿಸುವಿಕೆ : ಈ ವ್ಯವಸ್ಥೆಯ ಅನುಸಾರ, ಹಳ್ಳಿಯ 5 ಮಂದಿ ಹಿರಿಯರು 3 ವರ್ಷಗಳ ಒಂದು ಅವಧಿಗಾಗಿ ಹಳ್ಳಿಗರಿಂದ ಚುನಾಯಿಸಲ್ಪಡುತ್ತಾರೆ. ಸಣ್ಣಪುಟ್ಟ ಅಪರಾಧಗಳು ಹಾಗೂ ವಿವಾದಗಳನ್ನು ಇತ್ಯರ್ಥಮಾಡುವ ದೃಷ್ಟಿಯಿಂದ ಪಂಚಾಯ್ತಿದಾರರಾಗಿ ಕೆಲಸ ಮಾಡುವುದು ಅವರ ಪಾತ್ರವಾಗಿರುತ್ತದೆ. 1977ರ ವೇಳೆಗೆ, ದೇಶಾದ್ಯಂತದ 19,000ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ವಾಸಿಸುವ 10 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಸೇವೆ ಸಲ್ಲಿಸುವ 10,358 ಧರ್ಮನ್ಯಾಯದ ಸದನಗಳು ಅಸ್ತಿತ್ವದಲ್ಲಿದ್ದವು.
  8. ಎಲ್ಲಾ ನೀರಿನ ಸಂಪನ್ಮೂಲಗಳ ರಾಷ್ಟ್ರೀಕರಣ : ಇರಾನ್‌ನ ಸೀಮಿತ ನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸುವ ಹಾಗೂ ಅವುಗಳಿಂದ ಪ್ರಯೋಜನ ಪಡೆಯುವ ಸಲುವಾಗಿರುವ ಯೋಜನೆಗಳು ಹಾಗೂ ಕಾರ್ಯನೀತಿಗಳನ್ನು ಇದು ಒಳಗೊಂಡಿತ್ತು. ಅನೇಕ ಅಣೆಕಟ್ಟೆಗಳು ನಿರ್ಮಿಸಲ್ಪಟ್ಟವು ಮತ್ತು 1978ರ ವೇಳೆಗೆ ಮತ್ತೈದು ಅಣೆಕಟ್ಟೆಗಳು ನಿರ್ಮಾಣದ ಹಾದಿಯಲ್ಲಿದ್ದವು. ಈ ಮಹತ್ವದ ಕ್ರಮಗಳಿಂದಾಗಿಯೇ ನೀರಾವರಿ ವ್ಯಾಪ್ತಿಯ ಅಡಿಯಲ್ಲಿನ ಜಮೀನು ಪ್ರದೇಶದ ವಿಸ್ತೀರ್ಣವು 1968ರಲ್ಲಿದ್ದ 2 ದಶಲಕ್ಷ ಎಕರೆಗಳಿಂದ (8,000 km²) 1977ರಲ್ಲಿನ 5.6 ದಶಲಕ್ಷ ಎಕರೆಗಳಿಗೆ ಹೆಚ್ಚಳಗೊಂಡಿತು.
  9. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಆಧುನಿಕೀಕರಣ ಹಾಗೂ ಮರುನಿರ್ಮಾಣ : ಮರುನಿರ್ಮಾಣ ಹಾಗೂ ಅಭಿವೃದ್ಧಿಯ ವಿಶೇಷ ದಳಗಳ ನೆರವಿನೊಂದಿಗೆ ಇದನ್ನು ಕೈಗೊಳ್ಳಲಾಯಿತು. ಸಾರ್ವಜನಿಕ ಸ್ನಾನಗೃಹಗಳು, ಶಾಲೆಗಳು ಹಾಗೂ ಗ್ರಂಥಾಲಯಗಳನ್ನು ನಿರ್ಮಿಸುವುದು, ಮತ್ತು ಹರಿಯುವ ನೀರು ಹಾಗೂ ವಿದ್ಯುಚ್ಚಕ್ತಿಗೆ ಸಂಬಂಧಿಸಿದಂತೆ ಕ್ರಮವಾಗಿ ನೀರು ಪಂಪುಗಳು ಹಾಗೂ ವಿದ್ಯುತ್‌ ಉತ್ಪಾದಕಗಳ ಅಳವಡಿಸುವಿಕೆಯು ಇದರಲ್ಲಿ ಸೇರಿತ್ತು.
  10. ನೀತಿಬೋಧಕ ಸುಧಾರಣೆಗಳು : ಆಧುನಿಕ ಪ್ರಪಂಚದಲ್ಲಿನ ಜೀವನದ ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ದೃಷ್ಟಿಯಿಂದ ಪಠ್ಯಕ್ರಮವನ್ನು ವೈವಿಧ್ಯಗೊಳಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಇವು ಸುಧಾರಿಸಿದವು.
  11. ಕೈಗಾರಿಕಾ ಸಂಕೀರ್ಣಗಳಲ್ಲಿರುವ ಷೇರುಗಳನ್ನು ಹೊಂದುವಲ್ಲಿನ ಕಾರ್ಮಿಕರ ಹಕ್ಕು : ಕೈಗಾರಿಕಾ ಸಂಕೀರ್ಣಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು 5 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಕೈಗಾರಿಕಾ ಘಟಕಗಳನ್ನು ಸಾರ್ವಜನಿಕ ಕಂಪನಿಗಳಾಗಿ ಪರಿವರ್ತಿಸುವಲ್ಲಿ ತೋರಿದ ಕಾರ್ಯದಕ್ಷತೆಗಾಗಿ, ಸರ್ಕಾರಿ-ಸ್ವಾಮ್ಯದ ಉದ್ಯಮಗಳಲ್ಲಿನ 99%ನಷ್ಟು ಭಾಗದವರೆಗಿನ ಷೇರುಗಳು ಹಾಗೂ ಖಾಸಗಿ ಕಂಪನಿಗಳ 49%ನಷ್ಟು ಷೇರುಗಳನ್ನು ಆಯಾ ಸಂಸ್ಥೆಗಳ ಕೆಲಸಗಾರರಿಗೆ ಆದ್ಯತಾನುಸಾರ ಮೊದಲು ಮಾರಾಟಮಾಡುವುದು ಮತ್ತು ನಂತರದಲ್ಲಿ ಜನಸಾಮಾನ್ಯರಿಗೆ ಮಾರಾಟಮಾಡುವುದು ಇದರ ವೈಶಿಷ್ಟ್ಯವಾಗಿತ್ತು.
  12. ಬೆಲೆ ಸ್ಥಿರೀಕರಣ ಹಾಗೂ ನ್ಯಾಯವಲ್ಲದ ಲಾಭಬಡುಕತನದ ವಿರುದ್ಧದ ಆಂದೋಲನ (1975): ಕಾರ್ಖಾನೆಗಳು ಹಾಗೂ ಬೃಹತ್‌ ಸರಣಿ ಮಳಿಗೆಗಳ ಮಾಲೀಕರಿಗೆ ಅತೀವವಾಗಿ ದಂಡವಿಧಿಸಲಾಯಿತು, ಕೆಲವರನ್ನು ಸೆರೆವಾಸಕ್ಕೆ ಕಳಿಸಿದರೆ, ಮತ್ತೆ ಕೆಲವರ ಪರವಾನಗಿಗಳನ್ನು ರದ್ದುಮಾಡಲಾಯಿತು. ಬಹು-ರಾಷ್ಟ್ರೀಯ ವಿದೇಶಿ ಕಂಪನಿಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು ಮತ್ತು ಸಟ್ಟಾ ವ್ಯವಹಾರ ಉದ್ದೇಶಗಳಿಗಾಗಿ ಶೇಖರಿಸಿಡಲಾಗಿದ್ದ ಟನ್ನುಗಟ್ಟಲೆಯಷ್ಟು ವಾಣಿಜ್ಯ ಸರಕನ್ನು ಮುಟ್ಟುಗೋಲು ಹಾಕಿಕೊಂಡು, ನಿಶ್ಚಿತ ಬೆಲೆಗಳಲ್ಲಿ ಗ್ರಾಹಕರಿಗೆ ಮಾರಾಟಮಾಡಲಾಯಿತು.
  13. ಉಚಿತ ಮತ್ತು ಕಡ್ಡಾಯ ಶಿಕ್ಷಣ ಮತ್ತು
 ಶಿಶುವಿಹಾರದ ಹಂತದಿಂದ ಮೊದಲ್ಗೊಂಡು 14 ವರ್ಷಗಳಷ್ಟು ವಯಸ್ಸಿನ ಎಲ್ಲಾ ಮಕ್ಕಳಿಗಾಗಿ   ಒಂದು ದೈನಂದಿನ ಉಚಿತ ಊಟದ ವ್ಯವಸ್ಥೆ: 1978ರಲ್ಲಿ, ಸಾರ್ವಜನಿಕ ಶಾಲೆಗಳಲ್ಲೊಂದರಲ್ಲೇ 25%ನಷ್ಟು ಇರಾನಿಯರು ದಾಖಲಿಸಲ್ಪಟ್ಟರು.  ಅದೇ ವರ್ಷದಲ್ಲಿ, ಇರಾನ್‌ನ ವಿಶ್ವವಿದ್ಯಾಲಯಗಳಲ್ಲಿ ಒಟ್ಟಾರೆಯಾಗಿ 185,000 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಧ್ಯಯನ ಮಾಡುತ್ತಿದ್ದರು.  ಮೇಲೆ ಉಲ್ಲೇಖಿಸಿದ್ದರ ಜೊತೆಗೆ, 100,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳನ್ನು ಹೊರದೇಶಗಳಲ್ಲಿ ಮುಂದುವರಿಸುತ್ತಿದ್ದರು; ಇವರ ಪೈಕಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ 50,000 ವಿದ್ಯಾರ್ಥಿಗಳು ದಾಖಲಿಸಲ್ಪಟ್ಟಿದ್ದರು. 
  1. ಎರಡು ವರ್ಷ ವಯಸ್ಸಿನವರೆಗಿನ ಎಲ್ಲಾ ನವಜಾತ ಶಿಶುಗಳು ಹಾಗೂ ನಿರ್ಗತಿಕರಾದ ತಾಯಂದಿರಿಗಾಗಿ ಉಚಿತ ಆಹಾರ .
  2. ಎಲ್ಲಾ ಇರಾನಿಯನ್ನರಿಗೆ ಸಂಬಂಧಿಸಿದಂತೆ ಸಾಮಾಜಿಕ ಭದ್ರತೆ ಹಾಗೂ ರಾಷ್ಟ್ರೀಯ ವಿಮೆಯ ಪರಿಚಯ . ನಿವೃತ್ತಿಯ ಸಮಯದಲ್ಲಿ ಸಂಬಳಗಳ 100%ನಷ್ಟು ಪ್ರಮಾಣದವರೆಗೆ ರಾಷ್ಟ್ರೀಯ ವಿಮಾ ವ್ಯವಸ್ಥೆಯನ್ನು ಒದಗಿಸಲಾಯಿತು.
  3. ವಾಸಯೋಗ್ಯ ಸ್ವತ್ತುಗಳ ಬಾಡಿಗೆಗೆ ನೀಡುವಿಕೆ ಅಥವಾ ಖರೀದಿಸುವಿಕೆಯ ಸ್ಥಿರ ಮತ್ತು ನ್ಯಾಯೋಚಿತ ವೆಚ್ಚ (1977). ಜಮೀನು ಬೆಲೆಗಳು ಮತ್ತು ಜಮೀನು ಸಟ್ಟಾ ವ್ಯಾಪಾರದ ಹಲವಾರು ಪ್ರಕಾರಗಳ ಮೇಲೆ ನಿಯಂತ್ರಣಗಳನ್ನು ವಿಧಿಸಲಾಯಿತು.
  4. ಅಧಿಕಾರಶಾಹಿಯೊಳಗೆ ಕಂಡುಬರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕಾಗಿರುವ ಕ್ರಮಗಳ ಪರಿಚಯ . ಇಂಪೀರಿಯಲ್‌ ಇನ್ಸ್‌ಪೆಕ್ಷನ್‌ ಕಮಿಷನ್‌ ಸಂಸ್ಥಾಪಿಸಲ್ಪಟ್ಟಿತು; ಆಡಳಿತಾತ್ಮಕ ಘಟಕಗಳ ಪ್ರತಿನಿಧಿಗಳು ಮತ್ತು ಸಾಬೀತಾಗಿರುವ ಸಮಗ್ರತೆಯ ಜನರನ್ನು ಇದು ಒಳಗೊಂಡಿತ್ತು.

ಪರಿಣಾಮ ಹಾಗೂ ಅನುದ್ದಿಷ್ಟ ಪರಿಣಾಮಗಳು[ಬದಲಾಯಿಸಿ]

ಸುಧಾರಣೆಯ ಈ ಅವಧಿಯಲ್ಲಿ ಅಲ್ಲೊಂದು ಸಣ್ಣ ಕೈಗಾರಿಕಾ ಕ್ರಾಂತಿಯು ಕಂಡುಬಂದಿತ್ತು. ಬಂದರು ಸೌಲಭ್ಯಗಳು ಸುಧಾರಿಸಲ್ಪಟ್ಟವು, ಟ್ರಾನ್ಸ್‌-ಇರಾನಿಯನ್‌ ರೈಲ್ವೆಯು ವಿಸ್ತರಿಸಲ್ಪಟ್ಟಿತು, ಮತ್ತು ಟೆಹ್ರಾನ್‌ ಹಾಗೂ ಪ್ರಾಂತೀಯ ರಾಜಧಾನಿಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳು ಡಾಂಬರೀಕರಿಸಲ್ಪಟ್ಟವು. ಉಡುಗೆ-ತೊಡುಗೆ, ಆಹಾರ ಸಂಸ್ಕರಣ, ಸಿಮೆಂಟು, ನೆಲಹಾಸುಗಳು, ಕಾಗದ, ಹಾಗೂ ಮನೆಬಳಕೆಯ ಉಪಕರಣಗಳ ವಲಯಗಳಲ್ಲಿ ಪರಿಣತಿಯನ್ನು ಪಡೆದ ಅನೇಕ ಸಣ್ಣ ಕಾರ್ಖಾನೆಗಳು ಪ್ರಾರಂಭವಾದವು. ಜವಳಿ ಉದ್ಯಮಗಳು, ಯಂತ್ರ ಸಾಧನಗಳು, ಹಾಗೂ ಕಾರು ಜೋಡಣೆಗೆ ಸಂಬಂಧಿಸಿದ ಬೃಹತ್ತಾದ ಕಾರ್ಖಾನೆಗಳು ಕೂಡಾ ಪ್ರಾರಂಭವಾದವು. ಶ್ವೇತ ಕ್ರಾಂತಿಯ ಪ್ರಾರಂಭವಾದ ನಂತರ ಶೈಕ್ಷಣಿಕ ಸಂಸ್ಥೆಗಳೂ ಸಹ ಬೆಳವಣಿಗೆ ಕಂಡವು. ಶಿಶುವಿಹಾರಗಳಲ್ಲಿನ ದಾಖಲಿಸುವಿಕೆಯು 13,300ರಿಂದ 221,990ಕ್ಕೆ ಹೆಚ್ಚಳವಾದರೆ, ಪ್ರಾಥಮಿಕ ಶಾಲೆಗಳಲ್ಲಿ 1,640,000ರಿಂದ 4,080,000ಕ್ಕೆ, ಪ್ರೌಢ ಶಾಲೆಗಳಲ್ಲಿ 370,000ದಿಂದ 741,000ಕ್ಕೆ ಮತ್ತು ಕಾಲೇಜುಗಳಲ್ಲಿ 24,885ದಿಂದ 145,210ಕ್ಕೆ ದಾಖಲಾತಿಯಲ್ಲಿನ ಹೆಚ್ಚಳಗಳು ಕಂಡುಬಂದವು. ಶಾಲೆಗಳು ಹೊಸದಾಗಿ ಪ್ರಾರಂಭವಾಗುವುದರ ಜೊತೆಗೆ, ಶಿಕ್ಷಣ ಹಾಗೂ ಧಾರ್ಮಿಕ ಶಿಕ್ಷಣದ ಮೇಲಿನ ಪಾದ್ರಿವರ್ಗದ ನಿಯಂತ್ರಣವನ್ನು ತಗ್ಗಿಸುವ ಸಲುವಾಗಿ ಹೊಸ ಶೈಕ್ಷಣಿಕ ಕಾರ್ಯನೀತಿಗಳನ್ನೂ ಸಹ ಅವು ಅಳವಡಿಸಿಕೊಳ್ಳುತ್ತಿದ್ದವು. ಸಾಕ್ಷರತಾ ಪ್ರಮಾಣವನ್ನು 26 ಪ್ರತಿಶತ ಪ್ರಮಾಣದಿಂದ 42 ಪ್ರತಿಶತದಷ್ಟು ಪ್ರಮಾಣಕ್ಕೆ ಹೆಚ್ಚಿಸುವಲ್ಲಿ ಸಾಕ್ಷರತೆಯ ವಿಶೇಷದಳಗಳೂ ಸಹ ನೆರವಾದವು. ಮಹಿಳೆಯರ ಹಕ್ಕುಗಳ ಕುರಿತಾದ ಕೆಲವೊಂದು ಸುಧಾರಣೆಗಳನ್ನೂ ಸಹ ಈ ಶ್ವೇತ ಕ್ರಾಂತಿಯು ಒಳಗೊಂಡಿತ್ತು. ಮಹಿಳೆಯರು ಮತಚಲಾಯಿಸುವ ಹಕ್ಕನ್ನು ಗಳಿಸಿಕೊಂಡರು; ಜೊತೆಗೆ ಚುನಾಯಿತ ಕಚೇರಿಯಲ್ಲಿ ಸ್ಥಾನಗಿಟ್ಟಿಸುವ, ವಕೀಲರಾಗಿ ಮತ್ತು ನಂತರದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಅವಕಾಶಗಳನ್ನು ಅವರು ಪಡೆದುಕೊಂಡರು. ಮಹಿಳೆಯರ ವಿವಾಹಯೋಗ್ಯ ವಯಸ್ಸನ್ನೂ ಸಹ ಹದಿನೈದು ವರ್ಷಗಳಿಗೆ ಏರಿಸಲಾಯಿತು.

ಯಾವ ಸಮಸ್ಯೆಗಳನ್ನು ತಪ್ಪಿಸಬೇಕೆಂದು ಷಾ ಪ್ರಯತ್ನಪಡುತ್ತಿದ್ದನೋ ಅಂಥ ಅನೇಕ ಸಮಸ್ಯೆಗಳನ್ನು ಸೃಷ್ಟಿಸುವಲ್ಲಿ ನೆರವಾದ ಹೊಸ ಸಾಮಾಜಿಕ ಬಿಕ್ಕಟ್ಟುಗಳಿಗೆ ಶ್ವೇತ ಕ್ರಾಂತಿಯು ಎಡೆಮಾಡಿಕೊಡುತ್ತದೆ ಎಂಬುದನ್ನು ಷಾ ನಿರೀಕ್ಷಿಸಿರಲಿಲ್ಲ. ಹಿಂದೊಮ್ಮೆ ತನ್ನ ರಾಜಪ್ರಭುತ್ವಕ್ಕೆ ಬಹುಪಾಲು ಸವಾಲುಗಳನ್ನು ಒಡ್ಡಿದ್ದ ಬುದ್ಧಿಜೀವಿಗಳ ವರ್ಗ ಹಾಗೂ ನಗರ ಪ್ರದೇಶದ ಶ್ರಮಿಕ ವರ್ಗ ಎಂಬ ಎರಡು ವರ್ಗಗಳ ಸಂಯೋಜಿತ ಗಾತ್ರಕ್ಕಿಂತ ಷಾನ ಸುಧಾರಣೆಗಳು ನಾಲ್ಕುಪಟ್ಟಿಗೆಂತ ಹೆಚ್ಚಿದ್ದವು. ಷಾನ ಕುರಿತಾಗಿ ಅವರು ಹೊಂದಿದ್ದ ಮುನಿಸು ಕೂಡ ಬೆಳೆದಿತ್ತು. ಏಕೆಂದರೆ, ಹಿಂದೊಮ್ಮೆ ಅವರನ್ನು ಪ್ರತಿನಿಧಿಸಿದ್ದ ಸಂಘಟನೆಗಳಿಂದ ಅವರನ್ನು ಈಗ ಕಿತ್ತುಹಾಕಲಾಗಿತ್ತು; ರಾಜಕೀಯ ಪಕ್ಷಗಳು, ವೃತ್ತಿಪರ ಒಕ್ಕೂಟಗಳು, ವೃತ್ತಿ ಸಂಘಗಳು, ಮತ್ತು ಸ್ವತಂತ್ರ ವೃತ್ತಪತ್ರಿಕೆಗಳು ಇಂಥ ಸಂಘಟನೆಗಳಲ್ಲಿ ಸೇರಿದ್ದವು. ಸರ್ಕಾರದೊಂದಿಗೆ ರೈತರನ್ನು ಜೊತೆಗೂಡಿಸುವ ಬದಲಿಗೆ, ಬೃಹತ್‌ ಸಂಖ್ಯೆಯ ಸ್ವತಂತ್ರ ಕೃಷಿಕರು ಹಾಗೂ ಜಮೀನುರಹಿತ ಕಾರ್ಮಿಕರನ್ನು ಭೂಸುಧಾರಣೆಯು ಸೃಷ್ಟಿಸಿತು; ಇದರ ಪರಿಣಾಮವಾಗಿ ಷಾನೆಡೆಗಿನ ಯಾವುದೇ ಸ್ವಾಮಿನಿಷ್ಠೆಯ ಭಾವನೆಯಿಲ್ಲದ ಸಡಿಲವಾದ ರಾಜಕೀಯ ಫಿರಂಗಿಗಳಾಗಿ ಅವರು ಮಾರ್ಪಟ್ಟರು. ದಿನೇದಿನೇ ಭ್ರಷ್ಟವಾಗುತ್ತಲೇ ಹೋಗುತ್ತಿದ್ದ ಸರ್ಕಾರದೆಡೆಗೆ ಜನಸಮುದಾಯದ ಅನೇಕರು ಮುನಿಸನ್ನು ಹೊಂದಿದ್ದರು; ಜನಸಾಮಾನ್ಯರ ಭವಿತವ್ಯದೊಂದಿಗೆ ಹೆಚ್ಚು ಕಾಳಜಿಯನ್ನು ಹೊಂದಿದ್ದಾರೆ ಎಂದು ಪರಿಗಣಿಸಲ್ಪಟ್ಟಿದ್ದ ಪಾದ್ರಿ ಸಮುದಾಯದ ಕಡೆಗೆ ಜನರು ಇಟ್ಟಿದ್ದ ಸ್ವಾಮಿನಿಷ್ಠೆಯು ಸುಸಂಗತವಾಗಿ ಉಳಿದುಕೊಂಡಿತು ಇಲ್ಲವೇ ಹೆಚ್ಚಳಗೊಂಡಿತು. ಎರ್ವಾಂಡ್‌ ಅಬ್ರಹಾಮಿಯನ್‌ ಎಂಬಾತ ಉಲ್ಲೇಖಿಸುವ ಪ್ರಕಾರ, "ಒಂದು ಕೆಂಪು ಕ್ರಾಂತಿಯನ್ನು ಪೂರ್ವಭಾವಿಯಾಗಿ ಸ್ವಾಧೀನಪಡಿಸಿಕೊಳ್ಳಲು ಶ್ವೇತ ಕ್ರಾಂತಿಯನ್ನು ವಿನ್ಯಾಸಗೊಳಿಸಲಾಗಿತ್ತು. ಅದರ ಬದಲಿಗೆ, ಇಸ್ಲಾಮಿನ ಕ್ರಾಂತಿಯೊಂದಕ್ಕೆ ಅದು ದಾರಿಮಾಡಿಕೊಟ್ಟಿತು.”

ಶ್ವೇತ ಕ್ರಾಂತಿಯ "ನಿಧಾನವಾಗಿ-ಕೆಳಗಿಳಿಯುವ" ಆರ್ಥಿಕ ಕಾರ್ಯತಂತ್ರವೂ ಸಹ ಆಶಿಸಿದಂತೆ ಕೈಗೂಡಲಿಲ್ಲ. ಹೆಕ್ಕಿ ತೆಗೆದ ಗಣ್ಯರಿಗೆ ಪೂರೈಕೆ ಮಾಡಲಾಗಿದ್ದ ತೈಲ ಹಣವು, ಉದ್ಯೋಗಗಳು ಹಾಗೂ ಕಾರ್ಖಾನೆಗಳನ್ನು ಸೃಷ್ಟಿಸಲು ಬಳಸಲ್ಪಡುತ್ತದೆ, ಇದರಿಂದ ಅಂತಿಮವಾಗಿ ಹಣದ ಹಂಚಿಕೆಗೆ ಕಾರಣವಾಗುತ್ತದೆ ಎಂದು ತಾತ್ತ್ವಿಕವಾಗಿ ಭಾವಿಸಲಾಗಿತ್ತು. ಆದರೆ ಅದರ ಬದಲಿಗೆ ಐಶ್ವರ್ಯವು ಮೇಲಿನ ಹಂತದಲ್ಲೇ ಸಿಕ್ಕಿಹಾಕಿಕೊಂಡಿತು ಮತ್ತು ಕೆಲವೇ ಜನರ ಕೈಗಳಲ್ಲಿ ಅದು ಜಮಾವಣೆಗೊಂಡಿತು.

ಶ್ವೇತ ಕ್ರಾಂತಿಯಿಂದ ಪಡೆಯಲಾದ ಹಲವಾರು ಸಾಮಾಜಿಕ ಕಾರ್ಯಸೂಚಿಗಳ ನೆರವಿನೊಂದಿಗೆ ಇರಾನ್‌ ಪ್ರಗತಿ ಸಾಧಿಸಿತು ಎಂಬುದು ಸತ್ಯಸಂಗತಿಯಾಗಿದ್ದರೂ ಸಹ, ಮಧ್ಯಪ್ರಾಚ್ಯ ವಲಯದಲ್ಲಿನ ಶಿಶುಗಳ ಸಾವಿನ ಅತ್ಯಂತ ಕೆಟ್ಟದಾದ ಪ್ರಮಾಣಗಳು, ಮತ್ತು ವೈದ್ಯ-ರೋಗಿಯ ಪ್ರಮಾಣಗಳನ್ನು ಹೊಂದಿದ್ದ ಪ್ರದೇಶಗಳ ಪೈಕಿ ಇರಾನ್‌ ಇನ್ನೂ ಒಂದೆನಿಸಿಕೊಂಡಿದ್ದು ಅದರಷ್ಟೇ ಸಮಾನ ಸತ್ಯವಾಗಿತ್ತು. ಒಂದು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದ ಜನರ ಶೇಕಡಾವಾರು ಪ್ರಮಾಣಗಳು ಕಡಿಮೆಯಿದ್ದ ದೇಶಗಳ ಪೈಕಿ ಇರಾನ್‌ ಕೂಡ ಒಂದಾಗಿತ್ತು. ಉದಾಹರಣೆಗೆ, ಸುಮಾರು 68 ಪ್ರತಿಶತ ಭಾಗದಷ್ಟು ವಯಸ್ಕ ಜನರು ಇನ್ನೂ ಅನಕ್ಷರಸ್ಥರಾಗಿಯೇ ಉಳಿದುಕೊಂಡಿದ್ದರೆ, 60 ಪ್ರತಿಶತ ಭಾಗದಷ್ಟು ಮಕ್ಕಳು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸಂಪೂರ್ಣಗೊಳಿಸಲಿಲ್ಲ. ಈ ಮುನಿಸು ಹಾಗೂ ಷಾನ ವಿಫಲಗೊಂಡ ಸುಧಾರಣೆಗಳೆಡೆಗೆ ಇದ್ದ ಸಿಟ್ಟು ಒಟ್ಟಾಗಿ ಸೇರಿಕೊಂಡು, ಷಾನ ವಿರುದ್ಧವಾಗಿ ಜನರು ಒಟ್ಟುಗೂಡಲು ಕಾರಣವಾಯಿತು ಎಂದು ತೋರುತ್ತದೆ. ಅಷ್ಟೇ ಅಲ್ಲ, ಈ ಕಾರಣದಿಂದಾಗಿ ಷಾ ಬಯಸಿದಂತೆ ಅವನೆಡೆಗಿನ ಯಾವುದೇ ವರ್ಗದ ಸ್ವಾಮಿನಿಷ್ಠೆಯೂ ಖಂಡಿತಾ ಹೆಚ್ಚಾಗಲಿಲ್ಲ.

ಶ್ವೇತ ಕ್ರಾಂತಿ ಮತ್ತು ಅದು ಹೊತ್ತು ತಂದ ಸುಧಾರಣೆಗಳ ಅತ್ಯಂತ ಪ್ರಮುಖ ಹಾಗೂ ಸಮಂಜಸವಾದ ಪರಿಣಾಮವೆಂದರೆ, ಇದು ರುಹೊಲ್ಲಾಹ್‌ ಖೊಮೇನಿಯ ಜನಪ್ರಿಯತೆಯು ಹೆಚ್ಚಾಗಲು ಕಾರಣವಾಯಿತು. ಪಾದ್ರಿವರ್ಗದ ಓರ್ವ ಸದಸ್ಯನಾಗಿ ತನ್ನ ಸಾರ್ವಜನಿಕ ಜೀವನವನ್ನು ಖೊಮೇನಿ ಪ್ರಾರಂಭಿಸಿದ; “ಪ್ರತಿಭಟಿಸದಿರುವ ತತ್ತ್ವ”, ಸರ್ಕಾರ ಅಥವಾ ರಾಜಕೀಯ ವ್ಯವಹಾರಗಳೊಂದಿಗೆ ತೊಡಗಿಸಿಕೊಳ್ಳದಿರುವ ಪರಿಪಾಠವನ್ನು ಈ ವರ್ಗವು ಅನುಸರಿಸುತ್ತಿತ್ತು. ದಿನೇ ದಿನೇ ಹೆಚ್ಚಾಗುತ್ತಲೇ ಇದ್ದ ಷಾನ ಭ್ರಷ್ಟಾಚಾರ ಹಾಗೂ ಶ್ವೇತ ಕ್ರಾಂತಿಯ ಮೂಲಕ ಆಗುತ್ತಿದ್ದ ಸುಧಾರಣೆಗಳ ಅನುಷ್ಠಾನದಿಂದಾಗಿ, ಖೊಮೇನಿಯು ಷಾನ ಓರ್ವ ಮುಚ್ಚುಮರೆಯಿಲ್ಲದ ರಾಜಕೀಯ ಶತ್ರುವಾಗಿ ಬೆಳೆದ. ಖೊಮೇನಿಯ ಆಲೋಚನೆಯಲ್ಲಿ ಬದಲಾವಣೆಯಾಗುವುದಕ್ಕೆ ಸಂಬಂಧಿಸಿದಂತೆ ಶ್ವೇತ ಕ್ರಾಂತಿಯು ಒಂದು ವೇಗವರ್ಧಕದ ಪಾತ್ರವನ್ನು ವಹಿಸಿತು. ಹಿಂದೊಮ್ಮೆ ಪಾದ್ರಿವರ್ಗದ ಓರ್ವ ಗೌರವಾನ್ವಿತ ಸದಸ್ಯನಾಗಿದ್ದ ಖೊಮೇನಿಯು, ಷಾನನ್ನು ಬಹಿರಂಗವಾಗಿ ವಿರೋಧಿಸಲು ಶುರುಮಾಡಿದ ಮತ್ತು ಅವನ ಅಧಿಕಾರಚ್ಯುತಿಗಾಗಿ ಕರೆನೀಡಿದ; ವಿಭಿನ್ನ ವೃತ್ತಿಗಳು ಹಾಗೂ ಆರ್ಥಿಕ ಸ್ಥಾನಮಾನಗಳಿಗೆ ಸೇರಿದ ಜನರೆಲ್ಲರೂ ಆತನನ್ನು ಓರ್ವ ಮಾದರಿವ್ಯಕ್ತಿಯಾಗಿ ಪರಿಗಣಿಸಿ, ಅವನನ್ನು ಅನುಸರಿಸಲು ಶುರುಮಾಡಿದರು.

ಇರಾನ್‌ನ ಆರ್ಥಿಕ ಹಾಗೂ ತಂತ್ರಜ್ಞಾನದ ಪ್ರಗತಿಗೆ ಶ್ವೇತ ಕ್ರಾಂತಿಯು ತನ್ನದೇ ಆದ ಕೊಡುಗೆಯನ್ನು ನೀಡಿತಾದರೂ, ಅದರಲ್ಲಿದ್ದ ಕೆಲವೊಂದು ಅಂಶಗಳು ಒಟ್ಟಾಗಿ ಸೇರಿಕೊಂಡು ಷಾನ ಅವನತಿಗೆ ಹಾಗೂ 1979ರಲ್ಲಿ ಸಂಭವಿಸಿದ ಇರಾನಿಯನ್ನರ ಕ್ರಾಂತಿಗೆ ಕಾರಣವಾದವು; ಕೆಲವೊಂದು ಭೂಸುಧಾರಣಾ ಕಾರ್ಯಸೂಚಿಗಳ ವೈಫಲ್ಯಗಳು, ಪ್ರಜಾಪ್ರಭುತ್ವವಾದಿ ಸುಧಾರಣೆಗಳ ಭಾಗಶಃ ಕೊರತೆ, ಪಾದ್ರಿವರ್ಗ ಹಾಗೂ ಭೂಸ್ವತ್ತುಳ್ಳ ಗಣ್ಯ ಸಮುದಾಯವು ಶ್ವೇತ ಕ್ರಾಂತಿಯೆಡೆಗೆ ಹೊಮ್ಮಿಸಿದ ತೀವ್ರ ವೈಷಮ್ಯ ಇವೆಲ್ಲವೂ ಈ ಕೆಲವೊಂದು ಅಂಶಗಳಲ್ಲಿ ಸೇರಿದ್ದವು.

ಭೂಸುಧಾರಣೆಯೊಂದಿಗಿನ ಸಮಸ್ಯೆಗಳು[ಬದಲಾಯಿಸಿ]

ಶ್ವೇತ ಕ್ರಾಂತಿಯ ಕೇಂದ್ರಬಿಂದುವಾಗಿದ್ದ ಭೂಸುಧಾರಣೆಯು ಯಾವ ಆಶಯದೊಂದಿಗೆ ಅದನ್ನು ಹಮ್ಮಿಕೊಳ್ಳಲಾಗಿತ್ತೋ ಅದನ್ನು ಮಾಡಿತು; ಅಂದರೆ, ಗಣ್ಯರು ಹಾಗೂ ಭೂಮಾಲೀಕರನ್ನು ಅದು ದುರ್ಬಲಗೊಳಿಸಿತು. ಅವರ ಜಾಗದಲ್ಲಿ ವಾಣಿಜ್ಯ ಕೃಷಿಕರ ಒಂದು ಹೊಸ ಗುಂಪು ಹೊರಹೊಮ್ಮಿತು, ಹಾಗೂ ಪಹ್ಲಾವಿ ಕುಟುಂಬದಂಥ ಹಿಂದೆ ಬೃಹತ್‌ ಪ್ರಮಾಣದಲ್ಲಿ ಜಮೀನನ್ನು ಹೊಂದಿದ್ದ ಅನೇಕ ಕುಟುಂಬಗಳು ಈ ವಾಣಿಜ್ಯ ಕೃಷಿಕರ ವರ್ಗಗಳಾಗಿ ತಮ್ಮನ್ನು ಮತ್ತೆ ಬಲಪಡಿಸಿಕೊಳ್ಳುವಲ್ಲಿ ಸಮರ್ಥವಾದವು. ಸಣ್ಣ ಭೂಮಾಲೀಕರ ಒಂದು ಕ್ಷಿಪ್ರ ವಿಸ್ತರಣೆಯು ಕಂಡುಬಂದಿತಾದರೂ, ರೈತ ಸಮುದಾಯವು ಒಟ್ಟಾರೆಯಾಗಿ ಅಥವಾ ಸಮಷ್ಟಿಯಾಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ. ಸ್ಥೂಲವಾಗಿ ಗ್ರಾಮೀಣ ಜನಸಂಖ್ಯೆಯ ಕೇವಲ ಅರ್ಧದಷ್ಟು ಜನರು ಮಾತ್ರವೇ ಯಾವುದೇ ಜಮೀನನ್ನು ಸ್ವೀಕರಿಸಿದರು, ಮತ್ತು ಜಮೀನನ್ನು ಸ್ವೀಕರಿಸಿದವರ ಪೈಕಿ ಅನೇಕರು ತಮಗೆ ತಾವು ಆಸರೆಯಾಗಿರಲು ಸಾಕಾಗುವಷ್ಟು ಪ್ರಮಾಣದಲ್ಲಿ ಅದನ್ನು ಪಡೆಯಲಿಲ್ಲ. ಏಳಿಗೆ ಹೊಂದುತ್ತಿರುವ ಕೃಷಿಕಕರು, ಸಣ್ಣ ಭೂಮಾಲೀಕರು, ಹಾಗೂ ಹಳ್ಳಿ ಕಾರ್ಮಿಕರು ಎಂಬ ಮೂರು ವರ್ಗಗಳಾಗಿ ಗ್ರಾಮೀಣ ಜನಸಂಖ್ಯೆಯು ಪ್ರತ್ಯೇಕಿಸಲ್ಪಡುವಂತಾಗಲು ಶ್ವೇತ ಕ್ರಾಂತಿಯು ಕಾರಣವಾಯಿತು. ಮೊದಲನೆಯ ಗುಂಪು ಮಾತ್ರವೇ ಭೂಸುಧಾರಣೆಗಳಿಂದ ನಿಜವಾಗಿಯೂ ಪ್ರಯೋಜನ ಪಡೆಯಿತು. ಹಳ್ಳಿಯ ಹಿಂದಿನ ಮುಖ್ಯಸ್ಥರು, ಜಮೀನಿನ ಪಾರುಪತ್ಯೆಗಾರರು, ಹಾಗೂ ಹಿಂದಿನ ಕೆಲವೊಂದು ಭೂಮಾಲೀಕರು ಈ ಗುಂಪಿನಲ್ಲಿ ಸೇರಿದ್ದರು. ಎರಡನೇ ಗುಂಪಿನಲ್ಲಿ ಪಾಲುಗುತ್ತಿಗೆದಾರರು ಸೇರಿದ್ದರು; 10 ಹೆಕ್ಟೇರುಗಳಿಗಿಂತ ಹೆಚ್ಚಿಲ್ಲದ ಜಮೀನನ್ನು ಇವರು ಸ್ವೀಕರಿಸಿದರು. ಬಹುಪಾಲು ಪ್ರದೇಶಗಳಲ್ಲಿ ಒಬ್ಬರ ಜೀವನಕ್ಕೆ ಆಸರೆಯಾಗಿರುವುದಕ್ಕೆ ಅಗತ್ಯವಿರುವ ಕನಿಷ್ಟ ಪ್ರಮಾಣದ ಜಮೀನು ಎಂದು ಇದು ಪರಿಗಣಿಸಲ್ಪಟ್ಟಿತ್ತು. ಇವರ ಪೈಕಿ ಬಹುಪಾಲು ಜನರು ತಂತಮ್ಮ ಜಮೀನುಗಳನ್ನು ಸರ್ಕಾರದ ಸಹಕಾರ ಸಂಸ್ಥೆಗಳಲ್ಲಿನ ಷೇರುಗಳನ್ನು ಪಡೆಯುವುದಕ್ಕಾಗಿ ಮಾರಿಕೊಂಡರು; ಏಕೆಂದರೆ ಅವರಿಗೆ ನೀಡಲಾಗಿದ್ದ ಜಮೀನಿನ ಪ್ರಮಾಣವನ್ನು ಆಧರಿಸಿ ಜೀವನ ಸಾಗಿಸಲು ಪ್ರಯತ್ನಿಸುವುದು ನಿರರ್ಥಕವಾಗಿತ್ತು. ಕೊನೆಯ ಗುಂಪಿಗೆ ಯಾವ ಜಮೀನೂ ಸಿಗಲಿಲ್ಲ; ಬೇಸಾಯದ ಕೂಲಿಯಾಳುಗಳಾಗಿ, ಕಾರ್ಮಿಕರಾಗಿ, ಅಥವಾ ಕುರಿಕಾಯುವವರಾಗಿ ಅವರು ತಮ್ಮ ಜೀವನವನ್ನು ಸಾಗಿಸಿದರು. ಅವರಲ್ಲನೇಕರು ಕೆಲಸವನ್ನು ಅರಸಿಕೊಂಡು ನಗರ ಪ್ರದೇಶದ ಕೇಂದ್ರಗಳಿಗೆ ವಲಸೆಹೋದರು. ಈ ರೀತಿಯಾಗಿ, ಯಾವ ಜನರಿಗಾಗಿ ಭೂಸುಧಾರಣೆಗಳು ವಿನ್ಯಾಸಗೊಳಿಸಲ್ಪಟ್ಟವೋ ಅಂಥ ಗ್ರಾಮೀಣ ಜನರಿಗೆ ಅದು ಜಮೀನನ್ನು ನಿಜವಾಗಿ ಒದಗಿಸಲಿಲ್ಲ ಮತ್ತು ನಗರ ಪ್ರದೇಶದ ಒಂದು ಹೊಸ ನಿರುದ್ಯೋಗಿ ಅಥವಾ ಅರೆ-ನಿರುದ್ಯೋಗಿ ಕೆಳವರ್ಗವನ್ನು ಇದು ಸೃಷ್ಟಿಸಿತು ಎಂದು ಈ ಮೂಲಕ ತೀರ್ಮಾನಿಸಬಹುದು.

ಟೀಕೆ[ಬದಲಾಯಿಸಿ]

ಶ್ವೇತ ಕ್ರಾಂತಿಯನ್ನು ಅತೀವವಾಗಿ ಟೀಕಿಸಿದವರಲ್ಲಿ ಎರಡು ಪ್ರಮುಖ ಗುಂಪುಗಳು ಸೇರಿದ್ದವು. ಅವುಗಳೆಂದರೆ, ಪಾದ್ರಿವರ್ಗ ಮತ್ತು ಭೂಮಾಲೀಕರ ವರ್ಗ. ತಮ್ಮ ಜಮೀನನ್ನು ಕಿತ್ತುಕೊಳ್ಳಲಾಯಿತು ಮತ್ತು ಅದನ್ನು ಮರುವಿತರಿಸಲಾಯಿತು ಎಂಬ ಕಾರಣದಿಂದಾಗಿ ಭೂಸುಧಾರಣೆಗಳ ಕುರಿತು ಭೂಮಾಲೀಕರು ಕೋಪಗೊಂಡಿದ್ದರು. ರೈತರೊಂದಿಗೆ ಅಥವಾ ಜಮೀನು ಕಾರ್ಮಿಕರೊಂದಿಗೆ ವ್ಯವಹರಿಸುವಾಗ ಸರ್ಕಾರವು ಅವರ ಅಧಿಕಾರವನ್ನು ತಗ್ಗಿಸಿದ್ದೂ ಸಹ ಅವರಿಗೆ ಮೆಚ್ಚುಗೆಯಾಗಲಿಲ್ಲ.

ಅತ್ಯಂತ ಶಕ್ತಿಯುತ ಷಿಯಾಹ್‌ ಪಾದ್ರಿ ವರ್ಗದವರೂ ಸಹ ಈ ಸುಧಾರಣೆಗಳ ಕುರಿತು ಕೋಪಗೊಂಡಿದ್ದರು; ಶಿಕ್ಷಣ ಹಾಗೂ ಕುಟುಂಬ ಕಾನೂನಿನ ಕ್ಷೇತ್ರಗಳಲ್ಲಿ ತಾವು ಹೊಂದಿದ್ದ ಸಾಂಪ್ರದಾಯಿಕ ಅಧಿಕಾರಗಳ ಬಹುಭಾಗವನ್ನು ಸದರಿ ಸುಧಾರಣೆಗಳು ತೆಗೆದುಹಾಕಿದ್ದಷ್ಟೇ ಅಲ್ಲದೇ, ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ತಾವು ಹೊಂದಿದ್ದ ಬಲವಾದ ಪ್ರಭಾವವನ್ನು ತಗ್ಗಿಸಿದ್ದೂ ಸಹ ಪಾದ್ರಿಗಳ ಕೋಪಕ್ಕೆ ಕಾರಣವಾಗಿತ್ತು. "ಪಾದ್ರಿವರ್ಗದವರ ಪೈಕಿಯ ಮೇಲಂತಸ್ತಿನವರ ಒಂದು ಬೃಹತ್‌ ಶೇಕಡಾವಾರು ಭಾಗದವರು ಜಮೀನು ಹೊಂದಿರುವ ಕುಟುಂಬಗಳಿಂದ ಬಂದವರಾಗಿದ್ದು" ಸುಧಾರಣೆಯಿಂದಾಗಿ ಅವರಿಗೆ ವ್ಯಾಪಕವಾದ ಹಾನಿಯಾಗಿತ್ತು ಮತ್ತು ಅನುಪಸ್ಥಿತ ಬಾಡಿಗೆಯ ಬಹುಪಾಲು ಆದಾಯವು ಪಾದ್ರಿವರ್ಗ ಹಾಗೂ ಅವರ ಸಂಸ್ಥೆಗಳಿಗೆ ನೇರವಾಗಿ ಹೋಯಿತು. ಪಾದ್ರಿವರ್ಗದ ಸ್ಥಾಪನೆಗೆ ಧನಸಹಾಯ ಮಾಡುವಲ್ಲಿ ನೆರವಾದ ಸುಮಾರು 10,000 ಹಳ್ಳಿಗಳಿಂದ ಬಂದ ಬಾಡಿಗೆಗಳು ಮರುವಿತರಣೆಗಾಗಿ ಅರ್ಹವಾಗಿದ್ದವು.[೧]

ಒಂದು ಗುಂಪು, ಅಥವಾ ಹೆಚ್ಚು ಸೂಕ್ತವಾಗಿ ಹೇಳುವುದಾದರೆ, ಶ್ವೇತ ಕ್ರಾಂತಿಯನ್ನು ಹಾಗೂ ಸ್ವತಃ ಷಾನನ್ನು ಅತ್ಯಂತ ಬಹಿರಂಗವಾಗಿ ವಿರೋಧಿಸಿದ ವ್ಯಕ್ತಿ ರುಹೊಲ್ಲಾಹ್‌ ಖೊಮೇನಿ ಆಗಿದ್ದ. ಮಹಿಳೆಯಯರಿಗೆ ಮತಚಲಾಯಿಸುವ ಹಕ್ಕು ನೀಡುವುದು, ಜಾತ್ಯತೀತ ಸ್ಥಳೀಯ ಚುನಾವಣಾ ಮಸೂದೆ, ಮತ್ತು ಭೂಸುಧಾರಣೆಗಳು ಇವೇ ಮೊದಲಾದ ಶ್ವೇತ ಕ್ರಾಂತಿಯ ಅನೇಕ ಮಗ್ಗುಲುಗಳ ಕುರಿತಾಗಿ ಇರಾನ್‌ನಲ್ಲಿನ ಪಾದ್ರಿಗಳು ತೀವ್ರ ಅಸಮಾಧಾನವನ್ನು ಹೊಂದಿದ್ದರೂ ಸಹ, ಒಂದು ಸಮಷ್ಠಿಯ ರೂಪದಲ್ಲಿ ಅಥವಾ ಸಮಗ್ರವಾಗಿ ಅವರು ಇದನ್ನು ಸಕ್ರಿಯವಾಗಿ ಪ್ರತಿಭಟಿಸುತ್ತಿರಲಿಲ್ಲ. ಮತ್ತೊಂದೆಡೆ, ಷಿಯಿ ಪಾದ್ರಿಗಳ ಸಾಂಪ್ರದಾಯಿಕ ಪಾತ್ರ ಹಾಗೂ ಪರಿಪಾಠಗಳಿಂದ ವಿಮುಖನಾಗಿ ಆಲೋಚನೆಯ ಒಂದು ಗಂಭೀರಸ್ವರೂಪದ ಬದಲಾವಣೆ ಹೊಂದುವವನಂತೆ ಖೊಮೇನಿಯು ಕಂಡುಬಂದ, ಮತ್ತು ಹೊಸ ಸುಧಾರಣೆಗಳು ಹಾಗೂ ಷಾನ ವಿರುದ್ಧವಾಗಿ ಸಕ್ರಿಯವಾಗಿ ಮಾತನಾಡಲು ಪ್ರಾರಂಭಿಸಿದ. 1963ರ ಜೂನ್‌ ತಿಂಗಳಲ್ಲಿ ಕ್ವಾಮ್‌ನಲ್ಲಿ ಖೊಮೇನಿಯು ಮಾಡಿದ ಪ್ರಸಿದ್ಧ ಭಾಷಣವು, ವಿದ್ಯಾರ್ಥಿಗಳ ಪ್ರತಿಭಟನೆಗಳ ಕಡೆಗೆ ಷಾ ತೋರಿಸಿದ ಕ್ರೌರ್ಯವನ್ನು ವಿರೋಧಿಸಿತ್ತು, ಮತ್ತು ಮೊಟ್ಟಮೊದಲ ಬಾರಿಗೆ, ಓರ್ವ ವ್ಯಕ್ತಿಯಾಗಿ ಷಾನ ಮೇಲೆ ದಾಳಿಮಾಡಿದ ಭಾಷಣ ಇದಾಗಿತ್ತು. ಖೊಮೇನಿಯ ಗಡೀಪಾರಿಗೆ ಈ ಭಾಷಣವು ಕಾರಣವಾಯಿತಾದರೂ, ಇರಾನಿನ ಹೊರಗಡೆ ಇದ್ದ ಖೊಮೇನಿಯ ಪ್ರತಿಭಟನೆಗಳನ್ನು ಅದು ನಿಲ್ಲಿಸಲಾಗಲಿಲ್ಲ, ಅಥವಾ ಇರಾನ್‌ ಒಳಗಡೆ ಅವನು ಹೊಂದಿರುವ ಪ್ರಭಾವವನ್ನು ದುರ್ಬಲಗೊಳಿಸಲು ಅದಕ್ಕೆ ಸಾಧ್ಯವಾಗಲಿಲ್ಲ.

ಇರಾನ್‌ನ ಮುಸ್ಲಿಮರಲ್ಲದ ಅಲ್ಪಸಂಖ್ಯಾತ ವರ್ಗದ ಸದಸ್ಯರನ್ನು ಸ್ಥಳೀಯ ಕಚೇರಿಗಳಿಗೆ ಚುನಾಯಿಸುವುದಕ್ಕೆ ಅಥವಾ ನೇಮಿಸುವುದಕ್ಕೆ ಅವಕಾಶ ಕಲ್ಪಿಸುವ ಸುಧಾರಣೆಗಳ ಮುನ್ನೇರ್ಪಾಡುಗಳ ಮೇಲೂ ಖೊಮೇನಿ ದಾಳಿಮಾಡಿದ:

I have repeatedly pointed out that the government has evil intentions and is opposed to the ordinances of Islam. ... The Ministry of Justice has made clear its opposition to the ordinances of Islam by various measures like the abolition of the requirement that judges be Muslim and male; henceforth, Jews, Christians, and the enemies of Islam and the Muslims are to decide on affairs concerning the honor and person of the Muslims.

— [೨]

ಒಂದೆರಡು ತಿಂಗಳುಗಳ ನಂತರ ಅಶುರಾ ದಿನದಂದು ಒಂದು ಕೋಪೋದ್ರಿಕ್ತ ಭಾಷಣದ ಮೂಲಕ ದಾಳಿಮಾಡಿದ ಖೊಮೇನಿಯು, ಷಾನನ್ನು ಓರ್ವ "ಹತಭಾಗ್ಯ ದುಃಖಾರ್ತ ಮನುಷ್ಯ" [೩] ಎಂದು ಕರೆದ ಮತ್ತು ಷಾ ಏನಾದರೂ ಓರ್ವ "ನಾಸ್ತಿಕ" ಯೆಹೂದಿಯಾಗಿದ್ದಾನೆಯೇ ಎಂದು ಪ್ರಶ್ನಿಸಿದ.[೪] ಎರಡು ದಿನಗಳ ನಂತರ, ಜೂನ್‌ 5ರಂದು ಖೊಮೇನಿಯನ್ನು ಬಂಧಿಸಲಾಯಿತು. ಮೂರು ದಿನಗಳವರೆಗೆ ನಡೆದ ದೊಂಬಿಗಳಿಗೆ ಇದು ಕಿಚ್ಚುಹಚ್ಚಿತು ಹಾಗೂ ಇದರಿಂದಾಗಿ ನೂರಾರು ಮಂದಿ ಸತ್ತರು. ಸೇನೆಯು "15,000ಕ್ಕಿಂತ ಕಡಿಮೆಯಿಲ್ಲದ ಜನರ ಸಾಮೂಹಿಕ ವಧೆಮಾಡಿದ" ಕಾಲವೆಂಬುದಾಗಿ ಈ ಹಿಂಸಾಚಾರಗಳು ಭಾಷಣಗಳಲ್ಲಿ ಹಾಗೂ ಬರಹಗಳಲ್ಲಿ ಸ್ಮರಿಸಲ್ಪಟ್ಟವು.[೫] 1964ರ ಏಪ್ರಿಲ್‌ನಲ್ಲಿ ಖೊಮೇನಿಯನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಯಿತಾದರೂ, ಅದೇ ವರ್ಷದ ನವೆಂಬರ್‌ನಲ್ಲಿ ಅವನನ್ನು ಗಡೀಪಾರು ಮಾಡಲಾಯಿತು.

ಇಸ್ಲಾಮಿಕ್‌ ಗಣರಾಜ್ಯದಲ್ಲಿನ ಒಂದು ಪ್ಯಾರಾಸ್ಟೇಟಲ್‌ ಸಂಘಟನೆಯಿಂದ ಪ್ರಕಟಿಸಲ್ಪಟ್ಟ ಇತ್ತೀಚಿನ ಪುಸ್ತಕವೊಂದು, ಮುಸ್ಲಿಮರ ಗೌರವಕ್ಕೆ ಸಂಬಂಧಿಸಿದಂತೆ ಇರುವ ವ್ಯವಹಾರಗಳ ಕುರಿತಾಗಿ ಮುಸ್ಲಿಮರಲ್ಲದವರು ನಿರ್ಧಾರ ಮಾಡುತ್ತಿದ್ದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ; ಆದರೆ ಅದು ಸಮರ್ಥಿಸುವ ಪ್ರಕಾರ, "ಚುನಾಯಿಸಲ್ಪಡುವುದಕ್ಕೆ ಸಂಬಂಧಿಸಿದಂತೆ ಮಹಿಳೆಯರಿಗೆ ನೀಡಲಾದ ಹಕ್ಕು ಇತರ ಸಂಚುಗಳನ್ನು ಅವಿಸಿಡಲು ಬಳಸಲಾಗಿದ್ದ ಒಂದು ಹೊದಿಕೆಯಾಗಿತ್ತು", ಅದರಲ್ಲೂ ವಿಶೇಷವಾಗಿ ಇಸ್ರೇಲ್‌ನೊಂದಿಗೆ ಕಚೇರಿ ಹಾಗೂ ಸಂಬಂಧಗಳನ್ನು ಹೊಂದಲು ಬಹಾಯಿಗಳಿಗೆ ಅವಕಾಶ ಕಲ್ಪಿಸುವುದು ಇದರಲ್ಲಿ ಸೇರಿತ್ತು. ಜನಮತಸಂಗ್ರಹಕ್ಕೆ ಮುಂಚಿತವಾಗಿ ಒಂದು ಮಸೂದೆಯು ಅಯಶಸ್ವಿಯಾಗಿ ಅಥವಾ ನಿಷ್ಫಲವಾದಂತೆ ಪರಿಚಯಿಸಲ್ಪಟ್ಟರೂ, ಅದು ಇದೇ ಬಗೆಯ ಕ್ರಮಗಳನ್ನು ಹೊಂದಿತ್ತು.

concerned town and province councils which would delete the candidates and voters election conditions of: `Being a Muslim, swearing on the Quran and being a male,` was approved by the cabinet of Amir Asadollah Alam (16 Mehr 1341/8 October 1962). The right of women to be elected was a cover to conceal other plots. The deletion and alteration of the first two conditions were aimed at legalization of the presence of Bahai elements in key government positions. As mentioned above, one of the U.S.'s conditions for its support of the Shah, was the Shah's support of Israel and the enhancement of relations between Iran and Israel. The infiltration of the followers of the colonialistic ideology of Bahaism into the three forces would ensure this condition. ...

— [೬]

ಆದಾಗ್ಯೂ, ಆ ಹೇಳಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಪುರಾವೆಯೂ ಲಭ್ಯವಿಲ್ಲ, ಮತ್ತು ಸರ್ಕಾರದಿಂದ ಸಾರ್ವಜನಿಕರ ಗಮನವನ್ನು ಆಚೆಗೆ ಸೆಳೆಯುವ ದೃಷ್ಟಿಯಿಂದ, ಬಹಾಯಿಗಳ ವಿರುದ್ಧದ ಪಿತೂರಿಯ ಸಿದ್ಧಾಂತಗಳ ಆಪಾದಿಸುವಿಕೆಗಳು 20ನೇ ಶತಮಾನದಿಂದಲೂ ನಿರಂತರವಾಗಿ ಚಾಲ್ತಿಯಲ್ಲಿವೆ.[೭][೮][೯] ಒಂದು ಹೊಸ 'ಇತರ' ವರ್ಗವನ್ನು ವ್ಯಾಖ್ಯಾನಿಸುವಲ್ಲಿ ಈ ಆಪಾದಿಸುವಿಕೆಗಳು ನೆರವಾಗಿವೆ ಮತ್ತು ಸ್ವತಃ ಓರ್ವ ಬೆದರಿಕೆಗೊಳಗಾದ ಷಿಯಿಯನ್ನು ಪುನರ್‌ದೃಢೀಕರಿಸಿವೆ.[೧೦] ಚೆಹಾಬಿಯು ಸೂಚಿಸುವ ಪ್ರಕಾರ, ಬಹಾಯಿಗಳ ವಿರುದ್ಧದ ಜಾತ್ಯತೀತ ಇರಾನಿಯನ್ನರ ಆಪಾದಿಸುವಿಕೆಗಳು ಹಾಗೂ ಪೂರ್ವಗ್ರಹಗಳು ಇರಾನಿಯರ ರಾಷ್ಟ್ರೀಯತೆಯ ವಿಶ್ವಪ್ರಜೆ-ವಿರೋಧಿ ಹೊರನೋಟದಿಂದ ಹುಟ್ಟಿಕೊಂಡಿವೆ; ಮಾನವಕುಲದ ಒಗ್ಗಟ್ಟನ್ನು ಬಹಾಯಿ ನಂಬಿಕೆಯು ದೃಢೀಕರಿಸಿದರೆ, ಇರಾನಿಯರ ರಾಷ್ಟ್ರೀಯತೆಯು ಅನ್ಯದ್ವೇಷದ ಬಲವಾದ ಅಂಶಗಳನ್ನು ಒಳಗೊಂಡಿದೆ.[೧೧]

ಇದನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. (Mackey 1996, p. 221)
  2. Islam and Revolution, p.175
  3. Moin, Baqer (2000), Khomeini: Life of the Ayatollah, Thomas Dunne Books, p. 104
  4. Brumberg, Daniel (2001), Reinventing Khomeini : The Struggle for Reform in Iran by Daniel Brumberg, University of Chicago Press, p. 74
  5. Khomeini, Ruhollah (1981), Algar, Hamid (translator and editor) (ed.), Islam and Revolution : Writing and Declarations of Imam Khomeini, Berkeley: Mizan Press, p. 17 {{citation}}: |editor= has generic name (help)
  6. Narrative of Awakening : A Look at Imam Khomeini's Ideal, Scientific and Political Biography from Birth to Ascension, by Hamid Ansari, Institute for Compilation and Publication of the Works of Imam Khomeini, International Affairs Division, [no publication date, preface dated 1994] translated by Seyed Manoochehr Moosavi. p.54-5
  7. Amanat 2008, pp. 177–178
  8. Momen 2004
  9. Sanasarian 2008, pp. 159
  10. Amanat 2008, pp. 171–172
  11. Chehabi 2008, pp. 190–194

ಪರ್ಷಿಯನ್‌[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

1 ಸೂಸನ್‌ ಸಿಯಾವೊಷಿ, ಲಿಬರಲ್‌ ನ್ಯಾಷನಲಿಸಂ ಇನ್‌ ಇರಾನ್‌. ವೆಸ್ಟ್‌ವ್ಯೂ ಪ್ರೆಸ್‌, 1990, ಪುಟ 23 2 ಜೇಮ್ಸ್‌‌ A. ಬಿಲ್‌‌, “ಮಾಡರ್ನೈಸೇಷನ್‌ ಅಂಡ್‌ ರಿಫಾರ್ಮ್‌ ಫ್ರಮ್‌ ಎಬೌ: ದಿ ಕೇಸ್‌ ಆಫ್‌ ಇರಾನ್‌”. ದಿ ಜರ್ನಲ್‌ ಆಫ್‌ ಪಾಲಿಟಿಕ್ಸ್‌, ಸಂಪುಟ 32, ಸಂಖ್ಯೆ 1 ಫೆಬ್ರುವರಿ 1970, ಪುಟ 33 3 ಬಿಲ್‌‌, ಪುಟ 33 4 ಮೋಷೆನ್‌ M. ಮಿಲಾನಿ, ದಿ ಮೇಕಿಂಗ್‌ ಆಫ್‌ ಇರಾನ್‌'ಸ್‌ ಇಸ್ಲಾಮಿಕ್‌ ರೆವಲ್ಯೂಷನ್‌. ವೆಸ್ಟ್‌ವ್ಯೂ ಪ್ರೆಸ್‌, 1988, ಪುಟ 85 5 ಬಿಲ್‌‌, ಪುಟ 34 6 ಎರ್ವಾಂಡ್‌ ಅಬ್ರಹಾಮಿಯನ್‌, ಎ ಹಿಸ್ಟರಿ ಆಫ್‌ ಮಾಡರ್ನ್‌ ಇರಾನ್‌. ಕೇಂಬ್ರಿಜ್‌ ಯೂನಿವರ್ಸಿಟಿ ಪ್ರೆಸ್‌ 2008 ಪುಟ 131-132 7 ಸಿಯಾವೊಷಿ, ಪುಟ 28 8 ಅಬ್ರಹಾಮಿಯನ್‌, ಪುಟ 139 9 ಅಬ್ರಹಾಮಿಯನ್‌, ಪುಟ 133 10 ಅಬ್ರಹಾಮಿಯನ್‌, ಪುಟ 134 11 ಅಬ್ರಹಾಮಿಯನ್‌, ಪುಟ 139-140 12 ಅಬ್ರಹಾಮಿಯನ್‌, ಪುಟ 140 13 ಅಬ್ರಹಾಮಿಯನ್‌, ಪುಟ 141-142 14 ಮಿಲಾನಿ, ಪುಟ 151 15 ಮಿಲಾನಿ, ಪುಟ 91

ಗ್ರಂಥಸೂಚಿ[ಬದಲಾಯಿಸಿ]

  • Mackey, Sandra (1996), The Iranians: Persia, Islam and the Soul of a Nation, Dutton
  • Amanat, Abbas (2008), "The Historical Roots of the Persecution of the Babis and Baha'is in Iran", in Brookshaw; Fazel, Seena B. (eds.), The Baha'is of Iran: Socio-historical studies, New York, NY: Routledge, ISBN 0-203-00280-6 {{citation}}: Invalid |ref=harv (help); Missing pipe in: |editor= (help); More than one of |editor= and |editor-last= specified (help)
  • Momen, Moojan (2004), "Conspiracies and Forgeries: the attack upon the Baha'i community in Iran", Persian Heritage, 9 (35): 27–29 {{citation}}: Invalid |ref=harv (help)
  • Sanasarian, Eliz (2000), Religious Minorities in Iran, Cambridge: Cambridge University Press, ISBN 0521770734 {{citation}}: Invalid |ref=harv (help)
  • Chehabi, H.E. (2008), "Anatomy of Prejudice", in Brookshaw; Fazel, Seena B. (eds.), The Baha'is of Iran: Socio-historical studies, New York, NY: Routledge, ISBN 0-203-00280-6 {{citation}}: Invalid |ref=harv (help); Missing pipe in: |editor= (help); More than one of |editor= and |editor-last= specified (help)