ಶ್ರೀ ವಿಘ್ನೇಶ್ವರ ದೇವಸ್ಥಾನ, ಬಿ.ಟಿ.ಎಮ್.ಲೇಔಟ್, ಬೆಂಗಳೂರು

ವಿಕಿಪೀಡಿಯ ಇಂದ
Jump to navigation Jump to search
'ಬಿ.ಟಿ.ಎಮ್.ಲೇಔಟ್ ನಲ್ಲಿರುವ,ಶ್ರೀ ವಿಘ್ನೇಶ್ವರ ದೇವಸ್ಥಾನ'

ಬೆಂಗಳೂರಿನ 'ಬಿ.ಟಿ.ಎಮ್ ಲೇಔಟ್' ನಲ್ಲಿ,'ಶ್ರೀ. ವಿಘ್ನೇಶ್ವರ ದೇವಾಲಯದಲ್ಲಿ,'ಸುಮಾರು ೨೨ ವರ್ಷಗಳಿಂದ ದಲ್ಲಿ ಪೂಜೆ-ಪುನಸ್ಕಾರಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಾ ಬಂದಿದ್ದು, ಸ್ವಸ್ಥಿಶ್ರೀ ಖರ ನಾಮ ಸಂವತ್ಸರದ ಭಾದ್ರಪದ ಶುಕ್ಲಪಕ್ಷದ ಚತುರ್ಥಿ ದಿನಾಂಕ ೦೧-೦೯-೨೦೧೧ ಗುರುವಾರದಿಂದ ೦೫-೦೯-೨೦೧೧ ರ ಸೋಮವಾರದವರೆಗೆ ಬೆಂಗಳೂರಿನ ಇದೇ ಬಡಾವಣೆಯ ಸದ್ಭಕ್ತರ ಆರಾಧ್ಯದೇವತೆಗಳಾದ ಶ್ರೀ ವಿಘ್ನೇಶ್ವರ ನವಗ್ರಹಸಹಿತ ಶ್ರೀ ಬಾಲ ಸುಬ್ರಹ್ಮಣ್ಯ ದೇವಾಲಯದ ದಿವ್ಯ ಸನ್ನಿಧಿಯಲ್ಲಿ ೨೩ ನೆಯ ವಾರ್ಷಿಕೋತ್ಸವ ಮತ್ತು ಗಣೇಶೋತ್ಸವ ೨೦೧೧, ಸಮಾರಂಭಗಳನ್ನು ವಿಘ್ನೇಶ್ವರ ಸಾರ್ವಜನಿಕ ಧಾರ್ಮಿಕ ವಿಶ್ವಸ್ಥಮಂಡಲಿ(ರಿ)ನ ವತಿಯಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀ ವಿಘ್ನೇಶ್ವರ ದೇವಾಲಯವು, ಧಾರ್ಮಿಕ ಸಾಂಸ್ಕೃತಿಕ ಶಕ್ತಿಯ ಕೇಂದ್ರವಾಗಿ ಬೆಳೆಯುತ್ತಾ ಬಂದಿದೆ. ಸ್ವಾಮಿಗೆ ನಿತ್ಯ ಪೂಜೆಗಳು, ಅಲಂಕಾರಗಳು, ತಿಂಗಳ 'ಸಂಕಷ್ಠಹರ ಗಣಪತಿ ವ್ರತ ಪೂಜೆ', 'ಹೋಮ', 'ಸತ್ಯನಾರಾಯಣ ಪೂಜೆ', 'ಪ್ರದೋಶಪೂಜೆ', 'ಆಶ್ಲೇಷ ನಕ್ಷತ್ರದ ದಿನ ಶ್ರೀ ಸುಬ್ರಹ್ಮಣ್ಯ ಹೋಮ', ಇತ್ಯಾದಿಗಳು ಸಾಂಗವಾಗಿ ನಡೆಯುತ್ತಿದ್ದು ಭಕ್ತಾದಿಗಳ ಅಭೀಷ್ಟ ಮನೋಕಾಮನೆಯು ಈಡೇರುತ್ತಿವೆ. ವಿಶೇಷ ಪೂಜಾದಿನಗಳಲ್ಲಿ ಸ್ವಾಮಿಯ ಸನ್ನಿಧಿಯಲ್ಲಿ 'ವಿದ್ವಾನ್ ಶ್ರೀ ಸೌಂದರರಾಜನ್' ನಾದಸ್ವರಸೇವೆ ಸಲ್ಲಿಸುತ್ತಿದ್ದಾರೆ. ಪ್ರವಚನ ಮಾಲಿಕೆಯಲ್ಲಿ 'ವಿದ್ವಾನ್ ಶ್ರೀ ಸುದರ್ಶನ್ ಶರ್ಮ' ಮತ್ತು 'ಸದ್ಗುರು ಮುರಳಿ ಕೃಷ್ಣ ಸ್ವಾಮೀಜಿ'ಯವರ ಭಜನೆ ಮತ್ತು ಭಕ್ತಾದಿಗಳಿಗೆ ಆಶೀರ್ವಾದದ ಕಾರ್ಯಕ್ರಮಗಳನ್ನು ಪ್ರಸಕ್ತ ವರ್ಷದಲ್ಲೂ ನಡೆಸಲಾಗುವುದು.

'ಶ್ರೀ ವಿಘ್ನೇಶ್ವರ ದೇವಸ್ಥಾನ'

'ಶ್ರೀ ವಿಘ್ನೇಶ್ವರ ದೇವಸ್ಥಾನ'ಕ್ಕೆ ಹೋಗಲು ಮಾರ್ಗ[ಬದಲಾಯಿಸಿ]

'ಬಿ.ಟಿ.ಎಮ್.ಲೇಔಟ್' ಒಳಗೆ 'ಉಡುಪಿ ಗಾರ್ಡನ್' ಕಡೆಯಿಂದ ಪ್ರವೇಶಿಸಿದರೆ, 'ಐ.ಎ.ಎಸ್.ಆಫೀಸರ್ಸ್ ಕ್ವಾರ್ಟರ್ಸ್' ನ ಒಳಭಾಗದ ರಸ್ತೆಯಲ್ಲಿ ಧಾವಿಸಿದರೆ ಉದ್ಯಾನದ ಬದಿಯಲ್ಲೇ 'ಶ್ರೀ ವಿಘ್ನೇಶ್ವರ ದೇವಸ್ಥಾನ'ವು ಕಾಣಿಸುತ್ತದೆ.

ಸ್ವರ್ಣಕಲಶದ ಕುಂಭಾಭಿಷೇಕ ಕಾರ್ಯಕ್ರಮ[ಬದಲಾಯಿಸಿ]

ಹೊಸದಾಗಿ ಶ್ರೀ ವೈದ್ಯನಾಥೇಶ್ವರ, ಶ್ರೀ ಸಂಜೀವಿನಿ ಆಂಜನೇಯ ದೇವಸ್ಥಾನ ಗೋಪುರಸಹಿತ, ಸ್ವರ್ಣಕಳಶದ ಕುಂಭಾಭಿಷೇಕವು ದಿನಾಂಕ ೦೭-೦೫-೨೦೧೧ ಮತ್ತು ೦೮-೦೫-೨೦೧೧ ರಂದು ವೈಭವದಿಂದ ಜರುಗಿತು. ಕುಂಭಾಬಿಷೇಕದಂದು ಮೈಸೂರಿನ ತಲಕಾಡಿನ ಹತ್ತಿರದ, ಶುಕಶಂಕರ ಮಹಾಲಕ್ಷ್ಮೀ ಮಠದ,ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಯವರು ಆಗಮಿಸಿ ಈ ಪುಣ್ಯವಿಧಿಯನ್ನು ಸಾಂಗವಾಗಿ ನೆರವೇರಿಸಿ, ಭಕ್ತಾದಿಗಳಿಗೆ ಆಶೀರ್ವಾದ ಅನುಗ್ರಹನೀಡಿದರು. ವಿಶ್ವಸ್ಥಮಂಡಲಿಯು 'ಶ್ರೀ ರಾಮನವಮಿ'ಯದಿನ ಸಂಗೀತ ಸ್ಪರ್ಧೆ ಬಹುಮಾನವಿತರಣೆ ಮತ್ತು ಶ್ರೀಗೋಪಾಲಕೃಷ್ಣಭಟ್ ಮತ್ತು ತಂಡದವರಿಂದ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಿದ್ದರು. ಇನ್ನುಳಿದ ಹಲವು ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ವಿವರಗಳು ಹೀಗಿವೆ.

ಯೋಗತರಬೇತಿ ಶಿಬಿರಗಳು[ಬದಲಾಯಿಸಿ]

ಯೋಗತರಬೇತಿ ಶಿಬಿರಗಳನ್ನು 'ಶ್ರೀ ರಾಮಚಂದ್ರನ್' ಮತ್ತು ಮಹಿಳೆಯರಿಗೆ 'ಶ್ರೀಮತಿ ರಾಜಾಮಣಿ'ಯವರು ನಡೆಸಿಕೊಟ್ಟರು.

ಪ್ರತಿಭಾ ಪುರಸ್ಕಾರ[ಬದಲಾಯಿಸಿ]

ಪ್ರತಿಭಾಪುರಸ್ಕಾರ, (ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ.

ಸೌಂದರ್ಯ ಲಹರಿ ಪ್ರದಕ್ಷಿಣೆ ಸೇವೆ[ಬದಲಾಯಿಸಿ]

ಸೌಂದರ್ಯಲಹರಿ ಪ್ರದಕ್ಷಿಣೆ ನಮಸ್ಕಾರಗಳ ಸೇವೆ, (೦೧-೧೧-೨೦೧೦ ರಿಂದು ಬೆಳಿಗ್ಯೆ, ೧೦ ರಿಂದ ಸುಮಾರು ೫ ಗಂಟೆಯ ತನಕ), ತಾ. ೦೨-೧೧-೨೦೧೦ ರಂದು ನಡೆಯಿತು.

ಕಂಸವಧೆ ಯಕ್ಷಗಾನ[ಬದಲಾಯಿಸಿ]

ಶ್ರೀ ವಿನಾಯಕ ಭಟ್ ತಂಡದವರಿಂದ 'ಕಂಸವಧೆಯೆಂಬ ಪೌರಾಣಿಕ ಯಕ್ಷಗಾನ'ವನ್ನು ತಾ. ೩೧-೧೦-೨೦೧೦ ರಂದು, ನಡೆಸಿಕೊಟ್ಟರು.

ಭಾಗವತ ಪ್ರವಚನ[ಬದಲಾಯಿಸಿ]

ವೇ.ಬ್ರ.ಸುದರ್ಶನ ಶರ್ಮರವರಿಂದ 'ಭಾಗವತದ ದಶಮಸ್ಕಂದ ಅಧ್ಯಾಯ'ದಲ್ಲಿ 'ಕೃಷ್ಣಾವತಾರ ಪ್ರವಚನ' ನಡೆಯಿತು.(ತಾ. ೧೪-೧೧-೨೦೧೦ ರಿಂದ ೨೦-೧೧-೨೦೧೦ ರ ತನಕ), ’ದಶಶ್ಲೋಕಿ ಅಭಿಯಾನ' ದ 'ದಶಶ್ಲೋಕಿ ಪಾರಾಯಣ'ವೆಂಬ ಅಭಿಯಾನವನ್ನು ಪರಮಪೂಜ್ಯ ಶ್ರೀ ಶಂಕರಭಾರತಿ ತೀರ್ಥಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆಸಲಾಯಿತು. 'ಸೌದರ್ಯಲಹರಿ ಸಪ್ತಾಹ’ 'ಸೌಂದರ್ಯಲಹರಿ ಪಾರಾಯಣ' ನಡೆಯಿತು.

ಸಂಸ್ಕೃತ ಶಿಬಿರಗಳು[ಬದಲಾಯಿಸಿ]

'ಸಂಸ್ಕೃತ ಶಿಬಿರ ಕಾರ್ಯಕ್ರಮ'ಗಳಮಾಲಿಕೆಯಲ್ಲಿ, ಸಂಭಾಷಣೆ ಮಾಡುವುದನ್ನು 'ತಾ. ೦೫-೧೨-೨೦೧೦ ರಿಂದ ೧೫-೧೨-೨೦೧೦ ರ ವರೆಗೆ 'ಅಧ್ಯಾಪಕ ಶ್ರೀ ಕೃಷ್ಣಮೂರ್ತಿ' ನಡೆಸಿಕೊಟ್ಟರು.

'ಗುರು ತತ್ವ'ದ ಬಗ್ಗೆ ಪ್ರವಚನ[ಬದಲಾಯಿಸಿ]

'ಗುಂಟೂರಿನ ಕಾಳಿಗಾರ್ಡನ್ ಆಶ್ರಮ'ದ, ಪೂಜ್ಯ ಶ್ರೀ ಯೋಗಿನಿ ಚಂದ್ರಕಾಳಿ ಪ್ರಸಾದ್ ಮಾತಾಜಿ ರವರಿಂದ ನಡೆಯಿತು. 'ಗುರುತತ್ವದ ವಿಶಯದ ಬಗ್ಗೆ ಪ್ರವಚನ' ನಡೆಯಿತು. ಶ್ರೀ ಮುರಳಿಕೃಷ್ಣ ಸ್ವಾಮೀಜಿಯವರು ಆಗಮಿಸಿ ಆಶೀರ್ವಾದ ನೀಡಿದರು.