ವಿಷಯಕ್ಕೆ ಹೋಗು

ಶ್ರೀ ರಾಮದೇವರ ಕಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೇಮಾವತಿ ನದಿಗೆ ಅಡ್ಡಲಾಗಿ ಹೊಳೆ ನರಸೀಪುರ ಶ್ರೀ ರಾಮದೇವರ ಅಣೆಕಟ್ಟೆ ಸ್ಥಾಪಿಸಲಾಗಿದೆ.ಹಾಸನ - ಹೊಳೆ ನರಸೀಪುರ ರಸ್ತೆಯಲ್ಲಿ ಹಾಸನದಿಂದ ೨೫ ಕಿ.ಮೀ ದೂರದಲ್ಲಿರುವ ಈ ಅಣೆಕಟ್ಟೆ ೧೮೩೦ರಲ್ಲಿ ಸ್ಥಾಪಿಸಲಾಗಿದೆ.ಎಡ ಮತ್ತು ಬಲ ದಂಡೆ ನಾಲೆಗಳ ಮೂಲಕ ಈ ಅಣೆಕಟ್ಟೆಯಿಂದ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.ಮಿನಿ ವಿದ್ಯುತ್ ಉತ್ಪಾದನಾ ಘಟಕವೂ ಕಾರ್ಯಾರಂಭ ಮಾಡಿದೆ.ಈ ಅಣೆಕಟ್ಟೆ ಈಗ ಪ್ರವಾಸಿ ಕ್ರೇಂದ್ರದ ಮುಖ್ಯ ಬಿಂದುವಾಗಿದೆ.

ಶ್ರೀ ರಾಮಚಂದ್ರನು ವನವಾಸದ ಕಾಲದಲ್ಲಿ ತನ್ನ ಪರಿವಾರದೊಂದಿಗೆ ಕೆಲದಿನಗಳ ಕಾಲ ಇಲ್ಲಿ ತಂಗಿದ್ದರಿಂದ ಈ ಸ್ಥಳವು ಪವಿತ್ರತೆ ಹಾಗು ಮಹತ್ವ ಪಡೆದುಕೊಂದಿದೆ,ನದಿಯ ನೀರು ಸುಮಾರು ೫೦೦ ಮೀಟರ್ ಉದ್ದದ ಕಟ್ಟೆಯಿಂದ ಆಳದ ನದಿಗೆ ಧುಮುಕುವ ದೃಶ್ಯ ನಯನ ಮನೋಹರವಾಗಿದೆ.



ಉಲ್ಲೇಖ

[ಬದಲಾಯಿಸಿ]