ವಿಷಯಕ್ಕೆ ಹೋಗು

ಶ್ರೀ ಮಾರುಬಾಯಿ ಗಾಂದೇವಿ ಮಂದಿರ್, ಮಾಟುಂಗ, ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಂಬಯಿನ ಉಪನಗರವಾದ ಪಶ್ಚಿಮ ಮಾಟುಂಗಾದಲ್ಲಿ,'ಶ್ರೀ ಮಾರುಬಾಯಿ ಗಾವ್ದೇವಿ ದೇವಸ್ಥಾನ'ವಿದೆ.[] ಗ್ರಾಮದೇವತೆಯ ದೇವಸ್ಥಾನದಿಂದಾಗಿ ಈ ಜಿಲ್ಲೆಯನ್ನು ಅದೇ ಹೆಸರಿನಿಂದ ಕರೆಯಲಾಗುತ್ತಿದೆ.

ಚಿತ್ರ:Marubayi.jpg
'ಮಾರು ಬಾಯಿ,ಗಾಂದೇವಿ ದೇವಾಲಯ, ಮಾಟುಂಗ'
ಚಿತ್ರ:Matunga grama devi.jpg
'ಶ್ರೀ ಮಾರುಬಾಯಿ ಗಾಂದೇವಿ'

ಮಾರುದೇವಿಯ ದೇವಸ್ಥಾನದ ನಿರ್ಮಾಣ

[ಬದಲಾಯಿಸಿ]

ಕ್ರಿ.ಶ.೧೭೦೦, ರಲ್ಲಿ ಇನ್ನೂ ಚಿಕ್ಕ ಹಳ್ಳಿಯಾಗಿದ್ದ, ’ಮಾರುಬಾಯಿ ಟೇಕ್ಡಿ ಗಾಂವ್,’ ಮುಂದೆ ಕಾಲಕ್ರಮದಲ್ಲಿ, ’ಮಾಟುಂಗಾ’ ಎಂದಾಯಿತು. ಅಂದಿನ ಬ್ರಿಟಿಷ್ ಸರಕಾರ ಮುಂಬಯಿ ನಗರವನ್ನು ವಿಸ್ತರಿಸಲು ದೊಡ್ಡ 'ವಿನ್ಸೆಂಟ್ ರಸ್ತೆ' ಯೆಂಬ ಡಬ್ಬಲ್ ರಸ್ತೆಯ ನಿರ್ಮಾಣದಲ್ಲಿ ವ್ಯಸ್ತವಾಗಿತ್ತು. ಅದರ ಹೆಸರನ್ನು ಮುಂದೆ,'ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಸ್ತೆ'ಯೆಂದು ಬದಲಾಯಿಸಲಾಯಿತು. 'ಸಿಟಿ ಆಫ್ ಬೊಂಬೆ,ಇಂಪ್ರೂವ್ಮೆಂಟ್ ಆಕ್ಟ್ ೧೮೯೮' ರ ಪ್ರಕಾರ, 'ಮಾಟುಂಗ ರೋಡ್ ಸ್ಕೀಮ್' ಎಂಬ ಯೋಜನೆ, ಸಿದ್ಧಪಡಿಸಿದರು. ಆ ಸಮಯದಲ್ಲಿ ಅರಳೀಮರದ ಕೆಳಗೆ ಸ್ಥಾಪಿಸಲ್ಪಟ್ಟಿದ್ದ 'ಪುಟ್ಟ ಮಾರುದೇವಿ ಗುಡಿ'ಯನ್ನು ಬೇರೆಕಡೆ ವರ್ಗಾಯಿಸಲು ಆಜ್ಞೆಯನ್ನು ಜಾರಿಮಾಡಿದರು. ಆದರೆ ಅಲ್ಲಿಯ ಸ್ಥಳೀಯ ಜನರ ವಿರೋಧಕ್ಕೆ ಮಣಿದು ಆ ದೇವಾಲಯವನ್ನು ಬದಿಯಲ್ಲೇ ಬಿಟ್ಟು ರಸ್ತೆ ನಿರ್ಮಿಸಿದರು. ಆದರೆ ೧೯೫೨ ರಲ್ಲಿ ಭಕ್ತಾದಿಗಳು ಒಂದು 'ಟ್ರಸ್ಟ್' ನಿರ್ಮಿಸಿ, 'ಬಾಂಬೆ ಪಬ್ಲಿಕ್ ಟ್ರಸ್ಟ್ ಆಕ್ಟ್ ಪ್ರಕಾರ' ನೋಂದಣಿ ಸಂಖ್ಯೆ, ’ಎ೨೨೨೨ (ಮುಂಬಯಿ)' ನಂತೆ,ಈಗಿರುವ ಜಾಗದಲ್ಲಿ 'ಹೊಸಮಂದಿರ'ವನ್ನು ನಿರ್ಮಿಸಿದರು.[]

ಮುಂಬಯಿನ ಮೊದಲ ವಲಸೆಗಾರರು ಪೋರ್ಚುಗೀಸ್, ಇಂಗ್ಲೀಷ್ ನಂತರ ದೇಶೀಯರು

[ಬದಲಾಯಿಸಿ]

ಆಗಿನ ಮುಂಬಯಿನ 'ಕೋಟೆ' ಪ್ರದೇಶದಲ್ಲಿ ಮೊದಲು ಪೋರ್ಚುಗೀಸರು, ನಂತರ ಬ್ರಿಟಿಷರು ತಮ್ಮ ವಸಾಹತುಗಳ ಪ್ರಧಾನ ಕಚೇರಿ, ಮತ್ತು ಅದಕ್ಕೆ ಸಂಬಂಧಪಟ್ಟ ನೌಕರ, ಅಧಿಕಾರಿಗಳ ವಸತಿಗೃಹಗಳನ್ನು ಕಟ್ಟಿಸಿದ್ದರು. ಅವರು ಕೋಟೆವಲಯದಲ್ಲೇ ಹೆಚ್ಚಾಗಿ ನೆಲೆಸಲು ಇಚ್ಛಿಸುತ್ತಿದ್ದರು. ಉತ್ತರ ಮುಂಬಯಿಗೆ ಬರುವುದು ತೀರ ಅಪರೂಪವಾಗಿತ್ತು. ಮುಂದೆ ಬಂದ 'ಪಾರ್ಸಿ', ಮತ್ತು 'ಮಾರ್ವಾಡಿ' ಪಂಗಡಗಳು ಪ್ರಸಿದ್ಧಿಹೊಂದಿದ ಕೆಲವು 'ಬಟ್ಟೆ ಗಿರಣಿ'ಗಳನ್ನು ಖರೀದಿಸಿ ನಡೆಸಲು ಆರಂಭಿಸಿದ್ದರಿಂದ 'ಕುರ್ಲಾ'ವರೆಗೆ ನಗರ ಬೆಳೆಯಲು ಸಾಧ್ಯವಾಯಿತು. ಮಧ್ಯೆ ಮಾಟುಂಗಾದಲ್ಲಿ 'ಪಾರ್ಸಿ' ಮತ್ತು 'ಹಿಂದೂಗಳು' ತಮ್ಮ ತಮ್ಮ 'ವಸತಿಯ ಕಾಲೋನಿ'ಗಳನ್ನು ಕಟ್ಟಿಕೊಂಡು ಇರತೊಡಗಿದರು. 'ಪಾರ್ಸಿಕಾಲೊನಿ'ಯಲ್ಲಿ ಅವರ ಪೂಜ್ಯ 'ಅಘಿಯಾರ್'ಇದೆ.

ಟ್ರಸ್ಟಿಯವರ ನೇಮಕ

[ಬದಲಾಯಿಸಿ]

ಆಗ, ಪುರಾತನಕಾಲದಿಂದಲೂ 'ಮಾರುಬಾಯಿ ದೇವಿ'ಯ ಪೂಜಾ ಕಾರ್ಯ ನಿರ್ವಹಿಸುತ್ತಿದ್ದ ಅರ್ಚಕರ ವಂಶಸ್ಥರಾದ ’ಕಾಶೀನಾಥ್ ಭಿಕಾಜಿ’ಯೆಂಬುವರನ್ನು ’ಪ್ರಧಾನ ಟ್ರಸ್ಟಿ’ಯನ್ನಾಗಿ ನೇಮಿಸಿದರು. ಅವರ ಮಗ,’ಅನಿಲ್ ಗಾವಂಡ್ಪ್ರಧಾನ ಅರ್ಚಕರಾಗಿದ್ದರು. ಮುಂದೆ ಕಾಶೀನಾಥ್ ದೈವಾಧೀನರಾದಬಳಿಕ, ಅವರ ಮಗ, ಶ್ರೀ. ಅನಿಲ್ ಗಾವಂಡ್ ರನ್ನೇ ಪ್ರಧಾನ ಟ್ರಸ್ಟಿಯನ್ನಾಗಿ ನೇಮಕಮಾಡಲಾಯಿತು.ಮಾಟುಂಗಾದಲ್ಲಿ ಅದು ಇನ್ನೂ ಗ್ರಾಮವಾಗಿದ್ದಾಗ ಅಲ್ಲಿನ ಹಿರಿಯರು, ಶ್ರದ್ಧಾಳುಗಳು, ದೈವಭಕ್ತರೆಲ್ಲ ಸೇರಿ, ಒಂದು ಪುಟ್ಟ 'ಶ್ರೀ ಮಾರುಬಾಯಿ ಗುಡಿ'ಯನ್ನು ಕಟ್ಟಿ ಅಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಆ ದೇವಿಯು ಆ ಪ್ರದೇಶದ ನಾಗರಿಕರ, ಜಾನುವಾರುಗಳ ಯೋಗಕ್ಷೇಮಗಳನ್ನು ರಕ್ಷಿಸಿ ಪೊರೆಯಲು ಭಕ್ತಿಯಿಂದ ಪೂಜೆಸಲ್ಲಿಸುವ ಪ್ರತೀತಿಯಿತ್ತು. ಹತ್ತಿರದ ವಡಾಲ, ಸಯಾನ್, ದಾದರ್, ಮುಂತಾದ ಪ್ರದೇಶಗಳ ಜನರು ಬಂದು ಭಕ್ತಿಯಿಂದ ಸೇವೆಸಲ್ಲಿಸಿ ನಡೆದುಕೊಳ್ಳುವ ಸಂಪ್ರದಾಯ ಹಲವಾರು ವಷಗಳಿಂದ ಜಾರಿಯಲ್ಲಿದೆ. ವಿದ್ಯಾಭ್ಯಾಸ,ವಾಣಿಜ್ಯ, ಸಂಜಾರ, ಸಾಂಸ್ಕೃತಿಕ ವ್ಯವಸ್ಥೆಗಳಲ್ಲಿ ಪ್ರಗತಿಬಂದಂತೆಲ್ಲಾ ಮಾಟುಂಗಾ ಇತರೆ ದಕ್ಷಿಣ ಮುಂಬಯಿನ ಪ್ರದೇಶಗಳಂತೆ ಅಗಾಧವಾಗಿ ಬೆಳೆದು,'ಗ್ರಾಮದೇವಿಯಮಂದಿರ ಪುನರ್ನಿಮಾಣ'ಗೊಂಡು ಈಗಿನ ಭವ್ಯರೂಪತಾಳಿದೆ. ದೇವಿಯ ಅಮಿತ ಕೃಪೆಯಿಂದ ಮಾಟುಂಗಾ ಪ್ರದೇಶದಲ್ಲಿ ಗಮನಾರ್ಹ ಪ್ರಗತಿ, ಹಾಗೂ ನಾಗರಿಕರಿಗೆ ಶಾಂತಿ,ಸಮಾಧಾನ, ಮತ್ತು ನೆಮ್ಮದಿಯ ಜೀವನ ಲಭಿಸಿದೆ.

ವಾರ್ಷಿಕ ನವರಾತ್ರಿ ಉತ್ಸವವನ್ನು ಹರ್ಷೋಲ್ಲಾಸಗಳಿಂದ ನೆರವೇರಿಸಲಾಗುತ್ತಿದೆ

[ಬದಲಾಯಿಸಿ]

ಇದರ ಜೊತೆಗೆ, ಸತ್ಸಂಗ್, ಮತ್ತು ಭಜನ್, ಕೀರ್ತನೆಗಳು, ವಿಶೇಷಪೂಜೆಗಳು ನಡೆಯುತ್ತಲೇ ಇರುತ್ತವೆ. 'ಶ್ರೀ ಮಾರುಬಾಯಿ ಗಾಂದೇವಿ ಮಂದಿರ್', ಮಾಟುಂಗಾ(ಪೂ)ದಲ್ಲಿರುವ,'ಅರೋರಾ ಸಿನೆಮಾ'ದ ಸಮೀಪದಲ್ಲಿ,'ವಡಾಲ'ಕ್ಕೆ ಹೋಗುವ ಬಸ್ ದಾರಿಯಲ್ಲೇ ಇದೆ. ಈ ಮಂದಿರಕ್ಕೆ ಹೋಗಲು, 'ಮಾಟುಂಗಾ (ಪೂ) ರೈಲ್ವೆ ನಿಲ್ದಾಣ'ದಿಂದ ನಡೆದರೆ, 'ಮಾಟುಂಗಾ ಅಂಚೆಕಚೇರಿ', 'ಆಸ್ತೀಕ್ ಸಮಾಜ' 'ಅಂಬಾ ಭವನ್ ಉಡುಪಿ ಹೋಟೆಲ್' ನ ಮುಂದಿನಿಂದ ನಡೆದೇ ಹೊರಟರೆ,'ಮಹೇಶ್ವರೀ ಉದ್ಯಾನ್, ಮಾಟುಂಗ, ಮುಂಬಯಿ' ದಾಟಿ, 'ಖಲ್ಸಾ ಕಾಲೇಜ್', 'ಡಾನ್ ಬಾಸ್ಕೋ' ಕಡೆಸಾಗಿ,'ಗುಜರಾಥೀ ಕ್ಲಬ್' ಕಡೆ ನಡೆದರೆ, ಅದರ ಮುಂದೆಯೇ ಇದೆ. ಇದು 'ಗ್ರಾಮದೇವಿ'ಯೆಂದೇ ಜನರು ಅತ್ಯಂತ ಶ್ರದ್ಧ ಭಕ್ತಿಗಳಿಂದ ಪೂಜಾರ್ಚನೆಗಳನ್ನು ಮಾಡುತ್ತಾರೆ. ಪ್ರತಿದಿನ 'ಭಜನೆ,' 'ಆರತಿ ಕಾರ್ಯಕ್ರಮ'ಗಳಿರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. 'Temple History'
  2. "ಮಾರುಬಾಯಿ ಗಾಂದೇವಿ ಮಂದಿರ್, ಮಾಟುಂಗ". Archived from the original on 2014-07-01. Retrieved 2014-06-14.

ಬಾಹ್ಯ ಸಂಪರ್ಕ

[ಬದಲಾಯಿಸಿ]
  • ಗಾಂದೇವಿ ಮಂದಿರವನ್ನು ಸಂಪರ್ಕಿಸಲು :[]
  1. wikimapia : 'ಶ್ರೀ ಮಾರುಬಾಯಿ ಗಾಂದೇವಿ ಮಂದಿರ್'