ವಿಷಯಕ್ಕೆ ಹೋಗು

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಧಾರವಾಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಧಾರವಾಡ
ಎಸ್.ಡಿ.ಎಮ್.
ಸ್ಥಾಪನೆ1979
ಸ್ಥಳಧಾರವಾಡ, ಕರ್ನಾಟಕ
ವಿದ್ಯಾರ್ಥಿಗಳ ಸಂಖ್ಯೆ೨೦೦೦
ಪದವಿ ಶಿಕ್ಷಣ೭೪೦
ಸ್ನಾತಕೋತ್ತರ ಶಿಕ್ಷಣ೧೨೦

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯವು 1979ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ.

ವಿಭಾಗಗಳು

[ಬದಲಾಯಿಸಿ]
  1. ಸಿವಿಲ್ ಎಂಜಿನಿಯರಿಂಗ್
  2. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  3. ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
  4. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  5. ಯಾಂತ್ರಿಕ ಎಂಜಿನಿಯರಿಂಗ್

ಮಹಾವಿದ್ಯಾಲಯವು ೨೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.

ಗ್ರಂಥಾಲಯ

[ಬದಲಾಯಿಸಿ]

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ

[ಬದಲಾಯಿಸಿ]

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಡಿಪ್ಲೊಮಾ ,ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

ವಿದ್ಯಾರ್ಥಿವೇತನ

[ಬದಲಾಯಿಸಿ]
  1. ಅರ್ಹತೆ ವಿದ್ಯಾರ್ಥಿವೇತನ
  2. ರಕ್ಷಣಾ ವಿದ್ಯಾರ್ಥಿವೇತನ
  3. ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ

ಜೀವನ ಮಾರ್ಗದರ್ಶನ ಕೇಂದ್ರ

[ಬದಲಾಯಿಸಿ]

ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಅಧಿಕೃತ ಅಂತರಜಾಲ ತಾಣ