ಶ್ರೀ ಕೃಷ್ಣಗಾರುಡಿ

ವಿಕಿಪೀಡಿಯ ಇಂದ
Jump to navigation Jump to search
ಶ್ರೀ ಕೃಷ್ಣಗಾರುಡಿ
ಶ್ರೀ ಕೃಷ್ಣಗಾರುಡಿ
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ಪಾತ್ರವರ್ಗಡಾ.ರಾಜ್‍ಕುಮಾರ್ ನರಸಿಂಹರಾಜು, ರೇವತಿ, ಸಿದ್ದಯ್ಯ ಸ್ವಾಮಿ, ಸೂರ್ಯಕಲಾ,
ಸಂಗೀತಪೆಂಡ್ಯಾಲ ನಾಗೇಶ್ವರ ರಾವ್
ಬಿಡುಗಡೆಯಾಗಿದ್ದು೧೯೬೮
ಚಿತ್ರ ನಿರ್ಮಾಣ ಸಂಸ್ಥೆನಂದಿ ಪಿಕ್ಚರ್ಸ್


ಡಾ ರಾಜ್ ಕುಮಾರ್ ಅರ್ಜುನ ನಾಗಿ ನಟಿಸಿದ ಚಿತ್ರ ಶ್ರೀ ಕೃಷ್ಣಗಾರುಡಿ.

ಕುರುಕ್ಷೇತ್ರ ಯುದ್ಧದ ನಂತರ ಭೀಮಾರ್ಜುನರಿಗೆ ಅಹಂಕಾರ ಬಂದು, ಯುದ್ಧದ ವಿಜಯ, ಶ್ರೀ ಕೃಷ್ಣನ ಬದಲು ತಮ್ಮಿಂದಲೇ ಎಂಬ ಅಮಲು ಮೂಡುತ್ತದೆ. ಅದನ್ನು ನೀಗಲು, ಶ್ರೀ ಕೃಷ್ಣ ಗಾರುಡಿಗನಾಗಿ ಹಸ್ತಿನಾವತಿಗೆ ತೆರಳುತ್ತಾನೆ. ಬೀದಿಬೀದಿಗಳಲ್ಲಿ ವೀರರನ್ನು ಗೆದ್ದು, ಹೆಸರು ಗಳಿಸುವ ಗಾರುಡಿ, ಭೀಮ ಮತ್ತು ಅರ್ಜುನರಿಗೆ ಸವಾಲು ಹಾಕುತ್ತಾನೆ. ಭೀಮ ಅರ್ಜುನ ಇಬ್ಬರೂ ಸೋತು ನರಕದಲ್ಲಿ ಪಾಶವೊಂದಕ್ಕೆ ಸಿಕ್ಕಿ ಒದ್ದಾಡುತ್ತಾರೆ. ಕಡೆಗೆ ಶ್ರೀ ಕೃಷ್ಣ ನನ್ನು ನೆನೆದು, ಅಹಂಕಾರವನ್ನು ತೊರೆದು ಅರಮನೆಗೆ ಮರಳುತ್ತಾರೆ. ಕಡೆಗೆ, ತಾವು ಸೋತ ಪಣವನ್ನು ನಕುಲ ಸಹದೇವರು, ಶ್ರೀ ಕೃಷ್ಣ ನ ಹೆಸರು ಉಚ್ಛರಿಸಿ ಕ್ಷಣದಲ್ಲಿ ಗೆಲ್ಲುವ ಚಮತ್ಕಾರ ಕಂಡು ಬೆರಗಾಗುತ್ತಾರೆ. ಸ್ವತಃ ಶ್ರೀ ಕೃಷ್ಣನೇ ಗಾರುಡಿಯಾಗಿ ತಮಗೆ ಪಾಠ ಕಲಿಸಿದ್ದನ್ನು ನೋಡಿ ಕೃಷ್ಣನ ಪಾದಕ್ಕೆ ಎರಗುತ್ತಾರೆ. ಹೀಗೆ ಭೀಮಾರ್ಜುನರ ಅಹಂಕಾರ ಮುರಿವ ಕಥೆಯೇ ಶ್ರೀ ಕೃಷ್ಣ ಗಾರುಡಿ.

ಭಲೇ ಭಲೇ ಗಾರುಡೀ, ಬರುತಿಹ ನೋಡು.... ಎಂಬ ನಾಟಕದ ಶೈಲಿಯ ಹಾಡು ಬಹಳ ಹೆಸರುವಾಸಿಯಯ್ತು.