ಶ್ರೀಮಂತ ಶಂಕರದೇವ ಕಲಾಕ್ಷೇತ್ರ

Coordinates: 26°07′50″N 91°49′21″E / 26.1306°N 91.8224°E / 26.1306; 91.8224
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

26°07′50″N 91°49′21″E / 26.1306°N 91.8224°E / 26.1306; 91.8224

ಶ್ರೀಮಂತ ಶಂಕರದೇವ ಕಲಾಕ್ಷೇತ್ರ (ಸಾಮಾನ್ಯವಾಗಿ ಕಲಾಕ್ಷೇತ್ರ ಎಂದು ಕರೆಯಲ್ಪಡುತ್ತದೆ) ಭಾರತದ ಅಸ್ಸಾಂ ರಾಜ್ಯದ ಗುವಾಹಾಟಿಯ ಪಂಜಬಾರಿ ಪ್ರದೇಶದಲ್ಲಿ ಇರುವ ಒಂದು ಸಾಂಸ್ಕೃತಿಕ ಸಂಸ್ಥೆಯಾಗಿದೆ. ಇದಕ್ಕೆ ಮಧ್ಯಯುಗದ ಕವಿ-ನಾಟಕಕಾರ ಮತ್ತು ಸುಧಾರಕ ಶ್ರೀಮಂತ ಶಂಕರದೇವರ ಹೆಸರನ್ನು ಇಡಲಾಗಿದೆ.[೧] ಇದು ಒಂದು ಸಾಂಸ್ಕೃತಿಕ ವಸ್ತು ಸಂಗ್ರಹಾಲಯ, ಗ್ರಂಥಾಲಯ ಮತ್ತು ಸಾಂಸ್ಕೃತಿಕ ವಸ್ತುಗಳನ್ನು ಸಂರಕ್ಷಿಸಲು, ಪ್ರದರ್ಶಿಸಲು ಮತ್ತು ಅವುಗಳ ಪ್ರಾತ್ಯಕ್ಷಿಕೆ ನೀಡಲು ವಿವಿಧ ಸೌಕರ್ಯಗಳು, ಜೊತೆಗೆ ಒಂದು ಮಕ್ಕಳ ಉದ್ಯಾನವನ್ನು ಒಳಗೊಂಡಿದೆ. ಈಶಾನ್ಯ ಭಾರತದ ಅತ್ಯಂತ ದೊಡ್ಡ ಸಾಂಸ್ಕೃತಿಕ ಜಮಾವಣೆಯಾಗಿರುವುದರ ಜೊತೆಗೆ, ಕಲಾಕ್ಷೇತ್ರವು ಗುವಾಹಾಟಿಯಲ್ಲಿನ ಪ್ರಮುಖ ಪ್ರವಾಸಿ ತಾಣವಾಗಿದೆ. ೧೯೯೦ರಲ್ಲಿ ನಿರ್ಮಾಣಗೊಂಡ ಇದರಲ್ಲಿ ಅಸ್ಸಾಮ್‍ ಮತ್ತು ಉಳಿದ ಈಶಾನ್ಯ ಪ್ರದೇಶದ ಕಲಾತ್ಮಕ ಶ್ರೇಷ್ಠತೆ ಪ್ರದರ್ಶಿತವಾಗಿದೆ. ವಿಸ್ತಾರವಾದ ಕಲಾಕ್ಷೇತ್ರದ ಆವರಣದಲ್ಲಿ ಉಪಾಹಾರ ಗೃಹಗಳು, ಪೂಜಾ ಸ್ಥಳಗಳು, ವ್ಯಾಪಾರಕೇಂದ್ರಗಳು ಮತ್ತು ಬಯಲು ರಂಗಮಂದಿರಗಳಿವೆ.

ಶ್ರೀಮಂತ ಶಂಕರದೇವ ಕಲಾಕ್ಷೇತ್ರದ ನೋಟ
ಶ್ರೀಮಂತ ಶಂಕರದೇವ ಕಲಾಕ್ಷೇತ್ರದಲ್ಲಿರುವ ಒಂದು ಶಿಲ್ಪ

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Srimanta Sankardev Kalakshetra India Tourist Information". Touristlink.com. Archived from the original on 2013-02-04. Retrieved 2013-03-12.

ಹೊರಗಿನ ಕೊಂಡಿಗಳು[ಬದಲಾಯಿಸಿ]