ಶ್ರೀನಗರ ಚಂದೃ
ಉದಯವಾಣಿ ಚಾನಲ್ ನಲ್ಲಿ ಸಾಯಂಕಾಲದ ಪ್ರೈಮ್ ಟೈಮ್ ನಲ್ಲಿ, ಕನ್ನಡ ಟೆಲಿವಿಶನ್ ವಲಯದಲ್ಲಿ ಸುಮಾರು ೪ ವರ್ಷಗಳಿಂದ ಓಡುತ್ತಿರುವ ಮೆಗಾಧಾರಾವಾಹಿ, ಕುಸುಮಾಂಜಲಿಯನ್ನು ನಿರ್ದೇಶಿಸುತ್ತಿದ್ದಾರೆ. ೨೦೦೬ ರಲ್ಲಿ ಪ್ರಾರಂಭವಾದ ಈ ಧಾರಾವಾಹಿ, ಇಲ್ಲಿಯವರೆಗೆ ಒಂದು ಸಾವಿರ ಕಂತನ್ನು ದಾಟಿದೆ. ಬಹಳ ಜನ ಮೆಚ್ಚಿದ್ದಾರೆ. ಮೂಲಕಥೆಯ ಲೇಖಕರು, ಬಿ. ಶಿವಾನಂದ. ವೀಕ್ಷಕರು ಇಚ್ಛಿಸಿದರೆ, ಮತ್ತೂ ಮುಂದುವರೆಯುವ ಸಾಧ್ಯತೆಗಳಿವೆ.
ಚಂದೃರವರ ಪರಿವಾರ
[ಬದಲಾಯಿಸಿ]ಬೆಂಗಳೂರಿನ ಉಪನಗರವಾದ ಶ್ರೀನಗರದಲ್ಲಿ ಜನನ. ತಂದೆ ನಾರಾಯಣಪ್ಪ, ತಾಯಿ ನಿಂಗಮ್ಮ ಈ ದಂಪತಿಗಳ ೮ ಜನಮಕ್ಕಳಲ್ಲಿ ಚಂದೃ ಕೊನೆಯವರು. ಕಾಲೇಜಿನ ದಿನಗಳಲ್ಲಿ ನಾಟಕಗಳಲ್ಲಿ ತೊಡಗಿಸಿಕೊಂಡು, ದಿ. ಮೈನಾ ಚಂದೃ ಅವರ ಜನಪದ ನಾಟಕ ತಂಡದಲ್ಲಿ ಅಭಿನಯಿಸಿದರು. ಮೊದಲು ನೇಪಥ್ಯ ಕಲಾವಿದರಾಗಿದ್ದರು. ನಂತರ ಬೆಳೆಯುತ್ತಾ ಬಂದರು. ೧೯೯೫ ರಿಂದ ೨೦೦೬ ರ ವರೆಗೆ ಟೆಲಿಫಿಲ್ಮ್ಸ್ ಧಾರಾವಾಹಿ, ಸಿನಿಮಾಗಳಲ್ಲಿ ಸಹಾಯಕನಾಗಿ ದುಡಿದರು. ಚೆಲುವನಾರಾಯಣ (ಸಿಎನ್) ಪ್ರೊಡಕ್ಷನ್ಸ್ ನ ಸಂಜಯ್ ಕುಸುಮಾಂಜಲಿ ನಿರ್ದೇಶನಕ್ಕೆ ಅವಕಾಶ ಕಲ್ಪಿಸಿಕೊಟ್ಟರು.
ನಿರ್ದೇಶಕ ಚಂದೃರವರ ಹೆಚ್ಚುಗಾರಿಕೆ
[ಬದಲಾಯಿಸಿ]ಒಂದು ಸಾವಿರಕ್ಕೂ ಹೆಚ್ಚಿನ ಕಂತಗಳ ಧಾರಾವಾಹಿಯನ್ನು ತಾವೊಬ್ಬರೆ, ಪ್ರಧಾನ ನಿರ್ದೇಶಕನಾಗಿದ್ದುಕೊಂಡು, ಶೂಟ್ ಮಾಡಿದ ಉದಾಹರಣೆ ಕನ್ನಡ ರಂಗದಲ್ಲಿ ಕಾಣಿಸುವುದು ಅತಿ ವಿರಳ. ಡಬ್ಬಿಂಗ್ ಬಗ್ಗೆ ಅಭಿನಯದ ಜೊತೆಜೊತೆಗೆ ಮಾತೂ ಅಲ್ಲಿಯೇ ಸೃಷ್ಟಿಯಾಗುವಂತಹದು. ಆದ್ದರಿಂದ ಅಭಿನಯದ ಭಾವಗಳಿಗೆ ಸರಿಯಾಗಿ ಕಂಠದಾನದ ಮಾತುಗಳು ಪೋಷಣೆ ನೀಡುತ್ತವೆ, ಎನ್ನುವ ಮಾತನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಯಾವುದಕ್ಕೂ ಮೂಲಕಥಾ ಕರ್ತೃ ಶಿವಾನಂದ, ಪ್ರಭು ಮತ್ತು ಚಂದೃ ಸವಿಸ್ತಾರವಾಗಿ ಎಲ್ಲ ಹಂತಗಳನ್ನೂ ಸಮಾಲೋಚಿಸಿ, ಮೂಲಧಾರೆಯ ಜೊತೆಯಲ್ಲಿ ಕಥೆಗಳನ್ನು ಜೋಡಿಸಿ ಹೆಣೆಯುವ ಸಾಹಸ ಮಾಡುತ್ತಾರೆ. ಇದುವರೆಗೆ ಈ ಅಭಿಯಾನದಲ್ಲಿ ಸಾಕಷ್ಟು ಯಶಸ್ಸು ಲಭಿಸಿದೆ.