ಶ್ರೀಕೋದಂಡರಾಮಚಂದ್ರ ಹನುಮಂತ ಗರುಡ ದೇವಸ್ಥಾನ- ನಾಟಿ ಬೀದಿ ನರಿಕೊಂಬು

ವಿಕಿಪೀಡಿಯ ಇಂದ
Jump to navigation Jump to search
This template is misplaced. It belongs on the talk page: ಚರ್ಚೆಪುಟ:ಶ್ರೀಕೋದಂಡರಾಮಚಂದ್ರ ಹನುಮಂತ ಗರುಡ ದೇವಸ್ಥಾನ- ನಾಟಿ ಬೀದಿ ನರಿಕೊಂಬು.

ಸ್ಥಳ ವಿವರಣೆ[ಬದಲಾಯಿಸಿ]

ಈ ದೇವಸ್ಥಾನವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡಿನಿಂದ ಸುಮಾರು 2-3 ಕಿ.ಮಿ. ದೂರದಲ್ಲಿರುವ ಮೊಗರ್ನಾಡು-ಶಂಭೂರು ರಸ್ತೆಯಲ್ಲಿ 4 ಕಿ.ಮಿ. ಸಾಗಿದಾಗ ಸಿಗುವ ನಾಟಿ ಬೀದಿ ನರಿಕೊಂಬು ಎಂಬ ಸಣ್ಣ ಪ್ರದೇಶದಲ್ಲಿದೆ.

ಪರಿಸರ[ಬದಲಾಯಿಸಿ]

ತುಳುನಾಡಿನ ಇತಿಹಾಸದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವುದು ಪುಣ್ಯ ಕ್ಷೇತ್ರವಾಗಿದೆ ವೈಭವದಿಂದ ಮೆರೆದಿರುವ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರದಲ್ಲಿರುವ ಅಂದರೆ ಪೂರ್ವಕ್ಕೆ ತಾಯಿ ನೇತ್ರಾವತಿ ನದಿಯು, ಪಶ್ಚಿಮಕ್ಕೆ ರಾಮಗಿರಿ ಎಂಬ ಸುಂದರವಾದ ಪರ್ವತವು, ಉತ್ತರ ಮತ್ತು ದಕ್ಷಿಣಕ್ಕೆ ವಿಶಾಲವಾದ ತೆಂಗು-ಕಂಗು, ಅಚ್ಚ ಹಸುರಿನಿಂದ ಕೂಡಿದ ನಾಟಿ ಬೀದಿ ಪುಟ್ಟ. ಗ್ರಾಮೀಣ ಪ್ರದೇಶ. ಇದರ ಮಧ್ಯದಲ್ಲಿ ನೆಲೆ ನಿಂತಿರುವ ಶ್ರೀಕೋದಂಡರಾಮಚಂದ್ರ ,ಹನುಮಂತ, ಗರುಡ, ಆರ್ಯ ಕಾತ್ಯಾಯಿನಿ ಹಾಗೂ ನಾಗದೇವರು.

ಇತಿಹಾಸ[ಬದಲಾಯಿಸಿ]

ಸುಮಾರು 800 ವರ್ಷಕ್ಕಿಂತಲೂ ಹೆಚ್ಚು ಇತಿಹಾಸವಿರುವ ಈ ಕ್ಷೇತ್ರವನ್ನು ಶ್ರೀ ಶ್ರೀ ವ್ಯಾಸರಾಯ ಸ್ವಾಮಿಗಳ ಶಿಷ್ಯರಾದ ಶ್ರೀಚಂದಿಪ್ರಾಚಾರ್ಯ ಇವರು ಕೇಶವಾದಿ ಚತುರ್ವಂಶ ಮೂರ್ತಿಗಳೆಂದು ಪ್ರಸಿದ್ಧರಾಗಿದ್ದವರು ನಡೆಸಿಕೊಂಡು ಬಂದವರು. ತದನಂತರ ಶ್ರೀ ಶ್ರೀ ನಾರಾಯಣ ತೀರ್ಥರು ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠದ 11ನೇ ಮಠಾಧೀಶರು ಮುನ್ನಡೆಸಿದರು. ಇವರಿಗೆ ಉಡುಪಿ ಶ್ರೀ ಶ್ರೀ ವಾದಿರಾಜತೀರ್ಥರ ಸ್ನೇಹ ಇದ್ದುದರಿಂದ ಬಂಟ್ವಾಳ ತಾಲ್ಲೂಕಿನ ನಾವಿರುವ ಅಗ್ರಹಾರಕ್ಕೆ ಬಂದು ಇಲ್ಲಿಯೇ ನೇತ್ರಾವತಿ ನದಿ ತೀರದ ನಾಟಿ ಎಂಬಲ್ಲಿ ನೀರಕಟ್ಟೆ ಎಂಬ ನೀರಾವರಿಯನ್ನು ಗ್ರಾಮಸ್ಥರಿಗೆ ನೆರವೇರಿಸಿದರು. ಆ ಪ್ರಯುಕ್ತ ನಂದಾವರ ಬಂಗರಸರು ಉಂಬಳಿಯನ್ನು ಕೊಟ್ಟು ಸನ್ಮಾನಿಸಿದ ಕಾರಣ ನಾಟಿಯಲ್ಲಿ ಅಗ್ರಹಾರವನ್ನು ಮತ್ತು ಶ್ರೀ ಕೋದಂಡರಾಮಚಂದ್ರ, ಹನುಮಂತ, ಗರುಡ, ಕಾತ್ಯಾಯನಿ ಹಾಗೂ ನಾಗದೇವರ ದೇವಸ್ಥಾನವನ್ನು ಸ್ಥಾಪಿಸಿದರು. ವಿಗ್ರಹಗಳು ಹೊಯ್ಸಳ ಶಿಲ್ಪದಲ್ಲಿರುತ್ತದೆ. ಅನಂತರ ನಾರಾಯಣತೀರ್ಥರು ಉಡುಪಿಯ ಮಾಯಗುಂಡಿ ಎಂಬಲ್ಲಿ ವೃಂದಾವಸ್ಥರಾಗಿರುತ್ತಾರೆ. ಆ ಬಳಿಕ ಇದೇ ಕೂಡ್ಲಿ ಮಠದ 19ನೇ ಪೀಠಸ್ಥರಾದ ಶ್ರೀರಾಮತೀರ್ಥರು ನಾಟಿ ಅಗ್ರಹಾರಕ್ಕೆ ಬಂದು ಶ್ರೀಕೋದಂಡರಾಮಚಂದ್ರ ದೇವಸ್ಥಾನದ ಬೀದಿಯ ಪೂರ್ವ ದಿಕ್ಕಿನಲ್ಲಿ ನದಿ ಕಿನಾರೆಯ ಪ್ರಶಾಂತ ಸ್ಥಳದಲ್ಲಿ ಪಂಚವಟಿ ಪರ್ಣಕುಟೀರವನ್ನು ಮಾಡಿಕೊಂಡು ಪ್ರಾಣದೇವರನ್ನು ಪೂಜಿಸುತ್ತಾ ಪಾಠ ಪ್ರವಚನಗಳನ್ನು, ಜಪ ತಪೋನುಷ್ಟಾನಗಳನ್ನೂ ಮಾಡಿಕೊಂಡು ಇವರು ನೀರಕಟ್ಠೆ ಎಂಬಲ್ಲಿ ವೃಂದಾವನಸ್ಥರಾದರು. ವೃಂದಾವನದ ಅವಶೇಷವು ಈಗಲೂ ಇದೆ.

ಜೀರ್ಣೊಧಾರ[ಬದಲಾಯಿಸಿ]

ಇವರ ಅವಸಾನದ ನಂತರ ಅದೆಷ್ಟೋ ವರ್ಷಗಳಿಂದ ಪಾಳು ಬಿದ್ದ ದೇವಸ್ಥಾನವನ್ನು ಮರ್ದೋಳಿ ಶಂಕರ ನಾರಯಣರಾವ್ ಶಂಬೂರು, ದಿ. ಸುಬ್ರಾಯ್ ಹೊಳ್ಳ, ದಿ. ಯೆನ್. ಪದ್ಮನಾಭ ಸಫಲ್ಯ ಹಾಗೂ ಊರಿನ ಅನೇಕ ಹಿರಿಯರ ಮುಂದಾಳತ್ವದಲ್ಲಿ ೧೯೮೪ರಲ್ಲಿ ಪುನಃ ಪೂಜೆ, ಭಜನೆ ಪ್ರಾರಂಭವಾಯಿತು. ೧೯೯೪ರಲ್ಲಿ ನೂತನವಾಗಿ ಆಯ್ಕೆಯಾದ ಜೀರ್ಣೋದ್ಧಾರ ಸಮಿತಿ ಮತ್ತು ಅಂದಿನ ಆಡಳಿತ ಸಮಿತಿಯವರ್ ಪರಿಶ್ರಮದಿಂದ ಭಕ್ತಾದಿಗಳ ಪ್ರೋತ್ಸಾಹ ಸಹಕಾರದಿಂದ ಮತ್ತು ಊರ ಹಾಗೂ ಪರವೂರ ಭಕ್ತಾದಿಗಳ ಸಹಾಯದಿಂದ ಸುಮಾರು ರೂ. ಒಂದುವರೆ ಲಕ್ಷ ಖರ್ಚು ಮಾಡಿ ಇದ್ದ ಗರ್ಭ ಗುಡಿಯನ್ನು ನವೀಕರಣಗೊಳಿಸಿ ಪೊಳಲಿ ವೇದಮೂರ್ತಿ ದಿ. ರಾಮಣ್ಣ ತಂತ್ರಿವರ್ಯರ ನೇತ್ರತ್ವದಲ್ಲಿ ಪ್ರತಿಷ್ಟಾಬಂಧ ಬ್ರಹ್ಮಕಲಶ ಮಹೋತ್ಸವವನ್ನು ೫ ದಿನ ವಿಜ್ರಂಭಣೆಯಿಂದ ನೆರವೇರಿಸಲಾಯಿತು.

ಸ್ಥಳದಾನ[ಬದಲಾಯಿಸಿ]

ಕ್ಷೇತ್ರದ ಎದುರುಗಡೆ ವಿಶಾಲವಾದ ರಾಜಬೀದಿಯ ಸ್ಥಳವನ್ನು ದಿ. ನಾಟಿ ಮಾಘಮಾಲೆ ಶೆಡ್ತಿ ಮತ್ತು ಕುಟುಂಬದವರು ದಾನವಾಗಿ ನೀಡಿರುತ್ತಾರೆ.

ಪೂಜೆ ಪುನಸ್ಕಾರಗಳು[ಬದಲಾಯಿಸಿ]

ದೇವಸ್ಥಾನದಲ್ಲಿ ನಿತ್ಯಪೂಜೆ, ವಾರದ ಶನಿವಾರ ವಿಶೇಷ ಭಜನಾ ಪೂಜೆ, ತಿಂಗಳ ಪಂಚಮಿಯಂದು ನಾಗತಂಬಿಲ, ವರ್ಷಕೊಮ್ಮೆ ಸಾಮೂಹಿಕ ಶನೀಶ್ವರ ಪೂಜೆ, ವಾರ್ಷಿಕ ಉತ್ಸವವಾಗಿ ಶ್ರೀರಾಮ ನವಮಿ ಮಹೋತ್ಸವ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ರಂಗ ಪೂಜಾದಿ ವಿಶೇಷ ಸೇವೆಯು ಊರಿನ ಹಾಗೂ ಪರವೂರಿನ ಭಕ್ತಾದಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಸಹಕಾರದಿಂದ ನಡೆದುಬರುತ್ತಾ ಇದೆ.

ಪುನರ್ಜೀರ್ಣೋದ್ಧಾರ[ಬದಲಾಯಿಸಿ]

ಕ್ಷೇತ್ರದ ಗರ್ಭಗುಡಿಗಳು ಶಿಥಿಲಾವಸ್ಥೆಗೆ ತಲುಪಿರುವುದರಿಂದ ಆಡಳಿತ ಮಂಡಳಿ ಮತ್ತು ಊರಿನ ಸದ್ಭಕ್ತಾದಿಗಳು ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಲು ಸಂಕಲ್ಪಿಸಿದ್ದಾರೆ.