ಶ್ರವಣಾತೀತ ತರಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ವಸ್ತುವು ನಿರ್ದಿಷ್ಟ ವ್ಯಾಪ್ತಿಯಲ್ಲಿ ಕಂಪಿಸಿದಾಗ,ಶಬ್ದವು ಉತ್ಪತಿಯಾಗುತ್ತದೆ.ವಸ್ತುವು ಅನೇಕ ಆವೃತ್ತಿಯಲ್ಲ್ಲಿ ಕಂಪಿಸುತ್ತದೆ ಯಾದರೂ ಶಬ್ದ ಕೇಳುವುದು ಕೆಲವೇ ವ್ಯಾಪ್ತಿಯಲ್ಲಿ ಕಂಪಿಸಿದಾಗ ಮಾತ್ರ.ಕಂಪನ ಆವರ್ತಾಂಕ ಶ್ರೇಣಿ ೨೦Hz ನಿಂದ ೨೦,೦೦೦Hz ಇದ್ದಲ್ಲಿ ನಮಗೆ ಶಬ್ದ ಸಂವೇದನೆಯಾಗುತ್ತದೆ. ಈ ಕಂಪನವನ್ನು ಶ್ರವಣ ಕಂಪನವೆಂದು ಮತ್ತು ಆ ಆವರ್ತಾಂಕದ ಶ್ರೇಣಿಯನ್ನು ಶ್ರವಣ ಶ್ರೇಣಿ ಎಂದು ಕರೆಯುತ್ತೇವೆ. ಯಾವುದೇ ವಸ್ತುವಿನ ಕಂಪನದ ಆವೃತ್ತಿ ೨೦Hz ಗಿಂತ ಕಡಿಮೆ ಇದ್ದಲ್ಲಿ ಅಥವಾ ೨೦,೦೦೦Hz ಗಿಂತ ಹೆಚ್ಚಾಗಿದ್ದಲ್ಲಿ,ಹಾಗೆ ಕಂಪಿಸುವ ವಸ್ತುವಿನಿಂದ ಹೊರಹೊಮ್ಮುವ ಧ್ವನಿಯ ಸಂವೇದನೆ ನಮಗಾಗುವುದಿಲ್ಲ.ವಸ್ತುವಿನ ಕಂಪನದ ಆವೃತ್ತಿ ೨೦Hz ಗಿಂತ ಕದಿಮೆ ಇದ್ದಾಗ ಹೊರ ಹೊಮ್ಮುವ ಧ್ವನಿಯನ್ನು ಅವಧ್ವನಿ ಎಂದು ಕರೆಯುತ್ತಾರೆ.ಹಾಗೆಯೇ,ವಸ್ತುವು ೨೦,೦೦೦Hz ಗಿಂತ ಅಧಿಕ ಆವೃತ್ತಿಯಲ್ಲಿ ಕಂಪಿಸಿದಾಗ ಹೊಮ್ಮುವ ಧ್ವನಿಯನ್ನು ಶ್ರವಣಾತೀತ ಧ್ವನಿಎನ್ನುತ್ತಾರೆ ಮತ್ತು ಈ ಆವೃತ್ತದ ಧ್ವನಿಯ ಅಧ್ಯಯನವನ್ನು ಶ್ರವಣಾತೀತ ಶಾಸ್ತ್ರ ಎಂದು ಕರೆಯುತ್ತಾರೆ. ಶ್ರವಣಾತೀತ ತರಂಗಗಳು ಅಧಿಕ ಆವೃತ್ತಿಯದಾದ್ದರಿಂದ ಅದರ ಶಕ್ತಿಯು ಹೆಚ್ಛು ಶ್ರವಣಾತೀತ ತರಂಗಗಳ ಮತ್ತು ಶಬ್ದ ತರಂಗಗಳ ವೇಗವು ಒಂದೇ ಆಗಿರುತ್ತದೆ.

ಶ್ರವಣಾತೀತ ತರಂಗಗಳಲ್ಲಿನ ಕಂಪನ ವರ್ಗಾವಣೆಯು ಬಹಳ ಉಪಯುಕ್ತವಾಗಿದೆ.

ಶ್ರವಣಾತೀತ ತರಂಗಗಳು ಒಂದು ಮಾಧ್ಯಮದಲ್ಲಿ ಚಲಿಸುವುದನ್ನು ಅಧ್ಯನ ಮಾಡಿದಾಗ,ಆ ಮಾಧ್ಯಮದ ಸ್ಥಿತಿಸ್ಥಾಪಕತೆ ಮತ್ತು ಅದರ ವಿನ್ಯಾಸದ ಏರಿಳಿತ ಕಂಡು ಹಿಡಿಯಬಹುದು. ಶ್ರವಣಾತೀತ ತರಂಗಗಳನ್ನು ಲೋಹದ ಅಚ್ಚುಗಳಲ್ಲಿನ ಒಡಕು/ಸೀಳುಗಳನ್ನು ಕಂಡುಹಿಡಿಯುವುದಕ್ಕೆ ಬಳಸುತ್ತಾರೆ.ಲೋಹದ ಅಚ್ಚುಗಳ ಮೂಲಕ.ಶ್ರವಣಾತೀತ ತರಂಗಗಳನ್ನು ಪ್ರಸರಿಸಿ,ಅದನ್ನು ಪರೀಕ್ಷಿಸುತ್ತಾರೆ,ಯಾವುದೇ ಲೋಪ ಇದ್ದಲ್ಲಿ ತರಂಗವು ಪ್ರತಿಫಲಿಸುತ್ತದೆ. ಬಾವಲಿಗಳು ರಾತ್ರಿ ವೇಳೆಯಲ್ಲಿ ಯಾವ ಅಡಚಣೆಯೂ ಇಲ್ಲದೆ,ಸುಲಭವಾಗಿ ಹಾರಾಡಲು ಶ್ರವಣಾತೀತ ತರಂಗಗಳು ಸಹಾಯ ಮಾಡುತ್ತವೆ. ಬಾವಲಿಗಳು ಶ್ರವಣಾತೀತ ತರಂಗಗಳನ್ನು (೧೦೦kHz ತನಕ) ಉಂಟು ಮಾಡುತ್ತವೆ ಮತ್ತು ಅದನ್ನು ಸಂವೇದನೆ ಮಾಡುವ ಶಕ್ತಿಯು ಅದಕ್ಕಿದೆ.ಅವು ಹಾರಾಡುವಾಗ ಯಾವುದೇ ಅಡಚಣೆ ಇದ್ದಲ್ಲಿ,ಅದರಿಂದ ಪ್ರತಿಫಲಿಸಿದ ತರಂಗವನ್ನು ಸಂವೇದಿಸಿ,ಅಡಚಣೆಯ ದೂರ ಅಂದಾಜು ಮಾಡಿ ಯಾವುದೇ ತೊಂದರೆ ಇಲ್ಲದೆ ಹಾರಾಡುತ್ತವೆ.

ಶ್ರವಣಾತೀತ ತರಂಗಗಳ ಆವರ್ತಾಂಕ ಹೆಚ್ಚಾಗಿರುವುದರ ಉಪಯೋಗ

ಶ್ರವಣಾತೀತ ತರಂಗಗಳ ಆವರ್ತಾಂಕ ಹೆಚ್ಚಾಗಿರುವುದರಿಂದ,ಇದನ್ನು ಮಿಶ್ರಲೋಹ ತಯಾರಿಕೆ,ಛಾಯಾಚಿತ್ರ ಫಿಲ್ಮಗಳಿಗೆ ಎಮಲ್ಷನ್ಗಳನ್ನು ತಯಾರಿಸುತ್ತರೆ.ಕಂಪನದಿಂದ ಏಕರೂಪ ಮಿಶ್ರಣ ದೊರೆಯುತ್ತದೆ.ಬಟ್ಟೆಗಳಲ್ಲಿನ ಗ್ರೀಸ್,ಕೊಳೆ ಮುಂತಾದವುಗಳನ್ನು ಹೋಗಲಾಡಿಸಲೂ ಸಹ ಶ್ರವಣಾತೀತ ಕಂಪನ ಉಪಯೋಗಕಾರಿಯಾಗಿದೆ.ಕೂಡುವಿಕೆಯನ್ನು ಕಂಪನದಿಂದಾಗಿ ಸಾಧಿಸಬಹುದು.ಶ್ರವಣಾತೀತ ಧ್ವನಿಯನ್ನು ಕೀಟಗಳನ್ನು ವಿಕರ್ಷಿಸುವುದಕ್ಕೂ,ಬ್ಯಾಕ್ಟೀರಿಯವನ್ನು ಕೊಲ್ಲಲು ಬಳಸುತ್ತಾರೆ.

ವೈದ್ಯಕೀಯ ಕ್ಷೇತ್ರದಲ್ಲಿ,ನರವೇದನೆ ಮತ್ತು ಸಂಧಿವಾತ ವೇದವನೆಗಳನ್ನು ಹೋಗಲಾಡಿಸಲು ಬಳಸುತ್ತಾರೆ.ಶಸ್ತ್ರ ಚಿಕಿತ್ಸೆಗೆ ಬಳಸುವ ಉಪಕರಣಗಳನ್ನು ಶ್ರವಣಾತೀತ ತರಂಗ ಆವೃತ್ತಿಯಲ್ಲಿ ಕಂಪಿಸುವುದರ ಮೂಲಕ ರಕ್ತಸ್ರವಿಕೆ ಇಲ್ಲದೆ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ.ಪಿತ್ತಕೋಶದ ಕಲ್ಲುಗಳನ್ನು ಚೂರಾಗಿಸುವುದರಲ್ಲೂ ಶ್ರವಣಾತೀತ ಧ್ವನಿಯು ಉಪಯೋಗಕಾರಿ.

ಶ್ರವಣಾತೀತ ತರಂಗ ಕ್ರಮಲೋಕಕಗಳು (ಸ್ಕ್ಯಾನರ್)

ಶ್ರವಣಾತೀತ ತರಂಗಗಳ ಪ್ರತಿಧ್ವನಿ ವ್ಯಾಪ್ತಿ ನಿರ್ಧಾರವನ್ನು ಬಳಸಿಕೊಂಡು,ಮಾನವನ ಶರೀರದ ಆಂತರಿಕ ಅಂಗಗಳ ಬಿಂಬವನ್ನು ಪಡೆಯಬಹುದು.ಇದಕ್ಕೆ ಬಳಸುವ ಉಪಕರಣವೆ ಶ್ರವಣಾತೀತ ಕ್ರನಮ ಲೋಕಕಗಳು.ಈ ತಂತ್ರಜ್ನಾನವನ್ನು ನಮ್ಮ ಶರೀರದ ದ್ರವ ಭರಿತ ಆಂತರಿಕ ಅಂಗಗಳಾದ ಮೂತ್ರಕೋಶ,ಮೂತ್ರಜನಕಾಂಗ,ಮೇದೋಜೀರಕ,ಅಂಡಾಶಯಗಳನ್ನು ಪರೀಕ್ಷಿಸಲು ಬಳಸುತ್ತಾರೆ.ಶ್ರವಣಾತೀತ ತರಂಗಗಳು X-ಕಿರಣಗಳಿಂತ ಕಡಿಮೆ ಅಪಯಕಾರಿ. ಆದುದ್ದರಿಂದ ಕ್ರಮ ವೀಕ್ಷಣೆಯಲ್ಲಿ ಶ್ರವಣಾತೀತ ತರಂಗಗಳು ಬಹು ಉಪಯುಕ್ತ.ಹೃದಯ ಪರೀಕ್ಷೆಗೆ ಶ್ರವಣಾತೀತ ಧ್ವನಿಯ ಬಳಕೆಗೆ ವಿದ್ಯುತ್ ಹೃಲ್ಲೇಖನ ಎನ್ನುತ್ತಾರೆ. ಗರ್ಭಾವಸ್ಥೆಯ ಅವಧಿಯಲ್ಲಿ ಗರ್ಭವನ್ನು ಪರೀಕ್ಷಿಸಿ,ಅದರ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಶ್ರವಣಾತೀತ ಕ್ರಮ ಲೋಕಕಗಳ ಅನ್ವಯ ಬಹುಖ್ಯಾತಿ.ಶ್ರವಣಾತೀತ ತರಂಗಗಳನ್ನು ಶರೀರದ ನಿರ್ದಿಷ್ಟ ಸ್ಥಳಕ್ಕೆ ಗುರಿಯಿಟ್ಟು ಹಾಯಿಸಬಹುದು.ಈ ತರಂಗಗಳು ಶರೀರದ ಊತಕ ಮತ್ತು ದ್ರವಗಳ ಮೂಲಕ ಸುಲಭವಾಗಿ ಚಲಿಸುತ್ತದೆ.ಊತಕ ಸಾಂದ್ರತೆ ಬದಲಾದಲ್ಲಿ,ಈ ತರಂಗಗಳು ಪ್ರತಿಫಲಿಸುತ್ತದೆ. ಉದಾ:ಶ್ರವಣಾತೀತ ತರಂಗವು ಹೃದಯದಲ್ಲಿನ ರಕ್ತದಲ್ಲಿ ಸುಲಭವಾಗಿ ಚಲಿಸುತ್ತದೆ.ಆದರೆ, ಈ ತರಂಗವು ಘನಕವಾಟಗಳಿಂದ ಪ್ರತಿಫಲಿಸುತ್ತದೆ.

ಶ್ರವಣಾತೀತ ತರಂಗ ಕ್ರಮ ಲೋಕಕಗಳು ಕೆಲಸ ಮಾಡಿವ ವಿಧಾನ

ಪರಿಕರ್ಮಿಯು ಪರೀಕ್ಷಕವನ್ನು(ದಪ್ಪ ಪೆನ್ನಿನಂತಹ ವಸ್ತು) ಪರೀಕ್ಷೆ ಮಾಡಬೇಕಾದ ದೇಹದ ಭಾಗದ ಮೇಲಿಡುತ್ತಾರೆ.ಚರಬಿ ಜಲ್ಲಿಯನ್ನು(ಲುಬ್ರಿಕೇಟಿಂಗ್ ಜೆಲ್ಲಿ) ಚರ್ಮದ ಮೇಲೆ ಸವರಿ ಪರೀಕ್ಷಕ,ದೇಹಕ್ಕೂ ಸರಿಯಾಗಿ ಸಂಪರ್ಕ ಏರ್ಪಡುವಂತೆ ಮಾಡುತ್ತಾರೆ.ಪರೀಕ್ಷಕವನ್ನು ತಂತಿಯ ಮೂಲಕ ಶ್ರವಣಾತೀತ ಉತ್ಪಾದಕ ಯಂತ್ರ ಮತ್ತು ದರ್ಶಕಕ್ಕೆ ಸಂಪರ್ಕಿಸಲಾಗುತ್ತದೆ. ಶ್ರವಣಾತೀತ ಮಿಡಿತಗಳನ್ನು ಪರೀಕ್ಷಕದ ಮೂಲಕ ದೇಹಕ್ಕೆ ವರ್ಗಾಯಿಸಲಾಗುತ್ತದೆ.ಶ್ರವಣಾತೀತ ತರಂಗವು ದೇಹದ ವಿವಿಧ ರಚನೆಗಳಿಂದ ಹಿಮ್ಮೆಟ್ಟಿ ಹಿಂತಿರುಗುತ್ತದೆ.ಇದನ್ನು ಪರೀಕ್ಷಕದ ಮೂಲಕ ಪತ್ತೆ ಮಾಡಿ ಶ್ರವಣಾತೀತ ತರಂಗಗಳ ಉತ್ಪಾದಕ ಯಂತ್ರಕ್ಕೆ ಕಳಿಸಲಾಗುತ್ತದೆ.ಅದನ್ನು ಪ್ರದರ್ಶಕ ತೆರೆಯ ಮೇಲೆ ಬಿಂಬಿಸಲಾಗುತ್ತದೆ.