ಶೋರ್ಮಾ
ಗೋಚರ
ಶೋರ್ಮಾ ಮಧ್ಯಪ್ರಾಚ್ಯದ ಪಾಕಪದ್ಧತಿಯ ಒಂದು ಖಾದ್ಯ. ಇದು ತೆಳು ಹೋಳುಗಳಾಗಿ ಕತ್ತರಿಸಿದ ಮಾಂಸವನ್ನು ಹೊಂದಿರುತ್ತದೆ, ಈ ಹೋಳುಗಳನ್ನು ಶಂಕುವಿನಂತಹ ಆಕಾರದಲ್ಲಿ ಗುಡ್ಡೆಹಾಕಿ ನಿಧಾನವಾಗಿ ತಿರುಗುವ ಲಂಬ ರೋಟಿಸರಿ ಅಥವಾ ಸಲಾಕೆಯ ಮೇಲೆ ಸುಡಲಾಗುತ್ತದೆ. ಮೂಲತಃ ಇದನ್ನು ಕುರಿಮರಿಮಾಂಸ ಅಥವಾ ಮೇಕೆಮಾಂಸದಿಂದ ತಯಾರಿಸಲಾಗುತ್ತಿತ್ತು. ಇಂದು ಶೋರ್ಮಾವನ್ನು ಕೋಳಿಮಾಂಸ, ಟರ್ಕಿಕೋಳಿಯ ಮಾಂಸ, ಗೋಮಾಂಸ ಅಥವಾ ಕರುವಿನ ಮಾಂಸದಿಂದ ತಯಾರಿಸಬಹುದು.[೧][೨][೩] ಬೆಂದ ಮೇಲ್ಮೈಯು ನಿರಂತರವಾಗಿ ತಿರುಗುತ್ತಿರುವಾಗ ತೆಳುವಾದ ತುಂಡುಗಳನ್ನು ಅದರಿಂದ ಹೆರೆಯಲಾಗುತ್ತದೆ.[೪][೫] ಶೋರ್ಮಾ ವಿಶ್ವದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ, ವಿಶೇಷವಾಗಿ ಈಜಿಪ್ಟ್‌ನಲ್ಲಿ. ಭಾರತದ ಹೈದರಾಬಾದ್‍ನಲ್ಲಿ ಇದು ಜನಪ್ರಿಯವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Albala, Ken, ed. (2011). Food Cultures of the World Encyclopedia. ABC-CLIO. pp. 197, 225, 250, 260–261, 269. ISBN 9780313376269 – via Google Books.
- ↑ Davidson, Alan (2014). Jaine, Tom (ed.). The Oxford Companion to Food. Oxford Companions. Oxford: Oxford University Press. p. 259. ISBN 9780191040726. OCLC 1119636257 – via Google Books.
- ↑ Marks, Gil (2010). Encyclopedia of Jewish Food. Hoboken, N.J.: Wiley. ISBN 9780544186316. OCLC 849738985 – via Google Books.
- ↑ Mattar, Philip (2004). Encyclopedia of the Modern Middle East & North Africa: D-K. Encyclopedia of the Modern Middle East & North Africa. Vol. 2 (Hardcover ed.). Macmillan Library Reference. p. 840. ISBN 9780028657714. OCLC 469317304.
Shawarma is a popular Levantine Arab specialty.
- ↑ La Boone, III, John A. (2006). Around the World of Food: Adventures in Culinary History (Paperback ed.). iUniverse, Inc. p. 115. ISBN 0595389686. OCLC 70144831.
Shawarma - An Arab sandwich similar to the gyro.