ಶೇರ್‌ಪಾಯಿಂಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಮೈಕ್ರೋಸಾಫ್ಟ್‌ ಶೇರ್‌ಪಾಯಿಂಟ್‌ , ಅಥವಾ ಮೈಕ್ರೋಸಾಫ್ಟ್‌ ಶೇರ್‌ಪಾಯಿಂಟ್‌ ಪ್ರೊಡಕ್ಟ್ಸ್ ಅಂಡ್ ಟೆಕ್ನಾಲಜೀಸ್ ಎಂದೂ ಕರೆಯಲಾಗುತ್ತದೆ, ಎಂಬುದು ಉತ್ಪನ್ನಗಳು ಮತ್ತು ತಂತ್ರಾಂಶದ ಘಟಕಗಳ ಸಂಗ್ರಹವಾಗಿದ್ದು, ಇದರಲ್ಲಿ, ವೆಬ್ ಬ್ರೌಸರ್ ಆಧಾರಿತ ಸಹಭಾಗಿತ್ವ ಕಾರ್ಯಗಳು, ಪ್ರಕ್ರಿಯೆ ನಿರ್ವಹಣೆ ಮಾಡ್ಯೂಲ್‌ಗಳು, ಹುಡುಕಾಟ ಮಾಡ್ಯೂಲ್‌ಗಳು ಮತ್ತು ಒಂದು ಡಾಕ್ಯುಮೆಂಟ್-ನಿರ್ವಹಣೆ ವೇದಿಕೆಯಂತಹ ಬೆಳೆಯುತ್ತಿರುವ ಆಯ್ದ ಘಟಕಗಳನ್ನು ಒಳಗೊಂಡಿರುತ್ತದೆ.[೧] ಹಂಚಲ್ಪಟ್ಟ ಕಾರ್ಯಸ್ಥಳಗಳು, ಮಾಹಿತಿ ಸಂಗ್ರಹಗಳು ಮತ್ತು ಕಡತಗಳು, ಅಷ್ಟೇ ಅಲ್ಲದೇ ವಿಕಿಗಳು ಮತ್ತು ಬ್ಲಾಗ್‌ಗಳಂತಹ ಪೋಷಕ ನಿರೂಪಿಸಿದ ಅಪ್ಲಿಕೇಶನ್‌ಗಳನ್ನು ಪ್ರವೇಶಿಸುವಂತಹ ವೆಬ್‌ಸೈಟ್‌ಗಳನ್ನು ಹೋಸ್ಟ್ ಮಾಡಲು ಶೇರ್‌ಪಾಯಿಂಟ್‌ ಅನ್ನು ಬಳಸಬಹುದಾಗಿದೆ. "ವೆಬ್ ಪಾರ್ಟ್ಸ್" ಎಂದು ಕರೆಯಲ್ಪಡುವ ಮಾಲಿಕತ್ವದ ನಿಯಂತ್ರಣಗಳನ್ನು ಎಲ್ಲಾ ಬಳಕೆದಾರರೂ ನಿರ್ವಹಿಸಬಹುದಾಗಿದೆ, ಅಥವಾ ಪಟ್ಟಿಗಳು ಮತ್ತು ಕಡತ ಲೈಬ್ರರಿಗಳಂತಹ ವಿಷಯ ಸಂಗ್ರಹಗಳನ್ನು ಬಳಸಿಕೊಳ್ಳಬಹುದಾಗಿದೆ.


ಸ್ಥೂಲ ಅವಲೋಕನ[ಬದಲಾಯಿಸಿ]

"ಶೇರ್‌ಪಾಯಿಂಟ್‌" ಎಂಬ ಪದವು ಮೂಲ ವೇದಿಕೆಯಿಂದ ಹಿಡಿದು ಅನೇಕ ಸೇವೆಗಳವರೆಗೆ ಹಲವಾರು ಉತ್ಪನ್ನಗಳನ್ನು ಒಟ್ಟಾರೆಯಾಗಿ ಸೇರಿಸಿ ಹೇಳಲು ಬಳಸಲಾಗುತ್ತದೆ. ಆ ವೇದಿಕೆಯನ್ನು ವಿಂಡೋಸ್ ಶೇರ್‌ಪಾಯಿಂಟ್‌ ಸರ್ವೀಸಸ್ (WSS) ಎಂದು ಕರೆಯಲಾಗುತ್ತಿದ್ದು, ಅದು ವಿಂಡೋಸ್ ಸರ್ವರ್ ಜೊತೆಗೆ ಸೇರಿಸಲ್ಪಟ್ಟಿದೆ ಮತ್ತು ವಿಂಡೋಸ್ ಸರ್ವರ್ ಪರವಾನಗಿ ಹೊಂದಿರುವವರಿಗೆ ಉಚಿತ ಡೌನ್‌ಲೋಡ್‌ಗಾಗಿ ಲಭ್ಯವಿದೆ. ಮೈಕ್ರೋಸಾಫ್ಟ್‌ ಆಫೀಸ್‌ ಶೇರ್‌ಪಾಯಿಂಟ್‌ ಸರ್ವರ್‌ನಂತಹು (MOSS) ಸೇವೆಗಳು ಹೆಚ್ಚಿನ ಕಾರ್ಯಸಾಮರ್ಥ್ಯ ಮತ್ತು ವೈಶಿಷ್ಟ್ಯಗಳನ್ನು ಒದಗಿಸುತ್ತವೆ, ಮತ್ತು ಅದಕ್ಕೆ ತಕ್ಕಂತೆ ಪರವಾನಗಿಯನ್ನೂ ನೀಡಲಾಗಿರುತ್ತದೆ.[೧] 


ಮೈಕ್ರೋಸಾಫ್ಟ್‌ ಪ್ರಸ್ತುತ ಶೇರ್‌ಪಾಯಿಂಟ್‌ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಕುಟುಂಬದ ಭಾಗವಾಗಿ ಈ ಕೆಳಗಿನವುಗಳನ್ನು ಗುರುತಿಸುತ್ತದೆ:ಮೈಕ್ರೋಸಾಫ್ಟ್‌ ಆಫೀಸ್‌ ಶೇರ್‌ಪಾಯಿಂಟ್‌ ಡಿಸೈನರ್, ಒಂದು ಉಚಿತ[೨] ಸಂಪಾದಕವಾಗಿದ್ದು, ಇದು ಆಡಳಿತಗಾರರಿಗೆ ಶೇರ್‌ಪಾಯಿಂಟ್‌ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಗ್ರಾಹಕೀಯಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದೂ ಸಹಾ ಶೇರ್‌ಪಾಯಿಂಟ್ ಕುಟುಂಬದ ಭಾಗವಾಗಿದೆ.


ಈ ತಂತ್ರಾಂಶದ ಘಟಕಗಳ ಪೂರ್ವದ ಆವೃತ್ತಿಗಳು "ಶೇರ್‌ಪಾಯಿಂಟ್‌ ಪೋರ್ಟಲ್ ಸರ್ವರ್ 2003" ಮತ್ತು "ಶೇರ್‌ಪಾಯಿಂಟ್ ಟೀಮ್ ಸರ್ವೀಸಸ್" ಎಂಬಂತಹ ಬೇರೆ ಹೆಸರುಗಳನ್ನು ಹೊಂದಿದ್ದವು, ಆದರೆ ಅವುಗಳನ್ನು ಶೇರ್‌ಪಾಯಿಂಟ್‌ ಅಥವಾ ಶೇರ್‌ಪಾಯಿಂಟ್‌ ಟೆಕ್ನಾಲಜೀಸ್ ಎಂದೂ ಸಹಾ ಕರೆಯಲಾಗುತ್ತದೆ. ಪ್ರಾರಂಭದಲ್ಲಿ, ಶೇರ್‌ಪಾಯಿಂಟ್‌ ಹುಟ್ಟುಹಾಕುವಿಕೆಯನ್ನು ಒಟ್ಟಾರೆಯಾಗಿ Tahoe ಎಂದು ಕರೆಯುತ್ತಿದ್ದಾಗಿನಿಂದಲೂ ಶೇರ್‌ಪಾಯಿಂಟ್‌ನ ಅಭಿವೃದ್ಧಿಯು ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಮಿಶ್ರಣವಿರುವ ಚೀಲದಂತಾಗಿದ್ದು, ಇದರಲ್ಲಿ ಈಗ ನಿಷ್ಕ್ರಿಯವಾಗಿರುವ ಸೈಟ್ ಸರ್ವರ್ 3.0 ಸಹಾ ಸೇರಿತ್ತು.


ತಂತ್ರಜ್ಞಾನಗಳ ಒಂದು ಗುಂಪಾದ ಶೇರ್‌ಪಾಯಿಂಟ್‌ ಅನ್ನು ಕೇವಲ ಒಂದು ಸಂಪೂರ್ಣ ಫೈಲ್ ಸರ್ವರ್ ಅನ್ನು ಬದಲಾಯಿಸಲು ಅಥವಾ ಒಂದು ಏಕ ಬಳಕೆಯ ಪರಿಹಾರವಾಗಿ ರೂಪಿಸುವ ಯೋಚನೆಯಿರಲಿಲ್ಲ. ಅದರ ಬದಲಾಗಿ, ಅದನ್ನು ವ್ಯವಹಾರ ಮತ್ತು ಔದ್ಯಮಿಕ ಪರಿಸರದಲ್ಲಿ ಅನೇಕ ಕೆಲಸಗಳನ್ನು ಮಾಡಲು ಸಾಧ್ಯವಾಗುವಂತೆ ರೂಪಿಸಲಾಗಿದೆ. ಮೈಕ್ರೋಸಾಫ್ಟ್‌ ಇವುಗಳನ್ನು ಆಗಿ ಸಹಯೋಗ, ಪ್ರಕ್ರಿಯೆಗಳು ಮತ್ತು ವ್ಯಕ್ತಿಗಳು ಎಂಬುದಾಗಿ ಮಾರುಕಟ್ಟೆಗೆ ಬಿಡುತ್ತಿದೆ.


ಶೇರ್‌ಪಾಯಿಂಟ್‌ ಯೂಸರ್ ಇಂಟರ್‌ಫೇಸ್ ಒಂದು ವೆಬ್ ಇಂಟರ್‌ಫೇಸ್ ಆಗಿದ್ದು ಇದನ್ನು ಬ್ರೌಸರ್ ಮೂಲಕ ಪ್ರವೇಶಿಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ಬ್ರೌಸರ್‌ಗಳು ಇದನ್ನು ಬೆಂಬಲಿಸುತ್ತಿದ್ದರೂ, ಮೈಕ್ರೋಸಾಫ್ಟ್‌ ಸಂಸ್ಥೆಯು "ಮಟ್ಟ 1"ರ ಬ್ರೌಸರ್ ಎಂದು ಕರೆಯುವ ಇಂಟರ್ನೆಟ್ ಎಕ್ಸ್‌ಪ್ಲೋರರ್ ಮಾತ್ರ ಶೇರ್‌ಪಾಯಿಂಟ್‌ ಪರಿಹಾರದ ಕಾರ್ಯಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ತಕ್ಕುದಾಗಿ ಮಾಡಲ್ಪಟ್ಟಿದೆ.[೩] 


ಶೇರ್‌ಪಾಯಿಂಟ್‌ ಸೈಟ್‌ಗಳು ಕಾರ್ಯಕಾರಿಯಾಗಿ ASP.NET 2.0 ವೆಬ್ ಅಪ್ಲಿಕೇಶನ್‌ಗಳಾಗಿದ್ದು, ಇವುಗಳನ್ನು IIS ಯನ್ನು ಬಳಸಿ ನೀಡಲಾಗುತ್ತದೆ ಮತ್ತು ಇವು ಒಂದು SQL ಸರ್ವರ್ ಡೇಟಾಬೇಸ್ ಅನ್ನು ಡೇಟಾ ಸಂಗ್ರಹ ಹಿನ್ನೆಲೆಯಾಗಿ ಬಳಸುತ್ತವೆ. ಕಡತ ಲೈಬ್ರರಿಗಳಲ್ಲಿರುವ ವಸ್ತುಗಳು ಮತ್ತು ಪಟ್ಟಿಗಳಂತಹ ಎಲ್ಲಾ ಸೈಟ್ ವಿಷಯ ದತ್ತಾಂಶಗಳನ್ನು "WSS_Content_[ID ]" ಎಂದು ಕರೆಯಲ್ಪಡುವ SQL ಡೇಟಾಬೇಸ್ ಒಳಗೆ ಸಂಗ್ರಹಿಸಲಾಗುತ್ತದೆ.


ಮೈಕ್ರೋಸಾಫ್ಟ್ ಸರ್ಚ್ ಸರ್ವರ್ (MSS)[ಬದಲಾಯಿಸಿ]

ಮೈಕ್ರೋಸಾಫ್ಟ್‌ ಸರ್ಚ್ ಸರ್ವರ್ (MSS) ಎಂಬುದು ಮೈಕ್ರೋಸಾಫ್ಟ್‌ನ ಒಂದು ಉದ್ದಿಮೆ ಹುಡುಕಾಟ ವೇದಿಕೆ ಆಗಿದ್ದು, ಇದು ಮೈಕ್ರೋಸಾಫ್ಟ್‌ ಆಫೀಸ್‌ ಶೇರ್‌ಪಾಯಿಂಟ್‌ ಸರ್ವರ್ (MOSS) ನ ಹುಡುಕಾಟ ಸಾಧ್ಯತೆಗಳ ಮೇಲೆ ರೂಪಿಸಲ್ಪಟ್ಟಿದೆ.[೪]
MSS ವಿಂಡೋಸ್ ಸರ್ಚ್‌ ವೇದಿಕೆಯೊಡನೆ ಅದರ ಯಂತ್ರಶಿಲ್ಪದ ಬೆಂಬಲವನ್ನು, ಪ್ರಶ್ನೆಮಾಡುವ ಯಂತ್ರ ಮತ್ತು ಇಂಡೆಕ್ಸರ್‌ಗಳಿಗಾಗಿ ಸಹಾ ಹಂಚಿಕೊಳ್ಳುತ್ತದೆ. MOSS ಹುಡುಕಾಟವು ಕಡತಗಳಿಗೆ ಲಗತ್ತಿಸಲಾದ ಮೆಟಾಡೇಟಾವನ್ನು ಹುಡುಕುವ ಸಾಮರ್ಥ್ಯವನ್ನು ಸಹಾ ಒದಗಿಸುತ್ತದೆ.


ಮೈಕ್ರೋಸಾಫ್ಟ್‌ ಸಂಸ್ಥೆಯು ಮೈಕ್ರೋಸಾಫ್ಟ್‌ ಸರ್ಚ್ ಸರ್ವರ್‌ಅನ್ನು ಮಾರ್ಚ್ 2008ರಲ್ಲಿ ಬಿಡುಗಡೆಯಾದ ಸರ್ಚ್ ಸರ್ವರ್ 2008 ಆಗಿ ದೊರೆಯುವಂತೆ ಮಾಡಿದೆ.

ಅದಲ್ಲದೇ ಒಂದು ಉಚಿತ ಆವೃತ್ತಿಯಾದ ಸರ್ಚ್ ಸರ್ವರ್ 2008 ಎಕ್ಸ್‌ಪ್ರೆಸ್ ಸಹಾ ಲಭ್ಯವಿದೆ.
 ಈ ಎಕ್ಸ್‌ಪ್ರೆಸ್ ಆವೃತ್ತಿ ಸಹಾ ವಾಣಿಜ್ಯಿಕ ಆವೃತ್ತಿಯಂತಹುದೇ ವೈಶಿಷ್ಟ್ಯಗಳ ಗುಂಪನ್ನು ಹೊಂದಿರುತ್ತದೆ ಮತ್ತು ಇಂಡೆಕ್ಸ್ ಮಾಡಿದ ಕಡತಗಳ ಸಂಖ್ಯೆಯಲ್ಲಿಯೂ ಮಿತಿಯನ್ನು ಇಡಲಾಗಿಲ್ಲ. ಆದರೆ, ಇದನ್ನು ಕೇವಲ ಒಂದು ಸಿಸ್ಟಮ್‌ನಲ್ಲಿ ಸ್ಥಾಪಿಸಬಹುದಾಗಿದ್ದು, ಇದನ್ನು ಒಂದು ಸಮೂಹಕ್ಕೆ ವಿಸ್ತರಿಸಲು ಸಾಧ್ಯವಾಗುವುದಿಲ್ಲ.[೫]. ಜೊತೆಗೆ ಅಡೋಬ್‌ನ ಅಕ್ರೋಬ್ಯಾಟ್ (pdf) ಕಡತಗಳಂತಹ ಮೂರನೇ ಪಕ್ಷದ ಕಡತಗಳನ್ನು ಇಂಡೆಕ್ಸ್ ಮಾಡಲು ಬೇಕಾದ ವಿವಿಧ ರೀತಿಯ ಪ್ಲಗ್‌ಇನ್‌ಗಳೂ ಸಹಾ ಲಭ್ಯವಿವೆ.


ಮೈಕ್ರೋಸಾಫ್ಟ್‌ ಶೇರ್‌ಪಾಯಿಂಟ್‌ 2010[ಬದಲಾಯಿಸಿ]

ಮೈಕ್ರೋಸಾಫ್ಟ್‌ನಿಂದ "ಉದ್ಯಮಗಳಿಗೆ ಮತ್ತು ಅಂತರ್ಜಾಲಕ್ಕೆ ವ್ಯವಹಾರ ಸಹಯೋಗ ವೇದಿಕೆ"[೬] ಎಂದು ಹೇಳಿಸಿಕೊಂಡ, ಮೈಕ್ರೋಸಾಫ್ಟ್‌ ಶೇರ್‌ಪಾಯಿಂಟ್‌ 2010 ಉತ್ಪನ್ನವು ತನ್ನ ಹಿಂದಿನ ಉತ್ಪನ್ನಕ್ಕಿಂತ ಹೆಚ್ಚಿನ ಅನೇಕ ಪ್ರಯೋಜನಗಳನ್ನು ಒದಗಿಸುವ ಭರವಸೆ ನೀಡುತ್ತದೆ. ಇದು ಸದ್ಯ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ.


ವೈಶಿಷ್ಟ್ಯಗಳ ಪ್ರಮುಖಾಂಶಗಳೆಂದರೆ[೭]:


 • ಹೊಸ ಆಫೀಸ್ ರಿಬ್ಬನ್‌ ಹೊಂದಿರುವ ಹೊಸ ಬಳಕೆದಾರ ಇಂಟರ್‌ಫೇಸ್.
 • ಒಂದು ಸೈಟ್‌ಅನ್ನು ಸುಲಭದಲ್ಲಿ ಗ್ರಾಹಕೀಯಗೊಳಿಸುವುದನ್ನು ಸಾಧ್ಯವಾಗಿಸಲು ಅಗತ್ಯವಾದ ವೆಬ್ ಎಡಿಟ್.
 • ಸಮೃದ್ಧ ಸಿಲ್ವರ್‌ಲೈಟ್‌ ಅಪ್ಲಿಕೇಶನ್‌ಗಳ ಅತ್ಯಂತ ವೇಗದ ಸಂಯೋಜನೆಗಾಗಿ ಸಿಲ್ವರ್‌ಲೈಟ್ ವೆಬ್ ಪಾರ್ಟ್.
 • ರಿಚ್ ಥೀಮಿಂಗ್, ಶೇರ್‌ಪಾಯಿಂಟ್‌ 2010 ಸೈಟ್‌ನಲ್ಲಿ ಸರಳೀಕೃತ ಸ್ಕಿನ್ನಿಂಗ್‌ಗೆ ಅನುವು ಮಾಡಲು
 • ಇಂಟರ್ನೆಟ್ ಎಕ್ಸ್‌ಪ್ಲೋರರ್, ಫೈರ್ಫಾಕ್ಸ್ ಮತ್ತು ಸಫಾರಿ ಸೇರಿದಂತೆ ಬಹುಸಂಖ್ಯೆಯ ಬ್ರೌಸರ್‌ಗಳ ಬೆಂಬಲ.


ಇದಲ್ಲದೇ IT ವೃತ್ತಿಪರರಿಗೆ [೮], ಅಭಿವರ್ಧಕರಿಗೆ [೯] ಮತ್ತು ಪಾಲುದಾರರಿಗೆ[೧೦] ಅಮೂಲ್ಯವಾದಂತಹ ಇತರ ಹೊಸ ವೈಶಿಷ್ಟ್ಯಗಳ ಸಂಗ್ರಹವೂ ಇದರಲ್ಲಿದೆ.


ಮೈಕ್ರೋಸಾಫ್ಟ್‌ ಆಫೀಸ್‌ ಶೇರ್‌ಪಾಯಿಂಟ್‌ ಡಿಸೈನರ್[ಬದಲಾಯಿಸಿ]

WYSIWYG HTML ಸಂಪಾದಕ ಮೈಕ್ರೋಸಾಫ್ಟ್‌ ಆಫೀಸ್‌ ಶೇರ್‌ಪಾಯಿಂಟ್‌ ಡಿಸೈನರ್ ಪ್ರಾಥಮಿಕವಾಗಿ ಶೇರ್‌ಪಾಯಿಂಟ್ ಸೈಟ್‌ಗಳ ವಿನ್ಯಾಸ ಮತ್ತು ಅಂತಿಮ-ಬಳಕೆದಾರರ WSS ಸೈಟ್‌ಗಳಿಗಾಗಿನ ಕಾರ್ಯವಾಹಿನಿಯನ್ನು ಗುರಿಯಾಗಿಟ್ಟುಕೊಂಡಿದೆ. ಇದು ಫ್ರಂಟ್‌ಪೇಜ್ 2003 ರ ನಂತರ ಬಂದ ಉತ್ಪನ್ನವಾಗಿದೆ. ಇದು ತನ್ನ ವ್ಯಾಖ್ಯಾನಿಸುವ ಯಂತ್ರವನ್ನು ತನ್ನ ಸಾಮಾನ್ಯ ವೆಬ್ ವಿನ್ಯಾಸದ ಸಹೋದರ ಉತ್ಪನ್ನವಾದ ಮೈಕ್ರೋಸಾಫ್ಟ್‌ ಎಕ್ಸ್‌ಪ್ರೆಶನ್ ವೆಬ್ ಮತ್ತು ಮೈಕ್ರೋಸಾಫ್ಟ್‌ನ ವಿಶುವಲ್ ಸ್ಟುಡಿಯೋ 2008 IDE ನೊಂದಿಗೆ ಹಂಚಿಕೊಳ್ಳುತ್ತದೆ. ಶೇರ್‌ಪಾಯಿಂಟ್‌ ಡಿಸೈನರ್ ಉತ್ಪನ್ನವು ಮೈಕ್ರೋಸಾಫ್ಟ್‌ ಫ್ರಂಟ್‌ಪೇಜ್‌ನ ಮುಂದಿನ-ಪೀಳಿಗೆಯ ಆವೃತ್ತಿಯನ್ನು ಪ್ರತಿನಿಧಿಸುತ್ತದೆ.


ಮುಂದಿನ-ಪೀಳಿಗೆಯ ದತ್ತಾಂಶ ನಿಯಂತ್ರಣಗಳ ಕುಟುಂಬ (ಉದಾಹರಣೆಗೆ ಡಾಟಾವೀವ್ ವೆಬ್‌ಪಾರ್ಟ್) ಮತ್ತು XPath ಗಳ ಮೂಲಕ, ಶೇರ್‌ಪಾಯಿಂಟ್‌ ಡಿಸೈನರ್ ಉತ್ಪನ್ನವು .NET Framework ಗೆ ಎದುರಾಗಿ ನೇರವಾಗಿ ಕೋಡಿಂಗ್ ಮಾಡದೆಯೇ ಅಭಿವರ್ಧಕರು ಶೇರ್‌ಪಾಯಿಂಟ್ ಅಥವಾ ಬಾಹ್ಯ ಮೂಲಗಳಿಂದ(ಅಂದರೆ ಮೈಕ್ರೋಸಾಫ್ಟ್ SQL ಸರ್ವರ್) ದತ್ತಾಂಶವನ್ನು ಬಳಕೆ ಮಾಡುವುದನ್ನು ಸಕ್ರಿಯಗೊಳಿಸುತ್ತದೆ.


ಮೈಕ್ರೋಸಾಫ್ಟ್‌ ಶೇರ್‌ಪಾಯಿಂಟ್‌ ಪೋರ್ಟಲ್ ಸರ್ವರ್ 2003 ಮೈಕ್ರೋಸಾಫ್ಟ್‌ ಫ್ರಂಟ್‌ಪೇಜ್‌ಅನ್ನು ಬಳಸಿತ್ತು. ಫ್ರಂಟ್‌ಪೇಜ್‌ ಶೇರ್‌ಪಾಯಿಂಟ್‌ 2007 ಅಥವಾ MOSSನಲ್ಲಿ ಕೆಲಸ ಮಾಡಲು ಹೊಂದುವುದಿಲ್ಲ.


ಉದ್ದಿಮೆ ವಿಶ್ಲೇಷಕರ ಮೌಲ್ಯಮಾಪನಗಳು[ಬದಲಾಯಿಸಿ]

ಶೇರ್‌ಪಾಯಿಂಟ್‌ ಉತ್ಪನ್ನದ ಕುರಿತಂತೆ ಉದ್ದಿಮೆ ವಿಶ್ಲೇಷಕರ ಮೌಲ್ಯಮಾಪನ ಬೇರೆ ಬೇರೆ ರೀತಿಯಲ್ಲಿದೆ. 2008 ರ ಕೊನೆಯಲ್ಲಿ ಗಾರ್ಟ್‌ನರ್ ಗ್ರೂಪ್ ಸಂಸ್ಥೆಯು ತನ್ನ ಮ್ಯಾಜಿಕ್ ಕ್ವಾಡ್ರಂಟ್‌ಗಳಲ್ಲಿನ ಮೂರರಲ್ಲಿ (ಸರ್ಚ್, ಪೋರ್ಟಲ್ಸ್, ಮತ್ತು ಎಂಟರೆಪ್ರೈಸ್ ಕಂಟೆಂಟ್ ಮ್ಯಾನೇಜ್‌ಮೆಂಟ್‌ ಗಾಗಿ) ಶೇರ್‌ಪಾಯಿಂಟ್‌ ಅನ್ನು "ಲೀಡರ್ಸ್" ಕ್ವಾಡ್ರಂಟ್‌ ಆಗಿ ಸೇರಿಸಿತು.[೧೧]


ಇದಕ್ಕೆ ಪ್ರತಿಯಾಗಿ, ಸ್ವತಂತ್ರ ಮೌಲ್ಯಮಾಪನ ಸಂಸ್ಥೆ CMS ವಾಚ್ ಒಂದು ಗ್ರಾಹಕ ಸಂಶೋಧನೆಯನ್ನು ನೀಡಿತು.[೧೨] ಅದರ ಪ್ರಕಾರ: "ಗ್ರಾಹಕರು ಬಹಳ ಬೇಗ ತಮ್ಮ ನಿರಾಶೆಯನ್ನು ತೋಡಿಕೊಂಡರು: ಬಹುಸಂಖ್ಯೆಯ ಬೇರೆಬೇರೆ ತಂಡಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಶೇರ್‌ಪಾಯಿಂಟ್‌ನಿಂದ ದೊರೆತ ಕಳಪೆ ಗುಣಮಟ್ಟದ ಬೆಂಬಲ, ಮತ್ತು ಔಟ್‌ಲುಕ್‌ನೊಂದಿಗಿನ ಅದರ ತೊಡಕಿನ ಮತ್ತು ಅರೆಬರೆಯಾದ ಹೊಂದಾಣಿಕೆಯಿಂದಾಗಿ ತಡವಾದರೂ ರೆಡ್‌ಮಂಡ್ ವೆಬ್ 2.0ನ್ನೇ ನೆಚ್ಚಿಕೊಳ್ಳಬೇಕಾಯಿತು."[೧೩]


ಅಭಿವರ್ಧಕರ ಸಾಧನಗಳೊಂದಿಗೆ ಸಂಯೋಜನೆ[ಬದಲಾಯಿಸಿ]

ಶೇರ್‌ಪಾಯಿಂಟ್‌‌ನಲ್ಲಿ ಅಭಿವರ್ಧಕರಿಗೆ ಅಗತ್ಯವಾದ ಸಂಯೋಜಿತ ಸಾಧನಗಳು ಇಲ್ಲದಿರುವುದಕ್ಕಾಗಿ ಮತ್ತು ಇತರ ASP.NET-ಆಧಾರಿತ ವೆಬ್ ಅಪ್ಲಿಕೇಶನ್‌ಗಳಿಗೆ ಹೋಲಿಸಿದಾಗ ಗಮನಾರ್ಹವಾಗಿ ವ್ಯತ್ಯಾಸವಿದ್ದ ಅದರ ಸಂಕೀರ್ಣವಾದ ಗ್ರಾಹಕೀಯಗೊಳಿಸಿದ ತಂತ್ರಾಂಶ ರಚನೆಯನ್ನು ಆಗಾಗ ಟೀಕಿಸಲಾಗಿದೆ.[೧೪][೧೫][೧೬][೧೭] ಆದ್ದರಿಂದ, ಮೈಕ್ರೋಸಾಫ್ಟ್‌ ಸಂಸ್ಥೆಯು ಮೈಕ್ರೋಸಾಫ್ಟ್‌ ವಿಶುವಲ್ ಸ್ಟುಡಿಯೋದ ನಂತರದ ಆವೃತ್ತಿಯಲ್ಲಿ ಅಭಿವರ್ಧಕರ ಅನುಭವವನ್ನು ಸುಧಾರಿಸುವ ದೃಷ್ಟಿಯಿಂದ ಗಮನಾರ್ಹವಾಗಿ ಸುಧಾರಿಸಿದ ಬೆಂಬಲವನ್ನು ನೀಡುವುದಾಗಿ ಘೋಷಿಸಿತು.[೧೮]


ಇವನ್ನೂ ಗಮನಿಸಿ[ಬದಲಾಯಿಸಿ]


ಆಕರಗಳು[ಬದಲಾಯಿಸಿ]

 1. ೧.೦ ೧.೧ http://office.microsoft.com/en-us/sharepointtechnology/FX101758691033.aspx?ofcresset=1
 2. http://www.microsoft.com/downloads/details.aspx?FamilyID=baa3ad86-bfc1-4bd4-9812-d9e710d44f42&displaylang=en
 3. http://technet.microsoft.com/en-us/library/cc263526.aspx
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. ಮೈಕ್ರೋಸಾಫ್ಟ್‌ ಶೇರ್‌ಪಾಯಿಂಟ್‌ 2010 ಸೈಟ್ 2009 ಮೈಕ್ರೋಸಾಫ್ಟ್ ಕಾರ್ಪೋರೇಶನ್
 7. ಮೈಕ್ರೋಸಾಫ್ಟ್‌ ಶೇರ್‌ಪಾಯಿಂಟ್‌ 2010 ವೈಶಿಷ್ಟ್ಯ ಮುಖ್ಯಾಂಶಗಳು 2009 ಮೈಕ್ರೋಸಾಫ್ಟ್ ಕಾರ್ಪೋರೇಶನ್
 8. ಶೇರ್‌ಪಾಯಿಂಟ್‌ 2010 ನಿಂದ IT ವೃತ್ತಿಪರರಿಗೆ ಉಪಯೋಗಗಳು 2009 ಮೈಕ್ರೋಸಾಫ್ಟ್ ಕಾರ್ಪೋರೇಶನ್
 9. ಶೇರ್‌ಪಾಯಿಂಟ್‌ 2010 ನಿಂದ ಅಭಿವರ್ಧಕರಿಗೆ ಉಪಯೋಗಗಳು 2009 ಮೈಕ್ರೋಸಾಫ್ಟ್ ಕಾರ್ಪೋರೇಶನ್
 10. ಶೇರ್‌ಪಾಯಿಂಟ್‌ 2010 ನಿಂದ ಪಾಲುದಾರರಿಗೆ ಉಪಯೋಗಗಳು 2009 ಮೈಕ್ರೋಸಾಫ್ಟ್ ಕಾರ್ಪೋರೇಶನ್
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.


ಹೊರಗಿನ ಕೊಂಡಿಗಳು[ಬದಲಾಯಿಸಿ]

]


ಟೆಂಪ್ಲೇಟು:Microsoft Office