ಶೇಖ್ ಜಾಯೆದ್ ಮಸೀದಿಯ ವಿಶ್ವದಾಖಲೆಯ ರತ್ನಗಂಬಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಮಸೀದಿಯ ಪ್ರಧಾನ ಪ್ರಾರ್ಥನಾ ಕೊಠಡಿ'ಯಲ್ಲಿ ಸಜಾಯಿಸಲಾಗಿರುವ 'ರತ್ನಕಂಬಳಿ', ೫,೬೨೭ ಚ. ಮೀ.ವಿಸ್ತಾರವಾಗಿದ್ದು, 'ಪ್ರಪಂಚದಲ್ಲೇ ಅತ್ಯಂತ ವಿಸ್ತಾರದ ರತ್ನಕಂಬಳಿ'ಯೆಂದುಖ್ಯಾತಿಯ ದಾಖಲೆ ಹೊಂದಿದೆ. ಇರಾನ್ ನ ಖ್ಯಾತ ವಿನ್ಯಾಸಕಾರ, 'ಆಲ್ ಖಾಲಿಖಿ'ಯವರು ವಿನ್ಯಾಸಗೊಳಿಸಿದ್ದಾರೆ. ಇರಾನ್ ನ 'ಖೊರ್ಸಾನ್' ಯೆಂಬ ಗ್ರಾಮದ ಸುಮಾರು ೧,೨೦೦ ನುರಿತ 'ಕುಶಲ ಮಹಿಳಾ ನೇಕಾರ ಕಾರೀಗರ್' ಗಳು ಎರಡು ವರ್ಷಗಳ ಕಾಲ ರತ್ನಕಂಬಳಿಯ ವಿನ್ಯಾಸಗಳನ್ನು ಸಂರಚಿಸಿ, ನೇಯ್ದು, 'ಇಮಾರತ್ ನ ವಿಶಾಲ ಹಜಾರ' ಗಳಿಗೆ ಹೊಂದಿಸಿಕೊಟ್ಟಿದ್ದಾರೆ. ನಂತರ 'ಅಬುಧಾಬಿ'ಗೆ ರವಾನಿಸಿವ ಸವಾಲಿನ ಕೆಲಸವೆಂದರೆ, ಸುಮಾರು ೧, ಮೀ. ಅಗಲದ ಹಾಗೂ ೧೦೦ ಮೀ. ಉದ್ದದ ಬಿಡಿ-ಭಾಗಗಳಲ್ಲಿ ತರಲಾಯಿತು. ಸುಮಾರು ೩೦ ನುರಿತ ಕೆಲಸಗಾರರು ಜೊತೆಯಲ್ಲೇ ಬಂದು, ಬಿಡಿಭಾಗಗಳನ್ನು ಒಂದೊಂದಾಗಿ ತೆಗೆದು ಜೋಡಿಸಿ, ಸುಂದರವಾದ ಒಂದೇ ಕಂಬಳಿಯನ್ನಾಗಿ ರಚಿಸಿದರು. ಈ ಕೆಲಸ, ಅತಿ-ಸೂಕ್ಷವೂ ಕರಾರುವಾಕ್ಕಾಗಿಯೂ ಇತ್ತು. ಇಲ್ಲಿ ನಮೂದಿಸಿರುವ ಅತ್ಯಂತ ಸುಂದರವಾದ ರತ್ನಕಂಬಳಿಯಲ್ಲಿ, ೩೫ ಟನ್ ಉಣ್ಣೆ, ಹಾಗೂ ೧೨ ಟನ್ ಹತ್ತಿ ಇದೆ. ೪೭ ಟನ್ ತೂಕವಿರುವ ಕಂಬಳಿಯ ನೇಯ್ಗೆ ಕೆಲಸವಾದಮೇಲೆ ಹಾಕಿರುವ ಗಂಟುಗಳ ಸಂಖ್ಯೆ, ೨, ೨೬೮,೦೦೦ ೦೦೦. ರತ್ನಕಂಬಳಿಯ ಮೌಲ್ಯ, ೩೦ ಮಿಲಿಯನ್ 'ದಿರ್ಹಾಂ' (ಸುಮಾರು ೩೦ ಕೋಟಿ, ೬೦ ಲಕ್ಷದ, ೨೧ ಸಾವಿರ ರೂಪಾಯಿಗಳು)