ಶೀರ್ಷಿಕಾ ಕಾಸರವಳ್ಳಿ
'ಚಿತ್ರ ಲೇಖ' ಧಾರಾವಾಹಿಯ 'ಜಾನ್ಹವಿ'ಪಾತ್ರಧಾರಿಯಾಗಿರುವ, ಶೀರ್ಷಿಕಾರ ದೊಡ್ಡಪ್ಪ.'ಗಿರೀಶ್ ಕಾಸರವಳ್ಳಿ'ಯವರು. ಶೀರ್ಷಿಕಾ ಕಾಸರವಳ್ಳಿಯ, ದೊಡ್ಡಮ್ಮ 'ವೈಶಾಲಿ ಕಾಸರವಳ್ಳಿ'ಯವರು. ದೊಡ್ಡಪ್ಪ ಮತ್ತು ದೊಡ್ಡಮ್ಮನವರ ಸಹಾಯದಿಂದ ಶೀರ್ಷಿಕಾಗೆ, ನಟನೆ ಬಹಳ ಸುಲಭವೆನ್ನಿಸಿತು. 'ನಟನೆ ಅಂದರೆ ಏನು' ; 'ಕ್ಯಾಮರಾ ಹೇಗೆ ಎದುರಿಸಬೇಕು', 'ಲೈಟ್ ಗೆ ಹೇಗೆ ಮುಖ ಕೊಡಬೇಕು' ಇತ್ಯಾದಿ.
ಬಾಲ್ಯ,ಮತ್ತು ಪರಿವಾರ
[ಬದಲಾಯಿಸಿ]'ಶೀರ್ಷಿಕಾ ಕಾಸರವಳ್ಳಿ'ಯವರ ಹುಟ್ಟೂರು,'ಕಾಸರವಳ್ಳಿ'. ತಂದೆ ನಟೇಶ್ ಶಿವಮೊಗ್ಗದಲ್ಲಿ ಅಡಿಕೆ ಮಂಡಿ ಓನರ್ ಆಗಿದ್ದರು.ಶೀರ್ಷಿಕಾ, ಶಿವಮೊಗ್ಗದಲ್ಲಿ 'ಬಿ.ಕಾಂ'ವರೆಗೆ ಓದಿದರು. ಮುಂದೆ, ಬೆಂಗಳೂರಿಗೆ 'ಎಂ.ಬಿ.ಎ' ಮಾಡಲು ಬಂದರು. ಆಗಲೇ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಒದಗಿಬಂತು.
- ಮೊದಲ ಧಾರಾವಾಹಿ 'ಮುಂಬೆಳಕು,
- 'ಎಲ್ಲರಂತಲ್ಲಮ್ಮ ನಮ್ಮ ರಾಜಿ', ಎನ್ನುವ ಮತ್ತೊಂದು ಧಾರಾವಾಹಿಯಲ್ಲಿ 'ರಾಜಿ' ಪಾತ್ರ ಸಿಕ್ಕಿತು.
- 'ಸುಪ್ರಭಾತ',
- 'ಮಾಡು ಸಿಕ್ಕದಲ್ಲ',
- 'ಮುಂಜಾವು',
- 'ಚಿತ್ರಲೇಖ'ದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತು.
- 'ತರರಂಪಂ' ಹಾಸ್ಯ ಧಾರವಾಹಿಯಲ್ಲಿ ದೊರೆತ ಪಾತ್ರ ಚೆನ್ನಾಗಿತ್ತು.ಆದರೆ ೧೫೦ ಎಪಿಸೋಡ್ ಗೆ, ಅದು ನಿಂತುಹೋಯಿತು.
ಶೀರ್ಷಿಕಾರ ಅನಿಸಿಕೆಗಳು
[ಬದಲಾಯಿಸಿ]ಸೌಮ್ಯ ಸ್ವಭಾವದ ಪಾತ್ರಗಳನ್ನೇ ಮಾಡುತ್ತಾ ಬಂದಿರುವ'ಶೀರ್ಷಿಕಾ'ಗೆ ಹಾಸ್ಯ ಪಾತ್ರ ಸವಾಲಾಗಿ ಬಂತು.'ಜಯಂತ್' ವಿಶ್ವಾಸ ತುಂಬಿ, ಪಾತ್ರ ಮಾಡಿಸಿದರು. ಆದರೆ ಆ ಧಾರಾವಾಹಿ ಹೆಚ್ಹು ಸಮಯ ಓಡಲಿಲ್ಲ.'ಮೂಡಲ ಮನೆ',ಮತ್ತು,'ಮುತ್ತಿನ ತೋರಣ'ಧಾರಾವಾಹಿಗಳನ್ನು ವೈಶಾಲಿಯವರು ನಿರ್ದೇಶಿಸಿದ್ದರು. ಆಗ ಅಭಿನಯಿಸಲು ಚಿಕ್ಕವಳು. ಇನ್ನೂ ವಿದ್ಯಾರ್ಥಿನಿಯಾಗಿದ್ದಳು.ಅವಳಿಗೆ ನಟಿಯಾಗುವ ಕಲ್ಪನೆಯೂ ಇರಲಿಲ್ಲ. ನಟಿಯಾಗಲು ಆಶೆ ಪಟ್ಟು ಮುಂದುವರೆದು ಕೇಳಿದಾಗ, ವೈಶಾಲಿಯವರೇ ಖುದ್ದಾಗಿ ಹೇಳಿಕೊಟ್ಟರು.ನಟನೆ ಪ್ರತಿಯೊಬ್ಬರ ಮನದಾಳದಲ್ಲಿ ಸುಪ್ತವಾಗಿರೋ ಪ್ರತಿಭೆ. ಅದನ್ನು ಸರಿಯಾಗಿ ಅಭಿವ್ಯಕ್ತಿಸೋಕೆ ಬರಬೇಕು ಅಷ್ಟೇ. ನಟನೆ ಸುಲಭವಾದರೂ ನಿರಂತರವಾಗಿ ಕಲಿಕೆ ಅಗತ್ಯ. ಕ್ಯಾಮರಾ ಹೇಗೆ ಎದುರಿಸಬೇಕು, ಬೆಳಕು ಬಿಡುವ ಕಡೆ ಹೇಗೆ ನುಂತುಕೊಳ್ಳಬೇಕು, ಮುಂತಾದ ಒಂದು ಮಟ್ಟದ ನೈಪುಣ್ಯತೆಯನ್ನು ಗುರುತಿಸಿಕೊಳ್ಳಬೇಕು. ಭರತನಾಟ್ಯದಲ್ಲಿ ಸೀನಿಯರ್ ಮತ್ತು 'ಕರ್ನಾಟಕ ಸಂಗೀತ ಹಾಡುಗಾರಿಕೆ'ಯಲ್ಲಿ ತರಪೇತಿ ಆಗಿದೆ.