ಶಿವಪುರ ಮಹಾವಿಹಾರ ವಿವಿ
ಗೋಚರ
ನಳಂದಾ ವಿವಿಗಿಂತಲೂ ಪುರಾತನವಾದ ಇನ್ನೊಂದು ವಿವಿಯ ಅವಶೇಷಗಳು ಬಿಹಾರದ ತೆಹ್ಲಾಡಾದಲ್ಲಿ ಪತ್ತೆಯಾಗಿವೆ. ಅಲ್ಲಿ ದೊರೆತ ಶಾಸನ, ವಸ್ತುಗಳನ್ನು ಆಧರಿಸಿ ಅದನ್ನು ಶಿವಪುರ ಮಹಾವಿಹಾರ ವಿಶ್ವವಿದ್ಯಾಲಯದ ಅವಶೇಷ ಎಂದು ಗುರುತಿಸಲಾಗಿದೆ. ಇದೂ ಕೂಡ ನಳಂದಾ ಜಿಲ್ಲೆಯಲ್ಲಿದೆ. ಶಿವಪುರ ಮಹಾವಿಹಾರ ವಿವಿ ೧ನೆ ಶತಮಾನದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಮೊದಲನೆಯ ಶತಮಾನದಲ್ಲಿ ಭಾರತಕ್ಕ ಭೇಟಿ ನೀಡಿದ ಚೀನಿ ಯಾತ್ರಿಕನೊಬ್ಬನ ಗ್ರಂಥದಲ್ಲಿ ಉಲ್ಲೇಖಿಸಿದ ಅಂಶ ನಿಜವೆಂದು ಉತ್ಖತನದಲ್ಲಿ ದೃಢಪಟ್ಟಿದೆ. ವಿವಿ ಆವರಣದಲ್ಲಿ ಮೂರು ಮಂದಿರ, ಕೊಠಡಿಗಳು ಇದ್ದವು ಎಂಬುದೂ ತಿಳಿದುಬಂದಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಲ್ಲೇಖಗಳು
[ಬದಲಾಯಿಸಿ]- ↑ ವಿಜಯವಾಣಿ (http://epapervijayavani.in/Details.aspx?id=17396&boxid=14433937[ಶಾಶ್ವತವಾಗಿ ಮಡಿದ ಕೊಂಡಿ])