ವಿಷಯಕ್ಕೆ ಹೋಗು

ಎಂಜಿನಿಯರಿಂಗ್ ರೇಖಾಚಿತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಹನ ನಿಯಂತ್ರಣಾ ವ್ಯವಸ್ಥೆಯ ದೃಢೀಕರಣ ಪಟ್ಟಿಯ ತಾಂತ್ರಿಕ ರೇಖಾಚಿತ್ರಣ/ಡ್ರಾಯಿಂಗ್‌

ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್ ಎಂಬುದು‌, ತಾಂತ್ರಿಕ ರೇಖಾಚಿತ್ರಣ/ಡ್ರಾಯಿಂಗ್‌ ಶಿಕ್ಷಣಶಾಖೆಯಲ್ಲಿಯೇ ರಚನೆಯಾದ ತಾಂತ್ರಿಕ ರೇಖಾಚಿತ್ರಣ/ಡ್ರಾಯಿಂಗ್‌ನ ಒಂದು ವಿಧವಾಗಿದ್ದು, ವಸ್ತುಗಳನ್ನು ಶಿಲ್ಪಶಾಸ್ತ್ರೀಯವಾಗಿ ರಚಿಸಲು ಬೇಕಾದ ಅಗತ್ಯತೆಗಳನ್ನು ಸಂಪೂರ್ಣವಾಗಿ ಹಾಗೂ ಸ್ಪಷ್ಟವಾಗಿ ನೀಡಲು ಇದನ್ನು ಬಳಸಲಾಗುತ್ತದೆ.

ಸ್ಥೂಲ ಅವಲೋಕನ

[ಬದಲಾಯಿಸಿ]

ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ಗಳನ್ನು ರೂಪರೇಖೆ, ಪರಿಭಾಷೆ, ವ್ಯಾಖ್ಯಾನ, ಸ್ವರೂಪ (ಅಕ್ಷರಾಕೃತಿಗಳು ಹಾಗೂ ರೇಖಾ ಶೈಲಿಗಳಂತಹಾ), ಗಾತ್ರ, etc. ಗಳು ಪಾಲಿಸಬೇಕಾದಂತಹಾ ಮಾನಕೀಕೃತ ನೀತಿನಿಯಮಗಳಿಗನುಸಾರವಾಗಿ ಸಾಧಾರಣವಾಗಿ ರಚಿಸಲಾಗುತ್ತದೆ. GD&T ಎಂಬುದು ಅಂತಹಾ ಒಂದು ಮಾನಕೀಕೃತ ನೀತಿನಿಯಮಗಳ ವ್ಯವಸ್ಥೆ.

ಅಂತಹಾ ಒಂದು ರೇಖಾಚಿತ್ರಣ/ಡ್ರಾಯಿಂಗ್‌ನ ಉದ್ದೇಶವೆಂದರೆ ನಿಖರವಾಗಿ ಹಾಗೂ ನಿಸ್ಸಂದಿಗ್ಧವಾಗಿ ಉತ್ಪನ್ನ ಅಥವಾ ಘಟಕವೊಂದರ ಎಲ್ಲಾ ಜ್ಯಾಮಿತೀಯ ವೈಶಿಷ್ಟ್ಯಗಳನ್ನು ಸೆರೆಹಿಡಿಯುವುದು. ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ವೊಂದರ ಅಂತಿಮ ಗುರಿಯೇನಿರುತ್ತದೆಂದರೆ ತಯಾರಕರಿಗೆ ಆಯಾ ಘಟಕವನ್ನು ಉತ್ಪಾದಿಸಲು ಅನುಕೂಲವಾಗುವಂತಹಾ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡುವುದು.

ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ಗಳ/ನ್ನು ಸೀಸದಕಡ್ಡಿ/ಪೆನ್ಸಿಲ್‌‌ಗಳು, ಶಾಯಿ, ನೇರಅಂಚು ಸಾಧನಗಳು, T-ಸ್ಕ್ವೇರ್‌ಗಳು, ಫ್ರೆಂಚ್‌ ವಕ್ರಸಾಧನಗಳು, ತ್ರಿಕೋನಗಳು, ಅಳತೆ ಉರುಳೆಗಳು, ಅಳತೆಪಟ್ಟಿಗಳು ಹಾಗೂ ಅಳಿಸಿಗಗಳಂತಹಾ ಸಾಧನಗಳನ್ನು ಬಳಸಿ ಕೈಯಿಂದ ತಯಾರಿಸಲಾಗುತ್ತಿತ್ತು. ಈಗಿನ/ಪ್ರಸ್ತುತ ಕಾಲದಲ್ಲಿ ಅವುಗಳನ್ನೆಲ್ಲಾ ಸಾಧಾರಣವಾಗಿ ವಿದ್ಯುನ್ಮಾನರೀತಿಯಲ್ಲಿ ಗಣಕ-ಸಹಕೃತ ವಿನ್ಯಾಸ/ಕಂಪ್ಯೂಟರ್‌-ಏಡೆಡ್‌ ಡಿಸೈನ್‌ನಂತಹಾ (CAD) ಸಾಧನಗಳ ಸಹಾಯದಿಂದ ರಚಿಸಲಾಗುತ್ತದೆ.

ಬಹುಮಟ್ಟಿಗೆ ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ಗಳ ಪ್ರತಿಗಳನ್ನು ಹಿಂದೆ ರಾಸಾಯನಿಕ-ಪ್ರಕ್ರಿಯೆಗಳ ಮೂಲಕ ಮಾಡುತ್ತಿದ್ದುದರಿಂದ ಅವು ನೀಲಿಬಣ್ಣದ ಕಾಗದದ ಮೇಲೆ ಮೂಡುವ ಚಿತ್ರ ಅಥವಾ ಪರ್ಯಾಯವಾಗಿ ಬಿಳಿ ಕಾಗದದ ಮೇಲೆ ನೀಲಿ ರೇಖೆಗಳ ಚಿತ್ರವಾಗಿ ಮೂಡಿಬರುತ್ತಿದ್ದುದರಿಂದ ರೇಖಾಚಿತ್ರಣ/ಡ್ರಾಯಿಂಗ್‌ಗಳ/ನ್ನು ವಾಚ್ಯಾರ್ಥ ದೃಷ್ಟಿಕೋನದಲ್ಲಿ ಕಾಲಾಭಾಸವೆಂದೆನಿಸಿದರೂ ಈಗಲೂ ಅನೇಕವೇಳೆ "ನೀಲಿಮುದ್ರಣಗಳು/ಬ್ಲೂಪ್ರಿಂಟ್‌ಗಳು" ಅಥವಾ "ನೀಲಿರೇಖೆಗಳು", ಎಂದು ಕರೆಯಲಾಗುತ್ತದೆ, ಪ್ರಸ್ತುತ ಈ ಪ್ರಕ್ರಿಯೆಯ ಸ್ಥಳವನ್ನು ಬಿಳಿ ಕಾಗದದ ಮೇಲೆ ಕಪ್ಪು ಅಥವಾ ಬಹುವರ್ಣ ರೇಖೆಗಳನ್ನು ಮೂಡಿಸುವ ಮತ್ತಷ್ಟು ಆಧುನಿಕ ಪುನಮುದ್ರಣ/ರುತ್ಪಾದನಾ ಪ್ರಕ್ರಿಯೆಗಳು ಆಕ್ರಮಿಸಿವೆ. U.S.ನಲ್ಲಿ ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ನ ಯಾವುದೇ ಕಾಗದದ ಪ್ರತಿಯನ್ನು ಹೆರಿಸಲು ಬಳಸಲಾಗುವ ಪದ ಮತ್ತಷ್ಟು ಸಾರ್ವತ್ರಿಕ ಪಾರಿಭಾಷಿಕ ಪದ "ಮುದ್ರಣ/ಪ್ರಿಂಟ್‌ " ಎಂಬುದು.

ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ಗಳನ್ನು ರಚಿಸುವ ಪ್ರಕ್ರಿಯೆ ಹಾಗೂ, ಅದರ ಕುಶಲತೆಯನ್ನು ಅನೇಕ ವೇಳೆ ತಾಂತ್ರಿಕ ರೇಖಾಚಿತ್ರಣ/ಡ್ರಾಯಿಂಗ್‌ ಅಥವಾ ಸ್ಥೂಲನಕ್ಷೆ ತಯಾರಿಕೆ ಎಂದು ಹೆಸರಿಸಲಾಗುತ್ತದಲ್ಲದೇ ತಾಂತ್ರಿಕ/ಶಿಲ್ಪಶಾಸ್ತ್ರೀಯ ಶಾಖೆಯ ಭಾಗಗಳೆಂದು ಪರಿಗಣಿಸದಿದ್ದರೂ ಕೆಲವು ಶಾಖೆಗಳಿಗೆ ಕೂಡಾ ತಾಂತ್ರಿಕ ರೇಖಾಚಿತ್ರಣ/ಡ್ರಾಯಿಂಗ್‌ಗಳು ಅಗತ್ಯವಾಗಿರುತ್ತವೆ.

ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ಗಳು : ಸಾರ್ವತ್ರಿಕ ವೈಶಿಷ್ಟ್ಯಗಳು

[ಬದಲಾಯಿಸಿ]

ರೇಖಾಚಿತ್ರಣ/ಡ್ರಾಯಿಂಗ್‌ಗಳು ಕೆಳಕಂಡ ನಿರ್ಣಾಯಕ ಮಾಹಿತಿಗಳನ್ನು ತಿಳಿಯಪಡಿಸುತ್ತವೆ:

  • ಜ್ಯಾಮಿತಿ/ರೇಖಾಗಣಿತ – ವಸ್ತುವಿನ ಆಕೃತಿ; ನೋಟಗಳ ರೂಪದಲ್ಲಿ ಇದನ್ನು ಬಿಂಬಿಸಲಾಗುತ್ತದೆ; ಮುಂಭಾಗ, ಮೇಲ್ಭಾಗ, ಬದಿ, etcದಂತಹಾ ವಿವಿಧ ಕೋನಗಳಲ್ಲಿ ನೋಡಿದಾಗ ವಸ್ತು ಹೇಗೆ ಕಂಡುಬರುವುದೋ ಆ ರೀತಿಯಲ್ಲಿರುತ್ತದೆ.
  • ವಿಮಿತಿ/ಆಯಾಮ/ಪರಿಮಾಣಗಳು – ಒಪ್ಪಿತವಾದಂತಹಾ ಏಕಮಾನಗಳಲ್ಲಿ ವಸ್ತುವಿನ ಗಾತ್ರವನ್ನು ಪಡೆದುಕೊಳ್ಳಲಾಗುತ್ತದೆ.
  • ಅಂಗೀಕಾರಾರ್ಹ ವ್ಯತ್ಯಯಗಳು – ಪ್ರತಿ ಪರಿಮಾಣದಲ್ಲಿ ಅನುಮೋದಾರ್ಹ ವ್ಯತ್ಯಯಗಳು.
  • ದ್ರವ್ಯ/ಸಾಮಗ್ರಿ – ಯಾವುದರಿಂದ ವಸ್ತುವನ್ನು ತಯಾರಿಸಲಾಯಿತೋ ಆ ಮೂಲವಸ್ತು.
  • ಮುಕ್ತಾಯ – ಕಾರ್ಯಕಾರಿ ಅಥವಾ ಹೊರನೋಟಕ್ಕೆ ಸಂಬಂಧಿಸಿರಬಹುದಾದ ವಸ್ತುವಿನ ಮೇಲ್ಮೈ ಗುಣಮಟ್ಟವನ್ನು ಸೂಚಿಸುತ್ತದೆ. ಉದಾಹರಣೆಗೆ, ಸಮುದಾಯ-ಪ್ರಚಾರಿತ ಉತ್ಪನ್ನವು ಹೊರನೋಟದಲ್ಲಿ ಸಾಧಾರಣವಾಗಿ ಕೈಗಾರಿಕಾ ಯಂತ್ರಗಳೊಳಗಿನ ಘಟಕಗಳಿಗಿಂತ ಹೆಚ್ಚಿನ ಗುಣಮಟ್ಟದ ಅಗತ್ಯವನ್ನು ಹೊಂದಿರುತ್ತದೆ.

ರೇಖಾ ಶೈಲಿಗಳು ಹಾಗೂ ವಿಧಗಳು

[ಬದಲಾಯಿಸಿ]
ಮಾನಕ ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ ರೇಖಾ ವಿಧಗಳು

ವೈವಿಧ್ಯಮಯ ರೇಖಾ ಶೈಲಿಗಳು ಚಿತ್ರಾತ್ಮಕವಾಗಿ ಭೌತಿಕ ವಸ್ತುಗಳನ್ನು ಪ್ರತಿನಿಧಿಸುತ್ತವೆ. ರೇಖೆಗಳ ವಿಧಗಳಲ್ಲಿ ಕೆಳಕಂಡವು ಸೇರಿವೆ:

  • ವ್ಯಕ್ತ/ಪ್ರತ್ಯಕ್ಷ – ಇವುಗಳು ನಿರ್ದಿಷ್ಟ ಕೋನದಿಂದ ನೇರವಾಗಿ ಕಾಣಿಸುವಂತಹಾ ಅಂಚುಗಳನ್ನು ರೇಖಿಸಲು ಬಳಸುವ ಅಖಂಡ ರೇಖೆಗಳು.
  • ಅವ್ಯಕ್ತ/ಅಗೋಚರ – ಇವುಗಳು ನೇರವಾಗಿ ಕಾಣಿಸದ ಅಂಚುಗಳನ್ನು ಬಿಂಬಿಸಲು ಬಳಸುವ ಕಿರು-ಬಿಡಿ ರೇಖೆಗಳು.
  • ಕೇಂದ್ರ/ಮಧ್ಯ – ಇವುಗಳು ವೃತ್ತಾಕಾರದ ವಸ್ತುಗಳ ಅಕ್ಷಗಳನ್ನು ಪ್ರತಿನಿಧಿಸಲು ಬಳಸುವ ಅನುಕ್ರಮವಾದ ದೀರ್ಘ- ಹಾಗೂ ಕಿರು-ಬಿಡಿ ರೇಖೆಗಳಾಗಿರುತ್ತವೆ.
  • ಮಧ್ಯ ಸಮತಲ/ಕಟಿಂಗ್‌ ಪ್ಲೇನ್‌ – ಇವುಗಳು ತೆಳು, ಮಧ್ಯಮ ಗಾತ್ರದ-ಬಿಡಿ ರೇಖೆಗಳು ಅಥವಾ ದಪ್ಪ ಅನುಕ್ರಮವಾದ ದೀರ್ಘ- ಹಾಗೂ ದ್ವಿ ಕಿರು-ಬಿಡಿ ರೇಖೆಗಳಾಗಿದ್ದು ವಿಭಾಗ/ಪರಿಚ್ಛೇದ ನೋಟಗಳಲ್ಲಿ ವಿಭಾಗ/ಪರಿಚ್ಛೇದಗಳನ್ನು ಪ್ರತಿನಿಧಿಸಲು ಬಳಸಲಾಗುತ್ತವೆ.
  • ವಿಭಾಗ/ಪರಿಚ್ಛೇದ – ವಿಭಾಗ/ಪರಿಚ್ಛೇದ ನೋಟಗಳಲ್ಲಿ "ಕತ್ತರಿಸುವಿಕೆಯಿಂದ ಉಂಟಾಗಬಹುದಾದ" ಮೇಲ್ಮೈಗಳನ್ನು ಸೂಚಿಸಲು ಬಳಸಲಾಗುವ ಒಂದು ನಮೂನೆ/ಮಾದರಿಯಲ್ಲಿರುವ(ಮಾದರಿ/ನಮೂನೆಯು "ಕತ್ತರಿಸಲಾಗುವ" ಅಥವಾ "ವಿಭಾಗಿಸ/ಪರಿಚ್ಛೇದಿಸಲಾಗುವ" ವಸ್ತುವಿನ ಮೇಲೆ ಆಧಾರಿತವಾಗಿರುತ್ತದೆ) ತೆಳು ರೇಖೆಗಳು ವಿಭಾಗ/ಪರಿಚ್ಛೇದ ರೇಖೆಗಳನ್ನು ಸಾಮಾನ್ಯವಾಗಿ "ಕ್ರಾಸ್‌‌ ಹ್ಯಾಚಿಂಗ್‌" ಎಂದು ಕರೆಯಲಾಗುತ್ತದೆ.

ರೇಖೆಗಳನ್ನು ಪ್ರತಿ ರೇಖೆಗೆ ಒಂದು ಅಕ್ಷರವನ್ನು ನಿಗದಿಪಡಿಸುವ ಅಕ್ಷರ ವರ್ಗೀಕರಣದ ಮೂಲಕ ಕೂಡಾ ವರ್ಗೀಕರಿಸಬಹುದು.

  • A ವಿಧ ದ ರೇಖೆಗಳು ವಸ್ತುವೊಂದರ ವೈಶಿಷ್ಟ್ಯಗಳ ರೂಪರೇಖೆಯನ್ನು ತೋರಿಸುತ್ತವೆ. ಇವು ರೇಖಾಚಿತ್ರಣ/ಡ್ರಾಯಿಂಗ್‌ವೊಂದರಲ್ಲಿನ ಅತಿ ದಪ್ಪದ ರೇಖೆಗಳಾಗಿದ್ದು HBಗಿಂತ ತೆಳುವಾದ ಪೆನ್ಸಿಲ್‌/ಸೀಸದಕಡ್ಡಿಯಿಂದ ಇವನ್ನು ಎಳೆಯಲಾಗುತ್ತದೆ.
  • B ವಿಧ ದ ರೇಖೆಗಳು ವಿಮಿತಿ/ಆಯಾಮ/ಪರಿಮಾಣಗಳ ರೇಖೆಗಳಾಗಿದ್ದು ವಿಮಿತಿ/ಆಯಾಮ/ಪರಿಮಾಣಗಳ ನಮೂದನೆಗೆ, ಪ್ರಕ್ಷೇಪಣೆ ಮಾಡುವಿಕೆಗೆ, ವಿಸ್ತರಣೆಗಳಿಗೆ, ಅಥವಾ ಚುಕ್ಕೆಸಾಲುಗಳನ್ನು ಎಳೆಯಲು ಬಳಸಲಾಗುತ್ತದೆ. ೨Hನಂತಹಾ ಕಠಿಣ/ತೀಕ್ಷ್ಣ ಪೆನ್ಸಿಲ್‌/ಸೀಸದಕಡ್ಡಿಅನ್ನು ಇದಕ್ಕೆ ಬಳಸಬೇಕಾಗಿರುತ್ತದೆ.
  • C ವಿಧ ದ ರೇಖೆಗಳನ್ನು ಪೂರ್ತಿ ವಸ್ತುವನ್ನು ತೋರಿಸದ ಸಂದರ್ಭದಲ್ಲಿ ಭೇದ/ವಿಘಟನಗಳನ್ನು ತೋರಿಸುವುದಕ್ಕಾಗಿ ಬಳಸಲಾಗುತ್ತದೆ. ಅವನ್ನು ಮುಕ್ತ-ರೀತಿಯಲ್ಲಿ ರೇಖಿಸಲಾಗುತ್ತಲ್ಲದೇ ಕೇವಲ ಕಿರು ಭೇದಗಳನ್ನು ರಚಿಸಲಿಕ್ಕೆ ಮಾತ್ರ ಬಳಸಲಾಗುತ್ತದೆ. ೨H ಪೆನ್ಸಿಲ್‌/ಸೀಸದಕಡ್ಡಿ
  • D ವಿಧ ದ ರೇಖೆಗಳು ದೀರ್ಘ ಭೇದ/ವಿಘಟನಗಳನ್ನು ತೋರಿಸುವುದಕ್ಕಾಗಿ ಹಾಗೂ ಓರೆಕೋರೆಯಾಗಿ ಎಳೆಯಲಾಗುತ್ತದೆ ಎಂಬುದನ್ನು ಹೊರತುಪಡಿಸಿದರೆ C ವಿಧಕ್ಕೆ ಸದೃಶವಾಗಿವೆ. ೨H ಪೆನ್ಸಿಲ್‌/ಸೀಸದಕಡ್ಡಿ
  • E ವಿಧ ದ ರೇಖೆಗಳು ವಸ್ತುವಿನ ಆಂತರಿಕ ವೈಶಿಷ್ಟ್ಯಗಳ ಅವ್ಯಕ್ತ ಬಾಹ್ಯರೇಖೆಗಳನ್ನು ಸೂಚಿಸುತ್ತವೆ. ಇವು ಚುಕ್ಕೆಗಳ ರೇಖೆಗಳಾಗಿರುತ್ತವೆ. ೨H ಪೆನ್ಸಿಲ್‌/ಸೀಸದಕಡ್ಡಿ
  • F ವಿಧ ದ ರೇಖೆಗಳು ವಿದ್ಯುತ್‌ ತಂತ್ರಜ್ಞಾನದಲ್ಲಿ ರೇಖಾಚಿತ್ರಣ/ಡ್ರಾಯಿಂಗ್‌ಗಳನ್ನು ಮಾಡಲು ಬಳಸಲಾಗುತ್ತದೆ ಎಂಬುದನ್ನು ಹೊರತುಪಡಿಸಿದರೆ F[ಮುದ್ರಣದೋಷ ] ವಿಧದ ರೇಖೆಗಳಾಗಿವೆ. ೨H ಪೆನ್ಸಿಲ್‌/ಸೀಸದಕಡ್ಡಿ
  • G ವಿಧ ದ ರೇಖೆಗಳನ್ನು ಕೇಂದ್ರ/ಮಧ್ಯ ರೇಖೆಗಳನ್ನು ರೇಖಿಸಲು ಬಳಸಲಾಗುತ್ತದೆ. ಅವು ಚುಕ್ಕೆ ರೇಖೆಗಳಾಗಿದ್ದರೂ, ೧೦–೨೦ mm ಅಳತೆಯ ದೀರ್ಘ ರೇಖೆ, ಸ್ವಲ್ಪ ಅಂತರ, ನಂತರ ೨ mmನ ಸಣ್ಣ ರೇಖೆ ಈ ರೀತಿಯಲ್ಲಿರುತ್ತದೆ. ೨H ಪೆನ್ಸಿಲ್‌/ಸೀಸದಕಡ್ಡಿ
  • H ವಿಧ ದ ರೇಖೆಗಳು ಎರಡನೇ ದೀರ್ಘ ರೇಖೆಯು ದಪ್ಪವಾಗಿರುತ್ತದೆ ಎಂಬುದನ್ನು ಹೊರತುಪಡಿಸಿದರೆ G ವಿಧದ ರೇಖೆಗಳೇ ಆಗಿರುತ್ತವೆ. ಇವು ವಸ್ತುವಿನ ಕತ್ತರಿಸಲಾಗುವ ಸಮತಲಗಳನ್ನು ಸೂಚಿಸುತ್ತವೆ. ೨H ಪೆನ್ಸಿಲ್‌/ಸೀಸದಕಡ್ಡಿ
  • K ವಿಧ ದ ರೇಖೆಗಳು ವಸ್ತುವೊಂದರೆ ಪರ್ಯಾಯ ಸ್ಥಾನಗಳನ್ನು ಹಾಗೂ ಆ ವಸ್ತುವು ಪರಿಗಣಿಸುವ ರೇಖೆಯನ್ನು ಸೂಚಿಸಲು ಸೂಚಿಸುತ್ತವೆ. ಇವುಗಳನ್ನು ೧೦–೨೦ mm ಅಳತೆಯ ದೀರ್ಘ ರೇಖೆ, ಸ್ವಲ್ಪ ಅಂತರ, ನಂತರ ೨ mmನ ಸಣ್ಣ ರೇಖೆ ಮತ್ತೆ ಸ್ವಲ್ಪ ಅಂತರದ ನಂತರ ಮತ್ತೊಂದು ಕಿರು ರೇಖೆ ಈ ರೀತಿಯಲ್ಲಿ ಚಿತ್ರಿಸಲಾಗುತ್ತದೆ. ೨H ಪೆನ್ಸಿಲ್‌/ಸೀಸದಕಡ್ಡಿ.

ವಿವಿಧ ನೋಟಗಳು ಹಾಗೂ ಪ್ರಕ್ಷೇಪಿಸುವಿಕೆಗಳು

[ಬದಲಾಯಿಸಿ]
ಭಾಗವೊಂದನ್ನು ಪ್ರಥಮ ಕೋನ ಪ್ರಕ್ಷೇಪಣದಲ್ಲಿ ಮೂಡಿಸಿದ ಚಿತ್ರ
ಪ್ರಕ್ಷೇಪಣವೊಂದು ತೃತೀಯ ಕೋನ (ಬಲ) ಅಥವಾ ಪ್ರಥಮ ಕೋನ (ಎಡ) ಎಂದು ನಿಷ್ಕರ್ಷಿಸಲು ಬಳಸುವ ಸಂಕೇತಗಳು.
ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ನಲ್ಲಿ ತೋರಿಸಿದ ವಸ್ತುವೊಂದರ ಸಮಮಾಪನ ನೋಟ ಪುಟದಲ್ಲಿ ಮತ್ತಷ್ಟು ಕೆಳಗೆ ನೀಡಲಾಗಿದೆ.

ಬಹುತೇಕ ಪ್ರಕರಣ/ಸಂದರ್ಭಗಳಲ್ಲಿ, ಎಲ್ಲಾ ವೈಶಿಷ್ಟ್ಯಗಳನ್ನು ತೋರಿಸಲು ಒಂದೇ ನೋಟವು ಸಾಕಾಗಿರುವುದಿಲ್ಲವಾದ್ದರಿಂದ ಅನೇಕ ನೋಟಗಳನ್ನು ಬಳಸಲಾಗಿರುತ್ತವೆ. ನೋಟಗಳ ವಿಧಗಳಲ್ಲಿ ಕೆಳಕಂಡವು ಸೇರಿವೆ:

ಲಂಬರೇಖೀಯ ಪ್ರಕ್ಷೇಪಣಗಳು

[ಬದಲಾಯಿಸಿ]

ಲಂಬರೇಖೀಯ ಪ್ರಕ್ಷೇಪಣವು ಮುಂಭಾಗದಿಂದ, ಬಲದಿಂದ, ಎಡದಿಂದ, ಮೇಲಿನಿಂದ, ಕೆಳಗಿನಿಂದ, ಅಥವಾ ಹಿಂದಿನಿಂದ ಹೇಗೆ ಕಾಣಿಸುತ್ತದೋ ಹಾಗೆ ಆ ವಸ್ತುವನ್ನು ತೋರಿಸುತ್ತವೆ, ಹಾಗೂ ಅವುಗಳನ್ನು ಪ್ರಥಮ-ಕೋನ ಅಥವಾ ತೃತೀಯ-ಕೋನ ಪ್ರಕ್ಷೇಪಣಗಳೆರಡರಲ್ಲಿ ಒಂದರ ನಿಯಮಗಳಿಗನುಸಾರವಾಗಿ ಒಂದಕ್ಕೊಂದು ಸಾಪೇಕ್ಷವಾಗಿರುವಂತೆ ಸ್ಥಾನದಲ್ಲಿರಿಸಲಾಗುತ್ತದೆ.

  • ಪ್ರಥಮ ಕೋನ ಪ್ರಕ್ಷೇಪಣವು ISO ಮಾನಕವಾಗಿದ್ದು ಅದನ್ನು ಪ್ರಮುಖವಾಗಿ ಯೂರೋಪ್‌ನಲ್ಲಿ ಬಳಸಲಾಗುತ್ತದೆ. ನಿಮಗೆ ವಸ್ತುವೊಂದರ X-ರೇಯೊಂದು ಕಾಣುವ ರೀತಿಯಲ್ಲಿ ೩D ವಸ್ತುವನ್ನು ೨D "ಕಾಗದ/ಹಾಳೆಯ" ಅವಕಾಶದ ಮೇಲೆ ಪ್ರಕ್ಷೇಪಿಸಲಾಗಿರುತ್ತದೆ: ಮೇಲ್ನೋಟವು ಮುಂಭಾಗ ನೋಟದ ಕೆಳಗಿದ್ದು ಬಲನೋಟವು ಮುಂಭಾಗ ನೋಟದ ಎಡಬದಿಯಲ್ಲಿರುತ್ತದೆ.
  • ತೃತೀಯ ಕೋನ ಪ್ರಕ್ಷೇಪಣವನ್ನು ಪ್ರಮುಖವಾಗಿ BS ೮೮೮೮:೨೦೦೬ ವ್ಯವಸ್ಥೆಯ ಪ್ರಕಾರ ಅದೇ ರೂಢ ಪ್ರಕ್ಷೇಪಣಗಳ ವ್ಯವಸ್ಥೆಯಾಗಿರುವ ಯುನೈಟೆಡ್‌ ಸ್ಟೇಟ್ಸ್‌‌ ಹಾಗೂ ಕೆನಡಾಗಳಲ್ಲಿ ಬಳಕೆಯಲ್ಲಿದ್ದು, ಇದರಲ್ಲಿ ಎಡ ನೋಟವು ಎಡ ಬದಿಯಲ್ಲಿ ಹಾಗೂ ಮೇಲ್ನೋಟವು ಮೇಲ್ಭಾಗದಲ್ಲಿಯೇ ಇರುತ್ತದೆ.

ಎಲ್ಲಾ ನೋಟಗಳನ್ನೂ ಬಳಸುವುದರ ಅಗತ್ಯವೇನೂ ಇರುವುದಿಲ್ಲ, ಹಾಗೂ ಮುಂಭಾಗ, ಹಿಂಭಾಗ, ಮೇಲ್ಭಾಗ ಹಾಗೂ ಕೆಳಭಾಗಗಳ ಮೇಲ್ಮೈಯನ್ನು ಬಳಕೆಯಾಗುವ ಪ್ರಕ್ಷೇಪಣಗಳು ನಿರ್ಧರಿಸುತ್ತವೆ.

ಆನುಷಂಗಿಕ ಪ್ರಕ್ಷೇಪಣಗಳು

[ಬದಲಾಯಿಸಿ]

ಆನುಷಂಗಿಕ ನೋಟವೆಂಬುದು ಲಂಬರೇಖೀಯ ನೋಟವಾಗಿದ್ದು ಆರು ಪ್ರಮುಖ ನೋಟಗಳನ್ನು ಹೊರತುಪಡಿಸಿ ಯಾವುದೇ ಇತರೆ ಸಮತಲದ ಮೇಲೆ ಪ್ರಕ್ಷೇಪಿಸಲಾದ ನೋಟವಾಗಿರುತ್ತದೆ.[] ವಸ್ತುವು ಒಂದು ವಿಧವಾದ ಇಳಿಜಾರಾದ ಸಮತಲವನ್ನು ಹೊಂದಿದ್ದರೆ ಈ ನೋಟಗಳನ್ನು ವಾಡಿಕೆಯಾಗಿ ಬಳಸಲಾಗುತ್ತದೆ. ಆನುಷಂಗಿಕ ನೋಟವನ್ನು ಬಳಸುವುದರಿಂದ ಇಳಿಜಾರಾದ ಸಮತಲವನ್ನು (ಹಾಗೂ ಇನ್ನಿತರ ಯಾವುದೇ ಗಮನಾರ್ಹ ವೈಶಿಷ್ಟ್ಯಗಳು) ಅದರ ವಾಸ್ತವ ಗಾತ್ರ ಹಾಗೂ ಆಕಾರಕ್ಕೆ ಸರಿಯಾಗಿ ಪ್ರಕ್ಷೇಪಗೊಳಿಸಲು ಸಾಧ್ಯವಾಗುತ್ತದೆ. ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ದಲ್ಲಿನ ಯಾವುದೇ ವೈಶಿಷ್ಟ್ಯದ ವಾಸ್ತವ ಗಾತ್ರ ಹಾಗೂ ಆಕಾರವನ್ನು ತಿಳಿಯಲು ದೃಷ್ಟಿ ರೇಖೆಯು (LOS) ಉಲ್ಲೇಖಿಸಲ್ಪಟ್ಟ ಸಮತಲಕ್ಕೆ ಲಂಬರೇಖೀಯವಾಗಿರುವಾಗ ಮಾತ್ರ ಸಾಧ್ಯ.

ಸಮಮಾಪನ ಪ್ರಕ್ಷೇಪಣಗಳು

[ಬದಲಾಯಿಸಿ]

ಸಮಮಾಪನ ಪ್ರಕ್ಷೇಪಣಗಳು ವಸ್ತುವಿನ ಪ್ರತಿ ಅಕ್ಷವೂ ಚಿತ್ರದ ಸಮತಲಕ್ಕೆ ಸಮನಾದ ಕೋನಗಳಲ್ಲಿ ಇರುವಂತೆ ವಸ್ತುವನ್ನು ತೋರಿಸುತ್ತವೆ. ಸಮಮಾಪನ ಪ್ರಕ್ಷೇಪಣಗಳು ವಸ್ತುವನ್ನು ಲಂಬರೇಖೀಯ ಅಕ್ಷಕ್ಕೆ ± ೪೫° ಕೋನದಲ್ಲಿ ಪರಿಭ್ರಮಿತ/ಆವರ್ತನೆಗೊಳಿಸುವಿಕೆ, ನಂತರ ಲಂಬರೇಖೀಯ ಪ್ರಕ್ಷೇಪಣಗಳ ನೋಟದಿಂದ ಆರಂಭಿಸಿ ಸುಮಾರು ± ೩೫.೨೬೪° [= arcsin(tan(30°))]ನಷ್ಟು ಸಮತಲ ಅಕ್ಷದ ಸುತ್ತ ತಿರುಗಿಸುವಿಕೆಯನ್ನು ಒಳಗೊಂಡಿರುತ್ತದೆ. "ಸಮಮಾಪನ " ಎಂಬ ಪದವು "ಅದೇ ಅಳತೆ" ಎಂಬ ಅರ್ಥ ಬರುವ ಗ್ರೀಕ್‌ ಪದದಿಂದ ವ್ಯುತ್ಪನ್ನವಾಗಿದೆ. ಸಮಮಾಪನ ರೇಖಾಚಿತ್ರಣ/ಡ್ರಾಯಿಂಗ್‌ಗಳನ್ನು ಅಷ್ಟೊಂದು ಆಕರ್ಷಣೀಯಗೊಳಿಸುವ ಅನೇಕ ಅಂಶಗಳಲ್ಲಿ ಒಂದೆಂದರೆ ಕೇವಲ ಕೈವಾರ ಹಾಗೂ ನೇರಂಚು ಸಾಧನಗಳೆರಡರಿಂದಲೇ ೬೦ ಡಿಗ್ರಿಗಳ ಕೋನಗಳನ್ನು ರಚಿಸಬಹುದಾದ ಸುಲಭಸಾಧ್ಯತೆ.

ಸಮಮಾಪನ ಪ್ರಕ್ಷೇಪಣಗಳು ಒಂದು ವಿಧದ ಲಂಬರೇಖೀಯ ಸಮಾಂತರ ಪ್ರಕ್ಷೇಪಣಗಳಾಗಿರುತ್ತವೆ. ಲಂಬರೇಖೀಯ ಸಮಾಂತರ ಪ್ರಕ್ಷೇಪಣಗಳ ಇತರ ಎರಡು ವಿಧಗಳೆಂದರೆ:

ಓರೆಯಾದ/ತಿರ್ಯಕ್‌ ಪ್ರಕ್ಷೇಪಣಗಳು

[ಬದಲಾಯಿಸಿ]

ಓರೆಯಾದ/ತಿರ್ಯಕ್‌ ಪ್ರಕ್ಷೇಪಣವು, ತ್ರಯ/ತ್ರೈ-ವಿಮಿತಿ/ಆಯಾಮ/ಪರಿಮಾಣದ ವಸ್ತುಗಳ ದ್ವಿ-ವಿಮಿತಿ/ಆಯಾಮ/ಪರಿಮಾಣಗಳ ಚಿತ್ರಗಳನ್ನು ಮೂಡಿಸಲು ಬಳಸುವ ರೇಖಾಚಿತ್ರದ ಪ್ರಕ್ಷೇಪಣಗಳ ಒಂದು ಸರಳ ವಿಧವಾಗಿದೆ:

  • ಸಮಾಂತರಿಕ ರೇಖೆಗಳನ್ನು ಅಡ್ಡಹಾಯಿಸುವ ಮೂಲಕ ಚಿತ್ರವೊಂದನ್ನು ಪ್ರಕ್ಷೇಪಣಗೊಳಿಸುತ್ತದೆ (ಪ್ರೊಜೆಕ್ಟರ್‌ಗಳು)
  • ರೇಖಾಚಿತ್ರಣ/ಡ್ರಾಯಿಂಗ್‌ನ ಮೇಲ್ಮೈನೊಂದಿಗೆ (ಪ್ರಕ್ಷೇಪಣಗಳು ಪ್ಲಾನ್/ನಕ್ಷೆ‌) ತ್ರಯ/ತ್ರೈ-ವಿಮಿತಿ/ಆಯಾಮ/ಪರಿಮಾಣಗಳ ಮೂಲ ವಸ್ತುವಿನಿಂದ.

ಓರೆಯಾದ/ತಿರ್ಯಕ್‌ ಪ್ರಕ್ಷೇಪಣಗಳು ಹಾಗೂ ಲಂಬರೇಖೀಯ ಪ್ರಕ್ಷೇಪಣಗಳೆರಡರಲ್ಲೂ, ಮೂಲ ವಸ್ತುವಿನ ಸಮಾಂತರ ರೇಖೆಗಳು ಪ್ರಕ್ಷೇಪಣೆಗೊಂಡ ಚಿತ್ರಣದಲ್ಲಿ ಸಮಾಂತರ ರೇಖೆಗಳನ್ನು ಮೂಡಿಸುತ್ತದೆ.

ಅನುದೃಶ್ಯ/ಪರಿಪ್ರೇಕ್ಷೆ

[ಬದಲಾಯಿಸಿ]

ಅನುದೃಶ್ಯ/ಪರಿಪ್ರೇಕ್ಷೆ ಎಂಬುದು ಸಮತಲ ಮೇಲ್ಮೈಯೊಂದರ ಮೇಲೆ ವಸ್ತುವೊಂದನ್ನು ಕಣ್ಣು ಹೇಗೆ ಗ್ರಹಿಸಬಹುದೋ ಹಾಗೆ ಮೂಡಿಸುವ ಪ್ರಕ್ರಿಯೆ. ಅನುದೃಶ್ಯ/ಪರಿಪ್ರೇಕ್ಷೆಗಳ ಎರಡು ಪ್ರಮುಖ ವೈಶಿಷ್ಟ್ಯಮಯ ಲಕ್ಷಣಗಳೆಂದರೆ ವಸ್ತುಗಳನ್ನು ಕೆಳಕಂಡಂತೆ ಚಿತ್ರಿಸಲಾಗುತ್ತದೆ:

  • ನೋಡುಗನಿಂದ ದೂರ ಹೆಚ್ಚಾದ್ದಷ್ಟೂ ಸಣ್ಣದಾಗಿ ಕಾಣಿಸುವಂತೆ
  • ಅಗ್ರಭಾಗ ಸಣ್ಣದಿರುವ ಹಾಗೆ: ದೃಷ್ಟಿಕೋನಕ್ಕೆ ಸಮತಲದಲ್ಲಿರುವ ವಸ್ತುವಿನ ವಿಮಿತಿ/ಆಯಾಮ/ಪರಿಮಾಣಗಳ ಗಾತ್ರವು ಸಾಪೇಕ್ಷವಾಗಿ ದೃಷ್ಟಿಕೋನಕ್ಕೆ ಸಮತಲದಲ್ಲಿರುವ ವಿಮಿತಿ/ಆಯಾಮ/ಪರಿಮಾಣಗಳ ಸಂಧಿಸುವಿಕೆಗಿಂತ ಚಿಕ್ಕದಾಗಿರುತ್ತದೆ.

ಪ್ರಮಾಣ/ಅಳತೆ/ಗುರುತು

[ಬದಲಾಯಿಸಿ]

ನಕ್ಷೆಗಳು ಸಾಧಾರಣವಾಗಿ "ಪ್ರಮಾಣ/ಅಳತೆ/ಗುರುತು ರೇಖಾಚಿತ್ರಣ/ಡ್ರಾಯಿಂಗ್‌ ಗಳಾಗಿರುತ್ತವೆ", ಇದರರ್ಥವೇನೆಂದರೆ ಸ್ಥಳ ಅಥವಾ ವಸ್ತುವಿನ ವಾಸ್ತವ ಗಾತ್ರಕ್ಕೆ ನಿರ್ದಿಷ್ಟ ಅನುಪಾತಕ್ಕೆ ಸಾಪೇಕ್ಷವಾಗಿ ನಕ್ಷೆಗಳನ್ನು ರಚಿಸಲಾಗುತ್ತದೆ. ಅನೇಕ ಪ್ರಮಾಣ/ಅಳತೆ/ಗುರುತುಗಳನ್ನು ಒಂದು ಸಂಗ್ರಹದ/ಗುಂಪಿನ ಬೇರೆ ಬೇರೆ ರೇಖಾಚಿತ್ರಣ/ಡ್ರಾಯಿಂಗ್‌ಗಳಿಗೆಂದು ಬಳಸಬಹುದು. ಉದಾಹರಣೆಗೆ, ಅಂತಸ್ತು ನಕ್ಷೆಯೊಂದನ್ನು ೧:೫೦ರ (೧:೪೮ ಅಥವಾ ೧/೪"=೧'-೦") ಅನುಪಾತದಲ್ಲಿ ರಚಿಸಬಹುದಾಗಿದ್ದರೆ ವಿವರಣಾತ್ಮಕ ನೋಟವನ್ನು ೧:೨೫ರ (೧:೨೪ ಅಥವಾ ೧/೨"=೧'-೦") ಅನುಪಾತದಲ್ಲಿ ರಚಿಸಬಹುದಾಗಿದೆ. ನಿವೇಶನ ನಕ್ಷೆಗಳನ್ನು ಆಗ್ಗಾಗ್ಗೆ/ಅನೇಕವೇಳೆ ೧:೨೦೦ ಅಥವಾ ೧:೧೦೦ರ ಅನುಪಾತದಲ್ಲಿ ರಚಿಸಲಾಗುತ್ತದೆ.

ವಿಮಿತಿ/ಆಯಾಮ/ಪರಿಮಾಣಗಳನ್ನು ತೋರಿ/ಪ್ರದರ್ಶಿಸುವುದು

[ಬದಲಾಯಿಸಿ]

ವಿಮಿತಿ/ಆಯಾಮ/ಪರಿಮಾಣಗಳ ಬಳಕೆಯ ಮೂಲಕ ವೈಶಿಷ್ಟ್ಯಗಳ ಅಗತ್ಯ ಗಾತ್ರಗಳನ್ನು ತಿಳಿಸಬಹುದಾಗಿದೆ. ವಿಮಿತಿ/ಆಯಾಮ/ಪರಿಮಾಣಗಳ ಕೆಳಕಂಡ ಎರಡು ಮಾನಕೀಕೃತ ರೂಪಗಳಲ್ಲಿ ಯಾವುದಾದರೂ ಒಂದರ ಮೂಲಕ ದೂರಗಳನ್ನು ಸೂಚಿಸಬಹುದಾಗಿದೆ: ರೇಖೀಯ ಹಾಗೂ ಆರ್ಡಿನೇಟ್‌‌.

  • ರೇಖೀಯ ವಿಮಿತಿ/ಆಯಾಮ/ಪರಿಮಾಣಗಳಲ್ಲಿ, ಎರಡು ವೈಶಿಷ್ಟ್ಯಗಳ ನಡುವೆ ನಿರ್ದಿಷ್ಟ ಅಂತರದಲ್ಲಿರುವ "ವಿಸ್ತರಣಾ ರೇಖೆಗಳು," ಎಂದು ಕರೆಸಿಕೊಳ್ಳುವ ಎರಡು ಸಮಾಂತರ ರೇಖೆಗಳನ್ನು ಪ್ರತಿಯೊಂದು ವೈಶಿಷ್ಟ್ಯಗಳೊಂದಿಗೆ ತೋರಿಸಲಾಗುವುದು. ವಿಸ್ತರಣಾರೇಖೆಗಳಿಗೆ ಲಂಬವಾಗಿರುವ ರೇಖೆಯೊಂದನ್ನು, "ವಿಮಿತಿ/ಆಯಾಮ/ಪರಿಮಾಣಗಳ ರೇಖೆ," ಎಂದು ಕರೆಯಲ್ಪಡುವ ಬಾಣದಂಚಿನ ವಿಸ್ತರಣಾ ರೇಖೆಗಳ ನಡುವೆ ತೋರಿಸಲಾಗುವುದಲ್ಲದೇ ಅದನ್ನು ಅವುಗಳಲ್ಲೇ ಕೊನೆಗೊಳಿಸಲಾಗುತ್ತದೆ. ಅವುಗಳ ನಡುವಿನ ದೂರವನ್ನು ವಿಮಿತಿ/ಆಯಾಮ/ಪರಿಮಾಣಗಳ ರೇಖೆಯ ಮಧ್ಯಬಿಂದುವಿನಲ್ಲಿ, ಅದಕ್ಕೆ ನಿಕಟವಾಗಿ ಅಥವಾ ಅದಕ್ಕೆಂದೇ ನಿಗದಿಪಡಿಸಿದ ಅಂತರದಲ್ಲಿ ಅಂಕಿಗಳ ರೂಪದಲ್ಲಿ ನಮೂದಿಸಲಾಗುತ್ತದೆ.
  • ಆರ್ಡಿನೇಟ್‌‌ ವಿಮಿತಿ/ಆಯಾಮ/ಪರಿಮಾಣಗಳಲ್ಲಿ, ಒಂದು ಸಮತಲೀಯ ಹಾಗೂ ಒಂದು ಲಂಬ ವಿಸ್ತರಣಾ ರೇಖೆಗಳು ಇಡೀ ನೋಟದ ಮೂಲಬಿಂದುವೆನಿಸಿಕೊಳ್ಳುತ್ತವೆ. ಈ ವಿಸ್ತರಣಾ ರೇಖೆಗಳ ಕೊನೆಯಲ್ಲಿ ಸೂಚಿಸಿರುವ ಸೊನ್ನೆಗಳ ಮೂಲಕ ಮೂಲಬಿಂದುವನ್ನು ಗುರುತಿಸಲಾಗುತ್ತದೆ. x- ಹಾಗೂ y-ಅಕ್ಷಗಳುದ್ದಕ್ಕೂ ಇತರೆ ವೈಶಿಷ್ಟ್ಯಗಳ ನಡುವಿನ ದೂರಗಳನ್ನು ಇತರೆ ಅವುಗಳ ಕೊನೆಯಲ್ಲಿರುವ ಸಂಖ್ಯೆಗಳ ರೂಪದಲ್ಲಿ ವಿಸ್ತರಣಾ ರೇಖೆಗಳ ಮೂಲಕ ಸೂಚಿಸಲಾಗುತ್ತದೆ.

ವರ್ತುಲಾಕಾರದ ವೈಶಿಷ್ಟ್ಯಗಳ ಗಾತ್ರಗಳನ್ನು ವ್ಯಾಸೀಯ ಅಥವಾ ತ್ರಿಜ್ಯೀಯ ವಿಮಿತಿ/ಆಯಾಮ/ಪರಿಮಾಣಗಳ ಮುಖಾಂತರ ಸೂಚಿಸಲಾಗುತ್ತದೆ. ತ್ರಿಜ್ಯೀಯ ವಿಮಿತಿ/ಆಯಾಮ/ಪರಿಮಾಣಗಳು "R" ಅಕ್ಷರದ ನಂತರ ತ್ರಿಜ್ಯದ ಬೆಲೆ/ಸಂಖ್ಯೆಯನ್ನು ಬಳಸಿದರೆ ; ವ್ಯಾಸೀಯ ವಿಮಿತಿ/ಆಯಾಮ/ಪರಿಮಾಣಗಳು ವ್ಯಾಸ ಸಂಕೇತ ವೆಂದು ಕರೆಯಲಾಗುವ ಮುಂದೆ-ಬಾಗಿದ ಕರ್ಣೀಯ ರೇಖೆಯೊಂದು ಹಾದುಹೋಗುವ ವೃತ್ತ, ನಂತರ ವ್ಯಾಸದ ಬೆಲೆ/ಸಂಖ್ಯೆಯನ್ನು ನಮೂದಿಸಲು ಬಳಸುತ್ತವೆ. ವರ್ತುಲಾಕಾರದ ವೈಶಿಷ್ಟ್ಯಗಳೆಡೆಗೆ ನಿರ್ದೇಶಿಸುವ ಶರಾಗ್ರವನ್ನು ಹೊಂದಿರುವ ತ್ರಿಜ್ಯೀಯವಾಗಿ-ಸರಿಹೊಂದಿಸಿದ ಅಗ್ರಬಿಂದು ವೆಂಬ ರೇಖೆಯನ್ನು ವ್ಯಾಸೀಯ ಹಾಗೂ ತ್ರಿಜ್ಯೀಯ ವಿಮಿತಿ/ಆಯಾಮ/ಪರಿಮಾಣಗಳೆರಡರೊಂದಿಗೂ ಸಂಯೋಜಕವಾಗಿ ಬಳಸಲಾಗುತ್ತದೆ. ವಿಮಿತಿ/ಆಯಾಮ/ಪರಿಮಾಣಗಳ ಎಲ್ಲಾ ವಿಧಗಳು ಸಾಂಕೇತಿಕವಾಗಿ ಎರಡು ಭಾಗಗಳನ್ನು ಹೊಂದಿರುತ್ತವೆ: ವೈಶಿಷ್ಟ್ಯದ "ಆದರ್ಶ/ಉತ್ಕೃಷ್ಟ" ಗಾತ್ರವಾದ ನಾಮಮಾತ್ರದ ಬೆಲೆ/ಸಂಖ್ಯೆ, ಹಾಗೂ ನಾಮಮಾತ್ರದ ಬೆಲೆಗಿಂತ ಮೇಲೆ ಕೆಳಗೆ ಆಗಬಹುದಾದ ವ್ಯತ್ಯಯಗಳನ್ನು ಸೂಚಿಸುವ ಸಹನೀಯ ವ್ಯತ್ಯಯ ದ ಮೊತ್ತ/ಸಂಖ್ಯೆ.

  • ಜ್ಯಾಮಿತೀಯ ವಿಮಿತಿ/ಆಯಾಮ/ಪರಿಮಾಣಗೊಳ್ಳುವಿಕೆ ಹಾಗೂ ವ್ಯತ್ಯಯಿಕೆ ಎಂಬುದು ವಸ್ತುವೊಂದರ ಕಾರ್ಯಕಾರಿ ಜ್ಯಾಮಿತಿಯನ್ನು ಸೂಚಿಸಲು ಬಳಸುವ ಒಂದು ವಿಧಾನವಾಗಿರುತ್ತದೆ.

ರೇಖಾಚಿತ್ರಣ/ಡ್ರಾಯಿಂಗ್‌ಗಳ ಗಾತ್ರಗಳು

[ಬದಲಾಯಿಸಿ]

ರೇಖಾಚಿತ್ರಣ/ಡ್ರಾಯಿಂಗ್‌ಗಳ ಗಾತ್ರಗಳು ಕೆಳಕಂಡ ಪಟ್ಟಿಗಳಿಗೆ ಅನುಗುಣವಾಗಿ ಸಾಧಾರಣವಾಗಿ ಎರಡು ಪ್ರತ್ಯೇಕ ಮಾನಕಗಳಾದ, ISO (ವಿಶ್ವ ಮಾನಕ) ಅಥವಾ U.S. ಸಂಪ್ರದಾಯ/ವಾಡಿಕೆಗಳೆರಡರಲ್ಲಿ ಒಂದಕ್ಕೆ ಅನುಸಾರವಾಗಿರುತ್ತವೆ :

ISO paper sizes
ISO A ರೇಖಾಚಿತ್ರಣ ಡ್ರಾಯಿಂಗ್‌ ಗಾತ್ರಗಳು (mm)
A೪ ೨೧೦ X ೨೯೭
A೩ ೨೯೭ X ೪೨೦
A೨ ೪೨೦ X ೫೯೪
A೧ ೫೯೪ X ೮೪೧
A೦ ೮೪೧ X ೧೧೮೯
U.S. ಸಂಪ್ರದಾಯ/ವಾಡಿಕೆ ರೇಖಾಚಿತ್ರಣ (ANSI/ASME) ಡ್ರಾಯಿಂಗ್‌ ಗಾತ್ರಗಳು
A ೮.೫" X ೧೧"
B ೧೧" X ೧೭"
C ೧೭" X ೨೨"
D ೨೨" X ೩೪"
E ೩೪" X ೪೪"
ಇತರೆ U.S. ರೇಖಾಚಿತ್ರಣ ಡ್ರಾಯಿಂಗ್‌ ಗಾತ್ರಗಳು
D೧ ೨೪" X ೩೬"
E೧ ೩೦" X ೪೨"

ಮೆಟ್ರಿಕ್‌ ಮಾನಕದ ರೇಖಾಚಿತ್ರಣ/ಡ್ರಾಯಿಂಗ್‌ ಗಾತ್ರಗಳು ಅಂತರರಾಷ್ಟ್ರೀಯ ಕಾಗದ/ಹಾಳೆಗಳ ಗಾತ್ರಗಳಿಗೆ ಅನುಸಾರವಾಗಿರುತ್ತವೆ. ಛಾಯಾನಕಲು/ಪ್ರತಿ ತೆಗೆಯುವುದು ಅಗ್ಗವಾದಾಗ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಇವು ಮತ್ತಷ್ಟು ಸುಧಾರಣೆಗಳನ್ನು ಕಂಡವು. ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ಗಳನ್ನು ಇವುಗಳ ಮೂಲಕ ಸರಾಗವಾಗಿ/ತಡಮಾಡದೇ ಗಾತ್ರದಲ್ಲಿ ದ್ವಿಗುಣಗೊಳಿಸಿ (ಅಥವಾ ಅರ್ಧಗೊಳಿಸಿ) ಮುಂದಿನ ಹೆಚ್ಚಿನ (ಅಥವಾ ಅನುಕ್ರಮವಾಗಿ ಚಿಕ್ಕ) ಗಾತ್ರದ ಕಾಗದ/ಹಾಳೆಯ ಮೇಲೆ ಸ್ಥಳದ ಅಪವ್ಯಯವಿಲ್ಲದೇ ಮೂಡಿಸಬಹುದಾಗಿದೆ. ಅಷ್ಟೇ ಅಲ್ಲದೇ ಮೆಟ್ರಿಕ್‌ ಮಾನಕದ ತಾಂತ್ರಿಕ ಲೇಖನಿ/ಪೆನ್‌ಗಳನ್ನು ವಿವರವನ್ನು ಸೇರಿಸುವುದು ಅಥವಾ ಕರಡು ತಿದ್ದುವಿಕೆಗಳನ್ನು ಅಂದಾಜು ೨ರ ವರ್ಗಮೂಲದ ಅಪವರ್ತನಗಳ ವ್ಯತ್ಯಾಸಗಳನ್ನು ಮಾಡಬಹುದಾದ ಹರಹುಗಳುಳ್ಳ ಲೇಖನಿ ಗಾತ್ರಗಳ ಪ್ರಕಾರವಾಗಿ ಆಯ್ದುಕೊಳ್ಳಲಾಗುತ್ತದೆ. ೦.೧೩, ೦.೧೮, ೦.೨೫, ೦.೩೫, ೦.೫, ೦.೭, ೧.೦, ೧.೫, ಹಾಗೂ ೨.೦ mmಗಳ ಗಾತ್ರದ ಅಳತೆಗಳುಳ್ಳ ಲೇಖನಿಮೊನೆಗಳು ಸಂಪೂರ್ಣ ಗುಂಪು/ಸಂಗ್ರಹ ಎನಿಸಿಕೊಳ್ಳುತ್ತವೆ. ಆದಾಗ್ಯೂ, ಇಂಟರ್‌ನ್ಯಾಷನಲ್‌ ಆರ್ಗನೈಸೇಷನ್‌ ಫಾರ್‌ ಸ್ಟ್ಯಾಂಡರ್ಡೈಸೇಷನ್‌ (ISO) ಸಂಸ್ಥೆಯು ನಾಲ್ಕು ನಿರ್ದಿಷ್ಟ ಲೇಖನಿ/ಪೆನ್‌ ಹರಹುಗಳನ್ನು ನಿಗದಿಪಡಿಸಿ ಪ್ರತಿಯೊಂದಕ್ಕೂ ವರ್ಣಸಂಕೇತವನ್ನು ನಿಗದಿಪಡಿಸಿದೆ: ೦.೨೫ (ಬಿಳಿ/ಶ್ವೇತ), ೦.೩೫ (ಹಳದಿ), ೦.೫ (ಕಂದು), ೦.೭ (ನೀಲಿ); ಈ ಹರಹುಗಳುಳ್ಳ ಲೇಖನಿಮೊನೆಗಳು ಅನೇಕ ಅಕ್ಷರಗಾತ್ರಗಳು ಹಾಗೂ ISO ಕಾಗದ/ಹಾಳೆಗಳ ಗಾತ್ರಗಳಿಗೆ ಸಂಬಂಧಿಸಿದ ರೇಖೆಗಳನ್ನು ಮೂಡಿಸುತ್ತವೆ.

ಎಲ್ಲಾ ISO ಹಾಳೆಗಳ ಗಾತ್ರಗಳು ಒಂದರಿಂದ ೨ರ ವರ್ಗಮೂಲದವರೆಗಿನ ಸಮಾನ ದೃಶ್ಯಾನುಪಾತವನ್ನು ಹೊಂದಿರುತ್ತವೆ, ಇದರರ್ಥವೇನೆಂದರೆ ಯಾವುದೇ ನಿರ್ದಿಷ್ಟ ಗಾತ್ರದ ದಾಖಲೆಯನ್ನು ಇತರೆ ಯಾವುದೇ ಗಾತ್ರಕ್ಕೆ ಹಿಗ್ಗಿಸುವುದು ಅಥವಾ ಕುಗ್ಗಿಸುವುದನ್ನು ಮಾಡಬಹುದಲ್ಲದೇ ಅದು ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಗಾತ್ರಗಳ ಬದಲಾಯಿಸುವಿಕೆಯಲ್ಲಿನ ಈ ಸರಾಗತೆಯಿಂದಾಗಿ ಯಾವುದೇ ನಿರ್ದಿಷ್ಟ ದಾಖಲೆಯನ್ನು, ವಿವಿಧ ಗಾತ್ರಗಳ ಹಾಳೆಗಳ ಮೇಲೆ ಅದರಲ್ಲೂ ವಿಶೇಷವಾಗಿ ಸರಣಿಯೊಂದರೊಳಗೆಯೇ ನಕಲಿಸುವುದು ಅಥವಾ ಮುದ್ರಿಸುವುದು ಸರ್ವೇಸಾಧಾರಣವೆಂದೆನಿಸಿಕೊಂಡಿದೆ, e.g. A೩ ಹಾಳೆಯೊಂದರ ಮೇಲಿರುವ ರೇಖಾಚಿತ್ರಣ/ಡ್ರಾಯಿಂಗ್‌ ಒಂದನ್ನು A೨ಗೆ ಹಿಗ್ಗಿಸಬಹುದು ಅಥವಾ A೪ಗೆ ಕುಗ್ಗಿಸಬಹುದು.

U.S. ಸಂಪ್ರದಾಯದ/ವಾಡಿಕೆಯ "A-ಗಾತ್ರವು" "ಪತ್ರ/ಲೆಟರ್‌" ಗಾತ್ರಕ್ಕೆ ಸಮವಾಗಿದ್ದರೆ, "B-ಗಾತ್ರವು" "ಲೆಡ್ಜರ್‌" ಅಥವಾ "ಟ್ಯಾಬ್ಲಾಯ್ಡ್‌‌" ಗಾತ್ರಕ್ಕೆ ಸಮನಾಗಿರುತ್ತದೆ. ಒಂದು ಕಾಲದಲ್ಲಿ ಬ್ರಿಟಿಷ್‌ ಹಾಳೆಗಳ ಗಾತ್ರಗಳೂ ಇದ್ದು, ಅವುಗಳನ್ನು ಅಕ್ಷರಸಂಖ್ಯಾ ಅಂಕಿತಗಳ ಬದಲಿಗೆ ಹೆಸರುಗಳ ಮೂಲಕ ಅವುಗಳನ್ನು ಸೂಚಿಸಲಾಗುತ್ತಿತ್ತು.

ಅಮೇರಿಕನ್‌ ನ್ಯಾಷನಲ್‌ ಸ್ಟ್ಯಾಂಡರ್ಡ್ಸ್‌ ಇನ್ಸ್‌‌ಟಿಟ್ಯೂಟ್‌‌ನ (ANSI) Y೧೪.೨, Y೧೪.೩, ಹಾಗೂ Y೧೪.೫ ಮಾನಕಗಳು U.S.ನಲ್ಲಿ ಸರ್ವೇಸಾಧಾರಣವಾಗಿ ಬಳಸಲಾಗುವ ಮಾನಕಗಳಾಗಿವೆ.

ತಾಂತ್ರಿಕ ಅಕ್ಷರಾಂಕನ

[ಬದಲಾಯಿಸಿ]

ತಾಂತ್ರಿಕ ಅಕ್ಷರಾಂಕನವೆಂಬುದು ಅಕ್ಷರಗಳು, ಸಂಖ್ಯೆಗಳು ಹಾಗೂ ಇತರೆ ಚಿಹ್ನೆಗಳನ್ನು ತಾಂತ್ರಿಕ ರೇಖಾಚಿತ್ರಣ/ಡ್ರಾಯಿಂಗ್‌ವೊಂದರಲ್ಲಿ ಮೂಡಿಸುವ ಪ್ರಕ್ರಿಯೆಯಾಗಿದೆ. ಇದನ್ನು ವಸ್ತುವೊಂದನ್ನು ವಿವರಿಸಲು ಅಥವಾ ವಿವರಣಾತ್ಮಕ ವೈಶಿಷ್ಟ್ಯಮಾನಕಗಳನ್ನು ಸೂಚಿಸಲು ಬಳಸಲಾಗುತ್ತದೆ. ಸ್ಫುಟತೆ ಹಾಗೂ ಏಕರೂಪತೆಗಳ ಗುರಿಗಳೊಂದಿಗೆ ಶೈಲಿಗಳನ್ನು ಮಾನಕೀಕರಿಸಲಾಗಿದೆಯಲ್ಲದೇ ಅಕ್ಷರಾಂಕನ ಸಾಮರ್ಥ್ಯವು ಸಾಧಾರಣ ಬರೆಯುವಿಕೆಗೆ ಹೆಚ್ಚು ಸಂಬಂಧಿಸಿಲ್ಲ. ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ಗಳು ಕಿರು ರೇಖೆ/ಗೀಟುಗಳ ಸರಣಿಯೊಂದರ ಮೂಲಕ ಮೂಡಿಸಿದ ಗೋಥಿಕ್‌ ಸ್ಯಾನ್ಸ್‌-ಸೆ/ಶೆರಿಫ್‌ ಲಿಪಿಯನ್ನು ಬಳಸುತ್ತವೆ. ಯಾಂತ್ರೀಕೃತವಾಗಿ ತಯಾರಾಗುವ/ಯಂತ್ರಗಳ ಬಹುತೇಕ ರೇಖಾಚಿತ್ರಣ/ಡ್ರಾಯಿಂಗ್‌ಗಳಲ್ಲಿ ಲಘು/ಸಣ್ಣ ಅಕ್ಷರಗಳ ಬಳಕೆ ಅಪರೂಪವಾಗಿರುತ್ತದೆ.

ಎಂಜಿನಿಯರಿಂಗ್‌ ಡ್ರಾಯಿಂಗ್‌ವೊಂದರ ಉದಾಹರಣೆ

[ಬದಲಾಯಿಸಿ]
ಮಾದರಿ ಯಾಂತ್ರಿಕ ರೇಖಾಚಿತ್ರಣ/ಡ್ರಾಯಿಂಗ್‌

ಶಿಲ್ಪಶಾಸ್ತ್ರೀಯ/ತಾಂತ್ರಿಕ/ಎಂಜಿನಿಯರಿಂಗ್‌ ರೇಖಾಚಿತ್ರಣ/ಡ್ರಾಯಿಂಗ್‌ವೊಂದರ ಉದಾಹರಣೆ ಇಲ್ಲಿದೆ (ಅದೇ ವಸ್ತುವಿನ ಸಮಮಾಪನ ನೋಟವನ್ನು ಮೇಲೆ ತೋರಿಸಲಾಗಿದೆ). ಬೇರೆ ಬೇರೆ ರೇಖಾ ವಿಧಗಳನ್ನು ಸ್ಪಷ್ಠತೆಗೋಸ್ಕರ ವರ್ಣಗಳಿಂದ ಗುರುತಿಸಲಾಗಿದೆ.

  • ಕಪ್ಪು = ವಸ್ತುವಿನ ರೇಖೆ ಹಾಗೂ ಹ್ಯಾಚಿಂಗ್‌
  • ಕೆಂಪು = ಅವ್ಯಕ್ತ/ಅಗೋಚರ ರೇಖೆ
  • ನೀಲಿ = ಭಾಗ ಅಥವಾ ದ್ವಾರವೊಂದರ ಕೇಂದ್ರ ರೇಖೆ
  • ಕೆನ್ನೇರಳೆ/ಕೆನ್ನೀಲಿ/ಮೆಜೆಂಟಾ = ಬಿಂಬ ರೇಖೆ ಅಥವಾ ಕೊಯ್ತದ ಸಮತಲ ರೇಖೆ

ಮೇಲಿನ ಉದಾಹರಣೆಯಲ್ಲಿ ತೋರಿಸಿದ ಹಾಗೆ ವಿಭಾಗೀಯ/ಪರಿಚ್ಛೇದೀಯ ನೋಟಗಳನ್ನು ಬಾಣಗಳ ದಿಕ್ಕಿನ ಮೂಲಕ ಸೂಚಿಸಲಾಗುತ್ತದೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ಬರ್ಟೋಲೀನ್‌, ಗೇರಿ R. ಇಂಟ್ರೊಡಕ್ಷನ್‌ ಟು ಗ್ರಾಫಿಕ್ಸ್‌ ಕಮ್ಯುನಿಕೇಷನ್ಸ್‌ ಫಾರ್‌ ಎಂಜಿನಿಯರ್ಸ್‌ (೪th Ed.). ನ್ಯೂ ಯಾರ್ಕ್, NY. ೨೦೦೯


ಹೆಚ್ಚಿನ ಮಾಹಿತಿಗಾಗಿ

[ಬದಲಾಯಿಸಿ]
  • ಬಸಂತ್‌‌ ಅಗ್ರವಾಲ್‌/ಅಗರ್ವಾಲ್‌ ಹಾಗೂ C M ಅಗ್ರವಾಲ್‌/ಅಗರ್ವಾಲ್‌ (೨೦೦೮). ಎಂಜಿನಿಯರಿಂಗ್‌ ಡ್ರಾಯಿಂಗ್ . ಟಾಟಾ McGraw ಹಿಲ್‌‌, ನವದೆಹಲಿ. [೧]
  • ಪೈಗೆ ಡೇವಿಸ್‌‌, ಕರೇನ್‌ ರೆನೀ ಜುನೈಯು(೨೦೦೦). ಎಂಜಿನಿಯರಿಂಗ್‌ ಡ್ರಾಯಿಂಗ್
  • ಡೇವಿಡ್‌‌ A. ಮ್ಯಾಡ್‌ಸನ್‌‌, ಕರೇನ್‌‌ ಷೆರ್ಟ್ಜ್‌‌‌‌, (೨೦೦೧) ಎಂಜಿನಿಯರಿಂಗ್‌ ಡ್ರಾಯಿಂಗ್ & ಡಿಸೈನ್‌ . ಡೆಲ್ಮರ್‌‌ ಥಾಮ್ಸನ್‌ ಲರ್ನಿಂಗ್‌. [೨]
  • ಸೆಸಿಲ್‌‌ ಹೋವರ್ಡ್‌ ಜೆನ್‌ಸೆನ್‌, ಜೇ D. ಹೆಲ್ಸೆಲ್‌‌, ಡೊನಾಲ್ಡ್‌‌ D. ವಾಯ್ಸಿನೆಟ್‌‌ ಕಂಪ್ಯೂಟರ್‌‌-ಏಡೆಡ್‌ ಎಂಜಿನಿಯರಿಂಗ್‌ ಡ್ರಾಯಿಂಗ್‌ ಯೂಸಿಂಗ್‌ AutoCAD .
  • ವಾರ್ರೆನ್‌ ಜಾಕೊಬ್‌ ಲುಝಾಡ್ಡರ್‌‌ (೧೯೫೯). ಫಂಡಮೆಂಟಲ್ಸ್‌‌ ಆಫ್‌‌ ಎಂಜಿನಿಯರಿಂಗ್‌ ಡ್ರಾಯಿಂಗ್‌ ಫಾರ್‌‌ ಟೆಕ್ನಿಕಲ್‌ ಸ್ಟೂಡೆಂಟ್ಸ್‌ ಅಂಡ್‌ ಪ್ರೊಫೆಷನಲ್‌ .
  • M.A. ಪಾರ್ಕರ್‌‌, F. ಪಿಕಪ್‌‌ (೧೯೯೦) ಎಂಜಿನಿಯರಿಂಗ್‌ ಡ್ರಾಯಿಂಗ್‌ ವಿತ್‌‌ ವರ್ಕ್‌ಡ್‌‌ ಎಕ್ಸಾಂಪಲ್ಸ್‌‌‎ .
  • ಕಾಲಿನ್‌ H. ಸಿಮ್ಮನ್ಸ್‌‌, ಡೆನ್ನಿಸ್‌‌ E. ಮಗುಯಿರೆ ಮ್ಯಾನ್ಯುಯಲ್‌ ಆಫ್‌ ಎಂಜಿನಿಯರಿಂಗ್‌ ಡ್ರಾಯಿಂಗ್ . ಎಲ್ಸ್‌‌ವೇಯ್ರ್.
  • ಸೆಸಿಲ್‌‌ ಹೋವರ್ಡ್‌ ಜೆನ್‌ಸೆನ್ (೨೦೦೧). ಇಂಟರ್‌‌ಪ್ರಿಟಿಂಗ್‌‌ ಎಂಜಿನಿಯರಿಂಗ್‌ ಡ್ರಾಯಿಂಗ್ಸ್‌‌‎‎ .

ಬಾಹ್ಯ ಕೊಂಡಿಗಳು

[ಬದಲಾಯಿಸಿ]