ವಿಷಯಕ್ಕೆ ಹೋಗು

ಶಿರ್ವೆ ಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿರ್ವೆ ಬೆಟ್ಟಕಾರವಾರ ಕಡಲ ತಡಿಯಲ್ಲಿ ಹಬ್ಬಿರುವ ಬೆಟ್ಟಗಳ ಸಾಲು. ಕವಿ ರವೀಂದ್ರನಾಥ ಟಾಗೋರರು ಈ ಕಡಲತಡಿಯ ಸೌಂದರ್ಯವನ್ನು ತಮ್ಮ ಕವಿತೆಯೊಂದರಲ್ಲಿ ಹಾಡಿ ಹೊಗಳಿದ್ದರು. ಸುಂದರ ಕಡಲು ತೀರಗಳು, ದ್ವೀಪಗಳು, ಸುತ್ತ ಹಚ್ಚಹಸರಿನ ವನರಾಶಿ ಹೊಂದಿದ ಕಾರವಾರವನ್ನು 'ಕನ್ನಡನಾಡಿನ ಕಾಶ್ಮೀರ' ಎಂದೂ ಬಣ್ಣಿಸುತ್ತಾರೆ. ಸದಾಶಿವಗಢ ಕೋಟೆ, ಸೀಬರ್ಡ ನೌಕಾನೆಲೆ, ಜಲಸಾಹಸ ಕೇಂದ್ರ, ದುರ್ಗಾ ದೇಗುಲಗಳು ಇಲ್ಲಿನ ಪ್ರವಾಸಿ ತಾಣಗಳು. ಕಾರವಾರ ಹತ್ತಿರದ ಶಿರ್ವೆ ಗ್ರಾಮದ ಎದುರಿಗೆ ಶಿರ್ವೆ ಹೆಸರಿನ ಪರ್ವತ ಶ್ರೇಣ್ಣಿ ಇದೆ. ಈ ಶ್ರೇಣಿಯ ನಡುವೆ, ನೆಲಮಟ್ಟದಿಂದ ೩,೫೦೦ ರಿಂದ ೪,೦೦೦ ಅಡಗಳಷ್ಟು ಎತ್ತರದ ಬೃಹತ್ ಶಿಲಾಬಂಡೆಯೊಂದು ಎದ್ದು ನಿಂತಿದೆ. ಶಿರ್ವೆ ಪರ್ವತಶ್ರೇಣಿ ಇರುವುದು ಕಾರವಾರ ಪಟ್ಟಣದಿಂದ ೩೫ ಕಿ. ಮೀ. ದೂರದಲ್ಲಿ. ಮಲ್ಲಾಪುರ ಮರ್ಗವಾಗಿ ಹೋಗುವ ರಸ್ತೆಯಲ್ಲಿ ದೇವಳಮಕ್ಕಿ ಎಂಬ ಪುಟ್ಟ ಊರು ದಾಟುತ್ತಿದ್ದಂತೆಯೇ ಬಲಗಡೆ ಕಚ್ಚಾರಸ್ತೆ ಕಾಣಿಸುತ್ತದೆ. ಆ ದಾರಿಯಲ್ಲಿ ನಡದರೆ ೪-೫ ಕಿ.ಮೀ. ದೂರದಲ್ಲಿ ಶಿರ್ವೆ ಗ್ರಾಮವಿದೆ. ಶಿರ್ವೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ರಸ್ತೆಯಿಂದ ಮೂರು-ನಾಲ್ಕು ಕಿ.ಮೀ. ಮುನ್ನಡೆದು ಎಡಭಾಗದ ಅರಣ್ಯ ತಿರುವನಲ್ಲಿ ಹೊರಳಿದರೆ ಶಿರ್ವೆ ಬೆಟ್ಟದ ಚಾರಣದ ಆರಂಭ. ತಿರುವಿನ ಎದುರಿನಲ್ಲಿ ಹೊಲಗದ್ದೆಗಳ ಸಾಲು ಸಾಲು. ಹೂಬಳ್ಳಿಗಳ ರಾಶಿ ಕಣ್ಣಿಗೆ ಹಬ್ಬ. ಮುಂದೆ ಎರಡು ಕ್.ಮೀ. ವರೆಗೆ ಸಮತಟ್ಟಾದ ಕಚ್ಚಾರಸ್ತೆ ಕಚ್ಚಮಾರ್ಗ ದಾಟಿದ ಬಳಿಕ ಮಾತ್ರ ಎತ್ತರೆತ್ತದ ದಾರಿ. ಒಂದೂವರೆ ತಾಸಿನ ಕಾಲ್ನಡಿಗೆಯ ನಂತರ ಶಿರ್ವೆ ಬೆಟ್ಟ ಒಂದು ಬಯಲಿನ ಭಾಗದಿಂದ ಸ್ಪಷ್ಟವಾಗಿ ಗೋಚರಿಸೌತ್ತದೆ. ಆದರೆ ಸಾಗಬೇಕಾಗಿರುವ ಅಂತರವಿನ್ನೂ ದೂರ. ಬಯಲು ದಾರಿಯ ದಂಡೆಗುಂಟ ಮುಂದಕ್ಕೆ ಅರ್ಧ ತಾಸು ಕ್ರಮಿಸಿದರೆ ಹುಲ್ಲುಗಾವಲು ಸಿಗುತ್ತದೆ.