ಶಿಖಾ ಪಾಂಡೆ

ವಿಕಿಪೀಡಿಯ ಇಂದ
Jump to navigation Jump to search
ಶಿಖಾ ಪಾಂಡೆ

ಶಿಖಾ ಪಾಂಡೆ ಮೇ ೧೨, ೧೯೮೯ ರಲ್ಲಿ ಜನಿಸಿದರು.[೧] ಇವರು ಭಾರತೀಯ ಕ್ರಿಕೆಟ್ ಆಟಗಾರ್ತಿ. ಬಾಂಗ್ಲಾದೇಶದ ಕಾಕ್ಸ್ನ್ ಬಜಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ಮಾರ್ಚ್ ೯ ರಂದು ತಮ್ಮ ಅಂತರಾಷ್ಟ್ರೀಯ ಟ್ವೆಂಟಿ ೨೦ (ಟಿ೨೦) ಪ್ರಥಮ ಪ್ರದರ್ಶನವನ್ನು ಮಾಡಿದರು.ಹಾಗೂ ಅದೇ ವರ್ಷದ ಆಗಸ್ಟ್ ನಲ್ಲಿ ವರ್ಮ್ಸ್ಲೆ ಮತ್ತು ಸ್ಕಾರ್ಬರೊದಲ್ಲಿ ಕ್ರಮವಾಗಿ ಇಂಗ್ಲೆಂಡ್ ವಿರುದ್ಧ ಆಡುವುದರೊಂದಿಗೆ ಆಕೆಯು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆತ್ ಚೊಚ್ಚಲ ಪಂದ್ಯಗಳನ್ನು ಆಡಿದರು. ೫ ಜುಲೈ ೨೦೧೭ ರ ವೇಳೆಗೆ ಅವರು ಎರಡು ಟೆಸ್ಟ್ ಗಳು, ಇಪ್ಪತ್ತ ಏಳು ಏಕದಿನ ಪಂದ್ಯಗಳು ಮತ್ತು ಇಪ್ಪತ್ತೆರಡು ಟಿ೨೦ ಪಂದ್ಯಗಳನ್ನು ಭಾರತಕ್ಕಾಗಿ ಆಡಿದ್ದಾರೆ. ಇವರು ಬಲಗೈ ಬ್ಯಾಟಿಂಗ್ ಮತ್ತು ಬಲಗೈ ಮಧ್ಯಮ ಪಾತ್ರ ಬೌಲಿಂಗ್ ಹಾಗೂ ಆಲ್ ರೌಂಡರ್ ಆಗಿದ್ದಾರೆ.[೨]

ಜೀವನ[ಬದಲಾಯಿಸಿ]

ಪಾಂಡೆಯವರು ತನ್ನ ಶಾಲಾ-ಶಿಕ್ಷಣವನ್ನು ಭಾರತದ ಮಾಧ್ಯಮಿಕ ಶಿಕ್ಷಣ ಕೇಂದ್ರ ಮಂಡಳಿಯಡಿಯಲ್ಲಿ ಮಾಡಿದರು. ಅವರು ಗೋವಾ ಕಾಲೇಜಿನಲ್ಲಿ ಇಂಜಿನಿಯರಿಂಗ್‌ನಿಂದ ವಿದ್ಯುನ್ಮಾನ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ೨೦೧೧ರಲ್ಲಿ ಅವರು ಭಾರತೀಯ ವಾಯುಪಡೆಗೆ ಸೇರಿದರು ಮತ್ತು ವಾಯು ಸಂಚಾರ ನಿಯಂತ್ರಕರಾದರು[೩].

ಸಾಧನೆಗಳು[ಬದಲಾಯಿಸಿ]

ಐಸಿಸಿ ಮಹಿಳಾ ವಿಶ್ವಕಪ್ ೨೦೧೭ರ ರನ್ನರ್ ಆಫ್ ಆಗಿ ಕೊನೆಗೊಂಡ ಭಾರತ ಮಹಿಳಾ ಕ್ರಿಕೆಟ್ ತಂಡದ ಸದ್ಯಸ ಶಿಖಾ ಪಾಂಡೆ ಅವರಿಗೆ ಭಾರತೀಯ ವಾಯುಪಡೆಯಿಂದ ಸನ್ಮಾನಿಸಿದರು. ನವದೆಹಲಿಯ ವಾಯುಪಡೆ ಪ್ರಧಾನ ಕಾರ್ಯಾಲಯನ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೊವಾದಿಂದ ಕ್ರಿಕೆಟರ್ ಚೆಕ್ ಮತ್ತು ಪದಕ ಪಡೆದಿದ್ದಾರೆ. ಐಸಿಸಿ ಮಾಹಿಳಾ ವಿಶ್ವಕಪ್ ೨೦೧೭ರ ಸಮಯದಲ್ಲಿ ಜೂನ್ ೨೪ ರಿಂದ ಜುಲೈ ೧೭ರ ವರೆಗೆ ನಡೆದ ಪಂದ್ಯಾವಳಿಯಲ್ಲಿ ಪಾಂಡೆಯವರು ಅದ್ಭುತ ಪ್ರದರ್ಶನ ನೀಡಿದರು.

ಉಲ್ಲೇಖಗಳು[ಬದಲಾಯಿಸಿ]