ಸಮ್ಮೇದ ಶಿಖರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶಿಖರ್ಜಿ ಇಂದ ಪುನರ್ನಿರ್ದೇಶಿತ)

Shikharji Parasnath Giridih

ಸಮ್ಮೇದ ಶಿಖರ್ಜಿಯು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಇದು ಝಾರ್ಖಂಡ್ ರಾಜ್ಯದ ಗಿರಿಢಿ ಎಂಬಲ್ಲಿದೆ. ಹಿಂದೂಗಳಿಗೆ ಹೇಗೆ ಕಾಶಿಯೋ, ಮುಸ್ಲಿಮರಿಗೆ ಹೇಗೆ ಮೆಕ್ಕಾವೋ ಹಾಗೆಯೇ ಜೈನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಮ್ಮೇದ ಶಿಖರ್ಜಿಗೆ ತೆರಳಲು ಬಯಸುತ್ತಾರೆ.

Shikharji trail map ಸಮ್ಮೇದ ಶಿಖರ್ಜಿಯ ಬೆಟ್ಟಗಳಲ್ಲಿ ಜೈನ ಧರ್ಮದ ೨೪ ತೀರ್ಥಂಕರರಲ್ಲಿ ಸುಮಾರು ೨೦ ತೀರ್ಥಂಕರರು ಮೋಕ್ಷ ಸಾಧಿಸಿರುವವರೆಂದು ಪುರಾಣಗಳು ಹೇಳುತ್ತವೆ. ಸುಮಾರು ೨೭ ಕಿಮೀ ದೂರ ನಡೆಯಬೇಕಾದ ಬೆಟ್ಟದಲ್ಲಿ ತೀರ್ಥಂಕರರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಜನರು ಭಕ್ತಿಭಾವದಿಂದ ಪಾದುಕೆಗಳನ್ನು ಸ್ಪರ್ಶಿಸಿ, ಶುದ್ಧ ಬಟ್ಟೆಯನ್ನು ಅದಕ್ಕೆ ಸ್ಪರ್ಶಿಸಿ, ಅದನ್ನು ಪಾವನ ವಸ್ತುವಾಗಿ ಮನೆಯಲ್ಲಿಟ್ಟುಕೊಳ್ಳುತ್ತಾರೆ. ಬೆಟ್ಟದ ಕೆಳಭಾಗ, ಅದನ್ನು ಮಧುಬನವೆಂದು ಕರೆಯಲಾಗುತ್ತದೆ, ಅಲ್ಲಿ ದಿಗಂಬರ ಮತ್ತು ಶ್ವೇತಾಂಬರರ ಧರ್ಮಶಾಲೆಗಳು ಮತ್ತು ಸಾಕಷ್ಟು ಜಿನಾಲಯಗಳೂ ಇವೆ.

ಸಮ್ಮೇದ ಶಿಖರ್ಜಿಯನ್ನು ತಲುಪಲು ಇಲ್ಲಿಂದ ಸುಮಾರು ೨೦ ಕಿಮೀ ದೂರದಲ್ಲಿರುವ ಪಾರಸ್‌ನಾಥ್ ರೈಲು ನಿಲ್ದಾಣಕ್ಕೆ ತಲುಪಬೇಕಾಗುತ್ತದೆ. ದೆಹಲಿ ಮತ್ತು ಕಲ್ಕತ್ತಾ ನಡುವಿನ ಮುಖ್ಯ ರೈಲು ಮಾರ್ಗವು ಇಲ್ಲಿಂದ ಹಾದುಹೋಗುತ್ತದೆ. ದಕ್ಷಿಣದಿಂದ ತೆರಳುವವರು ಕಲ್ಕತ್ತಾಗೆ ತೆರಳಿ, ಅಲ್ಲಿಂದ ಪಾರಸ್‌ನಾಥ್‌ಗೆ ತಲುಪಬಹುದು. ದಕ್ಷಿಣ ಭಾರತದಿಂದ ಒಂದು ರೈಲು ಅಲೆಪ್ಪಿ-ಧನಬಾದ್ ಎಕ್ಸ್‌ಪ್ರೆಸ್ ನೇರವಾಗಿ ಪಾರಸ್‌ನಾಥ್‌ಗೆ ತೆರಳುತ್ತದೆ, ಕನ್ನಡಿಗರು ತಮಿಳುನಾಡಿನ ಕಟಪಾಡಿ ರೈಲು ನಿಲ್ದಾಣ ಇಲ್ಲವೇ ಚೆನ್ನೈಗೆ ತೆರಳಿ ಈ ರೈಲಿನಲ್ಲಿ ಪ್ರಯಾಣ ಮಾಡಬಹುದು.

ಶಿಖರ್ಜಿ ಪ್ರವಾಸಕ್ಕೆ ತೆರಳಲು ಹಲವಾರು ಜನರು, ಸಂಘಟನೆಗಳು ಪ್ರವಾಸವನ್ನು ಸಂಘಟಿಸುತ್ತಿರುತ್ತಾರೆ. ಮೈಸೂರು ಜೈನ ಸಂಘಟನೆಯ ಸಹಕಾರದೊಂದಿಗೆ ಕನಕಗಿರಿ ಜೈನ ಮಠದವರು, ಮೈಸೂರಿನ ಶಾಂತ್‌ರಾಜ್ ಇವರುಗಳು ಪ್ರವಾಸ ಸಂಘಟರಲ್ಲಿ ಪ್ರಮುಖರಾದವರು.