ಶಿಂಟೋ ಧರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿಂಟೋ ಧರ್ಮ ವು ಜಪಾನಿನ ಸಾಂಪ್ರದಾಯಿಕ ಧರ್ಮವಾಗಿದೆ. ಶಿಂಟೋ ಧರ್ಮ ಜೀವನ ವಿಧಾನವನ್ನು ಬೋಧಿಸುವುದಿಲ್ಲ, ಶಿಂಟೋ ಧರ್ಮ ಮಾನವ ಮತ್ತು ಕಾಮಿ ನಡುವಿನ ಸೇತುವೆಯಾಗಿದೆ. ಶಿಂಟೋ ಧರ್ಮಾವಲಂಬಿಗಳು ಕಾಮಿ ಎಂಬ ಶಕ್ತಿಗೆ ತನ್ನ ಪ್ರಾರ್ಥನೆಯನ್ನು ಸಮರ್ಪಿಸುತ್ತಾರೆ, ಶಿಂಟೋ ಧರ್ಮಿಯರ ಪ್ರಕಾರ ಕಾಮಿ ಎಂಬುದು ಯಾವುದೇ ದೇವ ದೇವತೆಯಲ್ಲ, ಕಾಮಿ ಒಂದು ಅಗೋಚರವಾದ ಧನಾತ್ಮಕ ಶಕ್ತಿ. ಕಾಮಿ ಸದಾ ಮನುಷ್ಯರಿಗೆ ಒಳ್ಳೆಯದನ್ನೇ ಬಯಸುವ, ಅದೃಷ್ಠ ತರುವ ಶಕ್ತಿ.೧೮೬೮ ರಲ್ಲಿ ಜಪಾನಿನ ರಾಜವಂಶದವರು ಸಮುರೈಗಳಿಂದ ರಾಜ್ಯವನ್ನು ಪುನಃ ವಶಪಡಿಸಿಕೊಂಡರು. ಅದನ್ನು ಮಿಜಿ ಪುನರ್ಸ್ಥಾಪನೆ (Meiji Restoration ) ಎನ್ನುತ್ತಾರೆ. ಮಿಜಿ ಎಂದರೆ ಜಪಾನೀ ಭಾಷೆಯಲ್ಲಿ ಅರಿವು, ಪ್ರಜ್ಙೆ ಮೂಡಿದ ಎಂದು.ಆಗ ರಾಜರಿಂದ ಬೌದ್ಧ ಧರ್ಮಕ್ಕೆ ಪ್ರೋತ್ಸಾಹ ದೊರಕದೇ ಕೆಡುಕುಗಳಾದವು; ಕೆಲವೊಂದು ಮಂದಿರಗಳು, ವಿಗ್ರಹಗಳು, ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕಗಳು ನಾಶವಾದವು. ಆಗ ರಾಜನಾದವನಿಗಿದ್ದ ಸ್ಥಾನ ಮಾನ, ದೇವತಾ ಸ್ವರೂಪನೆಂಬ ಭಾವನೆಗಳನ್ನು ನೋಡಿದರೆ ಇದೇನೂ ಅಸ್ವಾಭಾವಿಕವೇನಲ್ಲ. ರಾಜ ಪ್ರಾಚೀನ ಕಾಲದಿಂದ ಪ್ರಕೃತಿ ಆರಾಧನೆಯೇ ಮುಖ್ಯವಾಗಿದ್ದ ಶಿಂಟೋ ಧರ್ಮವನ್ನೇ ದೇಶದ ಅಧಿಕೃತ ಧರ್ಮವೆಂದು ಘೋಷಿಸಿದನು. ಶಿಂಟೋ ಧರ್ಮದಲ್ಲಿ ಸೂರ್ಯ, ಕಲ್ಲು, ವೃಕ್ಷ, ಧ್ವನಿ (sound ) ಗಳೇ ಮೊದಲಾದವುಗಳನ್ನು ಆರಾಧಿಸುತ್ತಿದ್ದರು. ಆದರೆ ಆಗಲೇ ಅಳವಾಗಿ ಬೇರೂರಿದ್ದ ಬೌದ್ಧ ಧರ್ಮವು ಇದ್ಯಾವುದೇ ಹೊಸ ಬದಲಾವಣೆಗಳ ಒತ್ತಡಕ್ಕೆ ಒಳಗಾಗದೇ; ಆ ಕಾಲದಲ್ಲಿ ವಿದ್ಯಾಭ್ಯಾಸದಿಂದ ಹೊಸ ವಿಧಾನಗಳನ್ನು ಮೈಗೂಡಿಸಿಕೊಂಡು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ತೆರೆಯಲಾಯಿತು.