ವಿಷಯಕ್ಕೆ ಹೋಗು

ಶಾರದಾ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾರದಾ ಶಾಸ್ತ್ರಿಯವರು ನಾಟಕ ಕರ್ತೃ ಮತ್ತು ನಿರ್ದೇಶಕಿಯಾಗಿದ್ದವರು. ಹಳೆಯ ತಲೆಮಾರಿನ ಲೇಖಕಿಯರಲ್ಲಿ ಒಬ್ಬರಾದ ಇವರು ಸಂಪ್ರದಾಯಸ್ಥ ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬೆಳೆದವರು.ಇವರು ನಲುವತ್ತನೆ ವಯಸ್ಸಿಗೆ ಬರವಣಿಗೆಯನ್ನು ಪ್ರಾರಂಭಿಸಿದರು. ಆಗಿನ ಕಾಲದಲ್ಲಿ ಹೆಣ್ಣುಮಗುವಿನ ಪರಿಸ್ಥಿತಿ ತುಂಬಾನೇ ಕಷ್ಟಕರದಾಯಕವಾಗಿತ್ತು. ಆ ಶತಮಾನಗಳಲ್ಲಿ ಮೊದಲನೆ ಇಪ್ಪತೈದು ವರ್ಷಗಳವರೆಗೆ ಹೆಣ್ಣುಮಕ್ಕಳಿಗೆ ವಿವಾಹವನ್ನು ಮಾಡಿಸುತ್ತಿದ್ದರು.ಅದಲ್ಲದೆ ವಿದ್ಯಾಭ್ಯಾಸ ಸಹ ದೊರೆಯುತ್ತಿರಲಿಲ್ಲ. ಸ್ವಾತಂತ್ರ್ಯವಿಲ್ಲದ ಜೀವನ ಹೆಣ್ಣುಮಕ್ಕಳದಾಗಿತ್ತು. ಇಂಥ ಸಂದರ್ಭದಲ್ಲೂ ಶಾರದಾ ಶಾಸ್ತ್ರಿಯವರು ನಾಟಕಗಳನ್ನು ನಿರ್ದೇಶಿಸಿ ಪಾತ್ರಗಳನ್ನು ರಂಗ ಪ್ರಯೋಗಕ್ಕೆ ತರುವುದರಲ್ಲಿ ಸಫಲರಾದರು[].

ಜನನ ಮತ್ತು ಜೀವನ

[ಬದಲಾಯಿಸಿ]
  • ಇವರು ೧೯-೩-೧೯೨೫ರಲ್ಲಿ ದಕ್ಷಿಣ ಕನ್ನಡದಲ್ಲಿ ಜನಿಸಿದರು.
  • ತಂದೆ ಶ್ರೀ ಕೃಷ್ಣ ಎಳಚಿತ್ತಾಯ.ತಾಯಿ ಜಲಜಾಕ್ಷಿ
  • ಇವರಿಗೆ ಮಂಗಳೂರು ನ್ಯಾಯವಾದಿಯಾದ ಅನಂತ ಶಾಸ್ತ್ರಿ ಅವರ ಜೊತೆ ವಿವಾಹವಾಯಿತು.ಅವರು ತಂಗಿಯ ಮಗ ರಾಧಾಕೃಷ್ಣವರನ್ನು ಸ್ವಂತ ಮಗನಂತೆ ಸಲಹಿದರು.
  • ಇವರು ಬಾಲಕಲಾ ಕಲ್ಪ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.ಮತ್ತು ವರ್ಣಶ್ರೀಕಲಾರಂಗ ಸ್ಥಾಪಕ ಅಧ್ಯಕ್ಷೆಯಾಗಿದ್ದರು.

ಕೃತಿಗಳು

[ಬದಲಾಯಿಸಿ]

ಕವನ ಸಂಕಲನ

[ಬದಲಾಯಿಸಿ]
  • ನಾಟ್ಯ ರಾಣಿ ಶಾಂತಲಾ

ನಾಟಕಗಳು

[ಬದಲಾಯಿಸಿ]
  • ರುಕ್ಮಿಣಿ ಸ್ವಯಂವರ
  • ಬೇಡರ ಕಣ್ಣಪ್ಪ
  • ಅಮರ ಅಭಿಮನ್ಯು
  • ಸುಧನ್ವ ಕಾಳಗ
  • ಏಕಲವ್ಯ
  • ಲವಕುಶ
  • ಹತಭಾಗ್ಯ ಕರ್ಣ
  • ಸೀತಾಪರಿತ್ಯಾಗ
  • ವಿಜಯ ಕೇಸರಿ ಎಚ್ಚಮ್ಮ
  • ಭಕ್ತ ಪ್ರಹ್ಲಾದ
  • ಶರವು ಮಹಾತ್ಮೆ
  • ರಕ್ತ ಸಂಬಂಧ
  • ನಾಟ್ಯ ರಾಣಿ ಶಾಂತಲಾ
  • ವೀರ ಬಭ್ರುವಾಹನ
  • ಸತ್ಯ ಪ್ರೇಮಿ ಹರಿಶ್ಚಂದ್ರ
  • ವೀರಪಾಂಡ್ಯ ಕಟ್ಟಬೊಮ್ಮನ್
  • ಹತಭಾಗ್ಯೆ ಕುಂತಿ
  • ವಿಕ್ಷಿಪ್ತ

ಶಾರದಾ ಶಾಸ್ತ್ರಿ ನಾಟಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ಗೌರವ ಮಾಸಾಶನವನ್ನು ನೀಡಿ ಗೌರವಿಸುತ್ತದೆ. ಇವರ ಮೊದಲ ಕೃತಿ ನಾಟ್ಯ ರಾಣಿ ಶಾಂತಲಾ ಸಂದೀಪ ಸಾಹಿತ್ಯ ಮಾಲೆಯ ೩೫ನೇ ಪುಸ್ತಕವಾಗಿ ಮುದ್ರಣಗೊಂಡಿದೆ.

ಉಲ್ಲೇಖಗಳು

[ಬದಲಾಯಿಸಿ]
  1. ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರು, ಮನೋರಮಾ ಎಂ. ಭಟ್, ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ದ. ಕ. ಮತ್ತು ಕಾಸರಗೋಡು 'ಸೌಗಂಧಿಕಾ' ಉರ್ವಸ್ಟೋರ್ಸ್, ಮಂಗಳೂರು, ಪುಟ-೬೮