ಶಾಕೂತಿ

ವಿಕಿಪೀಡಿಯ ಇಂದ
Jump to navigation Jump to search
ಚಿಕನ್ ಶಾಕೂತಿ

ಶಾಕೂತಿ ಗೋವಾದಲ್ಲಿ ತಯಾರಿಸಲ್ಪಡುವ ಒಂದು ಮೇಲೋಗರವಾಗಿದೆ. ಇದರಲ್ಲಿ ಬಿಳಿ ಗಸಗಸೆ ಬೀಜಗಳು, ಹೋಳು ಮಾಡಿದ ಅಥವಾ ತುರಿದ ಕೊಬ್ಬರಿ ಮತ್ತು ದೊಡ್ಡ ಒಣ ಕೆಂಪು ಮೆಣಸಿನಕಾಯಿ ಸೇರಿದಂತೆ ಸಂಬಾರ ಪದಾರ್ಥಗಳನ್ನು ಸೇರಿಸುವ ಪ್ರಕ್ರಿಯೆಯು ಸಂಕೀರ್ಣವಾಗಿದೆ.[೧] ಇದನ್ನು ಸಾಮಾನ್ಯವಾಗಿ ಚಿಕನ್ ಅಥವಾ ಕುರಿಮರಿ ಮಾಂಸದಿಂದ ತಯಾರಿಸಲಾಗುತ್ತದೆ. ಕೊಂಕಣಿ ಭಾಷೆಯಲ್ಲಿ ಇದನ್ನು ಶಾಗೋತಿ ಎಂದು ಕರೆಯಲಾಗುತ್ತದೆ.

ಗೋವಾದಲ್ಲಿನ ಶಾಕೂತಿ ತನ್ನ ಮೂಲವನ್ನು ಗೋವಾದ ಪೆರ್ನೆಂ ತಾಲ್ಲೂಕಿನ ಹರ್ಮಲ್‌ನಲ್ಲಿ (ಈಗ ಅರಂಬೋಲ್) ಹೊಂದಿದೆ. ಹಳೆಯ ದಿನಗಳಲ್ಲಿ ಇಲ್ಲಿ ಮೀನುಗಾರರು ಮೀನುಗಳನ್ನು ತಾಜಾ ಆಗಿ ಬಲೆಗಳಲ್ಲಿ ಅಥವಾ ಸ್ಥಳೀಯ ಕೋಳಿಗಳನ್ನು ಹಿಡಿದು ಈ ಖಾದ್ಯಕ್ಕಾಗಿ ಮಾಂಸರಸವನ್ನು ತಯಾರಿಸುತ್ತಿದ್ದರು. ಈ ಮಾಂಸರಸವು ಸಾಮಾನ್ಯವಾಗಿ ಕರಿ ಮೆಣಸು, ಮೆಣಸಿನಕಾಯಿ, ಅರಿಶಿನ, ಈರುಳ್ಳಿ, ಜಾಯಿಕಾಯಿ, ದಾಲ್ಚಿನ್ನಿ, ಲವಂಗ ಇತ್ಯಾದಿಗಳಂತಹ ಸ್ಥಳೀಯ ಸಂಬಾರ ಪದಾರ್ಥಗಳನ್ನು ಬಳಸುತ್ತಿತ್ತು. ಸೌಮ್ಯವಾಗಿ ಸುಟ್ಟು ಬೇಯಿಸಿದ ತೆಂಗಿನಕಾಯಿ ಅತಿ ಮುಖ್ಯ ಪದಾರ್ಥವಾಗಿತ್ತು ಮತ್ತು ಇದನ್ನು ನಯವಾಗಿ ತುರಿದು ಸ್ವಲ್ಪ ಬಾಡಿಸಲಾಗುತ್ತಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. Andrew Marshall (February 15, 2020). "The world on a plate". Vancouver Sun. p. G1.
"https://kn.wikipedia.org/w/index.php?title=ಶಾಕೂತಿ&oldid=991515" ಇಂದ ಪಡೆಯಲ್ಪಟ್ಟಿದೆ