ಶಾಂತಾ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಂತಾ ರಾವ್

ಶಾಂತಾ ರಾವ್ (1930 - 28 ಡಿಸೆಂಬರ್ 2007) ಭಾರತದ ಭರತನಾಟ್ಯ, ಕಥಕ್ಕಳಿ ಕುಚಿಪುಡಿ ನರ್ತಕಿಯಾಗಿದ್ದರು .[೧]

ಬಾಲ್ಯ ಮತ್ತು ಜೀವನ[ಬದಲಾಯಿಸಿ]

1930 ರಲ್ಲಿ ಮಂಗಳೂರಿನಲ್ಲಿ ಜನಿಸಿದರು,ಅವರ ಪೋಷಕರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು .ಬಾಂಬೆಯ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಜಂಟಿ-ಕಾರ್ಯದರ್ಶಿಯಾಗಿದ್ದರು . ಮೂವತ್ತರ ದಶಕದ ಆರಂಭದಲ್ಲಿ ಬಾಂಬೆಯಲ್ಲಿ ಅವರ ಮನೆ, ನಾಗರಿಕ ಅಸಹಕಾರ ಚಳುವಳಿಯ 1931 ರ ಅಹಿಂಸಾತ್ಮಕ ದಂಗೆಕೋರರಿಗೆ ಸಭೆ ಸ್ಥಳವಾಗಿತ್ತು.ಶಂತಾ ಮುಂಬೈ ಮತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.[೨][೩]

ಪ್ರಶಸ್ತಿಗಳು[ಬದಲಾಯಿಸಿ]

  • 1971 ರಲ್ಲಿ ಭಾರತ ಸರಕಾರ ಪದ್ಮಶ್ರೀ ನೀಡಿ ಗೌರವಿಸಿದೆ. [೪]
  • 1970 ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ ,ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
  • 1993-94 ರಲ್ಲಿ ಕಾಳಿದಾಸ್ ಸಮ್ಮಾನ್, ಮಧ್ಯಪ್ರದೇಶ ಸರಕಾರದಿಂದ ಶಾಸ್ತ್ರೀಯ ನೃತ್ಯಕ್ಕಾಗಿ [೫]

ನಿಧನ[ಬದಲಾಯಿಸಿ]

ಅವರು 28 ಡಿಸೆಂಬರ್ 2007 ರಂದು ಬೆಂಗಳೂರಿನ ಮಲ್ಲೇಶ್ವರಂ ನ ತಮ್ಮ ಮನೆಯಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. "Padma Awards Directory (1954–2013)" (PDF). Ministry of Home Affairs. Archived from the original (PDF) on 2015-10-15. Retrieved 2017-11-12.
  2. Selma Jeanne Cohen; Dance Perspectives Foundation (1998). International encyclopedia of dance: a project of Dance Perspectives Foundation, Inc. Oxford University Press. ISBN 978-0-19-512309-8.
  3. Dr. Sunil Kothari (May 16, 2008). "Remembering the one and only Shanta Rao". Narthaki. Retrieved 2014-03-18.
  4. "SNA: List of Akademi Awardees". Sangeet Natak Akademi Official website. Archived from the original on 2015-05-30. Retrieved 2017-11-12.
  5. "Kalidas Award Holders (Classical Dance)". Department of Culture, Government of Madhya Pradesh. Archived from the original on 2012-04-09. Retrieved 2017-11-12.

ಗ್ರಂಥಸೂಚಿ[ಬದಲಾಯಿಸಿ]