ವ್ಯಾಸಂಗಗೋಷ್ಠಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯಾಸಂಗಗೋಷ್ಠಿ (ಅಧ್ಯಯನಕೂಟ) ಎಂದರೆ ಒಂದು ಸಮಸ್ಯೆಯನ್ನು ಚರ್ಚಿಸಲು ಅನೇಕ ಸಲ ಭೇಟಿಯಾಗುವ ಜನರ ಸಣ್ಣ ಗುಂಪು. ರಾಜಕೀಯ, ಧರ್ಮ ಅಥವಾ ಹವ್ಯಾಸಗಳು ಯಾವುದನ್ನಾದರೂ ಚರ್ಚಿಸಲು ಅಧ್ಯಯನಕೂಟಗಳನ್ನು ರಚಿಸಿಕೊಳ್ಳಬಹುದು. ಚಟುವಟಿಕೆಗಳು ಅಥವಾ ಬೆರೆಯುವಿಕೆಯ ಬದಲಾಗಿ ಇವುಗಳ ಗಮನ/ಕೇಂದ್ರಬಿಂದು ಒಂದು ಸಮಸ್ಯೆ ಅಥವಾ ವಿಷಯವನ್ನು ಶೋಧಿಸುವುದಾಗಿರುವುದರಿಂದ ಇವುಗಳು ಕ್ಲಬ್‍ಗಳಿಗಿಂತ ಭಿನ್ನವಾಗಿವೆ. ಇಪ್ಪತ್ತನೇ ಶತಮಾನದ ಮುಂಚಿನಲ್ಲಿ ಇವುಗಳು ಹುಟ್ಟಿಕೊಂಡಾಗ ಇವು ಪ್ರಜಾಪ್ರಭುತ್ವಕ ವಿಧಾನವನ್ನು ಆಧರಿಸಿದ್ದವು ಮತ್ತು ಹಲವುವೇಳೆ ಇವನ್ನು ಆತ್ಮಸಂಯಮ ಅಥವಾ ಕಾರ್ಮಿಕ ವರ್ಗದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಾಮಾಜಿಕ ಚಳುವಳಿಗಳೊಂದಿಗೆ ಸಂಬಂಧಿಸಲಾಗುತ್ತಿತ್ತು.

ಸಾಮಾನ್ಯವಾಗಿ ಒಂದು ಸಾಮಾನ್ಯ ಆಸಕ್ತಿಯನ್ನು ಕಂಡುಕೊಳ್ಳುವ ವ್ಯಕ್ತಿಗಳು ಸಾಮಾನ್ಯವಾಗಿ ವ್ಯಾಸಂಗಗೋಷ್ಠಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ; ಸಾಮಾಜಿಕ, ರಾಜಕೀಯ ಅಥವಾ ಸಮುದಾಯದ ಸಮಸ್ಯೆಗಳನ್ನು ವಿಶ್ಲೇಷಿಸಲು ಮತ್ತು ಅವುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಇತರ ವ್ಯಾಸಂಗಗೋಷ್ಠಿಗಳು ಸೃಷ್ಟಿಯಾಗಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • "Everyday Democracy (formerly the Study Circles Resource Center)". everyday-democracy.org. Archived from the original on 2008-02-19. Retrieved 2021-08-10.
  • "Study Circles for Social Change Programme". ifwea.org. International Federation of Workers' Education Associations. Archived from the original on 2000-03-01. Retrieved 2019-12-16.
  • "Australian Study Circles Network". studycircles.net.au. Archived from the original on 2009-01-23. Retrieved 2019-12-16.
  • "Adult Learning Australia". ala.asn.au.
  • "P2PU Learning Circles". learningcircles.p2pu.org. Peer to Peer University.