ವ್ಯವಹಾರ ಪತ್ರಿಕೋದ್ಯಮ
ಪೀಠಿಕೆ
[ಬದಲಾಯಿಸಿ]ಭಾರತ ದೇಶದಲ್ಲಿ ಪತ್ರಿಕೋದ್ಯಮವನ್ನು ದೇಶದ 4ನೇ ಅಂಗವಾಗಿ ಪರಿಗಣಿಸಲಾಗುತ್ತದೆ. ಒಂದು ದೇಶದ ಪ್ರಗತಿ, ಹಿತಾಸಕ್ತಿ, ಮಾಹಿತಿ ರವಾಣೆ ಹಾಗೂ ಸರ್ಕಾರ- ಜನತೆಯ ಮಧ್ಯ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಭಾಗವಾಗಿ ಪತ್ರಿಕೋದ್ಯಮ ಕೆಲಸ ಮಡುತ್ತದೆ. ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ವಾಣಿಜ್ಯ, ಕ್ರೀಡೆಗೆ ಸಂಬಂಧಿಸಿದ ವಿಷಯವನ್ನು ಸಂಪೂರ್ಣ ವಿವರಣೆ ನೀಡುವುದರ ಮೂಲಕ ಜನಸಾಮಾನ್ಯರನ್ನು ಅಭಿವ್ರದ್ದಿಯತ್ತ ಕರೆದೊಯ್ಯತ್ತದೆ. ಅವುಗಳನ್ನು ಪ್ರತ್ಯೇಕ ಕ್ಷೇತ್ರಗಳನ್ನಾಗಿ ರೂಪಿಸುವುದರ ಜೊತೆಗೆ ಮಾಹಿತಿ ರವಾನೆಯಾಗುತ್ತದೆ. ಇವುಗಳಲ್ಲಿ ಇತ್ತೀಚೆಗೆ ಬಹುಬೇಡಿಕೆ ಹಾಗೂ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಪತ್ರಿಕೋದ್ಯಮದ ಭಾಗವಾಗಿರುವ ವ್ಯವಹಾರಿಕ ಪತ್ರಕೋದ್ಯಮ ಕೂಡ ಒಂದು. ಪತ್ರಿಕೋದ್ಯಮದೊಂದು ಭಾಗವಾಗಿ ವ್ಯವಹಾರಿಕ ಪತ್ರಕೋದ್ಯಮ ಕೆಲಸ ನಿರ್ವಹಿಸುತ್ತದೆ.
ವಿವರಣೆ
[ಬದಲಾಯಿಸಿ]ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ಸಮಾಜದಲ್ಲಿನ ನೂತನ ಬೆಳವಣಿಗೆ, ವಿಷಯ ಸಂಗ್ರಹಣೆ, ವಿಷಯವನ್ನು ವಿಶ್ಲೇಷಿಸಿ ವಿಂಗಡಿಸಿ ವಿಭಜಿಸಿ ಜನಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯವನ್ನು ವ್ಯವಹಾರಿಕ ಪತ್ರಕೋದ್ಯಮ ಮಾಡುತ್ತದೆ. ದೇಶದ ಅರ್ಥವ್ಯವಸ್ಥೆಗೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳನ್ನು ಲಿಖಿತ ಮತ್ತು ಅಲಿಖಿತ ರೂಪದಲ್ಲಿ ಪ್ರಸ್ತುತ ಪಡಿಸುತ್ತದೆ.
ಒಂದು ದೇಶದ ಅರ್ಥವ್ಯವಸ್ಥೆಯ ಅಡಿಯಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿ, ವಿಷಯ, ಸ್ಥಳದ ಕುರಿತಾದ ವರದಿ ಮಾಡುವುದು ಈ ಕ್ಷೇತ್ರದ ಮುಖ್ಯ ಕೆಲಸ. ಆರ್ಥಿಕತೆಗೆ ಸಂಬಂಧಿಸಿದ ವಾಸ್ತವ ಘಟನೆಗಳನ್ನು ಭೂತಕಾಲ, ಭವಿಷ್ಯತ್ ಕಾಲದಲ್ಲಿ ತೂಗಿ ವಿಷಯದ ಸಂಪೂರ್ಣ ಮಾಹಿತಿಯನ್ನು ಜನರಿಗೆ ನೀಡುತ್ತದೆ. ಮಾಧ್ಯಮ ಕ್ಷೇತ್ರದಡಿಯಲ್ಲಿ ಬರುವ ಎಲ್ಲಾ ವಿಭಾಗಗಳಲ್ಲಿಯೂ ಸಹ ವ್ಯವಹಾರಿಕ ಪತ್ರಿಕೋದ್ಯಮದ ಕುರಿತಾದ ಕಾರ್ಯಕ್ರಮ, ಲೇಖನ, ಸಂದರ್ಶನಗಳು ಕಾಣಸೀಗುತ್ತವೆ. ಮುದ್ರಣ ಮಾಧ್ಯಮ- ದಿನಪತ್ರಿಕೆಗಳು, ಪುರವಣಿಗಳು, ಹಾಗೂ ಎಲೆಕ್ಟ್ರಾನಿಕ್ ಮಾದ್ಯಮ-ರೇಡಿಯೋ, ಟೆಲಿವಿಷನ್‍ಗಳು ವಾಣಿಜ್ಯ ವರದಿಗಳನ್ನು ದಿನನಿತ್ಯ ಪ್ರಕಟಿಸುತ್ತವೆ. ಮುದ್ರಣ ಮಾಧ್ಯಮಗಳಲ್ಲಿ ವಾಣಿಜ್ಯಕ್ಕೆ ಸಂಬಂಧಿಸಿದ ವಿಶಿಷ್ಟ ಪ್ರತಿಯನ್ನು ಪ್ರಕಟಿಸುತ್ತವೆ. ಉದಾಹರಣೆಗೆ ದಿನಪತ್ರಿಕೆಗಳಲ್ಲಿ ವಾಣಿಜ್ಯ ಎಂಬ ಪ್ರತ್ಯೇಕ ಪೇಜ್‍ನ್ನು ಕಾಣಬಹುದು. ವಾರದ ಒಂದು ದಿನ ಪ್ರತ್ಯೇಕ ಪುರವಣಿ(ಸಪ್ಲಿಮೆಂಟ್)ಗಳನ್ನು ಎಲ್ಲ ಭಾಷೆಯಗಳ ದಿನಪತ್ರಿಕೆಗಳಲ್ಲಿ ಕಾಣಬಹುದು. ಇನ್ನೂ ವಾಣಿಜ್ಯ ಪುರವಣಿಗಳಂತು ಆರ್ಥಿಕತೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುತ್ತವೆ. ಸಾಮಾನ್ಯವಾಗಿ ಇಂಗ್ಲೀಷ್ ಪುರವಣಿಗು ಇಂಡಿಯಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ.
ಇತಿಹಾಸ
[ಬದಲಾಯಿಸಿ]1568ರಲ್ಲಿ ಜರ್ಮನಿಯಲ್ಲಿನ ದಕ್ಷಿಣ-ಪಶ್ಚಿಮ ಬಾವರಿಯ ಎಂಬ ಪಟ್ಟಣದಲ್ಲಿ ಮೊದಲು ವ್ಯವಹಾರಿಕ ಪತ್ರಿಕೋದ್ಯಮವನ್ನು ಪಗ್ಗರ್ ಕುಟುಂಬದವರು ಪ್ರಾರಂಬಿಸಿದರು. ವ್ಯವಹಾರಕ್ಕೆ ಸಂಬಂಧಿಸಿದ ಪ್ರತ್ಯೇಕ ಮಾಹಿತಿಯನ್ನು ಸುದ್ದಿಪತ್ರಗಳ ರೂಪದಲ್ಲಿ ಪ್ರಕಟಿಸಿದರು. ನಂತರದ ದಿನಗಳಲ್ಲಿ ಬ್ರಿಟಿಷ್ ಪತ್ರಿಕೆಗಳು ವ್ಯವಹಾರಿಕ ಮಾಹಿತಿಯನ್ನು ಜಾಹೀರಾತುಗಳ ಮೂಲಕ ಪ್ರಕಟಿಸಿದರು. 1750ರಲ್ಲಿ 'ಪ್ರೈಸ್ ಕರೆಂಟ್' ಎಂಬ ಅಡಿಬರಹದ ವ್ಯವಹಾರಿಕ ಪತ್ರಿಕೋದ್ಯಮ ಆರಂಭವಾಗಿದ್ದು ಸರಿಸುಮಾರು 17ನೇ ಶತಮಾನದಲ್ಲಿ. ಜನಪ್ರಿಯ ಶ್ರೀಮಂತ ಕುಟುಂಬಗಳು ವ್ಯವಹಾರಕ್ಕೆ ಸಂಬಂಧಿಸಿದ ಆಪ್ತ ಸಮಾಲೋಚನೆಯನ್ನು ಮಾಡುವ ಮೂಲ ಉದ್ದೇಶದೊಂದಿಗೆ ವ್ಯವಹಾರಿಕ ಪತ್ರಿಕೋದ್ಯಮ ಪ್ರಾರಂಭವಾಯಿತು. 1700 ಹೊತ್ತಿಗೆ, ಡಾನಿಯಲ್ ಡೀಪೋಯ್ ಎಂಬುವವನು ಆರ್ಥಿಕ, ವ್ಯವಹಾರಿಕ ಹಾಗೂ ವಾಣಿಜ್ಯ ವಿಷಯದ ಕುರಿತಾದ ಸುದ್ದಿಗಳನ್ನು ಪ್ರಕಟಿಸಲು ಆರಂಭಿಸಿದ. 1882 ಚಾಲ್ರ್ಸ ಡೋ, ಎಡ್ವರ್ಡ ಜೋನ್ಸ ಹಾಗೂ ಚಾಲ್ರ್ಸ ಬೇರ್ಗಸ್ಟ್ರೇಸರ್ ಸೇರಿ ವ್ಯವಹಾರಿಕ ಪತ್ರಿಕೋದ್ಯಮಕ್ಕೆ ಹೊಸ ತಿರುವು ನೀಡಿದರು. ವಾಯರ್ ಮೂಲಕ ಸುದ್ದಿಗಳನ್ನು ಹರಿಬಿಡುವ ವ್ಯವಸ್ಥೆಯನ್ನು ಕಂಡುಹಿಡಿದರು. ಇದು ಮುದ್ರಣ ಮಾಧ್ಯಮದಿಂದ ಎಲೆಕ್ಟ್ರಾನಿಕ್ ಯುಗಕ್ಕೆ ವ್ಯವಹಾರಿಕ ಪತ್ರಕೋದ್ಯಮವನ್ನು ಪರಿಚಯಿಸಿತು. ವಾಣಿಜ್ಯ, ವ್ಯವಹಾರ, ಆರ್ಥಿಕತೆ ಕುರಿತಾದ ವರದಿಗಳು 1990 ನಂತರ ಪ್ರಾಮುಖ್ಯತೆಯನ್ನು ಪಡೆದುಕೊಂಡವು.[೧]
ನಂತರ ಈ ಮೂವರು ಸೇರಿಕೊಂಡು ಜುಲೈ 8, 1889ರಲ್ಲಿ 'ವಾಲ್ ಸ್ಟ್ರೀಟ್ ಜರ್ನಲ್' ಪ್ರಕಟಸಿದರು. ಸದ್ಯ ಇದು ಅಮೇರಿಕಾದಲ್ಲೆ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ವಾಣಿಜ್ಯ ಪತ್ರಿಕೆಯಾಗಿದೆ. ಜೂನ್ 2017ರ ಪ್ರಕಾರ ದಿನಕ್ಕೆ 22 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟಗೊಳ್ಳುತ್ತಿವೆ. 128 ವರ್ಷಗಳ ಇತಿಹಾಸವಿರುವ ಈ ದಿನಪತ್ರಿಕೆ 40 ಪೂಲಿಜರ್ ಪ್ರಶಸ್ತಿಗಳನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿದೆ.
1996ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಆನ್‍ಲೈನ್ ಎಡಿಶನ್ ವ್ಯವಸ್ಥೆ ಆರಂಭವಾಯಿತು. 2007ರಲ್ಲಿ ಅಂತರ್ಜಾದಲ್ಲೆ 980,000 ಹೊಂದುವುದರ ಮೂಲಕ ಅತಿ ಹೆಚ್ಚು ಚಂದಾದಾರನ್ನು ಹೊಂದಿರುವ ಹೆಗ್ಗಳಿಕೆ ಪಡೆದಿದೆ. ಇದರಲ್ಲಿ ಜನಪ್ರಿಯ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಪಾಂಡಿತ್ಯರಾಗಿರುವ ಪತ್ರಕರ್ತರು ವರದಿಗಳನ್ನು ಬರೆಯುತ್ತಾರೆ.[೨]
ಸಿಬ್ಬಂದಿ
[ಬದಲಾಯಿಸಿ]ವ್ಯವಹರಿಕ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರನ್ನು ಸಾಮಾನ್ಯವಾಗಿ ವ್ಯವಹಾರಿಕ ಪತ್ರಿಕೋದ್ಯಮಿ ಎಂದು ಕರೆಯಲಾಗುತ್ತದೆ. ಆಯಾ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕಿ ಅದನ್ನು ಸುದ್ದಿಯಾಗಿ ಮಾರ್ಪಡಿಸುತ್ತಾರೆ. ಶೇರು ಮಾರುಕಟ್ಟೆ, ಬೆಲೆ ಏರಿಕೆ-ಇಳಿಕೆ, ಹೊಸ ತಂತ್ರಜ್ಞಾನಕ್ಕೆ ತಗಲುವ ವೆಚ್ಚ, ರಾಷ್ಟ್ರ ಹಾಗೂ ರಾಜ್ಯ ಬಜೆಟ್ ಮಂಡನೆ, ವಾಣಿಜ್ಯ ಉದ್ಯಮ, ಉದ್ಯಮಿದಾರರು ಇಂತಹ ಕ್ಷೇತ್ರಗಳಲಗಲಿ ಪರಿಣಿತಿ ಹೊಂದಿದ ವ್ಯಕ್ತಿಗಳನ್ನು ವ್ಯವಹಾರಿಕ ಪತ್ರಿಕೋದ್ಯಮದಲ್ಲಿ ನೇಮಕ ಮಡಲಾಗುತ್ತದೆ. ವಾಣಿಜ್ಯ ವಿಷಯದಲ್ಲಿ ನಿರ್ದಿಷ್ಟ ಡಿಗ್ರಿ ಅಥವಾ ಮಾಸ್ಟರ್ ಡಿಗ್ರಿ ಮಾಡಿದವರಿಗೆ ಮಾತ್ರ ಕೆಲಸ ನೀಡಲಾಗುತ್ತದೆ ಎಂಬ ಯಾವುದೇ ಕಟ್ಟುಪಾಡುಗಳಿಲ್ಲ. ಅರ್ಥವ್ಯವಸ್ಥೆ, ಯೋಜನೆಗಳು, ವಾಣಿಜ್ಯ ವಿಷಯದಲ್ಲಿ ಪರಿಣಿತ ಹೊಂದಿದ ಯಾರೊಬ್ಬರಾದರು ಈ ಕ್ಷೇತ್ರದಲ್ಲಿ ಕೆಲಸ ಮಾಡಬಹುದು. ಆದರೆ ಪದವಿ ವಿದ್ಯಾರ್ಹತೆ ಮಾತ್ರ ಕಡ್ಡಾಯ.
ಭಾರತದಲ್ಲಿನ ವ್ಯವಹಾರಿಕ ಪತ್ರಿಕೋದ್ಯಮದ ಸ್ಥಿತಿಗತಿ
[ಬದಲಾಯಿಸಿ]1991 ನಂತರ ಭಾರತದಲ್ಲಿ ವ್ಯವಹಾರಿಕ ಪತ್ರಿಕೋದ್ಯಮ ಜನಪ್ರಿಯತೆಯನ್ನು ಪಡೆಯಿತು. ವಾಣಿಜ್ಯೀಕರಣದ ಛಾಪು ದೇಶದೆಲ್ಲೆಡೆ ಹರಡಿದಾಗ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಮಾಡುವ ದೃಷ್ಟಿಕೋನದೊಂದಿಗೆ ವ್ಯವಹಾರಿಕ ಪತ್ರಿಕೋದ್ಯಮ ಆರಂಭಗೊಂಡಿತು. ಭಾರತದಲ್ಲಿ ಅಂದಾಜು ನೂರಕ್ಕು ಹೆಚ್ಚು ಮುದ್ರಣ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ವಾಣಿಜ್ಯ ವರದಿಗಳನ್ನು ನೀಡುತ್ತಿವೆ.
ಭಾರತದ ವಾಣಿಜ್ಯ ವರದಿಗಳನ್ನು ಪ್ರಕಟಿಸುವ ದಿನಪತ್ರಿಕೆಗಳು
[ಬದಲಾಯಿಸಿ]1. ಬಿಸಿನೆಸ್ ಸ್ಟಾಂಡರ್ಡ 2. ದ ಎಕನೊಮಿಕ್ಸ ಟೈಮ್ಸ 3. ಫೈನಾನ್ಸಿಯಲ್ ಕ್ರೋನಿಕಲ್ 4. ಫೈನಾನ್ಸಿಯಲ್ ಎಕ್ಸಪ್ರೆಸ್ 5. ದ ಹಿಂದು ಬಿಸಿನೆಸ್ ಲೈನ್ 6. ಮಿಂಟ್
ಬಿಸಿನೆಸ್ ಸ್ಟಾಂಡರ್ಡ
[ಬದಲಾಯಿಸಿ]ಇಂಗ್ಲೀಷ್ ಹಾಗೂ ಹಿಂದಿ ದಿನಪತ್ರಿಕೆ. 1975ರಲ್ಲಿ ಎಬಿಪಿ ಗ್ರೂಪ್ ಆರಂಭಿಸಿತು. ಪ್ರಸ್ತುತ ದೇಶದ 12 ಕೇಂದ್ರಗಳಲ್ಲಿ ಪ್ರಕಟಗೊಳ್ಳುತ್ತದೆ. ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ವ್ಯವಹಾರಿಕ ಮತ್ತು ವಾಣಿಜ್ಯ ವಿಷಯಗಳಿಗೆ ಹೆಚ್ಚು ಆಧ್ಯತೆ.
ದ ಎಕನೊಮಿಕ್ಸ ಟೈಮ್ಸ್
[ಬದಲಾಯಿಸಿ]ಇಂಗ್ಲೀಷ್ ದಿನಪತ್ರಿಕೆ. 1961ರಲ್ಲಿ ಆರಂಭಗೊಂಡಿತು. ದ ಟೈಮ್ಸ್ ಗ್ರೂಪ್ ಇದನ್ನು ಪ್ರಕಟಿಸುತ್ತದೆ. ದಿನನಿತ್ಯ 3 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮುದ್ರಣಗೊಳ್ಳುತ್ತವೆ. 2015ರಿಂದ ಪ್ರಸ್ತುತ 'ಬೋಧಿಸತ್ವ ಗಂಗುಲಿ' ಇದರ ಸಂಪಾದಕರು.
ಫೈನಾನ್ಸಿಯಲ್ ಕ್ರೋನಿಕಲ್
[ಬದಲಾಯಿಸಿ]2008 ಎಪ್ರಿಲ್ 16ರಂದು ಆರಂಭವಾಯಿತು. ಡೆಕನ್ ಕ್ರೋನಿಕಲ್ ಹೋಲ್ಡಿಂಗ್ಸ್ ಎಲ್‍ಟಿಡಿ ಇದರ ಮಾಲೀಕತ್ವವನ್ನು ಹೊಂದಿದೆ. ಇಂಗ್ಲೀಷ್ ದಿನಪತ್ರಿಕೆಯಾಗಿದ್ದು. ಸಹ ಸಂಪಾದಕರಾದ ಶೂಭ್ರಂಗ್ಶೂ ರೊಯ್ ಇದರ ಎಲ್ಲ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಮೊದಲು ಆರಂಭಗೊಂಡು ನಂತರ ಮುದ್ರಣ ಮಾಧ್ಯಮವನ್ನು ಪ್ರಾರಂಭಿಸಿದ ಏಕೈಕ ದಿನಪತ್ರಿಕೆ ಎಂಬ ಹೆಗ್ಗಳಿಗೆ ಇದರದು.
ಫೈನಾನ್ಸಿಯಲ್ ಎಕ್ಸಪ್ರೆಸ್
[ಬದಲಾಯಿಸಿ]1961 ರಂದೂ ಇಂಡಿಯನ್ ಎಕ್ಸಪ್ರೆಸ್ ಗ್ರೂಪ್‍ನಿಂದ ಪ್ರಾರಂಭವಾಯಿತು. ಇಂಗ್ಲೀಷ್ ಪತ್ರಿಕೆಯಾಗಿದ್ದು, ದೇಶದಲ್ಲೆ ವಾಣಿಜ್ಯ ವಿಷಯಗಲನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದೆ. 11 ಆವೃತ್ತಿಗಳನ್ನು ಹೊರತರುತ್ತದೆ. ದೆಹಲಿ ಇದರ ಮುಖ್ಯ ಕಛೇರಿ.
ದ ಹಿಂದು ಬಿಸಿನೆಸ್ ಲೈನ್
[ಬದಲಾಯಿಸಿ]1994ರಲ್ಲಿ ಕಸ್ತೂರಿ ಆÀ್ಯಂಡ್ ಸನ್ಸ್ ಇವರು ಆರಂಭಿಸಿದರು. ಇಂಗ್ಲೀಷ್ ದಿನಪತ್ರಿಕೆಯಾಗಿದ್ದು ದಿನನಿತ್ಯ 1,17,000 ಪ್ರತಿಗಳು ಮುದ್ರಣಗೊಳ್ಳುತ್ತವೆ. ಚೆನೈ ಇದರ ಮುಖ್ಯ ಕಛೇರಿ. ದೇಶದ 17 ಕೇಂದ್ರಗಳಲ್ಲಿ ದಿನಪತ್ರಿಕೆ ಮುದ್ರಣಗೊಳ್ಳುತ್ತದೆ.
ಮಿಂಟ್
[ಬದಲಾಯಿಸಿ]ಫೆಬ್ರುವರಿ 1, 2007ರಲ್ಲಿ ರಾಜು ನರಿಸೆಟ್ಟಿ ಇದನ್ನು ಆರಂಭಿಸಿದರು. ಇಂಗ್ಲೀಷ್ ದಿನಪತ್ರಿಕೆಯಾಗಿದ್ದು ಎಚ್‍ಟಿ ಮೀಡಿಯಾ ಇದರ ಹಕ್ಕನ್ನೂ ಹೊಂದಿದೆ. ಪ್ರಸ್ತುತ ಸುಕುಮಾರ ರಂಗನಾಥನ್ ಇದರ ಸಂಪಾದಕರು. ಹೊಸ ದೆಹಲಿ ಇದರ ಮುಖ್ಯ ಕಛೇರಿ.
ಅವಕಾಶ ಹಾಗೂ ವ್ಯಾಪ್ತಿ
[ಬದಲಾಯಿಸಿ]ಮುಂದುವರೆದ ರಾಷ್ಟ್ರಗಳಲ್ಲಿ ಈ ಕ್ಷೇತ್ರಕ್ಕೆ ತುಂಬ ಬೇಡಿಕೆ ಇದೆ, ಅಮೆರೀಕ, ಇಂಗ್ಲೆಂಡ, ಯೂರೋಪ್ ದೇಶಗಳಲ್ಲಿ ವ್ಯವಹಾರ, ವಾಣಿಜ್ಯಕ್ಕೆ ಹೆಚ್ಚಿನ ಆದ್ಯತೆ ಇರುವ ಕಾರಣದಿಂದ ವ್ಯವಹಾರಿಕ ಪತ್ರಿಕೋದ್ಯಮ ವಿಶಿಷ್ಟವಾಗಿ ಗಮನ ಸೆಳೆಯುತ್ತದೆ. ದೇಶದ ಬೆಳವಣಿಗೆಯಲ್ಲಿ ಅರ್ಥವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಆ ದೃಷ್ಟಿಯಿಂದ ಮುಂದುವರೆಯುತ್ತಿರುವ ದೇಶಗಳಲ್ಲಿ ಈ ಕ್ಷೇತ್ರಕ್ಕೆ ಪ್ರಧಾನ ಆದ್ಯತೆ ನೀಡಲಾಗುತ್ತದೆ.
ನಿಯತಕಾಲಿಕಗಳು
[ಬದಲಾಯಿಸಿ]ಭಾರತದಲ್ಲಿ ಹಲವು ವಾಣಿಜ್ಯ ಹಾಗು ವ್ಯವಹಾರಿಕ ನಿಯತಕಾಲಿಕಗಳು ಮುದ್ರಣಗೊಳ್ಳುತ್ತವೆ. ಅವುಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಗೊಳ್ಳುವ ನಿಯತಕಾಲಿಕಗಳು ಹೊಲಿಸಿದರೆ ಇಂಗ್ಲೀಷ ಭಾಷೆಯಲ್ಲಿ ಪ್ರಕಟಗೊಳ್ಳುವ ನಿಯತಕಾಲಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚು. ಅವುಗಳಲ್ಲಿ ಬ್ಯುಸಿನೆಸ್ ವಲ್ಡ್, ಔಟ್ಲುಕ್ ಮನಿ, ಬ್ಯುಸಿನೆಸ ಟುಡೇ, ಬ್ಯುಸಿನೆಸ್ ಇಂಡಿಯಾ, ಪೋಬ್ರ್ಸ ಇಂಡಿಯಾ ಟಾಪ್ ಸ್ಥಾನದಲ್ಲಿವೆ.
ಔಟ್ಲುಕ್ ಮನಿ
[ಬದಲಾಯಿಸಿ]1989ರಲ್ಲಿ ಪ್ರಾರಂಭಗೊಂಡಿತು. ಇನ್‍ವೆಸ್ಟಮೆಂಟ್ಸ, ಇನ್‍ಸುರೆನ್ಸ, ಟಾಕ್ಸಗೆ ಸಂಬಂಧಿಸಿದ ವ್ಯವಹಾರಗಳು, ಲೋನ್, ಹಾಗೂ ನಿವೃತ್ತಿ ಹೊಂದುತ್ತಿರುವವರಿಗೆ ಬೇಕಾದ ಎಲ್ಲ ರೀತಿಯ ವಿಷಯಗಳನ್ನು ಪ್ರಕಟಿಸಲಾಗುತ್ತದೆ. ಇದು ಇಂಗ್ಲೀಷ್ ಭಾಷೆಯಲ್ಲಿ ಹದಿನೈದು ದಿನಕ್ಕೊಮ್ಮೆ ಪ್ರಕಟಗೊಳ್ಳುತ್ತದೆ.
ಬ್ಯುಸಿನೆಸ ಟುಡೇ
[ಬದಲಾಯಿಸಿ]1992ರಲ್ಲಿ ಪ್ರಟನೆಯನ್ನು ಆರಂಭಿಸಿತು. 2.9 ಲಕ್ಷ ಒದುಗರನ್ನು ಹೊಂದಿದೆ. ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತದೆ. ವಾಣಿಜ್ಯ, ಮಾರುಕಟ್ಟೆ, ಉದ್ಯಮದ ಕುರಿತಾದ ಸುದ್ದಿಗಳು ಹೆಚ್ಚು ಪ್ರಕಟವಾಗುತ್ತವೆ. ಎಲ್ಲ ವಿಷಯಗಳನ್ನು ಪಾರದರ್ಶಕ ದೃಷ್ಟಿಕೋನದಿಂದ ಅಳೆದು ಒದುಗರಿಗೆ ಮುಟ್ಟಿಸುವ ವಿಭಿನ್ತೆಯಿಂದ ಇದು ದೇಶದಲ್ಲೆ ಪ್ರಮುಖ ವಾಣಿಜ್ಯ ನಿತಕಾಲಿಕವಾಗಿ ಕರೆಯಲ್ಪಡುತ್ತದೆ.
ಪೋಬ್ರ್ಸ ಇಂಡಿಯಾ
[ಬದಲಾಯಿಸಿ]ವ್ಯವಹಾರಿಕ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡುವದು ಇದರ ಮುಖ್ಯ ಗುರಿ.
ಬ್ಯುಸಿನೆಸ್ ಇಂಡಿಯಾ ವಿಷಯ ಸಂಗ್ರಹಣೆ, ಪ್ರಸ್ತಾವಣೆ, ಆಧುನಿಕ ಟ್ರೆಂಡ್, ಸಂಖ್ಯೆಯಲ್ಲಿಯೂ ಭಾರತದಲ್ಲಿಯೇ ಯಶಸ್ವಿ ವಾಣಿಜ್ಯ ನಿಯತಕಾಲಿಕವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ https://books.google.co.in/books?id=pLV1AwAAQBAJ&pg=PA225&lpg=PA225&dq=business+journalism+encyclopedia+definition&source=bl&ots=j68yb25aXo&sig=vtmAaFE0OnaYcRcrWjKstsaZdnA&hl=en&sa=X&redir_esc=y#v=onepage&q=business%20journalism%20encyclopedia%20definition&f=false
- ↑ http://www.bizjournalismhistory.org/