ವೈ. ಆರ್. ಮೋಹನ್
ವೈ ಆರ್. ಮೋಹನ್' (ಏಪ್ರಿಲ್ ೨೧, ೧೯೩೩- ಏಪ್ರಿಲ್ ೨೧, ೨೦೧೫) ಡಾ.ವೈ.ಆರ್.ಮೋಹನ್, ಆಮೆರಿಕನ್ನಡಿಗರ ಸಾಲಿನಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಸಿದ ಪ್ರಥಮ ವ್ಯಕ್ತಿ. ವೃತ್ತಿಯಲ್ಲಿ ಮೋಹನ್ ಸಮಾಜ ಶಾಸ್ತ್ರದ ಉಪನ್ಯಾಸಕ.
ಕೃತಿಗಳು
[ಬದಲಾಯಿಸಿ]ಅಮೆರಿಕಾಯಣ [೧] ಮತ್ತೊಂದು ಮಹತ್ತರ ಕೃತಿ. 'ಪಾರ್ಕಿನ್ಸನ್; ಕಾಯಿಲೆಯಿಂದ ನರಳುತ್ತಿದ್ದ ಸಮಯದಲ್ಲೇ, ಇಂಗ್ಲಿಷ್ ಭಾಷೆಯಲ್ಲಿ ಹಲವಾರು ಕೃತಿಗಳೂ ಅವರ ಲೇಖನಿಯಿಂದ ಹೊರಬಂದವು. ಅಮೇರಿಕಾದ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರದ ಪ್ರಾಧ್ಯಾಪಕರಾಗಿ ದುಡಿದರು. ಸಹ್ಯಾದ್ರಿ ಕನ್ನಡ ಕೂಟದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕನ್ನಡ ಸಾಹಿತ್ಯ ರಂಗದ ಪ್ರಕಟಣೆಯ ವಿಭಾಗ [೨]ದಿಂದ ಹಲವಾರು ಲೇಖನಗಳು ಬೆಳಕು ಕಂಡಿವೆ.
ಪರಿವಾರ
[ಬದಲಾಯಿಸಿ]ಸುನಂದಾ ಮೋಹನ್ (೫೦) ಪತ್ನಿ, ಮಕ್ಕಳು : ೧.ಸಂಜಯ, ೨.ಜೈದೀಪ್. ಮೊಮ್ಮಕ್ಕಳು : ೧.ಮಾಯಾ, ೨. ನವ್ಯ, ೩.ಅರನಸ್
ಜನನ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಕರ್ನಾಟಕ ರಾಜ್ಯದ ಶಿವಮೊಗ್ಗೆಯಲ್ಲಿ ಜನನ. ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸವನ್ನು 'ಬೇಗವಳ್ಳಿ', 'ತೂದೂರು' ಹಳ್ಳಿಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ನಡೆಯಿತು. ಶಿವಮೊಗ್ಗೆಯಲ್ಲಿ ಇಂಟರ್ಮೀಡಿಯೆಟ್ ಪರೀಕ್ಷೆ ಪಾಸ್ ಮಾಡಿ ಮೈಸೂರಿನಲ್ಲಿ ಬಿ.ಎ ; ಎಮ್.ಎ. (ಸೋಶಿಯಾಲಜಿ ಯಲ್ಲಿ) ಪದವಿಗಳನ್ನು ಗಳಿಸಿದರು. ಮುಂದೆ ಮುಂಬಯಿ ಹಾಗೂ ದೆಹಲಿಯಲ್ಲಿ ಸಂಶೋಧನೆಯನ್ನು ಮಾಡಿದರು. ಇದರ ಬಳಿಕ, ಅಮೇರಿಕಾದ ಮಿಸಿಸಿಸಿಪ್ಪಿ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸೋಶಿಯಾಲಜಿ ವಿಷಯದಲ್ಲಿ ೧೯೭೮ ರಲ್ಲಿ ಡಾಕ್ಟರೇಟ್ ಗಳಿಸಿದರು. ೧೯೭೯ ರ ನಂತರ, ಸ್ಟಿಲ್ ಮನ್ ಕಾಲೇಜ್ ನಲ್ಲಿ ಪ್ರೊಫೆಸರ್ ಆಫ್ ಸೋಷಿಯಲ್ ಸೈನ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ವರ್ಷ ೧೯೮೯ ರಿಂದ ಪಾರ್ಕಿನ್ ಸನ್ ಖಾಯಿಲೆಯಿಂದ ನರಳುತ್ತಿದ್ದರು. ತಮ್ಮ ೬೫ ನೆಯ ವಯಸ್ಸಿನಲ್ಲಿ ಆ ರೋಗದಿಂದ ಹೊರಗೆ ಬರಲು ಬಹಳ ಪ್ರಯತ್ನಮಾಡಿ ವಿಫಲರಾದರು. ಪಾರ್ಕಿನ್ಸನ್ ಕಾಯಿಲೆಗೆ ನೆರವು ಕೊಡುವ ಸಂಸ್ಥೆ ಬಳಸುವ ಚಿಕಿತ್ಸಾ ವಿಧಾನಗಳ ಬಗ್ಗೆ ಬರೆಯಲು ಪ್ರಾರಂಭಿಸಿದರು. 'ನೆನಪುಗಳು' ಎನ್ನುವ ಪುಸ್ತಕ ಬರೆದ ಉದ್ದಿಶ್ಯ, ಪಾರ್ಕಿನ್ಸನ್ ರೋಗದಿಂದ ತಮ್ಮ ಸ್ಮೃತಿ ಅಳಿಸಿಹೋಗುವ ಮುನ್ನ ಜಾರುತ್ತಿರುವ ನೆನಪುಗಳನ್ನು ಹಾಳೆಯಲ್ಲಿ ಬರೆದಿಡುವುದಾಗಿತ್ತು. ಪುಸ್ತಕದ ಮುನ್ನುಡಿಯಲ್ಲಿ ರಾಷ್ಟ್ರಕವಿ ಕುವೆಂಪುರವರ ಮನನೀಯವಾದ ಪದ್ಯವೊಂದನ್ನು ಉದ್ಧರಿಸುತ್ತಾರೆ.
"ಮುಚ್ಛು ಮರೆಯಿಲ್ಲದಯೆನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ,
ಅಂತರಾತ್ಮ ! ನರಕವಿದೆ, ನಾಕವಿದೆ, ಪಾಪವಿದೆ, ಪುಣ್ಯವಿದೆ-ಧಿ ಸ್ವೀಕರಿಸು ಓ ಗುರುವೆ, ಅಂತರಾತ್ಮ ! ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು ನರಕ ತಾನು ತುಳಿಯುವುದೆ ನರಕವಾಗಿ ? ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಗೆ ಧ ಪಾಪ ತಾನುಳಿವುದೆ ಪಾಪವಾಗಿ ?
ಕಾಂತರೀತಿಯನಾಂತು ಕದಡಿರುವದೆನ್ನಾತ್ಮ ನೋಂತರೀತಿಯದೆಂತೋ,
ಓ ಅನಂತ ! ನನ್ನ ರೀತಿಯ ಕುರುಡಿನಿಂದೆನ್ನ ರಕ್ಷಿಸಿ, ಧಿ ನಿನ್ನ ನೀತಿಯ ಬೆಳಕಿನ ಆನಂದಕೊಯೆ ಮುಚ್ಚುಮರೆಯಿಲ್ಲದೆಯೆ..-ಕುವೆಂಪು
ಪ್ರಶಸ್ತಿಗಳು
[ಬದಲಾಯಿಸಿ]- ಆತ್ಮಕಥನ, (ನೆನಪುಗಳು) [೧] ಕಥನಸಂಕಲನಕ್ಕೆ ಕರ್ನಾಟಕ ಸಾಹಿತ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ನಿಧನ
[ಬದಲಾಯಿಸಿ]ಅಮೆರಿಕನ್ನಡಿಗ [೩] ವೈ.ಆರ್.ಮೋಹನ್ ರವರು, ಏಪ್ರಿಲ್, ೨೧, ೨೦೧೫ ರಂದು ನಿಧನರಾದರು. ಹಿರಿಯ ಅಮರಿಕನ್ನಡಿಗ, ಕನ್ನಡ ಸಾಹಿತಿ,ಪಾರ್ಕಿನ್ಸನ್ ಕಾಯಿಲೆಯಿದ್ಮ ಪೀಡಿತರಾಗಿದ್ದರು
ಉಲ್ಲೇಖಗಳು
[ಬದಲಾಯಿಸಿ]- ↑ ಮೇ ೧೪ ಕ್ಕೆ,ಮೋಹನರ ಅಮೆರಿಕಾಯಣ ಬಿಡುಗಡೆ,ಒನ್ ಇಂಡಿಯ, ಮೇ,೧೩,೨೦೦೩
- ↑ ಸಾಹಿತ್ಯ ರಂಗದಿಂದ ಶಿಕಾಗೋ ಸಮ್ಮೇಳನ-೨೦೦೭
- ↑ ಅಮೆರಿಕನ್ನಡ, ಡಾ.ವೈ.ಆರ್. ಲೇಖನಗಳು