ವೈ.ಕೆ.ಸಂಧ್ಯಾಶರ್ಮ

ವಿಕಿಪೀಡಿಯ ಇಂದ
Jump to navigation Jump to search

ವೈ.ಕೆ.ಸಂಧ್ಯಾಶರ್ಮ ಅವರು ಎಂ.ಎ. ಪದವೀಧರೆ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿದ್ದಾರೆ. ಪತ್ರಿಕೋದ್ಯಮ ಹಾಗು ಕನ್ನಡ ರಂಗಭೂಮಿಗೂ ಸಹ ಇವರಿಂದ ಸೇವೆ ಸಂದಿದೆ.

ಸಣ್ಣ ಕಥೆ[ಬದಲಾಯಿಸಿ]

ಸಣ್ಣಗೆ ಹಾಡು ಗುನುಗಿಕೊಳ್ಳುತ್ತ, ಬಲಭುಜದಲ್ಲಿ ನೇತಾಡುತ್ತಿದ್ದ ವ್ಯಾನಿಟಿ ಬ್ಯಾಗನ್ನು ಎಡ ಭುಜಕ್ಕೆ ಬದಲಾಯಿಸಿಕೊಂಡು ಸಶಬ್ದವಾಗಿ ಗೇಟು ತೆರೆದು, ಮುಂಬಾಗಿಲ ಮುಂದಿದ್ದ ಎರಡು ಮೆಟ್ಟಿಲನ್ನು ಕುಪ್ಪಳಿಸಿ ಹತ್ತಿ , ಯಾವುದೋ ಗುಂಗಿನಲ್ಲಿ ಕರೆಗಂಟೆಯ ಮೇಲೆ ಜೋರಾಗಿ ಬೆರಳನ್ನೊತ್ತಿದಳು ಛಾಯಾ. ಗಂಟಲು ಕಟ್ಟಿದ್ದ ಬೆಲ್ಲಿನ ಕರ್ಕಶ ಶಬ್ದ ಅವಳ ಕಿವಿಗೇ ಅಪ್ಪಳಿಸಿತಾದರೂ ಯಾರೂ ಎದ್ದು ಬಂದು ಬಾಗಿಲು ತೆರೆಯಲಿಲ್ಲ. ತೆರೆಯುವ ಸೂಚನೆಯೂ ಕಾಣದಾದಾಗ, ಛಾಯಾ ಮತ್ತೊಮ್ಮೆ ಜೋರಾಗಿ ಬೆಲ್ ಒತ್ತಿ, ಕದವನ್ನು ಎರಡು ಸಲ ಬಡಿದಳು.

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

 • ಪರಿವೇಷ
 • ಪರಿಭ್ರಮಣ
 • ಕವಣೆಗಿಟ್ಟ ಕಲ್ಲು
 • ಕಾನನದ ನಡುವೆ
 • ನೃತ್ಯ ಸರಸ್ವತಿ
 • ಗುಪ್ತಗಾಮಿನಿ
 • ಶ್ವೇತ ಮಹಲ್
 • ಬೊಗಸೆ ಬೆಲದಿಂಗಳು
 • ನೆಲೆಗಾಣದ ಹಕ್ಕಿ
 • ಪ್ರೇಮಚಂದನ
 • ಬೆಳ್ಳಿಕಿರಣ
 • ಮೋಡದ ನೆರಳು
 • ಮನಸೇ ಒ ಮನಸೇ
 • ಮಧು ಸಿಂಚನ
 • ಕನಸಿಗೊಂದು ಕನ್ನಡಿ

ಕಥಾ ಸಂಕಲನ[ಬದಲಾಯಿಸಿ]

 • ಕಿರುಗುಟ್ಟುವ ದನಿಗಳು
 • ತಾಳ ತಪ್ಪಿದ ಮೇಳ
 • ಬೆಳಕಿಂಡಿ

ವಿಚಾರ ಸಾಹಿತ್ಯ[ಬದಲಾಯಿಸಿ]

 • ಮಹಿಳೆ ಮತ್ತು ಉದ್ಯೋಗ

ಜೀವನ ಚರಿತ್ರೆ[ಬದಲಾಯಿಸಿ]

 • ಅಹಲ್ಯಾಬಾಯಿ ಹೋಳ್ಕರ

ಸಂಪಾದನೆ[ಬದಲಾಯಿಸಿ]

 • ನಮ್ಮ ಲೇಖಕಿಯರು


ಇವರ ಲಬ್ಯವಿರುವ ವಿಳಾಸ: ೩೬೫, ೧೧ನೆಯ ಕ್ರಾಸ್, ೨ನೆಯ ಬ್ಲಾಕ್, ಜಯನಗರ, ಬೆಂಗಳೂರು-೫೬೦ ೦೧೧