ವೈಸ್ ಸಿಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Pagetype/setindex' not found.

ಚಿತ್ರ:GTAVC OceanBeach.jpg
ವೈಸ್ ಸಿಟಿಯು ಫ್ಲೋರಿಡಾದ ಮಿಯಾಮಿಗೆ ಹತ್ತಿರದಲ್ಲಿದೆ.

ವೈಸ್ ಸಿಟಿ ಯು ಗ್ರ್ಯಾಂಡ್ ಥೆಫ್ಟ್ ಆಟೋ ಸರಣಿಯ ಫ್ಲೋರಿಡಾದ ಮಿಯಾಮಿಯಲ್ಲಿರುವ ಒಂದು ಕಾಲ್ಪನಿಕ ನಗರ. ನಗರದ ಎರಡು ರೂಪಾಂತರಗಳು ಸರಣಿಯ ಬೇರೆ ಬೇರೆ ಹಂತಗಳಲ್ಲಿ ಕಾಣಿಸಿಕೊಂಡಿವೆ: ಗ್ರ್ಯಾಂಡ್ ಥೆಫ್ಟ್ ಆಟೋ ಚಿತ್ರಣವು ಭೌಗೋಳಿಕವಾಗಿ ಮಿಯಾಮಿಯನ್ನು ಹೆಚ್ಚು ಹೋಲುತ್ತದೆ. Grand Theft Auto: Vice City ಚಿತ್ರಣವು (Grand Theft Auto: Vice City Stories ನಲ್ಲಿಯ‌ೂ ತೋರಿಸಲಾಗಿದೆ) ಮಧ್ಯದಲ್ಲಿ ಮ‌ೂರು ಸಣ್ಣ ದ್ವೀಪಗಳನ್ನು ಹೊಂದಿರುವುದರೊಂದಿಗೆ ಎರಡು ಪ್ರಧಾನ ಭೂಭಾಗದ ದ್ವೀಪಗಳನ್ನು ಒಳಗೊಂಡಿದೆ. ಈ ವೈಸ್ ಸಿಟಿಯ ಚಿತ್ರಣವು ಮಿಯಾಮಿಯ 1980ರ ದಶಕದ ಸಂಸ್ಕೃತಿಯಿಂದ ಗಮನಾರ್ಹ ಪ್ರೇರಣೆ ಪಡೆದಿದೆ.

ಫ್ಲೋರಿಡಾ ಕೀಸ್ ‌ನಲ್ಲಿರುವ ವೈಸ್ ಸಿಟಿಯು ಉಪೋಷ್ಣವಲಯದ ಅಥವಾ ಉಷ್ಣವಲಯದ-ಹತ್ತಿರದ ವಾಯುಗುಣವನ್ನು ಹೊಂದಿದೆ. ವರ್ಷಪೂರ್ತಿ ಬಿಸಿಲಿನ ಹವಾಗುಣವಿದ್ದು, ಆಗೊಮ್ಮೆ ಈಗೊಮ್ಮೆ ಬಲವಾದ ಗಾಳಿ ಬೀಸುವ ಮತ್ತು ಮಳೆ ಬರುವ ಸಂಭವಿರುತ್ತದೆ. ಮಿಯಾಮಿಯಂತೆ ಈ ನಗರವೂ ಭಾರಿ ಮಳೆ, ಗುಡುಗಿನ ಚಂಡಮಾರುತ(ಹರಿಕೇನ್)ಕ್ಕೆ ಒಳಗಾಗಿದೆ, ಎಂದು ಗ್ರ್ಯಾಂಡ್ ಥೆಫ್ಟ್ ಆಟೋ: ವೈಸ್ ಸಿಟಿ ಮತ್ತು ಗ್ರ್ಯಾಂಡ್ ಥೆಫ್ಟ್ ಆಟೋ: ವೈಸ್ ಸಿಟಿ ಸ್ಟೋರೀಸ್ ‌ನಲ್ಲೂ ಸೂಚಿಸಲಾಗಿದೆ; ಆರಂಭದಲ್ಲಿ ವೈಸ್ ಸಿಟಿ ಯಲ್ಲಿ ಹರಿಕೇನ್ ಹರ್ಮಿಯೋನ್ ನಗರಕ್ಕೆ ಬರುತ್ತಿದೆ, ಎಂದು ಗೊತ್ತಾದಾಗ ಸಾರ್ವಜನಿಕ ಬಳಕೆಯ ಸೇತುವೆಗಳು ಮುಚ್ಚುತ್ತಿದ್ದವು. ಅದೇ ರೀತಿ ವೈಸ್ ಸಿಟಿ ಸ್ಟೋರೀಸ್ ‌ನಲ್ಲಿ ಹೇಳಿದಂತೆ ಹರಿಕೇನ್ ಗಾರ್ಡಿಯ‌ೂ ಸಹ ನಗರಕ್ಕೆ ಬರುತ್ತಿತ್ತು.

ಗ್ರ್ಯಾಂಡ್ ಥೆಫ್ಟ್ ಆಟೋ ಚಿತ್ರಣ[ಬದಲಾಯಿಸಿ]

ಗ್ರ್ಯಾಂಡ್ ಥೆಫ್ಟ್ ಆಟೋ: ವೈಸ್ ಸಿಟಿ ಗೆ ಹೋಲಿಸಿದರೆ ವೈಸ್ ಸಿಟಿಯ ಗ್ರ್ಯಾಂಡ್ ಥೆಫ್ಟ್ ಆಟೋ ಚಿತ್ರಣವು ಭೌಗೋಳಿಕವಾಗಿ ಮಿಯಾಮಿಯನ್ನು ಹೆಚ್ಚು ನಿಖರವಾಗಿ ಹೋಲುತ್ತದೆ. ಪೂರ್ವ ಮಿಯಾಮಿ, ಫೋರ್ಟ್ ಲಾಡರ್ಡೇಲ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು "ವೈಸ್ ಬೀಚ್" ಎಂದು ಚಿತ್ರಿಸಲಾಗಿದೆ. ನಾರ್ತ್ ಮಿಯಾಮಿ ಬೀಚ್ ಮತ್ತು ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಒಟ್ಟಿಗೆ "ಫೆಲಿಸಿಟಿ" ಎಂದಾಗಿದೆ. ಪಶ್ಚಿಮ ವೈಸ್ ಸಿಟಿಯು ಮಿರಾಮೈರ್, ಕೋರಲ್ ಸಿಟಿ, ಗ್ರೀಕ್ ಹೈಟ್ಸ್, ಲಿಟಲ್ ಡೊಮಿನಿಕ, ಲಿಟಲ್ ಬಗೋಟ ಮಚ್ಚು ರಿಮ್‌ಮ್ಯಾನ್ ಹೈಟ್ಸ್ ಮೊದಲಾದ ಪ್ರದೇಶಗಳನ್ನು ಒಳಗೊಂಡಿದೆ. ಪ್ರತಿಯೊಂದೂ ಬ್ರೊವಾರ್ಡ್‌ ಮತ್ತು ಡೇಡ್‌ ಕೌಂಟಿಗಳಲ್ಲಿ ಬರುತ್ತವೆ. ಇದು ಭೌಗೋಳಿಕವಾಗಿ ತುಂಬಾ ನಿಖರವಾಗಿದ್ದರೂ, ಸಂಸ್ಕೃತಿಯಲ್ಲಿ ಅಷ್ಟೊಂದು ಯಥಾರ್ಥವಾಗಿಲ್ಲ.

ನಗರದಲ್ಲಿರುವ ಜಿಲ್ಲೆಗಳು ಮತ್ತು ಸ್ಥಳಗಳು:

ಗ್ರ್ಯಾಂಡ್ ಥೆಫ್ಟ್ ಆಟೋ: ವೈಸ್ ಸಿಟಿ ಚಿತ್ರಣ[ಬದಲಾಯಿಸಿ]

ಸ್ಥೂಲ ಅವಲೋಕನ[ಬದಲಾಯಿಸಿ]

Vice City
City of Vice
The map of Vice City, as depicted in Grand Theft Auto: Vice City Stories. Left to right: Mainland, Midland containing various islands and Vice Beach.
The map of Vice City, as depicted in Grand Theft Auto: Vice City Stories. Left to right: Mainland, Midland containing various islands and Vice Beach.
CountryUnited States
StateFlorida
IslandsVice Mainland
Vice Beach
Vice Point (centralwestern part)
Starfish Island
Leaf Links
Prawn Island
Government
 • CongressmanAlex Shrub (R)
Population
 • Total೧೮,೦೦,೦೦೦
Area code555
WebsiteOfficial Vice City website

Grand Theft Auto: Vice City ನಲ್ಲಿ ಚಿತ್ರಿಸಲಾದ ವೈಸ್ ಸಿಟಿಯು 1980ರ ದಶಕದ ಮಿಯಾಮಿಯ ಅನುರೂಪತೆಯಲ್ಲಿ 1986ರಲ್ಲಿ ಸ್ಥಾಪಿತವಾಯಿತು. ಇದು ಆ ಸಂದರ್ಭದಲ್ಲಿ ದಕ್ಷಿಣ ಅಮೇರಿಕಕೊಕೇನ್‌ಗೆ ಪ್ರಮುಖ ಹಡಗು-ಸಾಗಣೆಗೆ ಕೇಂದ್ರವಾಗಿತ್ತು. ಇದು ಅದರ ಮಾದಕ ಪದಾರ್ಥಗಳ ವ್ಯವಹಾರ ಮತ್ತು ಅಪರಾಧ, ಮಾತ್ರವಲ್ಲದೆ ಹೊಸ ಉನ್ನತ-ಶ್ರೇಣಿಯ ವ್ಯವಹಾರ ಮತ್ತು ಮಾದಕ ದ್ರವ್ಯಗಳ ವ್ಯಾಪಾರದಿಂದ ಹಣ ಸಂಪಾದಿಸುತ್ತಿದ್ದ ನಿವಾಸಿಗಳ ಅಸ್ತಿತ್ವದಿಂದ ಮತ್ತಷ್ಟು ಬಲಗೊಂಡಿತು. ಲಿಬರ್ಟಿ ಸಿಟಿ, ಸ್ಯಾನ್ ಆಂಡ್ರಿಯಸ್, ಕ್ಯಾರ್ಸರ್ ಸಿಟಿ (ಮ್ಯಾನ್‌ಹಂಟ್) ಮತ್ತು ಬುಲ್‌ವರ್ತ್ (ಬುಲ್ಲಿ) ಮೊದಲಾದವುಗಳಿರುವ ಕಾಲ್ಪನಿಕ ಪ್ರಪಂಚದಲ್ಲೇ ಈ ನಗರವೂ ಇದೆ. ವೈಸ್ ಸಿಟಿಯು ಫ್ಲೋರಿಡಾ ರಾಜ್ಯದಲ್ಲಿ ಇದೆ, ಎಂದು ನಿರ್ದಿಷ್ಟವಾಗಿ ಸೂಚಿಸಲಾಗುತ್ತದೆ.[೧] ಆದರೆ ವೈಸ್ ಸಿಟಿಯು ಮಿಯಾಮಿಯ ಪಕ್ಕದಲ್ಲಿದೆ, ಎಂದೂ ಗ್ರ್ಯಾಂಡ್ ಥೆಫ್ಟ್ ಆಟೋ III ರಲ್ಲಿ ಹೇಳಲಾಗಿದೆ.[೨]

ವೈಸ್ ಸಿಟಿಯು ಎರಡು ಪ್ರಮುಖ ದ್ವೀಪಗಳನ್ನು ಹಾಗು ಪ್ರಾವ್ನ್ ದ್ವೀಪ (ಅತ್ಯಂತ ಉತ್ತರದ ದ್ವೀಪ), ಸ್ಟಾರ್‌ಫಿಶ್ ದ್ವೀಪ (ಅತ್ಯಂತ ದಕ್ಷಿಣದ ದ್ವೀಪ) ಮತ್ತು ಲೀಫ್ ಲಿಂಕ್ಸ್ (ಮ‌ೂರು ದ್ವೀಪಗಳನ್ನು ಹೊಂದಿದೆ.) ಹೀಗೆ ಮೊದಲಾದ ಐದು ಸಣ್ಣ ದ್ವೀಪಗಳನ್ನು ಒಳಗೊಂಡಿದೆ. ಎರಡೂ ಪ್ರಮುಖ ದ್ವೀಪಗಳು, ಮಿಯಾಮಿ ಬೀಚ್ಅನ್ನು ಮುಖ್ಯ ಭೂಭಾಗ ಮಿಯಾಮಿಯಿಂದ ಬೇರ್ಪಡಿಸುವ ಬಿಸ್ಕೇನ್ ಬೇಯಂತೆ ದೊಡ್ಡ ಜಲರಾಶಿಯಿಂದ ಬೇರ್ಪಡಿಸಲ್ಪಟ್ಟಿವೆ. ಪ್ರತಿ ಪ್ರಮುಖ ದ್ವೀಪಗಳು ಅನೇಕ ಜಿಲ್ಲೆಗಳಾಗಿ ವಿಭಾಗಿಸಲ್ಪಟ್ಟಿವೆ. ವೈಸ್ ಸಿಟಿಯ ಜನಸಂಖ್ಯೆ ಸುಮಾರು 1.8 ದಶಲಕ್ಷದಷ್ಟಿದೆ, ಎಂದು ಅಂದಾಜಿಸಲಾಗಿದೆ.[೩]

ಈ ನಗರವು ನಾಲ್ಕು ಆಸ್ಪತ್ರೆಗಳನ್ನು (ಪ್ರತಿ ಮುಖ್ಯ ದ್ವೀಪಗಳಲ್ಲಿ ಎರಡು) ಮತ್ತು ನಾಲ್ಕು ಪೋಲೀಸ್ ಠಾಣೆ‌ಗಳನ್ನು (ಪ್ರತಿ ಮುಖ್ಯ ದ್ವೀಪಗಳಲ್ಲಿ ಎರಡು) ಹೊಂದಿದೆ; ಈ ಸೌಕರ್ಯಗಳು ಅನುಕ್ರಮವಾಗಿ ಆಟಗಾರ ಸಾವನ್ನಪ್ಪಿದರೆ ಅಥವಾ ಬಂಧನಕ್ಕೊಳಗಾದರೆ ಪುನಃಶಕ್ತಿ ಕೊಡುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ನಗರವು ಒಂದು ಅಗ್ನಿಶಾಮಕ ಕೇಂದ್ರ ಮತ್ತು ಒಂದು ಮಿಲಿಟರಿ ಕಾರ್ಯಕೇಂದ್ರವನ್ನೂ ಹೊಂದಿದೆ. ಸ್ಯಾನ್ ಆಂಡ್ರಿಯಸ್‌ ರಾಜ್ಯ ಮತ್ತು ಲಿಬರ್ಟಿ ಸಿಟಿಗಿಂತ ಭಿನ್ನವಾಗಿ ವೈಸ್ ಸಿಟಿಯು ರೈಲು ಅಥವಾ ವೇಗದ ಸಾರಿಗೆ ವ್ಯವಸ್ಥೆಗಳನ್ನು ಹೊಂದಿಲ್ಲ. ಎಲ್ಲಾ ದ್ವೀಪಗಳು ರಸ್ತೆ ಅಥವಾ ಕಾಲ್ನಡೆಯಲ್ಲಿ ಹೋಗುವ ಸೇತುವೆಗಳಿಂದ ಪರಸ್ಪರ ಸಂಪರ್ಕ ಪಡೆದಿವೆ. ಈ ನಗರವು ಇತರ GTA ನಗರಗಳಂತೆ ಸ್ಥಳೀಯ ಬಾಡಿಗೆ ಮೋಟಾರು ಕಾರುಗಳನ್ನು ಹೊಂದಿದೆ. ವೈಸ್ ಸಿಟಿಯು ಸರಣಿಯಲ್ಲಿ ಬಾಡಿಗೆ ಮೋಟಾರು ಕಾರು ಸೇವೆಯನ್ನು ಒದಗಿಸುವ ಮೊದಲ ನಗರವಾಗಿದೆ. ಅದು ಆಟಗಾರರನ್ನು, ಒಂದು ನಿಯೋಗ ಲಭ್ಯವಾದಾಗ (ಕ್ಲಬ್‌ಗೆ) ಅಥವಾ ಆಟಗಾರರು ಕೊಲ್ಲಲ್ಪಟ್ಟು ಅಥವಾ ಬಂಧನಕ್ಕೊಳಗಾಗಿ ನಿಯೋಗವನ್ನು ಕಳೆದುಕೊಂಡಾಗ (ಫೋನ್ ನಿಯೋಗವನ್ನು ಹೊರತುಪಡಿಸಿ, ಕಳೆದ ನಿಯೋಗದ ಪ್ರವರ್ತಕ ಕೇಂದ್ರಕ್ಕೆ) ನೇರವಾಗಿ ಒಂದು ಸ್ಥಳಕ್ಕೆ ಬಾಡಿಗೆಗೆ ಕರೆದುಕೊಂಡು ಹೋಗುತ್ತದೆ. ಈ ಟ್ರಿಪ್ ಸ್ಕಿಪ್ ಬಾಡಿಗೆ ಕಾರು ವ್ಯವಸ್ಥೆಯನ್ನು Grand Theft Auto: San Andreas ಮತ್ತು Grand Theft Auto: Liberty City Stories ಅನ್ನೂ ಒಳಗೊಂಡಂತೆ ಆನಂತರದ GTA ಆಟಗಳಲ್ಲಿ ಬಳಸಲಾಗಿದೆ.

ಇತರ ಗ್ರ್ಯಾಂಡ್ ಥೆಫ್ಟ್ ಆಟೋ ನಗರಗಳಂತೆ ವೈಸ್ ಸಿಟಿಯಲ್ಲಿಯ‍ೂ ಮಕ್ಕಳು ಅಥವಾ ಶಾಲೆಗಳಿಲ್ಲ. ಮಕ್ಕಳಿದ್ದರೆ ಅವರೂ ಸಹ ವಯಸ್ಕರ ಪಾತ್ರಗಳಂತಹುದೇ ಪರಿಸ್ಥಿತಿಗೆ ಒಳಗಾಗಬೇಕಾಗುತ್ತದೆ. ಅದು ಅಮೇರಿಕ ಸಂಯುಕ್ತ ಸಂಸ್ಥಾನವನ್ನೂ ಒಳಗೊಂಡಂತೆ ಅನೇಕ ರಾಷ್ಟ್ರಗಳಲ್ಲಿ ಯಾವುದೇ ಸಂದರ್ಭದಲ್ಲಿಯ‌ೂ ಸ್ವೀಕಾರ ಯೋಗ್ಯವಾಗಿರುವುದಿಲ್ಲ.

ಗ್ರ್ಯಾಂಡ್ ಥೆಫ್ಟ್ ಆಟೋ: ವೈಸ್ ಸಿಟಿ ಯ ಆರಂಭದಲ್ಲಿ ಚಂಡಮಾರುತದ(ಹರಿಕೇನ್) ಮುನ್ಸೂಚನೆಯಿಂದಾಗಿ ಪಶ್ಚಿಮ ದ್ವೀಪವು ಎಲ್ಲೆ ದಾಟಿತ್ತು. ಆಟಗಾರನು ರಿಕಾರ್ಡೊ ಡೈಯಾಜ್‌ಗಾಗಿ ಕೆಲಸ ಮಾಡಲು ಆರಂಭಿಸಿದಾಗ, ಈ ಎಚ್ಚರಿಕೆಗಳು ಕಡಿಮೆಯಾದವು; ಮತ್ತು ಸೇತುವೆಗಳು ತೆರೆದುಕೊಂಡವು. ಇದಕ್ಕೆ ಪ್ರತಿಯಾಗಿ Grand Theft Auto: Vice City Stories ರಲ್ಲಿ ಪೂರ್ವ ದ್ವೀಪವು ಆಟದ ಮೊದಲಾರ್ಧದಲ್ಲಿ ಮತ್ತೊಂದು ಚಂಡಮಾರುತದ ಸೂಚನೆಯಿಂದಾಗಿ ಎಲ್ಲೆ ದಾಟಿತು.

ವೈಸ್ ಬೀಚ್‌[ಬದಲಾಯಿಸಿ]

ಆಟದ ಮಾರ್ಗ ಸೂಚಕದಲ್ಲಿ "ವೈಸ್ ಸಿಟಿ ಬೀಚ್" ಎಂದು ನಿರೂಪಿಸುವ ವೈಸ್ ಸಿಟಿಯ ಪೂರ್ವ ದ್ವೀಪವನ್ನು, ಹೆಚ್ಚು ಉನ್ನತ ಮತ್ತು ಮಧ್ಯಮ ಮಟ್ಟದ ಶ್ರೀಮಂತಿಕೆಯ ವ್ಯವಹಾರಗಳು ಹಾಗೂ ವಾಸಯೋಗ್ಯ ಕಟ್ಟಡ, ಮಹಡಿ ಮತ್ತು ನಿರ್ಮಾಣ ಸ್ಥಳಗಳು ವ್ಯಾಪಿಸಿಕೊಂಡಿರುವ ಹೆಚ್ಚು ಸಂಪದ್ಭರಿತ ಮತ್ತು ಪ್ರವಾಸೋದ್ಯಮಕ್ಕೆ ಪ್ರಸಕ್ತವಾದ ನಗರ ಎಂಬುದಾಗಿ ಚಿತ್ರಿಸಲಾಗಿದೆ. ಪೂರ್ವದ ದ್ವೀಪವು ವಿಸ್ತಾರವಾದ ಕರಾವಳಿಗೆ ಹೆಸರುವಾಸಿಯಾಗಿದೆ. ಅದರ ಪೂರ್ವ ಭಾಗದಲ್ಲಿ "ವಾಷಿಂಗ್ಟನ್ ಬೀಚ್‌"ಅನ್ನು ನಕಲು ಮಾಡಲಾಗಿದೆ. ಇದು ದ್ವೀಪದ ಭೂಪ್ರದೇಶದಲ್ಲಿ ಅರ್ಧದಷ್ಟು ಭಾಗವನ್ನು ಆವರಿಸುತ್ತದೆ. ದ್ವೀಪವು ಹತ್ತಿರದ ಲೀಫ್ ಲಿಂಕ್ಸ್‌ಅನ್ನು ಒಳಗೊಂಡಂತೆ ಪಶ್ಚಿಮದಲ್ಲಿ ಒಂದು ಜಲಮಾರ್ಗವನ್ನು ಹೊಂದಿದೆ. ಈ ಪೂರ್ವ ದ್ವೀಪವು ಸ್ಪಷ್ಟವಾಗಿ ಫ್ಲೋರಿಡಾದ ಮಿಯಾಮಿ ಬೀಚ್‌ಅನ್ನು ಆಧರಿಸಿದೆ.

ಓಶನ್ ಬೀಚ್‌[ಬದಲಾಯಿಸಿ]

ಓಶನ್ ಬೀಚ್‌ ಕೆಲವು ಗಗನಚುಂಬಿ ಮತ್ತು ಅನೇಕ ಕಡಿಮೆ ಎತ್ತರದ ಕಟ್ಟಡಗಳನ್ನು ಹೊಂದಿರುವ ಒಂದು ಮೇಲುದರ್ಜೆಯ ಪ್ರವಾಸಿ ಜಿಲ್ಲೆ. ಇದು ನೇರವಾಗಿ ಸೌತ್ ಬೀಚ್‌‌ನಲ್ಲಿರುವ ಓಶನ್ ಡ್ರೈವ್ಅನ್ನು ಆಧರಿಸಿದೆ. ಅಲ್ಲದೇ ವೈಸ್ ಸಿಟಿಯ ತುದಿ ಆಗ್ನೇಯ ಭಾಗದಲ್ಲಿದೆ. ಈ ಪ್ರದೇಶದಲ್ಲಿ ಮುಖ್ಯವಾಗಿ ಸಮುದ್ರದಂಚಿನ ಮತ್ತು ಕರಾವಳಿ ಭಾಗದ ಕಟ್ಟಡಗಳು, ಹೋಟೆಲ್‌ಗಳು ಮತ್ತು ಮೇಲುದರ್ಜೆಯ ವ್ಯವಹಾರಗಳು ಕಂಡುಬರುತ್ತವೆ. ಆರ್ಟ್ ಡೆಕೊ ಹಿಸ್ಟೋರಿಕ್ ಡಿಸ್ಟ್ರಿಕ್ಟ್-ಮಾದರಿಯ ಆರ್ಟ್ ಡೆಕೊ(1920 ಮತ್ತು 1930ರ ದಶಕದ ಆಲಂಕಾರಿಕ ಕಲಾಶೈಲಿ) ಮತ್ತು ಆಧುನಿಕ ಶೈಲಿಯ ಕಡಿಮೆ-ಎತ್ತರದ ಮನೆಗಳ ಸಾಲುಗಳೂ ಇಲ್ಲಿವೆ. ಈ ಮನೆ ಸಾಲುಗಳುದ್ದಕ್ಕೂ ಚಾಚಿಕೊಂಡಿರುವ ರಸ್ತೆಗಳು ಓಶನ್ ಡ್ರೈವ್‌ನ ರಸ್ತೆಗಳನ್ನು ಅನುಕರಿಸುತ್ತವೆ. ವಾಸ್ತುಶಿಲ್ಪ ಮತ್ತು ವಿನ್ಯಾಸರಚನೆಯಲ್ಲಿ ಅವು ಹೆಚ್ಚು ನೈಜತೆಯ ಪ್ರತಿರೂಪವನ್ನು ಹೋಲುತ್ತವೆ. ಲ್ಯುಮಸ್ ಪಾರ್ಕ್‌ನಂತೆ ಈ ಮನೆ ಸಾಲುಗಳ ಮತ್ತು ಬೀಚ್‌ನ ಮಧ್ಯೆ ಸಸ್ಯರಾಶಿಯೂ ಇದೆ. ಅತ್ಯಂತ ಆಗ್ನೇಯ ದಿಕ್ಕಿನಲ್ಲಿರುವ ಲೈಟ್‌ಹೌಸ್, ಕೀ ಬಿಸ್ಕೇನ್‌ನಲ್ಲಿರುವ ಮಿಯಾಮಿಯ ಅತಿಹಳೆಯ ರಚನೆ ಮತ್ತು ಜನಪ್ರಿಯ ಕರಾವಳಿ-ಭಾಗದ ಪ್ರವಾಸಿ ತಾಣ ಕ್ಯಾಪೆ ಫ್ಲೋರಿಡಾ ಲೈಟ್‌ಹೌಸ್ಅನ್ನು ಹೋಲುತ್ತದೆ.

ಪಶ್ಚಿಮದಲ್ಲಿರುವ ಒಳನಾಡಿನ ಓಶನ್ ಬೀಚ್‌ ಹೆಚ್ಚುವರಿ ವಾಣಿಜ್ಯ ಮತ್ತು ವಾಸಯೋಗ್ಯ ಕಟ್ಟಡಗಳನ್ನು ಹೊಂದಿದೆ. ಇವು ಕೊಲ್ಲಿನ್ಸ್ ಅವೆನ್ಯೂವಿಂದ ಪಶ್ಚಿಮ ದಿಕ್ಕಿಗಿರುವ ನೈಋತ್ಯದ ಮಿಯಾಮಿ ಬೀಚ್ಅನ್ನು ಹೋಲುತ್ತವೆ. (ಕೊಲ್ಲಿನ್ಸ್ ಅವೆನ್ಯೂ ದಕ್ಷಿಣದ ಓಶನ್ ಬೀಚ್‌ಅನ್ನು ಬೇರ್ಪಡಿಸುವಂತೆ ವೈಸ್ ಸಿಟಿಯ ರಸ್ತೆಯು ಓಶನ್ ಬೀಚ್‌ನ ಎರಡು ಬದಿಗಳನ್ನು ಬೇರ್ಪಡಿಸಿ, ಬೀಚ್ ಸಮೀಪದ ಅನೇಕ ವಾಸದ ಮಹಡಿಗಳು ಮತ್ತು ಕಟ್ಟಗಳುದ್ದಕ್ಕೂ ಉತ್ತರದ ಕೊಲ್ಲಿನ್ಸ್ ಅವೆನ್ಯೂ ರೀತಿಯಲ್ಲಿ ಚಾಚಿಕೊಂಡಿದೆ).

ಈ ಜಿಲ್ಲೆಯು ಓಶನ್ ಬೇ ಮರೀನ ಎಂಬ ವಿಹಾರ ದೋಣಿ ಬಂದರೊಂದನ್ನು ಹೊಂದಿದೆ. ಇದು ಓಶನ್ ಬೀಚ್‌ನ ಆಲ್ಟನ್ ರಸ್ತೆಯುದ್ದಕ್ಕೂ ಚಾಚಿರುವ ಒಂದು ದೊಡ್ಡ ವಿಹಾರ ದೋಣಿ ಬಂದರನ್ನು ಹೋಲುತ್ತದೆ, ಹಾಗೂ ಇದು ಜಿಲ್ಲೆಯ ಪಶ್ಚಿಮದ ಎಲ್ಲೆಯಲ್ಲಿದೆ. ಓಶನ್ ಬೀಚ್‌ನ ವಾಯುವ್ಯದಲ್ಲಿ ಓಶನ್ ವ್ಯೂ ಹಾಸ್ಪಿಟಲ್ ಎಂಬ ಹೆಸರಿನ ಒಂದು ಆಸ್ಪತ್ರೆಯ‌ೂ ಇದೆ. ಇದು ನಗರದ ಕೊಲ್ಲಿಯ ಎದುರಿಗೆ ಇರುವುದರಿಂದ ಈ ಹೆಸರು ಇಡಲಾಗಿದೆ. ಆಸ್ಪತ್ರೆಯ ಪಕ್ಕಕ್ಕಿರುವ ಎರಡು ಹೆಚ್ಚು-ಎತ್ತರದ ಕಟ್ಟಡಗಳು, ಅವು "ಓಶನ್ ವ್ಯೂ ಮೆಡಿಕಲ್ ಫೌಂಡೇಶನ್"ನ "ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ" ಎಂಬುದನ್ನು ತೋರಿಸುವ ಗುರುತನ್ನು ಹೊಂದಿವೆ. ಇದು ಆ ಕಟ್ಟಡಗಳು ಆಸ್ಪತ್ರೆಗೆ ಸಂಬಂಧಿಸಿದವು, ಎಂದು ಸೂಚಿಸುತ್ತದೆ.

ಅನೇಕ ಇತರ ವೈಶಿಷ್ಟ್ಯಗಳೂ ಓಶನ್ ಬೀಚ್‌ನಲ್ಲಿ ಕಂಡುಬರುತ್ತವೆ. ಸೌತ್ ಪಾಯಿಂಟೆ ಪಾರ್ಕ್ಅನ್ನು ಹೋಲುವ ಉದ್ಯಾನವೊಂದು ಓಶನ್ ಬೀಚ್‌ನ ದಕ್ಷಿಣದ ಕೊನೆಯಲ್ಲಿದೆ. ಇದು ಅಂತಹುದೇ ವಾಸ್ತುಶಿಲ್ಪದ ಒಂದು ಕಡಲಕಿನಾರೆಯ ಕಟ್ಟಡ ಮತ್ತು ಒಂದು ಹೆಲಿಪ್ಯಾಡ್ಅನ್ನೂ ಒಳಗೊಂಡಿದೆ. ಒಂದು ಹೊರಾಂಗಣದ ವ್ಯಾಪಾರ ಮಳಿಗೆ 'ವಾಷಿಂಗ್ಟನ್ ಮಾಲ್' ಓಶನ್ ಬೀಚ್‌‌ನ ಉತ್ತರದ ಭಾಗದಲ್ಲಿದೆ. ಇದು ಬಹುಶಃ ಬಾಲ್ ಹಾರ್ಬರ್‌ನ ಬಾಲ್ ಹಾರ್ಬರ್ ಶಾಪ್ಸ್‌ಅನ್ನು ಆಧರಿಸಿದೆ. ಇದು 1983ರ ಚಲನಚಿತ್ರ ಸ್ಕಾರ್‌ಫೇಸ್ ‌ನ, ನಿರ್ದಿಷ್ಟವಾಗಿ ಕುಪ್ರಸಿದ್ಧ ಸರಪಣಿ ಗರಗಸದ ದೃಶ್ಯದ ಹೋಟೆಲ್‌ನಲ್ಲಿ ಬೆನ್ನಟ್ಟಿಕೊಂಡು ಹೋಗುವ ಸಂದರ್ಭದ ಸನ್ನಿವೇಶ ಹೋಲುವುದರಿಂದ ಆಕರ್ಷಣೀಯವಾಗಿದೆ.

ಟಾಮಿ ವರ್ಸೆಟ್ಟಿಯ ವೈಸ್ ಸಿಟಿಯಲ್ಲಿನ ಆರಂಭಿಕ ವಾಸಸ್ಥಳ ಓಶನ್ ಬೀಚ್‌‌ನ ಮುಂಭಾಗದಲ್ಲಿರುವ ಓಶನ್ ವ್ಯೂ ಹೋಟೆಲ್. ಪೋಲ್ ಪೊಸಿಶನ್ ಕ್ಲಬ್ ಸಹ ಈ ಜಿಲ್ಲೆಯ ದಕ್ಷಿಣ ಭಾಗದಲ್ಲಿದೆ.

ವಾಷಿಂಗ್ಟನ್ ಬೀಚ್‌[ಬದಲಾಯಿಸಿ]

ವಾಷಿಂಗ್ಟನ್ ಬೀಚ್‌ ದಕ್ಷಿಣದಲ್ಲಿ ಓಶನ್ ಬೀಚ್‌ ಮತ್ತು ಉತ್ತರದಲ್ಲಿ ವೈಸ್ ಪಾಯಿಂಟ್‌‌ನ ಮಧ್ಯೆ ಇರುವ ಒಂದು ಜಿಲ್ಲೆ. ಉತ್ತರ ಭಾಗವನ್ನು ಆರ್ಟ್ ಡೆಕೊ ಹಿಸ್ಟೋರಿಕ್ ಡಿಸ್ಟ್ರಿಕ್ಟ್‌-ಮಾದರಿಯ ಬೀಚ್‌-ಮುಂಭಾಗದ ಜಿಲ್ಲೆ, ಅದರ ಒಳನಾಡು ಪ್ರದೇಶವು ಆವರಿಸಿದೆ. ಪಶ್ಚಿಮಕ್ಕೆ ಎರಡು ನಿರ್ಮಾಣ ಜಾಗಗಳನ್ನು ಮತ್ತು ಅನೇಕ ವಾಸದ ಮಹಡಿ ಮತ್ತು ಮನೆಗಳನ್ನು ಒಳಗೊಂಡ ಸಣ್ಣ ದ್ವೀಪದ ದಕ್ಷಿಣಾರ್ಧವಿದೆ. (ಅವುಗಳಲ್ಲಿ ಒಂದು ಕಟ್ಟಡದ ಹೋಟೆಲ್ ಕೊಠಡಿಯೊಂದು ಸ್ಕಾರ್‌ಫೇಸ್‌ ‌ಚಿತ್ರದಲ್ಲಿ ಸರಪಣಿ ಗರಗಸದ ಹಿಂಸೆಯು ನಡೆಯುವ ಸ್ಥಳದಂತೆಯೇ ಇದೆ).

ವಾಷಿಂಗ್ಟನ್ ಬೀಚ್‌ ಜಿಲ್ಲೆಯ ಉತ್ತರದ ಅಂಚಿನಲ್ಲಿರುವ ಒಂದು ಪೋಲೀಸ್ ಠಾಣೆ ಮತ್ತು ನೈಋತ್ಯ ಭಾಗದಲ್ಲಿರುವ ಕೆನ್ ರೋಸೆನ್ಬರ್ಗ್‌‌ನ ಕಛೇರಿಯನ್ನೂ ಹೊಂದಿದೆ. ವಾಷಿಂಗ್ಟನ್ ಬೀಚ್‌, ವಾಷಿಂಗ್ಟನ್ ಬೀಚ್‌ ದ್ವೀಪದ ಮಧ್ಯದಲ್ಲಿರುವ ಒಂದು ಚಿಕ್ಕ ಸೇತುವೆಯ ಮ‌ೂಲಕ ಸ್ಟಾರ್‌ಫಿಶ್ ದ್ವೀಪದೊಂದಿಗೆ ಸಂಪರ್ಕ ಹೊಂದಿದೆ; ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆ ದ್ವೀಪಗಳುದ್ದಕ್ಕೂ ಚಾಚಿಕೊಂಡಿದೆ. ಅಲ್ಲದೇ ಲಿಟಲ್ ಹವಾನದ ಗಡಿಯಲ್ಲಿ ಕೊನೆಯಾಗುತ್ತದೆ. ಮಿಯಾಮಿ ಬೀಚ್‌ನಲ್ಲಿರುವ ಪ್ರಮುಖ ರಸ್ತೆ ವಾಷಿಂಗ್ಟನ್ , ಅವೆನ್ಯೂವಿನ ನಂತರ ಈ ಜಿಲ್ಲೆಗೆ ಈ ಹೆಸರು ಇಡಲಾಗಿದೆ.

ವೈಸ್ ಪಾಯಿಂಟ್‌[ಬದಲಾಯಿಸಿ]

ವೈಸ್ ಪಾಯಿಂಟ್ ಒಂದು ವೈಸ್ ಬೀಚ್‌ನಲ್ಲಿರುವ ಹೆಚ್ಚು ಮಧ್ಯ-ದರ್ಜೆಯ ಮತ್ತು ವಾಸಗೃಹಗಳನ್ನೊಳಗೊಂಡ ಪ್ರದೇಶ. ಇದು ಉತ್ತರ ದಿಕ್ಕಿನಲ್ಲಿ ದ್ವೀಪದ ಇತರ ಪ್ರದೇಶಗಳನ್ನು ಆವರಿಸಿದೆ. ತೀರದುದ್ದಕ್ಕೂ ದೊಡ್ಡ ವಾಸದ ಮಹಡಿಗಳು ಮತ್ತು ಹೋಟೆಲ್‌ಗಳನ್ನು ಹಾಗೂ ಒಳಭಾಗದ ಪ್ರದೇಶದಲ್ಲಿ ಮಧ್ಯಮ-ಗಾತ್ರದ ಮನೆಗಳು ಮತ್ತು ಸಣ್ಣ ಮಹಡಿಯ ಸಂಕೀರ್ಣಗಳನ್ನೂ ಹೊಂದಿದೆ. ಈ ರಚನೆಯು ಮಿಯಾಮಿ ಬೀಚ್‌ನ ಕೊಲ್ಲಿನ್ಸ್ ಅವೆನ್ಯೂವಿನಾದ್ಯಂತ ಇರುವ ಅಭಿವೃದ್ಧಿ ಕ್ಷೇತ್ರದ ಮನೆಸಾಲುಗಳನ್ನು ಮತ್ತು ಈ ನಗರದ ವಾಸದ ಮನೆಗಳಿರುವ ವ್ಯವಸ್ಥೆಯನ್ನು ಹೋಲುತ್ತದೆ.

ನಾರ್ತ್ ಪಾಯಿಂಟ್ ಮಾಲ್ (GTA:VCS ಅಲ್ಲಿ ವೈಸ್ ಪಾಯಿಂಟ್‌ ಮಾಲ್ ಎಂದು ಕರೆಯಲಾಗುತ್ತದೆ) ವೈಸ್ ಪಾಯಿಂಟ್‌‌ನ ಉತ್ತರದ ಗಡಿಯಲ್ಲಿರುವ ಆಟಗಾರರಿಗೆ ಪ್ರವೇಶಾವಕಾಶವಿರುವ ಒಂದು ದೊಡ್ಡ ವ್ಯಾಪಾರ ಮಳಿಗೆ. ಇದು ಮಿಯಾಮಿಯ ಅವೆಂಟುರ ಮಾಲ್ಅನ್ನು ಅನುಕರಣೆ ಮಾಡುತ್ತದೆ. ಪೂರ್ವ ದ್ವೀಪದ ಅತ್ಯಂತ ಈಶಾನ್ಯ ಭಾಗದಲ್ಲಿರುವ ಇದರ ಸ್ಥಾಪನೆಯು ಮಿಯಾಮಿ ಮೆಟ್ರೊ ಪ್ರದೇಶದ ಈಶಾನ್ಯ ಕೊನೆಯಲ್ಲಿರುವ ಅವೆಂಟುರ ಮಾಲ್‌ನ ನೆಲೆಯಂತೆಯೇ ಇದೆ. ತುಂಬಾ ಸಣ್ಣಕ್ಕಿದ್ದರೂ ಈ ವ್ಯಾಪಾರ ಮಳಿಗೆಯ ವಿನ್ಯಾಸರಚನೆಯ‌ೂ ಸಹ ಅವೆಂಟುರ ಮಾಲ್ಅನ್ನು ಹೋಲುತ್ತದೆ. ಇತರೆಗಳಿಗಿಂತ ಈ ಮಳಿಗೆಯು ಸ್ವಲ್ಪ ಕಡಿಮೆ ಉಪಹಾರ ಗೃಹಗಳನ್ನು, ಮಾತ್ರವಲ್ಲದೆ ಎರಡು ಆಯುಧ ಸಲಕರಣೆಗಳನ್ನು ಮತ್ತು ಒಂದು ಬಟ್ಟೆ ಅಂಗಡಿಯನ್ನು ಹೊಂದಿದೆ.

ಮಲಿಬು ಕ್ಲಬ್ ವೈಸ್ ಪಾಯಿಂಟ್‌ನ ದಕ್ಷಿಣ ಭಾಗದಲ್ಲಿದೆ. ಒಂದು ಆಸ್ಪತ್ರೆ ಹಾಗೂ ಒಂದು ಪೋಲೀಸ್ ಠಾಣೆಯ‌ೂ ಉತ್ತರದ ಅಂಚಿನಲ್ಲಿದೆ.

ಮೈನ್‌ಲ್ಯಾಂಡ್[ಬದಲಾಯಿಸಿ]

ಆಟದ ಮಾರ್ಗ ಸೂಚಕದಲ್ಲಿ "ವೈಸ್ ಸಿಟಿ ಮೈನ್‌ಲ್ಯಾಂಡ್" ಎಂದೂ ಸೂಚಿಸುವ ವೈಸ್ ಸಿಟಿಯ ಪಶ್ಚಿಮದ ದ್ವೀಪವನ್ನು, ವಾಣಿಜ್ಯ ಜಿಲ್ಲೆ ಡೌವ್ನ್‌ಟೌನ್‌ ಈ ದ್ವೀಪದ ಉತ್ತರ ಭಾಗದಲ್ಲಿ ನೆಲೆಸಿದ್ದರೂ, ನಗರದ ಕಡಿಮೆ ಆಕರ್ಷಣೆಯುಳ್ಳ ಪ್ರದೇಶವಾಗಿ ಚಿತ್ರಿಸಲಾಗಿದೆ. ಈ ದ್ವೀಪದ ಪಶ್ಚಿಮ ಭಾಗವು ನಗರದ ಹೆಚ್ಚಿನ ಕೈಗಾರಿಕಾ ಜನರಿಗೆ, ದಕ್ಷಿಣದಲ್ಲಿ ಬಂದರು ಮತ್ತು ವಿಮಾನ ನಿಲ್ದಾಣ ಸೌಕರ್ಯಗಳಿಗೆ ಸ್ಥಳ ಮಾಡಿಕೊಟ್ಟಿದೆ. ವಲಸಿಗರಿಗೆ ನೆಲೆಯಾಗಿರುವ ಎರಡು ಗಣನೀಯ ಗಾತ್ರದ ಜಿಲ್ಲೆಗಳು ಈ ದ್ವೀಪದ ಮಧ್ಯಭಾಗದಲ್ಲಿದೆ. ಅವುಗಳಲ್ಲಿ ಒಂದು ಜಿಲ್ಲೆಯನ್ನು ಹಾಳುಬಿದ್ದ ಸ್ಥಿತಿಯಲ್ಲಿ ನಿರೂಪಿಸಲಾಗಿದೆ. ದ್ವೀಪದ ಪಶ್ಚಿಮ ಭಾಗವು ವಿಸ್ತಾರ ನಾಲ್ಕು-ಓಣಿಯ ಬೇಶೋರ್ ಅವೆನ್ಯೂವನ್ನು (ವೈಸ್ ಸಿಟಿ ಸ್ಟೋರೀಸ್ ‌ನಲ್ಲಿ ಹೆಸರಿಸಲಾದ) ಹೊಂದಿದೆ. ಅದರ ಪೂರ್ವ ಭಾಗದಲ್ಲಿ ಬಂದರಿನ ದಕ್ಷಿಣದ ಕೊನೆಯಿಂದ ಡೌವ್ನ್‌ಟೌನ್‌‌ನ ದಕ್ಷಿಣದ ತುದಿಯ ಉತ್ತರದವರೆಗೆ ಚಾಚಿಕೊಂಡಿದೆ. ದ್ವೀಪದ ಪಶ್ಚಿಮ ಭಾಗವು ಪ್ರಧಾನ ಭೂಭಾಗ ಮಿಯಾಮಿಯನ್ನು ಆಧರಿಸಿದೆ.

ಡೌವ್ನ್‌ಟೌನ್‌[ಬದಲಾಯಿಸಿ]

ಡೌವ್ನ್‌ಟೌನ್‌ ಜಿಲ್ಲೆಯು ಡೌವ್ನ್‌ಟೌನ್‌ ಮಿಯಾಮಿಯನ್ನು ಹೋಲುತ್ತದೆ. ಇದು ವಾಸಯೋಗ್ಯ ಮತ್ತು ವ್ಯಾಪಾರದ ಎರಡೂ ರೀತಿಯ ಗಗನಚುಂಬಿ ಕಟ್ಟಡಗಳ ಕೇಂದ್ರವಾಗಿದೆ. ಡೌವ್ನ್‌ಟೌನ್‌ ವೈಸ್ ಸಿಟಿಯ ಹೆಚ್ಚು ಕ್ರಮಬದ್ಧ, ವರಮಾನದ ಜಿಲ್ಲೆಯಾಗಿದೆ. ಇದು ನಗರದಲ್ಲಿನ ಅತ್ಯಂತ ಎತ್ತರದ ಕಟ್ಟಡವನ್ನೂ ಒಳಗೊಂಡಂತೆ ಅನೇಕ ಹೆಚ್ಚು ಎತ್ತರದ ಕಛೇರಿ ಕಟ್ಟಡಗಳನ್ನು ಹೊಂದಿದೆ.

ಡೌವ್ನ್‌ಟೌನ್‌ನ ಪಶ್ಚಿಮದಲ್ಲಿ ಹೈಮಾನ್ ಮೆಮೋರಿಯಲ್ ಸ್ಟೇಡಿಯಂ ಇದೆ. ಇದು ರಾಕ್ ಸಂಗೀತ ಕಛೇರಿ, ಸ್ಟಾಕ್ ಕಾರ್ ರೇಸಿಂಗ್, ಡೆಮಾಲಿಷನ್ ಡರ್ಬಿ ಪಂದ್ಯ ಮತ್ತು ಡರ್ಟ್ ಬೈಕ್ ಸಾಹಸ ಪ್ರದರ್ಶಗಳಂತಹ ಅನೇಕ ಘಟನೆಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕ್ರೀಡಾಂಗಣವು ಮಾಜಿ ಟೈಟ್-ಎಂಡ್ ಆಟಗಾರ ಕಾರು ವ್ಯಾಪಾರಿಯಾಗಿ ಬದಲಾದ BJ ಸ್ಮಿತ್‌ನನ್ನು ಒಳಗೊಂಡ ವೈಸ್ ಸಿಟಿ ಮ್ಯಾಂಬಾಸ್ ಫುಟ್ಬಾಲ್ ತಂಡಕ್ಕೂ ನೆಲೆಯಾಗಿದೆ. ಇದಕ್ಕೆ ಹೆಚ್ಚುವರಿಯಾಗಿ, ಡೌವ್ನ್‌ಟೌನ್‌ ಸ್ಥಳೀಯ ಹೆವಿ ಮೆಟಲ್‌ ರೇಡಿಯೊ ಸ್ಟೇಷನ್ V-ರಾಕ್ ಮತ್ತು ಒಂದು ಆವೃತ ಧ್ವನಿಮುದ್ರಣ ಸ್ಟುಡಿಯೊ ಹೊಂದಿದೆ. ಈ ಸ್ಟುಡಿಯೊದಲ್ಲಿ ರಾಕ್ ವಾದ್ಯ-ಮೇಳ ಲವ್ ಫಿಸ್ಟ್‌ನ ಪ್ರಮುಖ ಗಾಯಕ ಜೆಸ್ ಟೊರೆಂಟ್ ಹಾಡೊಂದನ್ನು ಧ್ವನಿಮುದ್ರಣ ಮಾಡಿದ್ದಾನೆ. ಈ ಪ್ರದೇಶವು ಒಂದು ಸುಲಭವಾಗಿ ಉಪಯೋಗಿಸಬಹುದಾದ ಪೋಲೀಸ್ ಹೆಲಿಕಾಪ್ಟರ್‌ಅನ್ನೂ ಹೊಂದಿದೆ.

ಹೆಚ್ಚು ಆಸಕ್ತಿಯ ಇತರ ಸ್ಥಳಗಳೆಂದರೆ - ಎಲೆಕ್ಟ್ರಾನಿಕ್ಸ್ ಡಿಸ್ಟ್ರಿಕ್ಟ್, ವೈಸ್ ಸಿಟಿ ನ್ಯೂಸ್ (VCN) ಪ್ರಧಾನ ಕಾರ್ಯಕೇಂದ್ರ, ಗ್ರೀಸಿ ಚಾರ್ ಬೈಕ್-ಸವಾರರ ಬಾರ್ ಮತ್ತು V-ರಾಕ್ ರೇಡಿಯೊ ಸ್ಟೇಷನ್‌ನ ದಕ್ಷಿಣಕ್ಕಿರುವ ಲವ್ ಫಿಸ್ಟ್ ಸಂಗೀತ ಕಛೇರಿಗಾಗಿರುವ ಒಂದು ತಾಣ. ಹೆಸರಿಲ್ಲದ ಒಂದು ಬೀಚ್ ಸಹ ಡೌವ್ನ್‌ಟೌನ್‌ನ ಪಶ್ಚಿಮ ಭಾಗದಲ್ಲಿದೆ. ಆದರೆ ಇಲ್ಲಿಗೆ ಯಾವ ಸಂದರ್ಶಕರೂ ಬರುವುದಿಲ್ಲ, ಅಥವಾ ಇದು ಯಾವುದೇ ರೀತಿಯ ಗಮನವನ್ನೂ ಸೆಳೆಯುವುದಿಲ್ಲ. ಇದು ಓಶನ್ ಬೀಚ್‌ನಲ್ಲಿರುವ ವಾಷಿಂಗ್ಟನ್ ಬೀಚ್‌ ಒಂದಿಗೆ ಬಲವಾದ ವ್ಯತ್ಯಾಸ ಹೊಂದಿದೆ. ಒಂದು ಪೋಲೀಸ್ ಸ್ಟೇಷನ್, ಆಸ್ಪತ್ರೆ ಮತ್ತು ನಗರದ ಏಕೈಕ ಅಗ್ನಿಶಾಮಕ ಕೇಂದ್ರವೂ ಈ ಜಿಲ್ಲೆಯಲ್ಲಿದೆ. ಡೌವ್ನ್‌ಟೌನ್‌ನ ಪ್ರಮುಖ ರಸ್ತೆಗಳಲ್ಲಿ ಒಂದರ ಹೆಸರು (ಇದು ಹಿಂದಿನ ಲವ್ ಫಿಸ್ಟ್‌‌ಗೆ ನಿಗದಿಯಾದ ಸ್ಥಳ, ಮತ್ತು ಡೌವ್ನ್‌ಟೌನ್‌ ಪಿಜಾ ಸ್ಟಾಕ್ಅನ್ನು ಹೊಂದಿದೆ.) "ಹೋರ್‌ಮೌಂಟ್ ಅವೆನ್ಯೂ".

ಲಿಟಲ್ ಹವಾನ[ಬದಲಾಯಿಸಿ]

ಮಿಯಾಮಿಯಲ್ಲಿರುವ ಲಿಟಲ್ ಹವಾನದ ನೈಜತೆಯನ್ನು ಪಡೆದುಕೊಂಡ ವೈಸ್ ಸಿಟಿಯ ಲಿಟಲ್ ಹವಾನವು ಮುಖ್ಯವಾಗಿ ಸ್ಪ್ಯಾನಿಷ್-ಮಾತನಾಡುವ ಕ್ಯೂಬಾದ ಜನರನ್ನು ಹೊಂದಿದೆ. ಈ ಪ್ರದೇಶವು ಅಂಬೆರ್ಟೊ ರೋಬಿನ ಮುಖಂಡತ್ವದ ಕ್ಯೂಬಾದ ಗ್ಯಾಂಗಿನಿಂದ ಲಿಟಲ್ ಹವಾನದ ನೈಋತ್ಯ ಗಡಿಯಲ್ಲಿರುವ ಅವನ ತಂದೆಯ ಕೆಫೆಯ ಮೊಲಕ ನಿಯಂತ್ರಿಸಲ್ಪಡುತ್ತದೆ. ಲಿಟಲ್ ಹವಾನವು ಲಿಟಲ್ ಹೈಟಿಗೆ ಸಮೀಪದಲ್ಲಿರುವುದರಿಂದ ಕ್ಯೂಬನ್ ಮತ್ತು ಹೈಟಿಯನ್ ಗ್ಯಾಂಗುಗಳ ಮಧ್ಯೆ ಎರಡು ಜಿಲ್ಲೆಗಳ ಗಡಿಪ್ರದೇಶಗಳಲ್ಲಿ ಕೆಲವೊಮ್ಮೆ ಕಲಹಗಳು ಮತ್ತು ಬಂದೂಕು ಯುದ್ಧಗಳು ನಡೆಯುತ್ತಿರುತ್ತವೆ.

ಪೋಲೀಸ್ ಠಾಣೆಯೊಂದು ಲಿಟಲ್ ಹವಾನದ ಆಗ್ನೇಯ ತುದಿಯಲ್ಲಿ ನೆಲೆಯಾಗಿದೆ. ಅಲ್ಲದೆ ಅದರ ಪೂರ್ವ ಭಾಗದಲ್ಲಿ ಒಂದು ಆಸ್ಪತ್ರೆಯ‌ೂ ಇದೆ. ಹತ್ತಿರದಲ್ಲಿ ಚೆರ್ರಿ ಪಾಪರ್ ಐಸ್‌ಕ್ರೀಮ್ ಫ್ಯಾಕ್ಟರಿಯ‌ೂ ಇದೆ.

ಲಿಟಲ್ ಹೈಟಿ[ಬದಲಾಯಿಸಿ]

ಮಿಯಾಮಿಯ ನೈಜ ಜಿಲ್ಲೆಯಿಂದ ಪ್ರೇರೇಪಿತವಾದ ಲಿಟಲ್ ಹೈಟಿಯಲ್ಲಿ ಪ್ರಧಾನವಾಗಿ ಹೈಟಿಯನ್ನರು ವಾಸಿಸುತ್ತಾರೆ. ಅಲ್ಲದೇ ಇದು ಹೈಟಿಯನ್ನರ ಗ್ಯಾಂಗಿಗೆ ನೆಲೆಯಾಗಿದೆ. ಈ ಗುಂಪು ಆಂಟೈ ಪೌಲೆಟ್‌‌ಳಿಂದ ಅವಳ ಮರದ ಸಣ್ಣ ಒಡ್ಡೊಡ್ಡಾದ ಮನೆಯಲ್ಲಿ ನಡೆಸಲ್ಪಡುತ್ತದೆ. ಇದು ಲಿಟಲ್ ಹೈಟಿಯ ಮಧ್ಯಭಾಗದ ಇತರ ಒಡ್ಡೊಡ್ಡಾದ ಮನೆಗಳೊಂದಿಗಿದೆ. ಲಿಟಲ್ ಹೈಟಿಯ ಪಶ್ಚಿಮ ಭಾಗದಲ್ಲಿರುವ ಗ್ಯಾಂಗಿನ ದ್ರಾವಕ ಕಾರ್ಖಾನೆಯು ಟಾಮಿ ವರ್ಸೆಟ್ಟಿ ನೇತೃತ್ವದ ಕ್ಯೂಬನ್ನರ ಹೊಂಚುದಾಳಿಯಿಂದ ನಾಶಗೊಂಡಿತು. ಲಿಟಲ್ ಹೈಟಿಯು ಕಳಪೆ ಮಟ್ಟದ ಕಟ್ಟಡ, ಕಡಿಮೆ ಸಂಪತ್ತಿನ ವ್ಯಾಪಾರ ಮತ್ತು ಸಣ್ಣ ಸಣ್ಣ ಮನೆಗಳನ್ನು ಹೊಂದಿರುವುದರೊಂದಿಗೆ ಲಿಟಲ್ ಹವಾನದಿಂದ ಹೆಚ್ಚು ಹೀನಸ್ಥಿತಿಗೆ ಇಳಿದಿರುವ ನಗರವಾಗಿದೆ.

ಕಥೆಯಲ್ಲಿ ನಂತರ ಟಾಮಿ ವರ್ಸೆಟ್ಟಿಯು ನಕಲಿ ಹಣ ತಯಾರಿಸುವುದಕ್ಕಾಗಿ ಖರೀದಿಸುವ ದೊಡ್ಡದಾದ ಮುದ್ರಣಾಲಯವೊಂದು ಲಿಟಲ್ ಹೈಟಿ ಮತ್ತು ಲಿಟಲ್ ಹವಾನದ ನಡುವಿನ ಗಡಿಯಲ್ಲಿದೆ. ಫಿಲ್ ಕ್ಯಾಸಿಡಿಯ ಮನೆ ಮತ್ತು ಆಯುಧ ಕಾರ್ಖಾನೆಯು ಲಿಟಲ್ ಹೈಟಿಯ ವಾಯುವ್ಯ ಅಂಚಿನಲ್ಲಿದೆ. ಸ್ಥಳೀಯ ಬಾಡಿಗೆ ಕಾರುಗಳ ಕಂಪೆನಿ ಕಾಫ್‌ಮ್ಯಾನ್ ಕ್ಯಾಬ್ಸ್ ಸಹ ಲಿಟಲ್ ಹೈಟಿಯಲ್ಲಿದೆ. ಇದು ಪೌಲೆಟ್‌ಳ ಒಡ್ಡೊಡ್ಡಾದ ಮನೆಯ ಸ್ವಲ್ಪ ಉತ್ತರಕ್ಕೆ ನೆಲೆಯಾಗಿದೆ.

ವಿಮಾನ ನಿಲ್ದಾಣ, ಬಂದರು ಮತ್ತು ಮಿಲಿಟರಿ ಕಾರ್ಯಕೇಂದ್ರ[ಬದಲಾಯಿಸಿ]

ವೈಸ್ ಸಿಟಿಯ ವಿಮಾನ ನಿಲ್ದಾಣವನ್ನು ಎಸ್ಕೋಬರ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ (EIA) ಅಥವಾ ಸಣ್ಣದಾಗಿ ಎಸ್ಕೋಬರ್ ಇಂಟರ್‌ನ್ಯಾಷನಲ್ ಎಂದು ಕರೆಯುತ್ತಾರೆ. ಇದು ಕೊಲಂಬಿಯಾದ ಪ್ರಸಿದ್ಧ ಮಾದಕ ಪದಾರ್ಥಗಳ ದೇವರು ಪಬ್ಲೊ ಎಸ್ಕೋಬರ್‌ನ ಸೂಚನೆಯಾಗಿದೆ. ಸ್ವಲ್ಪಮಟ್ಟಿಗೆ ಮಿಯಾಮಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆಯಂತೆಯೇ ಇದ್ದರೂ ಲಿಟಲ್ ಹವಾನದ ಹತ್ತಿರದಲ್ಲಿರುವ ವಿಮಾನ ನಿಲ್ದಾಣದ ರಚನೆ ಮತ್ತು ವಿನ್ಯಾಸ, ಮಿಯಾಮಿಯಲ್ಲಿರುವ ಯಾವುದೇ ವಿಮಾನ ನಿಲ್ದಾಣಗಳನ್ನು ಆಧರಿಸಿದಂತೆ ಕಂಡುಬರುವುದಿಲ್ಲ. ಅಲ್ಲದೆ ಮಿಯಾಮಿಯ ಎಲ್ಲಾ ವಿಮಾನ ನಿಲ್ದಾಣಗಳು ಒಳನಾಡು ಪ್ರದೇಶದಲ್ಲಿವೆ. ಆದರೆ EIA ಒಂದು ಪರ್ಯಾಯ ದ್ವೀಪದಲ್ಲಿ ನೆಲೆಯಾಗಿದೆ.

EIA ಎರಡು ಟರ್ಮಿನಲ್(ಆಗಮನ ಮತ್ತು ನಿರ್ಗಮನ ನಿಲ್ದಾಣದ ಕಟ್ಟಡ)‌ಗಳನ್ನು ಹೊಂದಿದೆ. ಉತ್ತರದಲ್ಲಿರುವ ಒಂದು, ನೆಲದ ಕೆಳಗಿನ ಪ್ರವೇಶದ್ವಾರದೊಂದಿಗೆ ಮ‌ೂಲತಃ ಒಂದು ಪ್ರಮಾಣಿತ ನಿಯಂತ್ರಣ ಟರ್ಮಿನಲ್. ದಕ್ಷಿಣದಲ್ಲಿರುವ ಮತ್ತೊಂದು, ಅದರ ಮೇಲ್ಚಾವಣಿ ಮತ್ತು ವಿಮಾನ ನಿಲ್ದಾಣದ ದಕ್ಷಿಣದ ಭಾಗಕ್ಕೆ ಅಭಿಮುಖವಾಗಿರುವ ಎತ್ತರದ ಕಿಟಕಿಗಳೊಂದಿಗೆ ತೀರ ಭಿನ್ನವಾಗಿದೆ. ಎರಡೂ ರಚನೆಗಳು ಹುಲ್ಲುಹಾಸುಗಳು ಮತ್ತು ಒಂದು ಕಾರು ನಿಲ್ದಾಣದಿಂದ ಪ್ರತ್ಯೇಕಿಸಲ್ಪಟ್ಟಿವೆ. ರಸ್ತೆಗಳ ಹೊರತಾಗಿ ಟರ್ಮಿನಲ್‌ಗಳು ಇತರ ಯಾವುದೇ ದಾರಿಗಳಿಂದ ಸಂಪರ್ಕಿಸಿಲ್ಲ. ಈ ಪರ್ಯಾಯ ದ್ವೀಪದ ವಿಮಾನ ನಿಲ್ದಾಣದ ಸ್ವಲ್ಪ ಉತ್ತರಕ್ಕಿರುವುದು ಫೋರ್ಟ್ ಬ್ಯಾಕ್ಸ್ಟರ್ ಏರ್ ಬೇಸ್.

EIA ಆವರಣದ ಆಗ್ನೇಯ ಭಾಗದಲ್ಲಿ ನಗರದ ಬಂದರು ವೈಸ್ ಪೋರ್ಟ್ (ಮಾರ್ಗಸೂಚಕದಲ್ಲಿ "ವೈಸ್‌ಪೋರ್ಟ್" ಎಂದು ಸೂಚಿಸಲಾಗಿದೆ;) ಇದೆ. ಇದು ಬಿಸ್ಕೇನ್ ಬೇಯಲ್ಲಿರುವೇ ಪೋರ್ಟ್ ಆಫ್ ಮಿಯಾಮಿಯಂತೆ ಕೊಲ್ಲಿಯ ದಕ್ಷಿಣದ ಕೊನೆಯಲ್ಲಿರುವ ದಾಂತೆ B. ಫಾಸ್ಕೆಲ್ ಪೋರ್ಟ್ ಆಫ್ ಮಿಯಾಮಿ-ಡೇಡ್‌ಅನ್ನು (ಮಿಯಾಮಿಯ ಬಂದರು) ಹೋಲುತ್ತದೆ. ಆದರೆ ವೈಸ್ ಪೋರ್ಟ್ ಪ್ರಧಾನ ಭೂಭಾಗದಲ್ಲಿದ್ದರೆ, ಪೋರ್ಟ್ ಆಫ್ ಮಿಯಾಮಿಯು ಬಿಸ್ಕೇನ್ ಬೇಯ ದಕ್ಷಿಣದ ಪ್ರವೇಶದ ಹೆಚ್ಚಿನ ಭಾಗವನ್ನು ಆವರಿಸುವುದರೊಂದಿಗೆ ಒಂದು ದ್ವೀಪದಲ್ಲಿದೆ. ಇದಕ್ಕೆ ಹೆಚ್ಚುವರಿಯಾಗಿ, ವೈಸ್ ಪೋರ್ಟ್ ವಿಹಾರದ ಹಡಗುಗಳಿಗೆ ಇಂಬು ನೀಡುವುದಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ಮಿಯಾಮಿಯ ಬಂದರು ಸರಕು ಹಡಗು ಪ್ರಯಾಣಕ್ಕೆ ಮಾತ್ರ ಅವಕಾಶ ನೀಡುವ ಬದಲಿಗೆ 1968ರಿಂದ ವಿಹಾರದ ಹಡಗುಗಳಿಗೂ ಪ್ರವೇಶ ನೀಡುವುದನ್ನು ಆರಂಭಿಸಿದೆ.

ಮಧ್ಯಭಾಗ[ಬದಲಾಯಿಸಿ]

ಸ್ಟಾರ್‌ಫಿಶ್ ದ್ವೀಪ[ಬದಲಾಯಿಸಿ]

ಸ್ಟಾರ್‌ಫಿಶ್ ದ್ವೀಪವು (ಟಾಮಿ ವರ್ಸೆಟ್ಟಿ ಮತ್ತು ಲ್ಯಾನ್ಸ್ ವ್ಯಾನ್ಸ್, ರಿಕಾರ್ಡೊ ಡೈಯಾಜ್‌ನನ್ನು ಕೊಲ್ಲುವ ಮೊದಲು ಅದನ್ನು "ಸ್ಟಾರ್ ದ್ವೀಪ" ಎಂದು ಕರೆಯುತ್ತಿದ್ದನು.) ವೈಸ್ ಸಿಟಿಯ ಮ‌ೂರನೇ ಅತಿದೊಡ್ಡ ದ್ವೀಪವಾಗಿದೆ.

ಸ್ಟಾರ್‌ಫಿಶ್ ದ್ವೀಪವು ಅತಿ ಶ್ರೀಮಂತ ನಿವಾಸಿಗರ ಸಮುದಾಯವನ್ನು ಹೊಂದಿರುವ ದ್ವೀಪ. ಹೆಚ್ಚಿನವರು ದೊಡ್ಡ ಮನೆಗಳಲ್ಲಿ ಮತ್ತು ಮಹಲುಗಳಲ್ಲಿ ವಾಸಿಸುತ್ತಾರೆ, ಕೆಲವರು ಸ್ವಂತ ಬಂದರು ಕಾಪನ್ನೂ ಹೊಂದಿದ್ದಾರೆ. ಈ ಪ್ರದೇಶವು ಸ್ವಂತ ಭದ್ರತಾ ರಕ್ಷಕರನ್ನು ಹೊಂದಿದೆ. ಅವರು ದ್ವೀಪದ ಸುತ್ತಲೂ ಗಸ್ತುತಿರುಗುತ್ತಾರೆ. ಅಲ್ಲದೇ ಯಾರಾದರೂ ತೊಂದರೆ ಕೊಡುವವರು ಬಂದರೆ ಅವರ ಮೇಲೆ ಬೆಂಕಿ ಹಾಕುತ್ತಾರೆ; ಇದು ಈ ಪ್ರದೇಶದ ನಿವಾಸಿಗರಿಗೆ ಸುರಕ್ಷತೆಯ ಭಾವನೆ ನೀಡುತ್ತದೆ. ಮಾತ್ರವಲ್ಲದೆ ಇವರು ಈ ದ್ವೀಪವು ಲಿಟಲ್ ಹವಾನ ಮತ್ತು ಲಿಟಲ್ ಹೈಟಿಯಂತಹ ಗ್ಯಾಂಗ್-ಸಮಸ್ಯೆಯುಳ್ಳ ಪಟ್ಟಣಗಳಿಗೆ ಹತ್ತಿರದಲ್ಲಿರುವುದರಿಂದ ತೊಂದರೆಗಳಿಗೆ ಸಿಲುಕದಂತೆಯ‌ೂ ಸಹಾಯ ಮಾಡುತ್ತಾರೆ. ಈ ದ್ವೀಪವು ಒಟ್ಟು 11 ದೊಡ್ಡ ಮಹಲುಗಳನ್ನು ಹೊಂದಿದೆ. ಸ್ಟಾರ್‌ಫಿಶ್ ದ್ವೀಪದ ಒಂದು ಭವ್ಯ ಮಹಲು ಎಂದರೆ - ವೈಸ್ ಸಿಟಿ ಪಬ್ಲಿಕ್ ರೇಡಿಯೋಸ್ (VCPR), ಜೊನಾಥನ್ ಫ್ರೆಲೋಡರ್.

ಸ್ಟಾರ್‌ಫಿಶ್ ದ್ವೀಪದ ಅತಿದೊಡ್ಡ ಮಹಲು ವರ್ಸೆಟ್ಟಿ ಎಸ್ಟೇಟ್. ಇದನ್ನು ಮೊದಲು ಮಾದಕ ದ್ರವ್ಯಗಳ ಭಾರಿ ವ್ಯಾಪಾರಿ ರಿಕಾರ್ಡೊ ಡೈಯಾಜ್‌ ಹೊಂದಿದ್ದನು. ನಂತರ ಅದನ್ನು ಟಾಮಿ ವರ್ಸೆಟ್ಟಿಯು ಪಡೆದನು. ಈ ಮಹಲು ಹೆಲಿಕಾಪ್ಟರ್‌ಗಳಿಗಾಗಿ ಒಂದು ಮೇಲ್ಚಾವಣಿ-ಮೇಲಿನ ಹೆಲಿಪ್ಯಾಡ್ಅನ್ನು ಮತ್ತು ದೋಣಿಗಳು ನಿಲ್ಲಲು ಒಂದು ಹಡಗುಕಟ್ಟೆಯನ್ನೂ ಹೊಂದಿದೆ. ಮಹಲಿನ ಮುಖ್ಯ ಒಳಭಾಗವು "ದ ವರ್ಲ್ಡ್ ಈಸ್ ಯುವರ್ಸ್" ಗೋಳ ಮತ್ತು ಧಾರಾಳವಾಗಿ ಖರ್ಚು ಮಾಡಿ ನಿರ್ಮಿಸಿದ ಮಲಗುವ ಕೋಣೆಯನ್ನು ಮಾತ್ರ ಒಳಗೊಂಡಿಲ್ಲದೆ ಉಳಿದಂತೆ ಸಂಪೂರ್ಣವಾಗಿ 1983ರ ಚಲನಚಿತ್ರ ಸ್ಕಾರ್‌ಫೇಸ್‌ ‌ನಲ್ಲಿರುವ ಕಾಲ್ಪನಿಕ ಮಾದಕ-ದ್ರವ್ಯಗಳ ದೇವರು ಟೋನಿ ಮೊಂಟಾನನ ನಿವಾಸವನ್ನು ಹೋಲುತ್ತದೆ.

ಪ್ರಾವ್ನ್‌ ದ್ವೀಪ[ಬದಲಾಯಿಸಿ]

ಪ್ರಾವ್ನ್‌ ದ್ವೀಪವು ನಗರದ ಅತ್ಯಂತ ಉತ್ತರದಲ್ಲಿ ಕೇಂದ್ರ ಭಾಗದಲ್ಲಿರುವ ಒಂದು ಸಣ್ಣ ದ್ವೀಪ. ಇದು ಪಶ್ಚಿಮದಲ್ಲಿ ಡೌವ್ನ್‌ಟೌನ್‌ ವೈಸ್ ಸಿಟಿಯನ್ನು ಮತ್ತು ಪೂರ್ವದಲ್ಲಿ ವೈಸ್ ಪಾಯಿಂಟ್‌ಅನ್ನು (ವ್ಯಾಪಾರ ಮಳಿಗೆಯ ಹತ್ತಿರದಲ್ಲಿ) ಸಂಪರ್ಕಿಸುತ್ತದೆ. ಮೊದಲು ಪ್ರಾವ್ನ್‌ ದ್ವೀಪವು 3 ಮಹಲುಗಳನ್ನು ಒಳಗೊಂಡಿತ್ತು. 1984ರಲ್ಲಿ ಈ ಮಹಲುಗಳು ಹೊಸದಾಗಿದ್ದವಲ್ಲದೇ ಜನರಿಂದ ಭರ್ತಿಯಾಗಿದ್ದವು. 1986ರ ಹೊತ್ತಿಗೆ ಈ ಸೌಧಗಳು ಸ್ವೇಚ್ಛಾವರ್ತನೆಗೆ ಒಳಗಾಗಿ, ನಾಶಗೊಂಡವು. ಅವು ದ್ವೀಪದ ಮ‌ೂಲಕ ಸಮಾನಾಂತರವಾಗಿ ಹಾದುಹೋಗುವ ಪ್ರಮುಖ ಹೆದ್ದಾರಿಗಳ ಉತ್ತರಕ್ಕೆ ಇವೆ. ಅದಲ್ಲದೇ ವೃತ್ತಾಕಾರವಾಗಿ ಸುತ್ತುವ ಸಣ್ಣದಾದ ಕಾರಂಜಿಯೊಂದರಿಂದ ಪರಸ್ಪರ ಸಂಪರ್ಕ ಹೊಂದಿವೆ. ದ್ವೀಪದ ಪೂರ್ವ ಭಾಗದಲ್ಲಿ ಕೆಲವು ವ್ಯಾಪಾರಿ ಕೇಂದ್ರ ಹಾಗೂ ನೈಋತ್ಯ ಭಾಗದಲ್ಲಿ ಇಂಟರ್‌ಗ್ಲೋಬಲ್ ಸ್ಟುಡಿಯೋಸ್ ಎಂಬ ಹೆಸರಿನ ಒಂದು ಚಲನಚಿತ್ರ ಸ್ಟುಡಿಯೊ ಸಹ ಇದೆ. ಇಲ್ಲಿನ ಮನೆಗಳೆಲ್ಲವೂ ನಾಶಗೊಂಡಿವೆ, ಮಹಲುಗಳನ್ನು ಈಗ ಸ್ಟ್ರೀಟ್‌ವಾನಬೆಸ್ ಗ್ಯಾಂಗ್‌ಗಳು ಆಕ್ರಮಿಸಿಕೊಂಡಿವೆ. ನಾಶಗೊಳ್ಳುವ ಮೊದಲು ಈ ಮಹಲುಗಳನ್ನು ಮೆಂಡೆಜ್ ಸಹೋದರರು (ಇವರು ವಿಕ್ಟರ್ ವ್ಯಾನ್ಸ್‌ನಿಂದ ಕೊಲ್ಲಲ್ಪಟ್ಟರು) ಹೊಂದಿದ್ದರು.

ಗುಂಪಿನಿಂದ ನಿಯಂತ್ರಿಸಲ್ಪಡದ ಏಕೈಕ ವ್ಯವಹಾರವೆಂದರೆ ಚಲನಚಿತ್ರ ಸ್ಟುಡಿಯೊ. ವೈಸ್ ಸಿಟಿಯಲ್ಲಿ ಅಂತಹ ವ್ಯವಹಾರವಿರುವುದು ಇದು ಮಾತ್ರವಾಗಿದೆ. ಪ್ರಸ್ತುತ ಇದು ಚಿತ್ರ ನಿರ್ದೇಶಕ ಸ್ಟೀವ್ ಸ್ಕಾಟ್‌‌ನಿಗೆ ಅಶ್ಲೀಲ ಚಿತ್ರಗಳ ಸ್ಟುಡಿಯೊ ಆಗಿ ಕೆಲಸ ಮಾಡುತ್ತದೆ. ಇದು ಭಾರಿ ಯುದ್ಧ ನೌಕೆಗಳು, ಒಂದು ಚಂದ್ರನ ಇಳಿದಾಣ ಮತ್ತು ವಿಶ್ರಾಂತಿ ಕೊಠಡಿಯ ವ್ಯವಸ್ಥೆಗಳನ್ನು ಒಳಗೊಂಡಿದೆ. ಸ್ಟುಡಿಯೊವನ್ನು ನಂತರ ಟಾಮಿ ವರ್ಸೆಟ್ಟಿಯು 1986ರಲ್ಲಿ ಅದರ ಈ ಸಂಪೂರ್ಣ ವ್ಯವಸ್ಥೆಗಳೊಂದಿಗೆ ಖರೀದಿಸಿದನು.

ಲೀಫ್ ಲಿಂಕ್ಸ್‌[ಬದಲಾಯಿಸಿ]

ಲೀಫ್ ಲಿಂಕ್ಸ್‌ ಮ‌ೂರು ದ್ವೀಪಗಳ ಒಂದು ಸಂಗ್ರಹ. ಇದು ವೈಸ್ ಪಾಯಿಂಟ್‌‌ನ ಸ್ವಲ್ಪ ಪಶ್ಚಿಮಕ್ಕೆ ಇದೆ. ಅನೇಕ ದ್ವೀಪಗಳಲ್ಲಿ ಹರಡಿಕೊಂಡು, ಒಂದು ಪ್ರಮುಖ ರಸ್ತೆಯನ್ನು ಹೊಂದಿರುವ ಲೀಫ್ ಲಿಂಕ್ಸ್‌ ಕಂಟ್ರಿ ಕ್ಲಬ್ಅನ್ನು ಇದು ಒಳಗೊಂಡಿದೆ. ಇದು ಉತ್ತಮ ರೀತಿಯ ಕಾವಲು ರಕ್ಷಣೆಯನ್ನು ಹೊಂದಿದೆ.

"ಲೀಫ್ ಲಿಂಕ್ಸ್‌" ಹೆಸರು ಸ್ಕಾಟ್‌ಲ್ಯಾಂಡ್‌‌ನ ಎಡಿನ್‌ಬರ್ಗ್‌ರಾಕ್‌ಸ್ಟಾರ್ ನಾರ್ತ್‌ನ HQ ಹತ್ತಿರದ ಲೈಥ್‌ನಲ್ಲಿರುವ ಒಂದು ಉದ್ಯಾನ "ಲೈಥ್ ಲಿಂಕ್ಸ್"ನಿಂದ ಪ್ರೇರಿತಗೊಂಡಿದೆ.

ಗ್ರ್ಯಾಂಡ್ ಥೆಫ್ಟ್ ಆಟೋ: ವೈಸ್ ಸಿಟಿ ಸ್ಟೋರೀಸ್ ಚಿತ್ರಣ[ಬದಲಾಯಿಸಿ]

ಸ್ಥೂಲ ಅವಲೋಕನ[ಬದಲಾಯಿಸಿ]

ಚಿತ್ರ:NeonVice.jpg
ವೈಸ್ ಸಿಟಿ ಸ್ಟೋರೀಸ್‌ ಚಿತ್ರಣದ ನಗರದಲ್ಲಿನ ಕಟ್ಟಡಗಳು ನಿಯಾನ್ ಬೆಳಕಿನಿಂದ ಹೊಳೆಯುತ್ತಿರುವುದು.

Grand Theft Auto: Vice City Stories ಅಲ್ಲಿ ನಿರೂಪಿಸಲಾದ ವೈಸ್ ಸಿಟಿಯು ಗ್ರ್ಯಾಂಡ್ ಥೆಫ್ಟ್ ಆಟೋ: ವೈಸ್ ಸಿಟಿ ಯ ನಗರ ರೂಪಾಂತರವನ್ನು ಆಧರಿಸಿದೆ. ಆದರೆ ಇದನ್ನು ವೈಸ್ ಸಿಟಿ ಯ ಘಟನೆಗಳಿಗಿಂತ ಎರಡು ವರ್ಷಗಳ ಮೊದಲು 1984ರಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಲಿಬರ್ಟಿ ಸಿಟಿ ಸ್ಟೋರೀಸ್‌ ‌ನಲ್ಲಿ ಲಿಬರ್ಟಿ ಸಿಟಿಯನ್ನು ಗ್ರ್ಯಾಂಡ್ ಥೆಫ್ಟ್ ಆಟೋ III ರಲ್ಲಿನ ಮ‌ೂರು ವರ್ಷಗಳ ಮೊದಲಿನ ಘಟನೆಗಳನ್ನು ಚಿತ್ರಿಸಿದಂತೆ, ವೈಸ್ ಸಿಟಿ ಸ್ಟೋರೀಸ್‌ ಅದರ "ಭವಿಷ್ಯ"ದ ಚಿತ್ರಣದಿಂದ ಅದರ ಭೂಚಿತ್ರಣದಲ್ಲಿ ಅನೇಕ ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿದೆ.

ವಿಶಿಷ್ಟ ಕೇಂದ್ರಗಳು[ಬದಲಾಯಿಸಿ]

 • ಪ್ರಖ್ಯಾತ ಮೋಟಾರುಮನೆ ಉದ್ಯಾನವೊಂದು ಲಿಟಲ್ ಹವಾನದ ದಕ್ಷಿಣದಲ್ಲಿ, ವೈಸ್ ಸಿಟಿಯ ಕಾರು ಪ್ರದರ್ಶನ ಕೊಠಡಿ ಸನ್‌ಶೈನ್ ಆಟೋಸ್‌ಗೆ ಹತ್ತಿರದಲ್ಲಿದೆ ಮೋಟಾರುಮನೆ ಉದ್ಯಾನವು ವಿಕ್ಟರ್ ವ್ಯಾನ್ಸ್‌, ಟ್ರೈಲರ್ ಪಾರ್ಕ್ ಮಾಫಿಯದ ಮುಖಂಡ ಮಾರ್ಟಿ ಜೆ ವಿಲಿಯಮ್ಸ್‌‌‌ನಿಂದ ಕೆಲಸದ ಗುರಿಗಳನ್ನು ಪಡೆಯುವ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಸನ್‌ಶೈನ್ ಆಟೋಸ್‌‌ನ ದಕ್ಷಿಣದಲ್ಲಿ ಅದರ ಹೊಸ ಪ್ರದರ್ಶನ ಕೊಠಡಿಯು, ನಿರ್ಮಾಣ ಹಂತದಲ್ಲಿದ್ದುದರಿಂದ, ಅದು ಬೇರೆ ಒಂದು ಸ್ಥಳದಲ್ಲಿ ಹಿಂದೆ ಸ್ಥಾಪಿಸಲ್ಪಟ್ಟು, (ಉತ್ತರಕ್ಕಿರುವ ರಸ್ತೆಯ ಕೆಳಗೆ) ಕೆಲಸ ಮಾಡಲು ಆರಂಭಿಸಿತು. ಸಂಪೂರ್ಣ ಮೋಟಾರುಮನೆ ಉದ್ಯಾನ ಮತ್ತು ಹಳೆಯ ಸನ್‌ಶೈನ್ ಆಟೋಸ್‌ ಪ್ರಾಂಗಣಗಳೆರಡೂ 1986ರಲ್ಲಿ ಇಲ್ಲವಾಗಿ, ಆ ಜಾಗವನ್ನು ಖಾಲಿ ಪ್ರದೇಶ ಆಕ್ರಮಿಸಿಕೊಂಡಿತು. ಟ್ರೈಲರ್ ಪಾರ್ಕ್ ಮಾಫಿಯಾವನ್ನು ಒಡೆದು (ಮಾರ್ಟಿಯು ವಿಕ್ಟರ್‌ನ ಕೈಯಲ್ಲಿ ಸಾವನ್ನಪ್ಪುವುದರೊಂದಿಗೆ) ಆ ಜಾಗದಲ್ಲಿ ಸನ್‌ಶೈನ್ ಆಟೋಸ್‌ಅನ್ನು ನಿರ್ಮಾಣ ಮಾಡಿದುದು ಎರಡೂ ಸ್ಥಾಪನೆಗಳ ನಾಶಕ್ಕೂ ಕಾರಣವಾಯಿತು, ಎಂದು ಊಹಿಸಲಾಗಿದೆ.
 • ಮೆಂಡೆಜ್ ಸಹೋದರರ, ಸ್ವಂತದ ಆಧುನಿಕ ಮಧ್ಯಮ-ಎತ್ತರದ ಕಟ್ಟಡವೊಂದು ನೀಲಿ ಪ್ರತಿಬಿಂಬಿತ ಗಾಜಿನೊಂದಿಗೆ ಕ್ರೀಡಾಂಗಣದ ಪ್ರಮುಖ ಪ್ರವೇಶದ್ವಾರದಿಂದ ಹಿಡಿದು ಬೀದಿಯುದ್ದಕ್ಕೂ ಕಂಡುಬರುತ್ತದೆ. 1986ರಲ್ಲಿ ವಿಕ್ಟರ್ ಈ ಇಬ್ಬರು ಸಹೋದರರನ್ನೂ ಕೊಂದ ನಂತರ, ಈ ಪ್ರದೇಶದ ಸ್ಥಾನವನ್ನು ತುಂಬಾ ಕಡಿಮೆ ಎತ್ತರದ ಕಟ್ಟವೊಂದು ವ್ಯಾಪಿಸಿಕೊಂಡಿತು.
 • ಡೌವ್ನ್‌ಟೌನ್‌ ಜಿಲ್ಲೆಯಲ್ಲಿರುವ ಪಾಮ್ ಸ್ಪ್ರಿಂಗ್ಸ್ ಹೋಟೆಲ್ ನಿರ್ಮಾಣ ಹಂತದಲ್ಲಿದೆ. ವಿಕ್ಟರ್ ಅವನ ಸಹೋದರ ಲ್ಯಾನ್ಸ್‌‌ನನ್ನು ಉಳಿಸುವುದಕ್ಕಾಗಿ ಬೈಕರ್ ಸದಸ್ಯರನ್ನು ಕೊಂದ ಒಂದು ಸ್ಥಳ ಇಲ್ಲಿದೆ.
 • 1984ರಲ್ಲಿ ಫಿಲ್ ಕ್ಯಾಸಿಡಿಯ ನಿವಾಸ ಮತ್ತು ಆತನ ಗುಂಡು ಹಾರಿಸುವುದನ್ನು ಅಭ್ಯಾಸ ಮಾಡುವ ಸ್ವಂತ ಪ್ರದೇಶವು ವೈಸ್ ಪೋರ್ಟ್‌ನಲ್ಲಿತ್ತು. 1986ರಲ್ಲಿ ಫಿಲ್‌ನ ಮನೆಯಾಗಿದ್ದ ಲಿಟಲ್ ಹೈಟಿಯಲ್ಲಿನ "ಫಿಲ್ಸ್ ಪ್ಲೇಸ್"ಅನ್ನು ವಿಕ್ಟರ್ ಪಡೆದಿದ್ದನು.
 • ಚಿತ್ರ:VCS ChunderWheel.png
  ಚಂಡರ್ ವೀಲ್.
  ಪಶ್ಚಿಮ ವಾಷಿಂಗ್ಟನ್‌ನ ಭೂಭಾಗದಲ್ಲಿ ಕಂಡುಬರುವ ಒಂದು ಜಾತ್ರೆ ಮೈದಾನದಲ್ಲಿ "ಚಂಡರ್ ವೀಲ್"ಅನ್ನು ಹೋಲುವ ರಾಟೆ ತೊಟ್ಟಿಲೊಂದು ಇದೆ. ಸುಮಾರು 1986ರಲ್ಲಿ ಈ ಪ್ರದೇಶವು ವೈಸ್ ಸಿಟಿ ಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಾಗವೊಂದನ್ನು ಹೊಂದಿತ್ತು. ಅಲ್ಲಿ ಟಾಮಿ ವರ್ಸೆಟ್ಟಿಯು ಆಯೋಗಗಳಿಗಾಗಿ ಲಿಮಸೀನ್‌ನಲ್ಲಿ ಹೋಗಿ ಆವೆರಿ ಕ್ಯಾರಿಂಗ್ಟನ್‌ನನ್ನು ಭೇಟಿಯಾಗುತ್ತಿದ್ದನು. ಈ ಜಾತ್ರೆಯ ಮೈದಾನದ ಪಶ್ಚಿಮಕ್ಕಿದ್ದ ಉದ್ಯಾನವು, 1986ರ ಸಂದರ್ಭದಲ್ಲಿ ನಿರ್ಮಾಣ ಹಂತದಲ್ಲಿದ್ದ ಮತ್ತೊಂದು ಪ್ರದೇಶವಾಗಿದೆ; ಈ ಪ್ರದೇಶವು ನಂತರ ವೈಸ್ ಸಿಟಿ ಆಯೋಗವೊಂದರಲ್ಲಿ ದೂರ ನಿಯಂತ್ರಿತ ಹೆಲಿಕಾಪ್ಟರ್‌ನಿಂದ ಹಾಕಿದ ಸ್ಫೋಟಕಗಳಿಂದ ನಾಶಗೊಂಡಿತು.
 • ಸ್ಟ್ರೀಮ್‌ಲೈನ್ ಮಾಡರ್ನೆ-ಶೈಲಿಯ ಕಟ್ಟಡ (ಇದು ಒಂದು ಬಂದರು ಕಾಪು, ಗ್ಯಾರೇಜ್ ಮತ್ತು ಹೆಲಿಪ್ಯಾಡ್‌ಅನ್ನು ಹೊಂದಿರುತ್ತದೆ.) ಮಿಡ್‌ಲ್ಯಾಂಡ್ ಹೋಟೆಲ್ ವಾಷಿಂಗ್ಟನ್ ಬೀಚ್‌ ಸಂತೆಮಾಳದ ಉತ್ತರ ಭಾಗಕ್ಕೆ ಇದೆ. ಇದು 1986ರಲ್ಲಿ ಕಡಿಮೆ-ಎತ್ತರದ ವಾಸದ ಮಹಡಿಗಳನ್ನು ಹೊಂದಿದ್ದ ಪ್ರದೇಶವಾಗಿದೆ.
 • ಸ್ಟಾರ್‌ಫಿಶ್ ದ್ವೀಪದಲ್ಲಿರುವ ರಿಕಾರ್ಡೊ ಡೈಯಾಜ್‌‌ನ ಮಹಲಿನ ಬಲಭಾಗವು (ಪಶ್ಚಿಮಕ್ಕಿರುವ) ನಿರ್ಮಾಣ ಹಂತದಲ್ಲಿದೆ. ಅಥವಾ 1984ರಲ್ಲಿದ್ದುದರ ವಿಸ್ತರಣೆ ನಡೆಯುತ್ತಿದೆ. ಡೈಯಾಜ್ ಆವರಣದ ಎರಡೂ ಬದಿಗಳನ್ನು ಸುಂದರವಾಗಿ ಕಾಣುವಂತೆ ಮಾಡಿದ; 1986ರಲ್ಲಿದ್ದ ಸುತ್ತುಗಟ್ಟಿರುವ ಪ್ರಬಲ ಕೋಟೆಗಳು 1984ರಲ್ಲಿ ಅಸ್ತಿತ್ವದಲ್ಲಿರಲಿಲ್ಲ; ಬದಲಿಗೆ ಕೇವಲ ಒಂದು ಕೊಳ ಮಾತ್ರ ಮಹಲಿನ ಪಶ್ಚಿಮ ಭಾಗದಲ್ಲಿತ್ತು.
 • ಗಣ್ಯ-ವ್ಯಕ್ತಿಗಳ ಆಗಮನ ನಿರ್ಗಮನ ನಿಲ್ದಾಣವೊಂದು,(VIP ಟರ್ಮಿನಲ್) ಅದರ ಸ್ವಂತ ಬೇರೆಯೇ ಕಾರು ನಿಲುಗಡೆ ಮತ್ತು ಬಂದರು ಕಾಪಿನೊಂದಿಗೆ 1984ರಲ್ಲಿ ಎಸ್ಕೋಬರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತು. ಈ ಸೌಕರ್ಯವು 1986ರಲ್ಲಿ ಕಂಡುಬರುವುದಿಲ್ಲ.
 • ಸುಮಾರು 1984ರಲ್ಲಿ ಒಂದು ಸಣ್ಣ ನಿರ್ಮಾಣ ಜಾಗದೊಂದಿಗೆ ಖಾಲಿ ಪ್ರದೇಶವಾಗಿದ್ದ ವಾಷಿಂಗ್ಟನ್ ಮಾಲ್ ಈಗ ಅಸ್ತಿತ್ವದಲ್ಲಿಲ್ಲ.
 • ಲಿ ಸಿಂಜ್ ಡಿ ಆರ್ಬ್ರೆ ಯನ್ನು (ಫ್ರೆಂಚ್‌ನ "ದ ಮಂಕಿ ಆಫ್ ದ ಟ್ರೀ") ಹೋಲುವ ಲಿಟಲ್ ಹೈಟಿಯಲ್ಲಿನ ಒಂದು ಸಣ್ಣ ಕೆಫೆಯು 1984ರಲ್ಲಿ ಕಂಡುಬರುತ್ತದೆ. ಈ ಸ್ಥಳವನ್ನು 1986ರಲ್ಲಿ "ಕೆಫೆ ಅಂಡರ್ ದ ಟ್ರೀ"ಯನ್ನು ಹೋಲುವ ಬೇರೊಂದು ಕೆಫೆ ಆಕ್ರಮಿಸಿಕೊಂಡಿತು.
 • ಫೋರ್ಟ್ ಬಾಕ್ಸ್ಟರ್ ಮಿಲಿಟರಿ ಕಾರ್ಯಸ್ಥಾನವು 1986ರಲ್ಲಿನ ರಚನೆಗಿಂತ ಗಮನಾರ್ಹವಾಗಿ ಭಿನ್ನ ವಿನ್ಯಾಸ ರಚನೆ ಹೊಂದಿದೆ.
 • ಕೆಲವು ಒಳಭಾಗದ ಅಪರೂಪದ ಪ್ರದೇಶಗಳು ಬದಲಾವಣೆಗೊಂಡವು. ಉದಾಹರಣೆಗಾಗಿ, ನಾರ್ತ್ ಪಾಯಿಂಟ್ ಮಾಲ್ (ಇದನ್ನು 1984ರಲ್ಲಿ ವೈಸ್ ಪಾಯಿಂಟ್‌ ಮಾಲ್ ಎಂದು ಕರೆಯಲಾಗುತ್ತಿತ್ತು.) ಅಂದರೆ 1984ರಲ್ಲಿ ಇರುವುದಕ್ಕಿಂತ ಸಂಪೂರ್ಣವಾಗಿ ಬೇರೆಯದೇ ಆದ ಅಂಗಡಿಗಳನ್ನು 1986ರಲ್ಲಿ ಒಳಗೊಂಡಿತ್ತು. ಆದರೂ ಕೆಲವು ಅಂಗಡಿಗಳು ವೈಸ್ ಸಿಟಿ ನಿರ್ಮಾಣವಾದಾಗ ಹಾಗೆಯೇ ಉಳಿದಿದ್ದವು. ಅವುಗಳೆಂದರೆ ಅಮ್ಯುನೇಶನ್ ಮತ್ತು "ದ ವಿನೈಲ್ ಕೌಂಟ್‌ಡೌವ್ನ್".

ಗ್ಯಾಂಗ್ ನಿಯಂತ್ರಣ[ಬದಲಾಯಿಸಿ]

[original research?]

ಸುಮಾರು 1984ರಲ್ಲಿ ವೈಸ್ ಸಿಟಿಯಲ್ಲಿದ್ದ ಗ್ಯಾಂಗ್‌ಗಳು ಆ ವರ್ಷದಲ್ಲಿ ಹೆಚ್ಚು ಪ್ರಸಿದ್ಧಿಯಲ್ಲಿದ್ದ ವ್ಯಾನ್ಸ್ ಕ್ರೈಮ್ ಫ್ಯಾಮಿಲಿಯ ಚಟುವಟಿಕೆಗಳಿಂದಾಗಿ ಗಮನಾರ್ಹವಾಗಿ ಭಿನ್ನವಾಗಿದ್ದವು. ನಗರದಲ್ಲಿ ಹಿಂದೆ ಹೆಚ್ಚು ಪ್ರಮಾಣದಲ್ಲಿ ಬೆಳೆದಿದ್ದ ಅನೇಕ ಗ್ಯಾಂಗ್‌ಗಳನ್ನು ಇವರ ಪ್ರಾಬಲ್ಯ ಧ್ವಂಸಗೊಳಿಸಿತು. ವೈಸ್ ಸಿಟಿ ಸ್ಟೋರೀಸ್‌ ‌ನ ಆರಂಭದಲ್ಲಿ, ವೈಸ್ ಸಿಟಿ ಯಲ್ಲಿ ಹಿಂದೆ ಅಜ್ಞಾತವಾಗಿದ್ದ ನಂತರ ವಿಕ್ಟರ್ ವ್ಯಾನ್ಸ್‌ ಮತ್ತು ಅವನ ಸಂಸ್ಥೆಯಿಂದ ನಾಶವಾದ ಅಥವಾ ಚೆದುರಿ ಹೋದ ಅನೇಕ ಗ್ಯಾಂಗ್‌ಗಳೂ ಇದ್ದವು.

 • ಮಾರ್ಟಿ ಜೆ ವಿಲಿಯಮ್ಸ್‌ ನೇತೃತ್ವದ ಒಂದು ರೆಡ್ನೆಕ್ ಗ್ಯಾಂಗ್ ಟ್ರೈಲರ್ ಪಾರ್ಕ್ ಮಾಫಿಯ, ಸನ್‌ಶೈನ್ ಆಟೋಸ್‌ ಹತ್ತಿರದ ಮೋಟಾರುಮನೆ ಉದ್ಯಾನದಲ್ಲಿ ಕಾರ್ಯಚಟುವಟಿಕೆ ನಡೆಸುತ್ತದೆ. ವೈಸ್ ಸಿಟಿಯ ಹೆಚ್ಚಿನ ಬಡ ಸಮುದಾಯಗಳನ್ನು ನಿಯಂತ್ರಿಸುತ್ತದೆ. ಅಲ್ಲದೇ ಅನೇಕ ಸಣ್ಣ ವ್ಯವಹಾರಗಳನ್ನು ನಡೆಸುತ್ತದೆ. ಈ ಗ್ಯಾಂಗ್ ಕೋಲೋಸ್‌ ಒಂದಿಗೆ ಅಲ್ಪಾವಧಿಯ ಯುದ್ಧದಲ್ಲಿ ಭಾಗವಹಿಸಿ, ಲಿಟಲ್ ಹೈಟಿಯ ಹೆಚ್ಚಿನ ವ್ಯವಹಾರಗಳನ್ನು ಸ್ವಾಧೀನಪಡಿಸಿಕೊಂಡಿದೆ. ವಿಕ್ಟರ್ ವ್ಯಾನ್ಸ್‌ನ ಕೈಯಲ್ಲಿ ಮಾರ್ಟಿ ಸಾವನ್ನಪ್ಪಿದ ನಂತರ, ವ್ಯಾನ್ಸ್ ಕ್ರೈಮ್ ಫ್ಯಾಮಿಲಿಯು ಅವನ ಎಲ್ಲಾ ಚಟುವಟಿಕೆಗಳ ನಿಯಂತ್ರಣ ತೆಗೆದುಕೊಂಡಿದರಿಂದ ಅವನ ಗ್ಯಾಂಗ್ ನಾಶಗೊಂಡಿತು.
 • ಹಿಸ್ಪ್ಯಾನಿಕ್(ಸ್ಪೇನ್ ಮಾತನಾಡುವ) ಗ್ಯಾಂಗ್ ಕೋಲೋಸ್‌ 1984ರಲ್ಲಿ ಲಿಟಲ್ ಹವಾನ ಮತ್ತು ಲಿಟಲ್ ಹೈಟಿಯ ನಿಯಂತ್ರಣದಲ್ಲಿತ್ತು, ಎಂದು ಹೇಳಲಾಗಿದೆ. ಅಂಬೆರ್ಟೊ ರೋಬಿನ ನೇತೃತ್ವದ ಕ್ಯೂಬನ್ ಗ್ಯಾಂಗ್ (ವೈಸ್ ಸಿಟಿ ಸ್ಟೋರೀಸ್‌ ‌ನಲ್ಲಿ "ಲಾಸ್ ಕ್ಯಾಬ್ರೋನ್ಸ್" ಎನ್ನಲಾಗುತ್ತದೆ) ಕೋಲೋಸ್‌ನ ಮೇಲೆ ತೀವ್ರ ಹಿಂಸಾತ್ಮಕ ಗ್ಯಾಂಗ್ ಯುದ್ಧ ನಡೆಸಿತು. ಈ ಯುದ್ಧವು ಲಾಸ್ ಕ್ಯಾಬ್ರನೋನ್ಸ್ ಮತ್ತು ವಿಕ್ಟರ್ ವ್ಯಾನ್ಸ್‌‌ರಿಂದ ಲಿಟಲ್ ಹೈಟಿಯಲ್ಲಿನ ಕೋಲೋಸ್‌ನ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟ ದೊಡ್ಡ ಮಳಿಗೆಯನ್ನು ನಾಶಗೊಳಿಸಿತು. ಬದುಕುಳಿದ ಕೋಲೋ ಸದಸ್ಯರನ್ನು ಲಾಸ್ ಕ್ಯಾಬ್ರನೋನ್ಸ್‌‌ಗೆ ಶರಣಾಗಿ ಏಕೀಕರಣಗೊಳ್ಳುವಂತೆ ಬಲವಂತ ಪಡಿಸಲಾಯಿತು. ಕೋಲೋಸ್ ಸೋಲು ಕಂಡ ನಂತರ 1986ರಲ್ಲಿ ಕ್ಯೂಬನ್ನರು/ಲಾಸ್ ಕ್ಯಾಬ್ರೋನ್ಸ್ ಲಿಟಲ್ ಹವಾನದ ನಿಯಂತ್ರಣ ಸಾಧಿಸಿದರು. ಕೋಲೋಸ್‌ ನಾಶಗೊಂಡ ನಂತರ ಹೈಟಿಯನ್ನರೂ ಸಹ ಲಿಟಲ್ ಹೈಟಿಯ ಪ್ರಯೋಜನ ಪಡೆಯಲು ಮುಂದಾದರು.
 • ಶಾರ್ಕ್ ಗ್ಯಾಂಗ್ ಕಳ್ಳಸಾಗಣೆ, ದರೋಡೆ ಮತ್ತು ಮಾದಕ ಪದಾರ್ಥಗಳ ಸಾಗಣೆಯ ಮ‌ೂಲಕ ನಗರದ ವಾಷಿಂಗ್ಟನ್ ಬೀಚ್‌ ಮತ್ತು ಓಶನ್ ಬೀಚ್‌ ಪ್ರದೇಶಗಳನ್ನು ನಿಯಂತ್ರಿಸುತ್ತಿತ್ತು. ವ್ಯವಹಾರಗಳನ್ನು ವ್ಯಾನ್ಸ್ ಕ್ರೈಮ್ ಫ್ಯಾಮಿಲಿಯು ಸ್ವಾಧೀನಪಡಿಸಿಕೊಂಡ ನಂತರ ಈ ಗ್ಯಾಂಗ್ 1986ರಲ್ಲಿ ಸ್ಟ್ರೀಟ್‌ವನ್ನಾಬೆಸ್‌ ಗ್ಯಾಂಗ್‌ ಆಗಿ ಪರಿವರ್ತಿತವಾಯಿತು.
 • ವಿಕ್ಟರ್ ವ್ಯಾನ್ಸ್‌ ಮಿಲಿಟರಿಯಿಂದ ಅವಮಾನಕರವಾಗಿ ರದ್ದುಗೊಂಡ ನಂತರ, ಅರ್ಮಾಂಡೊ ಮತ್ತು ಡೈಗೊ ಮೆಂಡೆಜ್ ಸಹೋದರರ ಮುಖಂಡತ್ವದ ಮೆಂಡೆಜ್ ಕಾರ್ಟೆಲ್‌ ವೈಸ್ ಸಿಟಿಯಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಿತು. ಅದರ ಕಾರ್ಯಚಟುವಟಿಕೆಯ ಕೇಂದ್ರವನ್ನು ಪ್ರಾವ್ನ್‌ ದ್ವೀಪದಲ್ಲಿ ನೆಲೆಗೊಳಿಸಿ, ಡೈಯಾಜ್ ಕಾರ್ಟೆಲ್‌ಗೆ ಎದುರಾಳಿಯಾಗುವ ಮ‌ೂಲಕ ನಗರದಲ್ಲೇ ಅತಿ ಪ್ರಬಲ ಅಪರಾಧ ಸಂಸ್ಥೆಯಾಯಿತು. ಆರಂಭದಲ್ಲಿ ವ್ಯಾನ್ಸ್ ಕ್ರೈಮ್ ಫ್ಯಾಮಿಲಿಯೊಂದಿಗೆ ಸಂಬಂಧ ಬೆಳೆಸಿದರು. ಆದರೆ ಅಂತಿಮವಾಗಿ ವಿಕ್ಟರ್‌ಗೆ ದ್ರೋಹವೆಸಗಿದುದು ಅವರ ಸಾವಿಗೆ (ರಿಕಾರ್ಡೊ ಡೈಯಾಜ್‌‌ನ ಸಹಾಯದೊಂದಿಗೆ) ಮತ್ತು ಸಂಸ್ಥೆಯ ನಾಶಕ್ಕೆ ಸ್ವತಃ ಅವರೇ ಕಾರಣವಾಗುವಂತೆ ಆಯಿತು.ಮೆಂಡೆಜ್ ಕಾರ್ಟೆಲ್‌ನ ಸೋಲಿನ ನಂತರ ಸ್ಟ್ರೀಟ್‌ವನ್ನಾಬೆಸ್‌ ಈಗ ಶಿಥಿಲವಾದ ಪ್ರಾವ್ನ್‌ ದ್ವೀಪದ ಉತ್ತರಾರ್ಧದ ನಿರ್ದಿಷ್ಟವಾಗಿ ಹಿಂದೆ ಮೆಂಡೆಜ್ ಕಾರ್ಟೆಲ್‌ನ ನೆಲೆಯಾಗಿದ್ದ ಪ್ರದೇಶಗಳ ಪ್ರಭಾವ ಪಡೆದರು. ಅಲ್ಲದೇ ಡೈಯಾಜ್ ಕಾರ್ಟೆಲ್ ವೈಸ್ ಸಿಟಿಯಲ್ಲಿ ಪ್ರಬಲ ಅಪರಾಧ ಸಂಸ್ಥೆಯಾಯಿತು.

ವೈಸ್ ಸಿಟಿ ಯಲ್ಲಿನ ಬೈಕರ್ ಗ್ಯಾಂಗ್ ಡೌವ್ನ್‌ಟೌನ್‌ ಮತ್ತು ವೈಸ್ ಪಾಯಿಂಟ್‌ನಲ್ಲಿ ಅನೇಕ ವ್ಯವಹಾರಗಳನ್ನು ನಿಯಂತ್ರಣ ಮಾಡುವಲ್ಲಿ 1984ಕ್ಕಿಂತ 1986ರಲ್ಲಿ ಹೆಚ್ಚು ಪ್ರಬಲ ಮತ್ತು ಪ್ರಭಾವಶಾಲಿಯಾಗಿತ್ತು. ವ್ಯಾನ್ಸ್ ಕ್ರೈಮ್ ಫ್ಯಾಮಿಲಿಯ ಪ್ರಾಬಲ್ಯದ ಬೆಳವಣಿಗೆಯಿಂದ ಬೈಕರ್ ಗ್ಯಾಂಗ್ ಅದರ ವ್ಯವಹಾರ ನಿಯಂತ್ರಣವನ್ನು ಕಳೆದುಕೊಂಡಿತು, ಎಂದು ತಿಳಿಯಲಾಗಿದೆ. 1986ರಲ್ಲಿ ಗ್ರೀಸ್ ಚಾಪರ್ ಬಾರ್ ಒಂದಿಗೆ ಮಾತ್ರ ವ್ಯವಹಾರ ನಡೆಸಲು ಅವಕಾಶ ಕೊಟ್ಟಿತು. ವೈಸ್ ಸಿಟಿ ಸ್ಟೋರೀಸ್‌ ‌ನಲ್ಲಿ ನಿರೂಪಿಸಲಾದಂತೆ ಬೈಕರ್ ಗ್ಯಾಂಗ್‌ನ ಉಪಶಾಖೆ ಸ್ಯ್ಟಾಲಿಯಾಂಜ್‌ ಸಲಿಂಗಕಾಮಿ ಬಿಳಿಯರ ಪರಮಾಧಿಕಾರವಾದಗಳನ್ನು ಒಳಗೊಂಡಿದೆ. ಸ್ಯ್ಟಾಲಿಯಾಂಜ್‌ಅನ್ನು ವಿಕ್ಟರ್‌ 1984ರಲ್ಲಿ ಗ್ಯಾಂಗ್‌ನ ನಂತರ ಹೆಸರಿಡಲಾದ "ಸ್ಯ್ಟಾಲಿಯಾಂಜ್‌" ಬಾರ್‌ನಲ್ಲಿ ಸಂಪೂರ್ಣ ನಾಶಗೊಳಿಸಿದನು.

ವೈಸ್ ಸಿಟಿಯಿಂದ ಅಧಿಕಾರವು ಸ್ಥಳಾಂತರಗೊಂಡಿದರಿಂದ ವ್ಯಾನ್ಸ್ ಕ್ರೈಮ್ ಫ್ಯಾಮಿಲಿಯು ನಗರದ ಸಮೃದ್ಧ-ಭಾಗವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು; ಎಂದು ಊಹಿಸಲಾಗಿದೆ. ವಿಕ್ಟರ್ ಮೆಂಡೆಜ್ ಸಹೋದರರನ್ನು ಕೊಂದ ನಂತರ ವಿಕ್ಟರ್ ಮತ್ತು ಲ್ಯಾನ್ಸ್‌ ಇಬ್ಬರೂ ವೈಸ್ ಸಿಟಿಯನ್ನು ಬಿಟ್ಟು ಡೊಮಿನಿಕನ್ ರಿಪಬ್ಲಿಕ್‍‌‌ನಲ್ಲಿ ಅವರ ಮಾದಕ ಪದಾರ್ಥಗಳ ಹಣದಿಂದ ದೂರ ಉಳಿದು ಕೆಲವು ವರ್ಷಗಳವರೆಗೆ ಜೀವನ ಸಾಗಿಸಲು ನಿರ್ಣಯಿಸಿದರು. 1986ರಲ್ಲಿ ವ್ಯಾನ್ಸ್ ಸಹೋದರರ ಸಂಸ್ಥೆಯ ಪ್ರಸ್ತುತ ಆಧಾರಸ್ಥಾನವು ಎಲ್ಲಿದೆ; ಎಂದು ತಿಳಿದಿಲ್ಲದಿದ್ದರೂ, ಅವರು ವೈಸ್ ಸಿಟಿಯಲ್ಲಿ ಸಕ್ರಿಯವಾಗಿದ್ದರು. ವಿಕ್ಟರ್‌ ವೈಸ್ ಸಿಟಿ ಯ ಆರಂಭದಲ್ಲೇ ಕೊಲ್ಲಲ್ಪಟ್ಟನು. ಲ್ಯಾನ್ಸ್‌ ಟಾಮಿ-ವರ್ಸೆಟ್ಟಿಯಿಂದ ಸಾಯಿಸಲ್ಪಟ್ಟನು. ಈ ಮ‌ೂಲಕ ವ್ಯಾನ್ಸ್ ಕ್ರೈಮ್ ಫ್ಯಾಮಿಲಿಯ ಚಟುವಟಿಕೆಗಳು ಕೊನೆಗೊಂಡವು. ನಂತರ ವಸ್ತುತಃ ಎಲ್ಲಾ ಜಿಲ್ಲೆಗಳು ಸಂಪೂರ್ಣವಾಗಿ ಟಾಮಿ ವರ್ಸೆಟ್ಟಿಯ ನಿಯಂತ್ರಣದಡಿಯಲ್ಲಿ ಬರುವುದರೊಂದಿಗೆ ವರ್ಸೆಟ್ಟಿ ಗ್ಯಾಂಗ್ ವೈಸ್ ಸಿಟಿಯಲ್ಲಿ ಹೆಚ್ಚು ಪ್ರಬಲ ಸಂಸ್ಥೆಯಾಯಿತು. ವರ್ಸೆಟ್ಟಿಯ ಮನೆಯ ಮೇಲೆ ದಾಳಿ ನಡೆದ ನಂತರ, ಟಾಮಿ ವರ್ಸೆಟ್ಟಿಯು ವೈಸ್ ಸಿಟಿಯಲ್ಲಿನ ಪ್ರತಿಯೊಂದು ಗ್ಯಾಂಗ್ಅನ್ನೂ ನಾಶಮಾಡಿ, ಸಂಪೂರ್ಣ ವೈಸ್ ಸಿಟಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡನು, ಎಂದು Rockstar.com ಹೇಳಿದೆ. ಗ್ರ್ಯಾಂಡ್ ಥೆಫ್ಟ್ ಆಟೋ: ಲಿಬರ್ಟಿ ಸಿಟಿ ಸ್ಟೋರೀಸ್‌ ನಡೆದಾಗ ವೈಸ್ ಸಿಟಿಯನ್ನು ವರ್ಸೆಟ್ಟಿಯು ನಿರ್ವಹಿಸುತ್ತಿದ್ದ ಎಂದು ನಂಬಲಾಗಿದೆ.

ಇವನ್ನೂ ನೋಡಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. ಗ್ರ್ಯಾಂಡ್ ಥೆಫ್ಟ್ ಆಟೋ: ವೈಸ್ ಸಿಟಿ ಯಲ್ಲಿ, ಆಟದ ರೇಡಿಯೊ ಸ್ಟೇಷನ್‌ಗಳು ಫ್ಲೋರಿಡಾವನ್ನು ಈ ಆಟಗಳು ನಡೆದ ರಾಜ್ಯವೆಂದು ಸೂಚಿಸುತ್ತವೆ. ಇತರ ಕೆಲವು ಆಕರಗಳೆಂದರೆ - ಆಟದಲ್ಲಿ ಎಲ್ಲಾ ಕಡೆ ಫ್ಲೋರಿಡಾದ ಪರವಾನಗಿ ಫಲಕಗಳನ್ನು ಬಳಸಿರುವುದು ಕಂಡುಬರುತ್ತದೆ.
 2. ರೇ ಮ್ಯಾಕೋವ್ಸ್ಕಿಯು ಮಿಯಾಮಿಗಾಗಿ ಬಿಟ್ಟುಹೋದನು, ಎಂದು ಹೇಳಿದಾಗ ಮತ್ತು ಆಕಾಶವಾಣಿ ಜಾಹೀರಾತು ನಗರದ ಬಗ್ಗೆ ಸೂಚಿಸುವಾಗ, ಮಿಯಾಮಿಯು ಗ್ರ್ಯಾಂಡ್ ಥೆಫ್ಟ್ ಆಟೋ III ರಲ್ಲಿ ಇದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗುತ್ತದೆ. ಲಿಬರ್ಟಿ ಸಿಟಿಯ ವಿಮಾನ ನಿಲ್ದಾಣದ ಎ ಮಾಕ್ ವೆಬ್‌ಸೈಟ್ ಸಹ ವೈಸ್ ಸಿಟಿಯೊಂದಿಗೆ ಮಿಯಾಮಿಯನ್ನೂ ಸೂಚಿಸುತ್ತದೆ. "ಮ‌ೂ ಓವರ್ ಮಿಯಾಮಿ" ಜಾಹೀರಾತು ಹಲಗೆಯೊಂದು ವೈಸ್ ಸಿಟಿಯಲ್ಲಿದೆ. ಆದರೂ ಮಿಯಾಮಿಯ ಬಗ್ಗೆ ನಂತರದ ಗ್ರ್ಯಾಂಡ್ ಥೆಫ್ಟ್ ಆಟೋ ಆಟಗಳಲ್ಲಿ ಸೂಚಿಸಲಾಗಿಲ್ಲ.
 3. ಈ ಮಾಹಿತಿಯು ಆಟದ ಕೈಪಿಡಿಯ 5ನೇ ಪುಟದಲ್ಲಿದೆ.