ವೈಶೀಷಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈಶೇಷಿಕ ದರ್ಶನ-ಒಂದು ವೈಜ್ಞಾನಿಕ ಮುನ್ನೋಟ 'ವೈಶೇಷಿಕ ಸೂತ್ರ'ಗಳು ಋಷಿ ಕಾನಡರವರು ಸೃಷ್ಟಿಸಿದ್ದಾರೆ,ಇದು ಭೌತಿಕ ಶಾಸ್ತ್ರದ ಒಂದು ಗ್ರಂಧವಾಗಿದೆ.ಈ ಸೂತ್ರಗಳು ಪ್ರಕೃತಿನಲ್ಲಿನ ವಸ್ತುಪ್ರಪಂಚದ ಬಗ್ಗೆ,ಅದರ ಸಂಯೋಜನೆಯ ಬಗ್ಗೆ ವಿವರಿಸಿದವು; ಮತ್ತು ವಸ್ತುಗಳಲ್ಲಿ ಇರುವ 'ಅಣು'ಎಂಬ ಪದಾರ್ಥದ ಬಗ್ಗೆ ಮೊದಲ ಬಾರಿ ಪರಿಕಲ್ಪನೆ ಮಡಿದವು, ವಸ್ತುವಿನ ಪ್ರಪಂದಚಕ್ಕೆ ಅಣು ಮೂಲಭೂತ ಕಾರಣವೆಂಬುದನ್ನು ತೀರ್ಮಾನಿಸಿದವು.ನೈಸರ್ಗಿಕ ಚಟುವಟಿಕೆಗಳನ್ನು ಒಂದು ತಾರ್ಕಿಕ,ವೈಜ್ಞಾನಿಕ ಮತ್ತು ತಾತ್ವಿಕ ರೂಪದಲ್ಲಿ, ಮತ್ತು ಅಕಾಶದ ನಿಗೂಢತೆಯನ್ನು ಸಂಕ್ಷಿಪ್ತವಾಗಿ ಒಂದು ಸೈದ್ಧಂತಿಕ ನೆಲಮಟ್ಟಿನಲ್ಲಿ ಚರ್ಚಿಸಿದರು.ಪ್ರಕೃತಿ ಒಳಗೆ ಇರುವ ಪದಾರ್ಥಗಳನ್ನು ಅದರ ಅಸ್ತಿತ್ವದ ಮೂಲಕ, ಅದರ ಚಲನದ ಮೂಲಕ, ಋಷಿ ಕಾನಡರವರು ಕೆಲವು 'ಗುಣ'ಗಳನ್ನು ಗುಣಲಕ್ಷನ ಮಾಡಿದರು.ಮನಸ್ಸು-ಮೆದಳುನಿಂದ ಸಂಭಾವ್ಯವಾಗುವ ವಾಸ್ತವಿಕ ಸತ್ಯಗಳಕ್ಕೆ ಒಂದು ಸೈದ್ಧಾಂತಿಕ ಸ್ವರೂಪವನ್ನು ರಚಿಸಿದರು.ಸಮಯವನ್ನು ಮತ್ತು ಅದರ ಚರ್ಯೆಗಳನ್ನು ತಿಳಿದುಕೊಳ್ಳಲು ಬೇಕಾದ ಭೂತ-ಭವಿಷ್ಯ-ವರ್ತಮಾನ ಎಂಬ ಕಾಲ ವಿಂಗಡನೆಯಲ್ಲಿ ವೀಕ್ಷಕರ ಪ್ರಾಧಾನ್ಯತೆಯ ಬಗ್ಗೆ ಈ ಸೂತ್ರಗಳಲ್ಲಿ ಜ್ಞಾನ ಲಭ್ಯವಾಗಿದೆ. ೧೫ನೇ ಶತಮಾನದ ಶಂಕರ ಮಿಶ್ರ ಎಂಬ ವಿದ್ವಾಂಸರು ಈ ಸೂತ್ರಗಳಿಗ ಒಂದು ವ್ಯಾಖ್ಯಾನವನ್ನು ಬರೆದರು.ಮತ್ತು ೪ನೇ ಶತಮಾನದ ಪ್ರಾಶಷ್ತಪಾದ ಎಂಬ ತಾತ್ವಿಕ-ವಿಜ್ಞಾನಿ 'ಪ್ರಾಶಷ್ತಪಾದ ಭಾಷ್ಯ'ವಂಬ ಕ್ರುತಿಯನ್ನು ಋಷಿ ಕಾನಡರವರ ವೈಶೇಷಿಕ ಸೂತ್ರಗಳಿಗೆ ವ್ಯಾಖ್ಯಾನವಗಿ ರಚಿಸಿದರು.

"https://kn.wikipedia.org/w/index.php?title=ವೈಶೀಷಿಕ&oldid=631977" ಇಂದ ಪಡೆಯಲ್ಪಟ್ಟಿದೆ