ವೈರಾಗಡ್ ಕೋಟೆ
ವೈರಾಗಡ್ ಎಂಬುದು ಭಾರತದ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿದೆ. ಇದು ಖೋಬ್ರಾಗಧಿ ಮತ್ತು ಸತ್ನಲಸ್ ನದಿಗಳ ಸಂಗಮದಲ್ಲಿರುವ ಒಂದು ಸಣ್ಣ ಕೋಟೆಯಾಗಿದೆ. ಅದೇ ಹೆಸರಿನ ಸಣ್ಣ ಗ್ರಾಮವು ಕೋಟೆಯ ಪಕ್ಕದಲ್ಲಿದೆ.ಈ ಕೋಟೆಯು ನಾಗ್ಪುರದಿಂದ ೧೮೦ ಕಿ.ಮೀ ಮತ್ತು ಚಂದ್ರಾಪುರದಿಂದ ೮೦ ಕಿ.ಮೀ ದೂರದಲ್ಲಿದೆ.
ಇತಿಹಾಸ
[ಬದಲಾಯಿಸಿ]ಈ ಗ್ರಾಮವು ದ್ವಾಪರ ಯುಗದಲ್ಲಿ ವೈರಕನ್ (ಚಂದ್ರನ ಕುಟುಂಬದಿಂದ ಬಂದ ಮಗ) ಎಂಬ ರಾಜನಿಂದ ಸ್ಥಾಪಿಸಲ್ಪಟ್ಟಿದೆ ಎಂದು ಭಾವಿಸಲಾಗಿದೆ. ಸುಮಾರು ೯ ನೇ ಶತಮಾನದಲ್ಲಿ ಗೊಂಡರ ವಶವಾದ ಮಾನ ವಂಶದ ಮುಖ್ಯಸ್ಥರು ನಗರವನ್ನು ಆಳಿದರು. ಗೊಂಡರು ಇದನ್ನು ಗರ್ಬೋರಿ ಮತ್ತು ರಾಜ್‌ಗಢದೊಂದಿಗೆ ಆಳಿದರು. ವೈರಾಗಡ್ ಒಮ್ಮೆ ವಜ್ರದ ಗಣಿಗಳನ್ನು ಹೊಂದಿತ್ತು ಎಂದು ಅಬುಲ್ ಫಜಲ್‌ನ ಐನ್-ಇ-ಅಕ್ಬರಿಯಲ್ಲಿ ಉಲ್ಲೇಖಿಸಲಾಗಿದೆ. ೧೪೨೨ರ ಸುಮಾರಿಗೆ ಬಹಮನಿ ಸುಲ್ತಾನರ ಅಹ್ಮದ್ ಷಾ ಬಹಮನಿ ವೈರಾಗಡ್ ಮೇಲೆ ದಾಳಿ ಮಾಡಿದಾಗ ಯುದ್ಧದಲ್ಲಿ ಮಡಿದ ೧೦೮ ಮುಸಲ್ಮಾನ್ ಸೈನಿಕರ ಗೋರಿಗಳು ಹಳೆಯ ಈಗ್ದಾದ ಬೆಟ್ಟದ ಬುಡದಲ್ಲಿರುವ ಗಣಿಗಳ ಮೇಲೆ ಇವೆ ಎಂದು ಭಾವಿಸಲಾಗಿತ್ತು. ೧೯೨೫ ರಲ್ಲಿ ಈ ಕೋಟೆಯನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಯಿತು. [೧]
ಭೇಟಿ ನೀಡಬೇಕಾದ ಸ್ಥಳಗಳು
[ಬದಲಾಯಿಸಿ]ಈ ಕೋಟೆಯು ಗ್ರಾಮದ ಉತ್ತರಕ್ಕೆ ೧೦ ಎಕರೆ ಪ್ರದೇಶದಲ್ಲಿ ಹರಡಿದೆ. ಕೋಟೆಯ ಪ್ರವೇಶ ದ್ವಾರದಲ್ಲಿ ಮೂರು ದ್ವಾರಗಳಿವೆ. ಈ ಕೋಟೆಯ ಸುತ್ತ ಸುಮಾರು ೧೫ -೨೦ ಅಡಿ (೫-೬ಮೀ) ಆಳವಾದ ನದಿ ಕಂದಕ ಇದೆ. ಕೋಟೆಯೊಳಗೆ ಅನೇಕ ಬಾವಿಗಳಿವೆ. ಎರಡು ಕಮಾನುಗಳಿರುವ ಮೆಟ್ಟಿಲು ಬಾವಿಯಲ್ಲಿ ಇನ್ನೂ ನೀರಿದ್ದು, ಪಾಳುಬಿದ್ದ ಸ್ಥಿತಿಯಲ್ಲಿದೆ. ದೊಡ್ಡ ಕಲ್ಲಿನ ಹೊದಿಕೆಯೊಂದಿಗೆ ಎರಡು ಆಯತಾಕಾರದ ಬಾವಿಗಳಿವೆ. ಪ್ರಸ್ತುತ ಪುರಾತತ್ವ ಇಲಾಖೆಯು ಮುಖ್ಯ ದ್ವಾರದ ಪುನರ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಕೋಟೆಯ ಹೊರಭಾಗದಲ್ಲಿ ಗೊಂಡ ರಾಜಕುಮಾರ ದುರ್ಗಾ ಷಾ ಅವರ ಸಮಾಧಿ ಮತ್ತು ೧೮೧೮ -೧೮೩೦ ರ ನಡುವೆ ಗ್ಯಾರಿಸನ್‌ನ ಬ್ರಿಟಿಷ್ ಕಮಾಂಡೆಂಟ್‌ನ ಮಗಳು ಎಂದು ನಂಬಲಾದ ಅಜ್ಞಾತ ಇಂಗ್ಲಿಷ್ ಹುಡುಗಿಯ ಸಮಾಧಿ ಇದೆ.[೨]
ಗ್ಯಾಲರಿ
[ಬದಲಾಯಿಸಿ]-
ಮುಖ್ಯ ಪ್ರವೇಶ ದ್ವಾರ
-
ಕೋಟೆಯ ಒಳಗಿನ ಅವಶೇಷಗಳು
-
ಆಯತಾಕಾರದ ಬಾವಿ
-
ಭದ್ರಕೋಟೆ
ಉಲ್ಲೇಖಗಳು
[ಬದಲಾಯಿಸಿ]- ↑ "Notification of Centrally Protected Monument in India – Gadchiroli – Fort wall" (PDF). Archived from the original (PDF) on 2018-11-24. Retrieved 2018-11-24.
- ↑ "The Gazetteers Department - Chandrapur". cultural.maharashtra.gov.in. Archived from the original on 2012-12-29.