ವೈಟ್ ರೇನ್ಬೋ (ಚಲನಚಿತ್ರ)
ವೈಟ್ ರೈನ್ಬೋ | |
---|---|
ನಿರ್ದೇಶನ | ಧರನ್ ಮಂಡ್ರಾಯರ್ |
ನಿರ್ಮಾಪಕ | ಹನ್ನಾ ಕಿರ್ಬಿ ಲಿಂಡಾ ಮಂಡ್ರಾಯರ್ |
ಲೇಖಕ | ಧರನ್ ಮಂಡ್ರಾಯರ್ |
ಪಾತ್ರವರ್ಗ |
|
ಸಂಗೀತ | Score: ಮಾರ್ಕ್ ಬೊನಿಲ್ಲ ಮೈಕೆಲ್ ಮಾಸೊನ್ |
ಛಾಯಾಗ್ರಹಣ | ಬಿ.ಕಣ್ಣನ್ |
ಸಂಕಲನ | ಬಿ.ಲೆನಿನ್ |
ಸ್ಟುಡಿಯೋ | ಡಾಲ್ರಿನ್ ಎಂಟರ್ ಟೈನ್ಮೆಂಟ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 92–94 minutes[Note ೧] |
ದೇಶ | India United States |
ಭಾಷೆ | ಹಿಂದಿ ಇಂಗ್ಲೀಷ್ |
ವೈಟ್ ರೇನ್ಬೋ (ಶ್ವೇತ ಎಂದೂ ಸಹ ಈ ಚಿತ್ರ ಕರೆಯಲ್ಪಡುತ್ತದೆ) ೨೦೦೫ ರಲ್ಲಿ ತೆರೆಕಂಡ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಚಲನಚಿತ್ರವಾಗಿದ್ದು ಇದನ್ನು ಧರನ್ ಮಂದ್ರಾಯರ್ ನಿರ್ದೇಶಿಸಿದ್ದಾರೆ. ಇದರಲ್ಲಿ ಸೋನಾಲಿ ಕುಲ್ಕರ್ಣಿ, ಅಮರ್ದೀಪ್ ಝಾ, ಶಮೀಮ್ ಶೇಖ್ ಮತ್ತು ಅಮೃತಾ ಸುಭಾಷ್ ನಟಿಸಿದ್ದಾರೆ.[೩][೪][೨]ಈ ಚಿತ್ರವು ವೃಂದಾವನದಲ್ಲಿರುವ ವಿಧವೆಯರ ಬಗ್ಗೆ ಆಗಿದೆ. ಇಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾದ ಮಹಿಳೆಯರು ಅನಾರೋಗ್ಯದಿಂದಾಗಿ ತಮ್ಮ ಗಂಡಂದಿರನ್ನು ಕಳೆದುಕೊಂಡು ಮರಣಾನಂತರದ ಜೀವನದಲ್ಲಿ ತಮ್ಮ ಪತಿ ತಮ್ಮೊಂದಿಗೆ ಮರಳಲಿ ಎಂದು ಬಿಳಿ ಬಣ್ಣದ ಉಡುಗೆಗಳನ್ನು ಧರಿಸುತ್ತಿರುತ್ತಾರೆ . ಈ ಮಹಿಳೆಯರಲ್ಲಿ ಹಲವಾರು ಮಹಿಳೆಯರು ಎರಡನೇ ಮದುವೆಯನ್ನು ನಿರಾಕರಿಸಿದ್ದರಿಂದ ಬಲವಂತವಾಗಿ ತಮ್ಮ ಮನೆಯಿಂದ ಹೊರಹಾಕಲ್ಪಡುತ್ತಾರೆ.[೫] ಈ ಚಿತ್ರವು ನಾಲ್ಕು ವಿಭಿನ್ನ ವಿಧವೆಯರ ಸುತ್ತ ಸುತ್ತುತ್ತದೆ.[೬]
೨೦೧೩ರಲ್ಲಿ, ಲಿಂಡಾ ಮಾಂಡ್ರಾಯರ್ ಅವರು ದಿ ವೈಟ್ ರೇನ್ಬೋ ಪ್ರಾಜೆಕ್ಟ್ ಅನ್ನು ಆರಂಭಿಸಿದರು. ಇದು ವೃಂದಾವನದ ವಿಧವೆಯರಿಗೆ ಮರುಬಳಕೆಯ ಸೀರೆಗಳಿಂದ ಕರಕುಶಲ ಬಟ್ಟೆ ಮತ್ತು ಪರಿಕರಗಳನ್ನು ತಯಾರಿಸಲು ಸಹಾಯ ಮಾಡುತ್ತದೆ.[೭]
ಪಾತ್ರವರ್ಗ
[ಬದಲಾಯಿಸಿ]- ಪ್ರಿಯಾ ಪಾತ್ರದಲ್ಲಿ ಸೋನಾಲಿ ಕುಲ್ಕರ್ಣಿ
- ರೂಪ್ ಪಾತ್ರದಲ್ಲಿ ಅಮರ್ದೀಪ್ ಝಾ
- ಮಾಲಾ ಪಾತ್ರದಲ್ಲಿ ಶಮೀಮ್ ಶೇಖ್
- ದೀಪ್ತಿಯಾಗಿ ಅಮೃತಾ ಸುಭಾಷ್
- ಗೌರವ್ ಕಪೂರ್ ಪಾತ್ರದಲ್ಲಿ ಗೌರವ್ ಕಪೂರ್ [೮]
- ಪ್ರಮೋದ್ ಪಾಂಡಾ ಪಾತ್ರದಲ್ಲಿ ವೀರೇಂದ್ರ ಸಕ್ಸೇನಾ
- ಲಾಲ್ ಪಾತ್ರದಲ್ಲಿ ಅಮಿತಾಬ್ ಶ್ರೀವಾಸ್ತವ
ಚಿತ್ರದ ಉತ್ಪಾದನೆ
[ಬದಲಾಯಿಸಿ]ಲಿಂಡಾ ಮಾಂಡ್ರಾಯರ್ ಅವರು ಮೊದಲು ವೃಂದಾವನ ವಿಧವೆಯರ ಬಗ್ಗೆ ಗ್ಲೋರಿಯಾ ವೇಲನ್ ಅವರ ಹೋಮ್ಲೆಸ್ ಬರ್ಡ್ ಎಂಬ ಪುಸ್ತಕದಿಂದ ತಿಳಿದರು. ಈ ಪುಸ್ತಕ ಇವರ ಮಗನ ಓದುವ ಅಸೈನ್ಮೆಂಟ್ ಆಗಿತ್ತು. ಇದರ ಬಗ್ಗೆ ತಿಳಿದ ಇವರು ಮತ್ತು ಅವರ ಪತಿ ಧರನ್ ಮಾಂಡ್ರಾಯರ್ ಈ ವೃಂದಾವನದ ವಿಧವೆಯರ ಬಗ್ಗೆ ಚಲನಚಿತ್ರವೊಂದನ್ನು ಮಾಡಲು ನಿರ್ಧರಿಸಿದರು.[೯]
ವಿಧವೆಯರು ಪ್ರಪಂಚದಲ್ಲಿ ನೋಡುವುದು ಇನ್ನೂ ಸಾಕಷ್ಟಿದೆ ಎಂದು ಧರನ್ ಮಾಂಡ್ರಾಯರ್ ಭಾವಿಸಿದ್ದರಿಂದ ಚಿತ್ರಕ್ಕೆ ವೈಟ್ ರೇನ್ಬೋ ಎಂದು ಹೆಸರಿಸಲಾಯಿತು.[೧೦] ೧೯೯೯ ರಲ್ಲಿ ವೃಂದಾವನದ ವಿಧವೆಯರ ಬಗೆಗಿನ ಚಿತ್ರ "ವಾಟರ್" ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿದ ನಂತರ ಈ ಚಲನಚಿತ್ರದ ನಿರ್ಮಾಣವನ್ನು ಪ್ರಾರಂಭಿಸಿತು.[೫][೬] ವೃಂದಾವನಕ್ಕೆ ಬಲವಂತವಾಗಿ ಹೋಗಬೇಕಾಗಿ ಬಂದ ೧೩ ವರ್ಷದ ವಿಧವೆಯೊಬ್ಬಳ ಬಗ್ಗೆ ಓದಿದ ನಂತರ ಮಂದ್ರಾಯಾರ್ ಈ ಚಿತ್ರವನ್ನು ನಿರ್ಮಿಸಲು ಸ್ಫೂರ್ತಿ ಪಡೆದರು.[೪][೧೧]
ಸ್ವಾಗತ
[ಬದಲಾಯಿಸಿ]ದಿ ಹಿಂದೂ ಪತ್ರಿಕೆಯ ವಿಮರ್ಶಕರೊಬ್ಬರು ಹೀಗೆ ಬರೆದಿದ್ದಾರೆ, "ನಮ್ಮ ದೇಶದ ಒಂದು ಭಾಗದಲ್ಲಿ ವಿಧವೆಯರ ಅವಸ್ಥೆಯ ಬಗ್ಗೆ ಚಲನಚಿತ್ರವನ್ನು ನಿರ್ಮಿಸುವುದಕ್ಕೆ ಬಲವಾದ ಇಚ್ಛಾಶಕ್ತಿಯ ಅಗತ್ಯವಿದೆ. ಸೃಷ್ಟಿಕರ್ತ ಧರನ್ ಮಂದ್ರಾಯರ್ ಮತ್ತು ಪ್ರಭು ಮೂವೀಸ್ ಅದನ್ನು ಸಾಕಷ್ಟು ಹೊಂದಿದ್ದಾರೆ. ಇಲ್ಲದಿದ್ದರೆ ಅವರು ಈ ವಿಷಯವನ್ನು ಕೈಗೆತ್ತಿಕೊಂಡು ಕಳಂಕ, ಅಧೀನತೆ ಮತ್ತು ಪವಿತ್ರವೆಂದು ಕೆಲವು ಜನರು ಹೇಳುವ ಪರಿಸರದಲ್ಲಿ ಗಂಡನಿಲ್ಲದೇ ಬದುಕಬೇಕಾದ ವಿಧವೆಯರ ಅವಮಾನದ ಬದುಕನ್ನು ಚಿತ್ರಿಸುವ ಕೆಲಸವನ್ನು ಮಾಡುತ್ತಿರಲಿಲ್ಲ".[೧೨] ವೆರೈಟಿಯ ಡೆನ್ನಿಸ್ ಹಾರ್ವೆ ಅಭಿಪ್ರಾಯ ವ್ಯಕ್ತಪಡಿಸುತ್ತಾ, "ಆದರೆ ಬರಹಗಾರ-ಸಹಾಯಕ ಧರನ್ ಮಾಂಡ್ರಾಯರ್ ಅವರು ಅತಿಯಾದ ಭಾವಾತಿರೇಕದ ಶಿಖರಗಳ ನಡುವಿನ ಪ್ರಸ್ತುತ ಸನ್ನಿವೇಶವನ್ನು ಚಿತ್ರಿಸುತ್ತಾರೆ. ಕೆಟ್ಟ ನಟನೆಯ ಅಭಿಮಾನಿಗಳು ಇಲ್ಲಿನ ಹಲವು ಸನ್ನಿವೇಶಗಳನ್ನು ಆನಂದಿಸಬಹುದು ! ಚಿತ್ರದಲ್ಲಿನ ತಾಂತ್ರಿಕ ಅಂಶಗಳು ಯೋಗ್ಯವಾಗಿವೆ".[೧೩] ಬಾಲಿವುಡ್ ಹಂಗಾಮಾ ವಿಮರ್ಶಕರೊಬ್ಬರು "ಒಟ್ಟಾರೆಯಾಗಿ, ಶ್ವೆಟ್-ವೈಟ್ ರೇನ್ಬೋ ಕಳಪೆ ಪ್ರದರ್ಶನವಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ, ಇದು ಎಲ್ಲಾ ರೀತಿಯಲ್ಲಿ ಸೋತ ಚಿತ್ರವಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.[೧೪]
ಡೆಕ್ಕನ್ ಕ್ರಾನಿಕಲ್ ವಿಮರ್ಶಕರೊಬ್ಬರು ಈ ಚಿತ್ರಕ್ಕೆ ಐದರಲ್ಲಿ ನಾಲ್ಕು ನಕ್ಷತ್ರಗಳ ರೇಟಿಂಗ್ ನೀಡಿದರು ಮತ್ತು "ಅಂತಹ ವಿವಾದಾತ್ಮಕ ವಿಷಯವನ್ನು ಕೈಗೆತ್ತಿಕೊಂಡು ಅದನ್ನು ಪರದೆಯ ಮೇಲೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಕ್ಕಾಗಿ ಬರಹಗಾರ/ನಿರ್ದೇಶಕ ಧರನ್ ಮಂದ್ರಾಯರ್ ಅವರನ್ನು ಶ್ಲಾಘಿಸಬೇಕು" ಎಂದು ಬರೆದಿದ್ದಾರೆ.[೧೫] ದಿ ಎಕನಾಮಿಕ್ ಟೈಮ್ಸ್ ವಿಮರ್ಶಕರೊಬ್ಬರು "ಈ ಚಿತ್ರವು ನಮ್ಮ ಸಮಾಜದಲ್ಲಿ ವಿಧವೆಯರ ಅವಸ್ಥೆಯನ್ನು ಎತ್ತಿ ತೋರಿಸಲು ಪರಿಣಾಮಕಾರಿಯಾಗಿ ಪ್ರಯತ್ನಿಸುತ್ತದೆ. ದಿವಂಗತ ಶಿವಾಜಿ ಗಣೇಶನ್ ಅವರ ಸೋದರಳಿಯ ನಿರ್ದೇಶಕ ಧರನ್ ಮಂದ್ರಾಯರ್ ಅವರ ಧೈರ್ಯಶಾಲಿ ಮತ್ತು ಪ್ರಾಮಾಣಿಕ ಪ್ರಯತ್ನಗಳಿಗಾಗಿ ಶ್ಲಾಘಿಸಬೇಕು" ಎಂದು ಬರೆದಿದ್ದಾರೆ.[೧೬]
ಪ್ರಶಂಸೆಗಳು
[ಬದಲಾಯಿಸಿ]ಈ ಚಿತ್ರವು ಸೆಡೋನಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.[೧]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Trevenon, Stacy. "India's widows, philosophy mix in Coastside film night". Half Moon Bay Review. Archived from the original on 5 April 2022. Retrieved 29 March 2022.
- ↑ ೨.೦ ೨.೧ "Bonsall filmmakers tackle ostracism in India". San Diego Union-Tribune. 29 May 2005. Archived from the original on 29 March 2022. Retrieved 29 March 2022.
- ↑ Jarman, Francis (1 June 2005). White Skin, Dark Skin, Power, Dream. Wildside Press LLC. ISBN 9780809511884. Archived from the original on 31 May 2022. Retrieved 15 April 2022.
- ↑ ೪.೦ ೪.೧ Fielding, Julien R. (26 September 2008). Discovering World Religions at 24 Frames Per Second. Scarecrow Press. ISBN 9780810862661. Archived from the original on 31 May 2022. Retrieved 15 April 2022. ಉಲ್ಲೇಖ ದೋಷ: Invalid
<ref>
tag; name "book" defined multiple times with different content - ↑ ೫.೦ ೫.೧ "Film highlights widows' plight". BBC. 9 September 2004. Archived from the original on 29 March 2022. Retrieved 29 March 2022. ಉಲ್ಲೇಖ ದೋಷ: Invalid
<ref>
tag; name "B" defined multiple times with different content - ↑ ೬.೦ ೬.೧ "Films on Widow Abuse Survive Their Own Ordeals". Women's eNews. 14 May 2006. Archived from the original on 16 April 2021. Retrieved 29 March 2022. ಉಲ್ಲೇಖ ದೋಷ: Invalid
<ref>
tag; name "W" defined multiple times with different content - ↑ "Dream in drape to empower women through fashion". DT Next. 20 March 2016.
- ↑ Rangajaran, Malathi (20 May 2005). "Moving ahead with zest". The Hindu. Archived from the original on 7 April 2022. Retrieved 7 April 2022.
- ↑ Joseph, Raveena (28 April 2015). "A colourful cause". The Hindu. Archived from the original on 29 March 2022.
- ↑ "'I could see anguish in their eyes'". Rediff. Archived from the original on 5 May 2021. Retrieved 29 March 2022.
- ↑ "Film on widows brings Vrindavan to boil". Sify. 25 March 2004. Archived from the original on 7 May 2004.
- ↑ "Where white is thrust on them". The Hindu. 7 July 2006. Archived from the original on 29 March 2022. Retrieved 29 March 2022.
- ↑ Harvey, Dennis (11 October 2004). "White Rainbow". Variety. Archived from the original on 7 April 2022. Retrieved 7 April 2022.
- ↑ "Shwet – White Rainbow Review 1/5". Bollywood Hungama. Archived from the original on 29 March 2022. Retrieved 29 March 2022.
- ↑ "Powerful portrayals mark this film". Deccan Chronicle. 16 July 2006.
- ↑ "Serious attempt to portray the plight of widows". The Economic Times. 22 July 2006.
ಟಿಪ್ಪಣಿಗಳು
[ಬದಲಾಯಿಸಿ]- ↑ While Half Moon Bay Review gave the runtime as 92 minutes,[೧] The San Diego Union-Tribune gave the runtime as 94 minutes.[೨]