ವೈಜ್ಞಾನಿಕ ವಿಧಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸತ್ಯಶೋಧನೆಯ ಹಂತಗಳು:

ಪ್ರಕೃತಿಯ ವೀಕ್ಷೆಣೆ, ದತ್ತಾಂಶ ಸಂಗ್ರಹ, ವಿಷಯವನ್ನು ಕುರಿತು ಪ್ರಯೋಗ ಮಾಡುವುದು, ವಿಷಯಕ್ಕೆ ತಕ್ಕ ಸೂತ್ರದ ನಿರೂಪಣೆ, ಮತ್ತು ಸಿಧಾಂತದ ಪರೀಕ್ಷೆ; ಇತ್ಯಾದಿ ಹಂತಗಳನ್ನು ಅನುಸರಿಸಿ, ಸತ್ಯವನ್ನು ಹೊರಹಾಕುವುದು, ಮತ್ತು ಇದರಿಂದ ಕಂಡುಕೊಂಡ ಸತ್ಯವನ್ನು ಸಮಾಜ ಹಿತಕ್ಕಾಗಿ ಬಳಸುವುದು.

ಪ್ರಯೋಗಗಳ ವಿಧಾನ

ಗೆಲಿಲಿಯೋ ಮಾಡಿದ ಪ್ರಯೋಗ ಒಂದು ಹೀಗಿದೆ;

ಒಂದು ಭಾರವಾದ ಕಲ್ಲು, ಇನ್ನೊಂದು ಸಣ್ಣ ಮತ್ತು ಹಗುರವಾದ ಕಲ್ಲು, ಎರಡೂ ಕಲ್ಲುಗಳನ್ನು ಒಂದು ಎತ್ತರದ ಸ್ಥಳದಿಂದ ಏಕಕಾಲಕ್ಕೆ ಕೈಯಿಂದ ಬಿಟ್ಟಾಗ "ಯಾವ ಕಲ್ಲು ಭೂಮಿಗೆ ಮೊದಲು ಅಪ್ಪಳಿಸುತ್ತದೆ?" ಎಂದು. ಇದಕ್ಕೆ ತರ್ಕದಿಂದ ಉತ್ತರ ಹುಡುಕುತ್ತಾರೆ. ಆದರೆ ಪ್ರಯೋಗ ಮಾಡಿದಾಗ ಕಂಡ ವಿಷಯವೇ, ಸತ್ಯ ಶೋಧನೆ ಎನಿಸುತ್ತದೆ.

ನೀರಿನ ವಿಭಜನೆ:

ಅದಿಕಾಲದಲ್ಲಿ ಮಾನವರು ನೀರು ಒಂದು ಮೂಲವಸ್ತು ಎಂದು ಭಾವಿಸಿದ್ದರು. ಆದರೆ 1800 ರಲ್ಲಿ ನಡೆದ ನೀರಿನ ವಿದ್ಯುತ್ ವಿಭಜನೆ ಪ್ರಯೋಗದಿಂದ, ನೀರು ಒಡೆದು ಎರಡು ಪ್ರಕಾರದ ಅನಿಲರೂಪದ ಧಾತುಗಳಾಗಿ ರೂಪಾಂತರ ಗೊಂಡಮೇಲೆ, ನೀರು ಒಂದು ಸಂಯುಕ್ತ ವಸ್ತು ಎಂದು ಖಚಿತವಾಯಿತು. ರಾಸಾಯನಿಕ ಸಂಯೋಗ ಕ್ರಿಯೆಯಲ್ಲಿ, ಜಲಜನಕ ಮತ್ತು ಆಮ್ಲಜನಕ ಎನ್ನುವ ಮೂಲಧಾತುಗಳು ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ಕೂಡಿಕೊಂಡು ನೀರು ಉಂಟಾಗುತ್ತದೆ.

ಮ್ಯಾಗ್ನಿಷಿಯಂ ಧಾತುವಿನ ದಹನ:

ಮ್ಯಾಗ್ನಿಷಿಯಂ ಧಾತು ನಿಧಾನವಾಗಿ ಬಿಸಿಮಾಡಿದಾಗ, ಅದು ಗಾಳಿಯಲ್ಲಿ ಉರಿಯಲು ಆರಂಭಿಸುತ್ತದೆ. ಈ ಕ್ರಿಯೆಯಲ್ಲಿ ರೂಪಾಂತರಗೊಂಡ ಬೂದಿಯನ್ನು ತೂಕಮಾಡಿದಾಗ, ಅದು ತನ್ನ ತೂಕದಲ್ಲಿ ಮೊದಲಿಗಿಂತ ಹೆಚ್ಚಳವಾದದ್ದು ಕಂಡುಬರುತ್ತದೆ. ಇದಕ್ಕೆ ಕಾರಣ ಅದು ಉರಿಯುವಾಗ, ಗಾಳಿಯಲ್ಲಿಯ ಆಮ್ಲಜನಕ ಅನಿಲದೊಂದಿಗೆ ಸಂಯೋಗ ಹೊಂದಿರುತ್ತದೆ. ಇಂತಹ ಕ್ರಿಯೆಯನ್ನು ಆಕ್ಸಿಡೇಷನ್ ಎನ್ನುತ್ತಾರೆ.

ಪರಮಾಣು ಬೀಜ ವಿದಳನದಿಂದ ಶಕ್ತಿ ಬಿಡುಗಡೆ

ಯುರೇನಿಯಂ [೨೩೫] ಪರಮಾಣುವನ್ನು ವೇಗವಾಗಿ ಚಲಿಸುವ ನ್ಯುಟ್ರಾನ್ ನಿಂದ ತಾಡಿಸಿದಾಗ, ಯುರೇನಿಯಂ ಪರಮಾಣುವು ಒಡೆದುಹೊಗಿ, ಎರಡು ಭಿನ್ನ ಭಿನ್ನವಾದ ಹೊಸ ಪರಮಾಣುಗಳು ಹುಟ್ಟಿಕೊಳ್ಳುತ್ತವೆ. ಮತ್ತು ಈ ಫಿಶನ್ ವಿದಳನದಲ್ಲಿ ಅಪಾರ ಪ್ರಮಾಣದ ಶಕ್ತಿ ಹೊರಹೊಮ್ಮುತ್ತದೆ. ಇಂತಹ ವಿದಳನ ಕ್ರಿಯೇಯಿಂದ ಪರಮಾಣು ರಿಯಕ್ಟರ್ ಗಳಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪನ್ನ ಮಾಡಬಹುದಾಗಿದೆ.

19 ನೇ ಶತಮಾನದ ಆರಂಭದಲ್ಲಿ ವಿಜ್ಞಾನಿಗಳು ಪರಮಾಣುವಿನ ಪರಿಚಯ ಕೊಟ್ಟರಾದರೂ, ಪ್ರಯೋಗಗಳ ಆಧಾರವಾಗಿ, ಪೂರ್ಣ ಪರಮಾಣು ಅರಿಯಲು ವಿಜ್ನಾನಿಗಳಿಗೆ ಒಂದು ಶತಮಾನಕ್ಕಿಂತ ಅಧಿಕ ಕಾಲ ಹಿಡಿಯಿತು. ೧೮೦೦ರಿಂದ ೧೯೩೪ರ ವರೆಗೆ.