ವೈಖಾನಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಋಷಿ ವಿಖನಸ ಮತ್ತು ಅವನ ನಾಲ್ಕು ಶಿಷ್ಯರು ಅತ್ರಿ, ಭೃಗು, ಮರೀಚಿ ಮತ್ತು ಕಶ್ಯಪ

ವೈಖಾನಸ ಹಿಂದೂ ಧರ್ಮದ ಪ್ರಧಾನ ಸಂಪ್ರದಾಯಗಳಲ್ಲಿ ಒಂದಾಗಿದೆ ಮತ್ತು ಮುಖ್ಯವಾಗಿ ಪರಬ್ರಹ್ಮನಾಗಿ ವಿಷ್ಣು (ಮತ್ತು ಅವನ ಸಂಬಂಧಿತ ಅವತಾರಗಳನ್ನು) ಪೂಜಿಸುತ್ತದೆ. ಮುಖ್ಯವಾಗಿ ಕೃಷ್ಣ ಯಜುರ್ವೇದದ ತೈತ್ತಿರೀಯ ಶಾಖೆ ಮತ್ತು ವೈಖಾನಸ ಕಲ್ಪಸೂತ್ರದ ಬ್ರಾಹ್ಮಣರು ಇದರ ಅನುಯಾಯಿಗಳಾಗಿದ್ದಾರೆ. ವೈಖಾನಸ ಹೆಸರು ಈ ಅನುಯಾಯಿಗಳನ್ನು ಮತ್ತು ಸ್ವತಃ ಮೂಲಭೂತ ತತ್ತ್ವಶಾಸ್ತ್ರವನ್ನು ಸೂಚಿಸುತ್ತದೆ. ಈ ಹೆಸರು ಇದರ ಸಂಸ್ಥಾಪಕನಾದ ಋಷಿ ವಿಖನಸನಿಂದ ವ್ಯುತ್ಪನ್ನವಾಗಿದೆ. ಇದು ತತ್ತ್ವಶಾಸ್ತ್ರೀಯವಾಗಿ ಪ್ರಧಾನವಾಗಿ ಏಕೀಶ್ವರವಾದಿಯಾಗಿದ್ದು, ಪ್ಯಾನೆಂಥೀಯಿಸ್ಟಿಕ್ ಎಂದು ವಿವರಿಸಬಹುದಾದ ಅಂಶಗಳನ್ನು ಕೂಡ ಒಳಗೊಂಡಿದೆ. ವೈಖಾನಸ ತತ್ತ್ವವು ಉತ್ತರ ಮೀಮಾಂಸದ ತತ್ತ್ವದ ಬದಲು ವಿಷ್ಣುವಿನ ಕ್ರಿಯಾವಿಧಿಗಳು ಮತ್ತು ಪೂಜೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ವಿಷ್ಣು ಪೂಜೆಯ ಹೆಚ್ಚು ದೊಡ್ಡ ಮತ್ತು ಹೆಚ್ಚು ಪ್ರಚಲಿತ ರೂಪವಾದ ವೈಷ್ಣವ ಪಂಥದಿಂದ ಭಿನ್ನವಾಗಿದೆ.

ವೈಖಾನಸಕ್ಕೆ ಸಂಬಂಧಿಸಿದ ವೀಡಿಯೋಗಳು / ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ವೈಖಾನಸ&oldid=1058396" ಇಂದ ಪಡೆಯಲ್ಪಟ್ಟಿದೆ