ವಿಷಯಕ್ಕೆ ಹೋಗು

ವೇಗವರ್ಧನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡಿಮೆ-ತಾಪಮಾನದ ಆಕ್ಸಿಡೀಕರಣದ ವೇಗವರ್ಧಕವನ್ನು ಕೋಣೆಯ ತಾಪಮಾನದಲ್ಲಿ ಕಾರ್ಬನ್ ಮಾನಾಕ್ಸೈಡ್ ಅನ್ನು ವಿಷಕರವಲ್ಲದ ಕಾರ್ಬನ್ ಡೈಆಕ್ಸೈಡ್ ನ್ನಾಗಿ ಪರಿವರ್ತಿಸಲಾಗುತ್ತದೆ.ಇದು ಗಾಳಿಯಿಂದ ಫಾರ್ಮಲ್ ಡಿಹೈಡ್ ನ್ನು ಸಹ ತೆಗೆದುಹಾಕಬಹುದು.

ವೇಗವರ್ಧನೆ ಎಂದರೆ ವೇಗವರ್ಧಕವೆಂಬ ಪದಾರ್ಥಗಳ ಭಾಗವಹಿಸುವಿಕೆಯಿಂದ ರಾಸಾಯನಿಕ ಕ್ರಿಯೆಯ ಪ್ರಮಾಣದಲ್ಲಿ ಉಂಟಾಗುವ ಬದಲಾವಣೆ. ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವ ಇತರ ಕಾರಕಗಳಿಗಿಂತ ಭಿನ್ನವಾಗಿ, ಒಂದು ವೇಗವರ್ಧಕವನ್ನು ಸ್ವತಃ ಕ್ರಿಯೆಯು ಬಳಸಿಕೊಳ್ಳುವುದಿಲ್ಲ. ಒಂದು ವೇಗವರ್ಧಕವು ಹಲವಾರು ರಾಸಾಯನಿಕ ಪರಿವರ್ತನೆಗಳಲ್ಲಿ ಭಾಗವಹಿಸಬಹುದು. ರಾಸಾಯನಿಕ ಕ್ರಿಯೆಯನ್ನು ವೇಗಗೊಳಿಸುವ ವೇಗವರ್ಧಕಗಳನ್ನು ಗುಣಾತ್ಮಕ ವೇಗವರ್ಧಕಗಳೆಂದು ಕರೆಯಲಾಗುತ್ತದೆ. ರಾಸಾಯನಿಕ ಕ್ರಿಯೆಯನ್ನು ನಿಧಾನಗೊಳಿಸುವ ವೇಗವರ್ಧಕಗಳನ್ನು ಋಣಾತ್ಮಕ ವೇಗವರ್ಧಕಗಳು, ಅಥವಾ ಪ್ರತಿರೋಧಕಗಳೆಂದು ಕರೆಯಲಾಗುತ್ತದೆ. ವೇಗವರ್ಧಕಗಳ ಚಟುವಟಿಕೆಯನ್ನು ಹೆಚ್ಚಿಸುವ ಪದಾರ್ಥಗಳನ್ನು ಪ್ರವರ್ತಕಗಳೆಂದು ಕರೆಯಲಾಗುತ್ತದೆ, ಜೊತೆಗೆ ವೇಗವರ್ಧಕಗಳನ್ನು ನಿಷ್ಕ್ರಿಯಗೊಳಿಸುವ ಪದಾರ್ಥಗಳನ್ನು ವೇಗವರ್ಧಕ ನಂಜೆಂದು ಕರೆಯಲಾಗುತ್ತದೆ.

ವೇಗವರ್ಧಕ ಕ್ರಿಯೆಗಳು ಇಳಿಕೆ ಪ್ರಮಾಣದ ಮಿತಿ ಹೊಂದಿರುತ್ತವೆ-ಇದು ವೇಗವರ್ಧಕ ಕ್ರಿಯೆಗೆ ಹೊಂದಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸಕ್ರಿಯಕರಣದ ಅಸಂಯುಕ್ತ ಶಕ್ತಿ(ಸಂಯೋಜನಾಶಕ್ತಿರಹಿತ)ಯನ್ನು ಸೀಮಿತಗೊಳಿಸುತ್ತದೆ. ಇದು ಅದೇ ತಾಪಮಾನದಲ್ಲಿ ರಾಸಾಯನಿಕ ಕ್ರಿಯೆಯ ಅಧಿಕ ಪ್ರಮಾಣವನ್ನು ಉಂಟುಮಾಡುತ್ತದೆ. ಆದಾಗ್ಯೂ, ವೇಗವರ್ಧನೆಯ ಯಾಂತ್ರಿಕ ವಿವರಣೆಯು ಸಂಕೀರ್ಣವಾಗಿದೆ. ವೇಗವರ್ಧಕಗಳು ರಾಸಾಯನಿಕ ಕ್ರಿಯೆಗೆ ಅನುಕೂಲಕರ ಪರಿಸರವನ್ನು ಉಂಟುಮಾಡುತ್ತವೆ, ಅಥವಾ ಬಂಧಕಗಳನ್ನು ಧ್ರುವೀಕರಿಸಲು ಕಾರಕಗಳನ್ನು ಬಂಧಿಸುತ್ತವೆ, ಉದಾಹರಣೆಗೆ ಕಾರ್ಬನಿಲ್ ಸಂಯುಕ್ತಗಳ ಕ್ರಿಯೆಗೆ ಆಸಿಡ್ ವೇಗವರ್ಧಕಗಳು, ಅಥವಾ ಸ್ವಾಭಾವಿಕವಾಗಿ ಉತ್ಪತ್ತಿಯಾಗದ ನಿರ್ದಿಷ್ಟ ಮಧ್ಯಂತರಗಳ ರಚನೆ, ಆಸ್ಮಿಯಂ ಟೆಟ್ರಾಕ್ಸೈಡ್ ನಿಂದ ವೇಗರ್ವರ್ಧನೆಗೊಂಡ ಆಲ್ಕೀನ್ ಗಳ ಹೈಡ್ರಾಕ್ಸಿಲೇಶನ್ ಉದಾಹರಣೆಗೆ ಆಸ್ಮೆಟ್ ಎಸ್ಟರುಗಳು, ಅಥವಾ ಇದು ಪ್ರತಿಕ್ರಿಯಾತ್ಮಕ ರಚನೆಗಳಿಗೆ ಕಾರಕಗಳ ವಿಭಜನೆಯನ್ನು ಉಂಟುಮಾಡುತ್ತವೆ, ಉದಾಹರಣೆಗೆ ವೇಗವರ್ಧಕ ಜಲಜನಕೀಕರಣದಲ್ಲಿ ಉಂಟಾಗುವ ಪರಮಾಣು ಸ್ಥಿತಿಯ ಜಲಜನಕ.

ಚಲನೆಗೆ ಸಂಬಂಧಿಸಿದಂತೆ, ವೇಗವರ್ಧಕ ಕ್ರಿಯೆಗಳು ಮಾದರಿಯಾದ ರಾಸಾಯನಿಕ ಕ್ರಿಯೆಗಳಾಗಿವೆ, ಅದೆಂದರೆ ಕ್ರಿಯೆಯ ಪ್ರಮಾಣವು, ಅದು ನಿರ್ಧಾರವಾಗುವ ಹಂತದಲ್ಲಿ ಪ್ರತಿಕ್ರಿಯಾಕಾರಿಗಳ ಸಂಪರ್ಕದ ಆವರ್ತನದ ಮೇಲೆ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ನಿಧಾನಗತಿಯ ಈ ಹಂತದಲ್ಲಿ ವೇಗವರ್ಧಕಗಳು ಭಾಗವಹಿಸುತ್ತವೆ, ಜೊತೆಗೆ ಪ್ರಮಾಣವು ವೇಗವರ್ಧಕಗಳ ಮೊತ್ತ ಹಾಗು ಅದರ "ಕ್ರಿಯಾಶೀಲತೆ"ಯಿಂದ ಸೀಮಿತಗೊಂಡಿರುತ್ತದೆ. ಭಿನ್ನಜಾತಿಯ ವೇಗವರ್ಧನೆಯಲ್ಲಿ, ಮೇಲ್ಮೈಗೆ ಕಾರಕಗಳ ಪ್ರಸರಣ ಹಾಗು ಮೇಲ್ಮೈಯಿಂದ ಉತ್ಪತ್ತಿಯ ಪ್ರಸರಣದ ಪ್ರಮಾಣವನ್ನು ನಿರ್ಧರಿಸಬಹುದಾಗಿದೆ. ಸಮಜಾತಿಯ ಕ್ರಿಯೆಗಳು ಮೇಲ್ಮೈಯ ಬಂಧಕದ ಜೊತೆಗೆ ಸಹಯೋಗ ಹೊಂದಿವೆ. ಜೊತೆಗೆ ಉತ್ಪನ್ನದ ವಿಭಜನೆಯು ಸದೃಶ ವೇಗವರ್ಧಕಕ್ಕೆ ಅನ್ವಯಿಸುತ್ತದೆ.

ಆದಾಗ್ಯೂ ವೇಗವರ್ಧಕಗಳು ಸ್ವತಃಕ್ಕಾಗಿ ಪ್ರತಿಕ್ರಿಯೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವುದಿಲ್ಲ, ಅವುಗಳನ್ನು ನಿರ್ಭಂದಿಸಬಹುದು, ನಿಷ್ಕ್ರಿಯಗೊಳಿಸಬಹುದು ಅಥವಾ ದ್ವಿತೀಯಕ ಪ್ರಕ್ರಿಯೆಗಳಿಂದ ನಿರರ್ಥಕವೂ ಆಗಬಹುದು. ಭಿನ್ನಜಾತಿಯ ವೇಗವರ್ಧನೆಯಲ್ಲಿ, ಒಂದು ಮಾದರಿ ದ್ವಿತೀಯಕ ಪ್ರಕ್ರಿಯೆಯು ಕೊಕಿಂಗ್ (ಗಾಳಿಯ ಸಂಪರ್ಕವಿಲ್ಲದ ಕಾಯಿಸಿ ಆವಿಯಾಗುವ ಅಂಶಗಳನ್ನು ತೆಗೆದ ಮೇಲೆ ಉಳಿಯುವ ಕಾರ್ಬನ್ ರೂಪ) ಅನ್ನು ಒಳಗೊಂಡಿರುತ್ತದೆ. ಇದರಲ್ಲಿ ವೇಗವರ್ಧಕಗಳು ಪಾಲಿಮರ್ ನ ಉತ್ಪನ್ನಗಳಿಂದ ಆವರಿಸಲ್ಪಟ್ಟಿರುತ್ತದೆ. ಇದಲ್ಲದೆ, ಭಿನ್ನಜಾತಿಯ ವೇಗವರ್ಧಕಗಳು, ಒಂದು ಘನ-ದ್ರವದ ವ್ಯವಸ್ಥೆಯಲ್ಲಿ ದ್ರಾವಣದೊಂದಿಗೆ ಕರಗುತ್ತದೆ ಅಥವಾ ಘನ-ಅನಿಲ ವ್ಯವಸ್ಥೆಯಲ್ಲಿ ಆವಿಯಾಗುತ್ತದೆ.

ಹಿನ್ನೆಲೆ

[ಬದಲಾಯಿಸಿ]

ಕೈಗಾರಿಕೆಗಳಿಗೆ ತಯಾರಾಗುವ ಪ್ರಮುಖ ರಾಸಾಯನಿಕಗಳು ವೇಗವರ್ಧನೆಯನ್ನು ಒಳಗೊಂಡಿರುತ್ತವೆ. ಇದೇ ರೀತಿಯಲ್ಲಿ, ಹಲವು ಮಹತ್ವದ ಜೀವ ರಾಸಾಯನಿಕ ಪ್ರಕ್ರಿಯೆಗಳು ವೇಗವರ್ಧನೆಯನ್ನು ಒಳಗೊಂಡಿರುತ್ತವೆ. ವೇಗವರ್ಧನೆ ಬಗೆಗಿನ ಸಂಶೋಧನೆಯು ಆನ್ವಯಿಕ ವಿಜ್ಞಾನದ ಒಂದು ಪ್ರಮುಖ ಕ್ಷೇತ್ರವಾಗಿದೆ. ಜೊತೆಗೆ ರಸಾಯನಶಾಸ್ತ್ರದ ಹಲವು ವಿಭಾಗಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ಗಮಾನರ್ಹವಾದವೆಂದರೆ ಕಾರ್ಬನಿಕ-ಲೌಹಿಕ ರಸಾಯನಶಾಸ್ತ್ರ ಹಾಗು ಭೌತಿಕ ವಿಜ್ಞಾನದ ಅಧ್ಯಯನ ವಿಭಾಗಗಳು ಪ್ರಮುಖವೆನಿಸಿವೆ. ವೇಗವರ್ಧನೆಯು ಪರಿಸರ ವಿಜ್ಞಾನದ ಹಲವು ಅಂಶಗಳಿಗೆ ಸಂಗತವಾಗಿದೆ, ಉದಾಹರಣೆಗೆ ಮೋಟಾರು ಗಾಡಿಗಳಲ್ಲಿ ಇರುವ ವೇಗವರ್ಧನಾ ಪರಿವರ್ತಕ ಹಾಗು ಒಜೋನ್ ರಂಧ್ರದ ಚಲನಶಾಸ್ತ್ರ. ವೇಗವರ್ಧಕ ಕ್ರಿಯೆಗಳನ್ನು ಪರಿಸರ ಸ್ನೇಹಿ ಹಸಿರು ರಸಾಯನಶಾಸ್ತ್ರವು ಆಯ್ಕೆ ಮಾಡಿಕೊಳ್ಳುತ್ತದೆ, ಏಕೆಂದರೆ ಇದು ರಸಗಣೀತೀಯ ಕ್ರಿಯೆಗಳಿಗೆ ವಿರುದ್ಧವಾಗಿ ಉತ್ಪಾದನೆಯಾದ ತ್ಯಾಜ್ಯದ ಪ್ರಮಾಣದಲ್ಲಿ ಇಳಿಕೆ ಪಡೆಯುತ್ತದೆ,[]. ಈ ರಸಗಣೀತೀಯ ಕ್ರಿಯೆಯಲ್ಲಿ ಎಲ್ಲ ಕಾರಕಗಳನ್ನು ಬಳಸಿಕೊಳ್ಳುವುದರ ಜೊತೆಗೆ ಅಧಿಕ ಉತ್ಪನ್ನಗಳು ಸೃಷ್ಟಿಯಾಗುತ್ತವೆ. ಅತ್ಯಂತ ಸಾಧಾರಣವಾದ ವೇಗವರ್ಧಕವೆಂದರೆ ಪ್ರೋಟಾನ್ (H+). ಹಲವು ಪರಿವರ್ತನಾ ಲೋಹಗಳು ಹಾಗು ಪರಿವರ್ತನಾ ಲೋಹದ ಸಂಕೀರ್ಣಗಳನ್ನೂ ಸಹ ವೇಗವರ್ಧನೆಯಲ್ಲಿ ಬಳಸಲಾಗುತ್ತದೆ. ಕಿಣ್ವಗಳೆಂದು ಕರೆಯಲ್ಪಡುವ ವೇಗವರ್ಧಕಗಳು ಜೀವಶಾಸ್ತ್ರದಲ್ಲಿ ಪ್ರಮುಖವಾಗಿರುತ್ತವೆ.

ಒಂದು ವೇಗವರ್ಧಕವು, ಕ್ರಿಯೆಗೆ ಒಳಪಟ್ಟ ಉತ್ಪತ್ತಿಗೆ ಒಂದು ಪರ್ಯಾಯ ಕ್ರಿಯಾ ಮಾರ್ಗವನ್ನು ಒದಗಿಸುವುದರ ಮೂಲಕ ಕಾರ್ಯವನ್ನು ನಿರ್ವಹಿಸುತ್ತದೆ. ಕ್ರಿಯೆಯ ಪ್ರಮಾಣವು ಅಧಿಕಗೊಳ್ಳುತ್ತದೆ; ಏಕೆಂದರೆ ವೇಗವರ್ಧಕಕ್ಕೆ ಮಧ್ಯವರ್ತಿಯಾಗಿ ಒಂದು ಕ್ರಿಯಾ ಮಾರ್ಗಕ್ಕಿಂತ ಹೆಚ್ಚಾಗಿ ಈ ಪರ್ಯಾಯ ಮಾರ್ಗವು ಒಂದು ಕಡಿಮೆ ಸಕ್ರಿಯಕರಣ ಬಲವನ್ನು ಹೊಂದಿರುತ್ತದೆ. ನೀರು ಹಾಗು ಆಮ್ಲಜನಕವನ್ನು ಒದಗಿಸುವ ಹೈಡ್ರೋಜನ್ ಪೆರಾಕ್ಸೈಡ್ ನ ವಿಷಮ ಪ್ರಮಾಣ ದ ಕ್ರಿಯೆಯು ವೇಗವರ್ಧಕಗಳಿಂದ ಪ್ರಬಲ ಪರಿಣಾಮ ಹೊಂದಿರುತ್ತವೆ:

2 H2O2 → 2 H2O + O2

ಈ ಕ್ರಿಯೆಯು ಒಂದು ಅರ್ಥದಲ್ಲಿ ವಿಶೇಷ ಅನುಕೂಲ ಹೊಂದಿದೆ, ಹೇಗೆಂದರೆ ಆರಂಭಿಕ ವಸ್ತುವಿಗಿಂತ ಕ್ರಿಯೆಯ ಉತ್ಪನ್ನಗಳು ಹೆಚ್ಚು ಸ್ಥಿರವಾಗಿವೆ, ಆದಾಗ್ಯೂ ವೇಗವರ್ಧನೆಗೆ ಒಳಪಡದ ಕ್ರಿಯೆಯು ಬಹಳ ನಿಧಾನವಾಗಿದೆ. ವಾಸ್ತವವಾಗಿ ಹೈಡ್ರೋಜನ್ ಪೆರಾಕ್ಸೈಡ್ ನ ವಿಭಜನೆಯು ಬಹಳ ನಿಧಾನವಾಗಿದೆ ಏಕೆಂದರೆ ಹೈಡ್ರೋಜನ್ ಪೆರಾಕ್ಸೈಡ್ ನ ದ್ರಾವಣವು ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದು ಸಣ್ಣ ಪ್ರಮಾಣದ ಮ್ಯಾಂಗನೀಸ್ ಡೈಆಕ್ಸೈಡ್ ನ ಸೇರಿಕೆಯಿಂದಾಗಿ, ಮೇಲಿನ ಸಮೀಕರಣದ ಪ್ರಕಾರ ಹೈಡ್ರೋಜನ್ ಪೆರಾಕ್ಸೈಡ್ ಶೀಘ್ರವಾಗಿ ಪ್ರತಿಕ್ರಿಯಿಸುತ್ತದೆ. ಈ ಪರಿಣಾಮವನ್ನು ನಾವು ಆಮ್ಲಜನಕದ ಉಕ್ಕುವಿಕೆಯಿಂದ ತಕ್ಷಣವೇ ಕಾಣಬಹುದಾಗಿದೆ.[] ಮ್ಯಾಂಗನೀಸ್ ಡೈಆಕ್ಸೈಡ್ ನ್ನು ಬದಲಾವಣೆ ಮಾಡದೆ ಹಾಗೆ ಮತ್ತೆ ಪಡೆದುಕೊಳ್ಳಬಹುದಾಗಿದೆ, ಜೊತೆಗೆ ಅಪರಿಮಿತ ಪ್ರಮಾಣದಲ್ಲಿ ಮರು ಬಳಕೆ ಮಾಡಬಹುದಾಗಿದೆ. ಈ ರೀತಿಯಾಗಿ ಕ್ರಿಯೆಯಲ್ಲಿ ಇದು ಬಳಸಲ್ಪಟ್ಟಿರುವುದಿಲ್ಲ. ಅಂತೆಯೇ, ಮ್ಯಾಂಗನೀಸ್ ಡೈಆಕ್ಸೈಡ್ ಈ ಕ್ರಿಯೆಗೆ ವೇಗವರ್ಧನೆ ಯನ್ನು ಉಂಟು ಮಾಡುತ್ತದೆ.[]

ವೇಗವರ್ಧನೆಯ ಸಾಮಾನ್ಯಸೂತ್ರಗಳು

[ಬದಲಾಯಿಸಿ]

ಮಾದರಿ ವಿಧಾನ

[ಬದಲಾಯಿಸಿ]

ವೇಗವರ್ಧಕಗಳು, ಮಧ್ಯಂತರ ಸಂಯುಕ್ತಗಳನ್ನು ರಚಿಸಲು ಸಾಮಾನ್ಯವಾಗಿ ಒಂದು ಅಥವಾ ಅದಕ್ಕೂ ಹೆಚ್ಚಿನ ಕಾರಕಗಳೊಂದಿಗೆ ಪ್ರತಿಕ್ರಿಯಿಸುತ್ತವೆ. ಇವುಗಳು ನಂತರದಲ್ಲಿ, ವೇಗವರ್ಧಕಗಳನ್ನು ಪುನರುತ್ಪಾದಿಸುವ ಪ್ರಕ್ರಿಯೆಯಲ್ಲಿ, ಕ್ರಿಯೆಯ ಅಂತಿಮ ಉತ್ಪನ್ನವನ್ನು ನೀಡುತ್ತದೆ. ಈ ಕೆಳಕಂಡಂತೆ ಇರುವುದು ಒಂದು ಮಾದರಿ ಕ್ರಿಯೆಯ ಸ್ಥೂಲಚಿತ್ರವಾಗಿದೆ, C ವೇಗವರ್ಧಕವನ್ನು ಪ್ರತಿನಿಧಿಸಿದರೆ, X ಹಾಗು Y ಕಾರಕಗಳಾಗಿವೆ, ಹಾಗು Z, X ಹಾಗು Y ಕ್ರಿಯೆಯಿಂದ ಉಂಟಾದ ಉತ್ಪನ್ನವಾಗಿದೆ:

X + C → XC (1)
Y + XC → XYC (2)
XYC C Z (3)
C Z → C + Z (4)

ಆದಾಗ್ಯೂ ವೇಗವರ್ಧಕಗಳನ್ನು ಕ್ರಿಯೆ 1 ಬಳಸಿಕೊಂಡರೆ, ಇದನ್ನು ನಂತರ ಕ್ರಿಯೆ 4 ಉತ್ಪಾದಿಸುತ್ತದೆ, ಹೀಗಾಗಿ ಒಟ್ಟಾರೆ ಕ್ರಿಯೆಗೆ:

X + Y → Z

ಒಂದು ಕ್ರಿಯೆಯಲ್ಲಿ ವೇಗವರ್ಧಕವು ಪುನರುತ್ಪಾದನೆಗೊಳ್ಳುವ ಕಾರಣದಿಂದಾಗಿ, ಕ್ರಿಯೆಯ ಪ್ರಮಾಣವನ್ನು ಅಧಿಕಗೊಳಿಸಲು ಸಾಮಾನ್ಯವಾಗಿ ಕೇವಲ ಸಣ್ಣ ಪ್ರಮಾಣಗಳ ಅವಶ್ಯಕತೆಯಿರುತ್ತದೆ. ಆದಾಗ್ಯೂ, ರೂಢಿಯಲ್ಲಿ, ವೇಗವರ್ಧಕಗಳನ್ನು ಕೆಲವೊಂದುಬಾರಿ ದ್ವಿತೀಯಕ ಪ್ರಕ್ರಿಯೆಗಳಲ್ಲೂ ಬಳಸಲಾಗುತ್ತದೆ.''

ಈ ಪ್ರಕ್ರಿಯೆಯ ಒಂದು ಉದಾಹರಣೆಯಾಗಿ, ಕಳೆದ 2008ರಲ್ಲಿ ಡ್ಯಾನಿಶ್ ಸಂಶೋಧಕರು ಟೈಟೇನಿಯಂ ಡೈಆಕ್ಸೈಡ್ ನ ಮೇಲ್ಮೈಯಲ್ಲಿ ಆಮ್ಲಜನಕ ಹಾಗು ಜಲಜನಕವು ಒಂದುಗೂಡಿ ನೀರನ್ನು ಉತ್ಪಾದಿಸುವ ಸೂತ್ರದ ಕ್ರಮದ ಪ್ರಕಾರದಲ್ಲಿ ಉಂಟಾಗುವ ಕ್ರಿಯೆಯ ಬಗ್ಗೆ ಮೊದಲು ತಿಳಿಸಿದರು, (TiO2, ಅಥವಾ ಟೈಟಾನಿಯ )ಎನ್ನಲಾಯಿತು. ಟೈಮ್ -ಲ್ಯಾಪ್ಸ್ ಸರಣಿಯ ಸ್ಕ್ಯಾನಿಂಗ್ ಟನಲಿಂಗ್ ಮೈಕ್ರೋಸ್ಕೋಪಿಮಾದರಿಯು, ರಾಸಾಯನಿಕ ಕ್ರಿಯೆಗೆ ಮುಂಚೆ, ಅಣುಗಳ ಹೊರಹೀರುವಿಕೆ, ವಿಭಜನೆಗೊಳ್ಳುವುದು ಹಾಗು ಪ್ರಸರಣಗೊಳ್ಳುವುದನ್ನು ನಿರ್ಧರಿಸುತ್ತದೆ. ಮಧ್ಯಂತರ ಕ್ರಿಯೆಯ ಸ್ಥಿತಿಗಳೆಂದರೆ: HO2, H2O2, ನಂತರ H3O2 ಹಾಗು ಕ್ರಿಯೆಯ ಅಂತಿಮ ಉತ್ಪನ್ನ (ನೀರಿನ ಅಣುವಿನ ಡೈಮರ್ ಗಳು (ದ್ವಯಾಣುಗಳು), ನಂತರ ವೇಗವರ್ಧಕದ ಮೇಲ್ಮೈಯಿಂದ ನೀರಿನ ಅಣುವು ಹೀರಿದ ವಸ್ತುವನ್ನು ಹೊರಹಾಕುತ್ತದೆ ಅಥವಾ ವಿಚೂಷಿಸುತ್ತವೆ.[]

ವೇಗವರ್ಧನೆ ಹಾಗು ಪ್ರತಿಕ್ರಿಯೆಯ ಪ್ರಬಲತೆ

[ಬದಲಾಯಿಸಿ]
ಸಾರ್ವತ್ರಿಕ ಸಂಭಾವ್ಯತಾ ಶಕ್ತಿಯ ನಕ್ಷೆಯು, ಒಂದು ಕಾಲ್ಪನಿಕ ಬಹಿರುಷ್ಣಕ ರಾಸಾಯನಿಕ ಕ್ರಿಯೆಯ ಪರಿಣಾಮವನ್ನು ತೋರುತ್ತಿರುವುದು X + Y ಒಂದುಗೂಡಿ Z ನ್ನು ಉತ್ಪತ್ತಿ ಮಾಡುತ್ತದೆ. ವೇಗವರ್ಧಕದ ಅಸ್ತಿತ್ವವು ಒಂದು ವಿಭಿನ್ನ ಕ್ರಿಯಾ ಮಾರ್ಗವನ್ನು ಕಡಿಮೆ ಸಕ್ರೀಕರಣ ಶಕ್ತಿಯೊಂದಿಗೆ ತೆರವುಗೊಳಿಸುತ್ತದೆ (ಕೆಂಪು ಬಣ್ಣದಲ್ಲಿ ತೋರಲಾದಂತೆ).ಅಂತಿಮ ಪರಿಣಾಮ ಹಾಗು ಒಟ್ಟಾರೆ ಉಷ್ಣಬಲ ವಿಜ್ಞಾನವು ಸಮನಾಗಿರುತ್ತದೆ.

ವೇಗವರ್ಧಕಗಳು, ವಿವಿಧ ಪರಿವರ್ತನಾ ಸ್ಥಿತಿ ಹಾಗು ಕಡಿಮೆ ಪ್ರಮಾಣದ ಸಕ್ರೀಕರಣ ಶಕ್ತಿಯನ್ನು ಒಳಗೊಂಡ ಒಂದು (ಪರ್ಯಾಯ) ಪ್ರಕ್ರಿಯೆಯ ವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಇದರ ಪರಿಣಾಮವಾಗಿ, ಹೆಚ್ಚಿನ ಆಣ್ವಿಕ ಸಂಘರ್ಷಣಗಳು ಪರಿವರ್ತನಾ ಸ್ಥಿತಿಯನ್ನು ತಲುಪುವಷ್ಟು ಶಕ್ತಿಯನ್ನು ಹೊಂದಿರುತ್ತವೆ. ಈ ರೀತಿಯಾಗಿ, ವೇಗವರ್ಧಕಗಳು ಕ್ರಿಯೆಯನ್ನು ಸಾಧ್ಯಗೊಳಿಸುತ್ತವೆ. ಇಲ್ಲದಿದ್ದರೆ ಈ ಕ್ರಿಯೆಯು ಅಡಚಣೆಗೊಳಗಾಗುತ್ತದೆ ಅಥವಾ ಒಂದು ಚಲನಾತ್ಮಕ ಪ್ರತಿಬಂಧಕದಿಂದಾಗಿ ನಿಧಾನಗೊಳ್ಳುತ್ತದೆ. ವೇಗವರ್ಧಕವು ಕ್ರಿಯೆಯ ಪ್ರಮಾಣವನ್ನು ಅಧಿಕಗೊಳಿಸುತ್ತದೆ ಅಥವಾ ವಿಶಿಷ್ಟ ತರಂಗ ಗ್ರಾಹಿಕ ಸಾಮರ್ಥ್ಯ ಹೊಂದಿರುತ್ತದೆ, ಅಥವಾ ಕನಿಷ್ಠ ತಾಪಮಾನದಲ್ಲೂ ಕ್ರಿಯೆಯನ್ನು ಸಾಧ್ಯವಾಗಿಸುತ್ತದೆ. ಈ ಪರಿಣಾಮವನ್ನು ಬೋಲ್ಟ್ಜ್ ವಿಭಜನೆ ಹಾಗು ಎನರ್ಜಿ ಪ್ರೊಫೈಲ್ ನಕ್ಷೆಯಿಂದ ವಿವರಿಸಬಹುದಾಗಿದೆ.

ವೇಗವರ್ಧನದ ಧಾತುರೂಪದ ಕ್ರಿಯೆಯಲ್ಲಿ, ವೇಗವರ್ಧಕಗಳು ಒಂದು ಕ್ರಿಯೆಯ ವ್ಯಾಪ್ತಿಯನ್ನು ಬದಲಾವಣೆ ಮಾಡುವುದಿಲ್ಲ : ಅದು ಒಂದು ಕ್ರಿಯೆಯ ರಾಸಾಯನಿಕ ಸಮತೋಲನದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಏಕೆಂದರೆ ಮುಂದಿನ ಹಾಗು ವ್ಯತಿರಿಕ್ತ ಕ್ರಿಯೆಗಳ ಪ್ರಮಾಣಗಳೆರಡರ ಮೇಲೆ ಪರಿಣಾಮ ಉಂಟಾಗುತ್ತದೆ. (ಥರ್ಮೋಡೈನಾಮಿಕ್ಸ್ ವಿಭಾಗವನ್ನೂ ಸಹ ನೋಡಿ). ವೇಗವರ್ಧಕವು ಸಮತೋಲನದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವಾಸ್ತವವು ಉಷ್ಣಬಲ ವಿಜ್ಞಾನದ ಎರಡನೇ ನಿಯಮದ ಪರಿಣಾಮವಾಗಿದೆ. ಸಮತೋಲನವನ್ನು ವರ್ಗಾಯಿಸುವ ಒಂದು ವೇಗವರ್ಧಕವಿದ್ದ ಪಕ್ಷದಲ್ಲಿ. ವ್ಯವಸ್ಥೆಗೆ ವೇಗವರ್ಧಕಗಳನ್ನು ಪರಿಚಯಿಸಿದರೆ ಇದು ಶಕ್ತಿಯನ್ನು ಉತ್ಪಾದಿಸುವ ಒಂದು ಹೊಸ ಸಮತೋಲನವಾಗಿ ಪರಿಣಾಮವನ್ನು ಉಂಟುಮಾಡುತ್ತದೆ. ಶಕ್ತಿಯ ಉತ್ಪಾದನೆಯು ಒಂದು ಅವಶ್ಯಕ ಪರಿಣಾಮವಾಗಿದೆ; ಏಕೆಂದರೆ ಕ್ರಿಯೆಗಳು ಗಿಬ್ಬ್ಸ್ ಫ್ರೀ ಎನರ್ಜಿ ಉತ್ಪಾದನೆಯಾದಾಗ ಮಾತ್ರ ಸಹಜವಾಗಿರುತ್ತವೆ, ಜೊತೆಗೆ ಶಕ್ತಿಯ ಪ್ರತಿಬಂಧಕವಿದ್ದರೆ, ವೇಗವರ್ಧಕದ ಯಾವುದೇ ಅಗತ್ಯವಿರುವುದಿಲ್ಲ. ನಂತರ, ವೇಗವರ್ಧಕವನ್ನು ತೆಗೆದು ಹಾಕುವುದೂ ಸಹ ಕ್ರಿಯೆಯ ಪರಿಣಾಮವಾಗಿರುತ್ತದೆ, ಶಕ್ತಿಯ ಉತ್ಪಾದನೆ; ಅದೆಂದರೆ ಸೇರಿಸುವುದು ಹಾಗು ಅದರ ವಿರುದ್ಧ ಪ್ರಕ್ರಿಯೆಯಾದ ತೆಗೆದು ಹಾಕುವುದೂ ಎರಡೂ ಶಕ್ತಿಯನ್ನು ಉತ್ಪಾದಿಸುತ್ತವೆ. ಈ ರೀತಿಯಾಗಿ, ಸಮತೋಲನವನ್ನು ಬದಲಾಯಿಸಬಲ್ಲ ಒಂದು ವೇಗವರ್ಧಕವು ಸತತ ಚಲನಾ ಯಂತ್ರವಾಗಿದೆ, ಇದು ಉಷ್ಣಬಲ ವಿಜ್ಞಾನದ ನಿಯಮಗಳಿಗೆ ವಿರೋಧವಾಗಿದೆ.[]

ವೇಗವರ್ಧಕವು ಸಮತೋಲನವನ್ನು ಬದಲಾವಣೆ ಮಾಡದಿದ್ದಲ್ಲಿ , ನಂತರ ಇದು ಕ್ರಿಯೆಯ ಕಾರ್ಯವಿಧಾನವನ್ನು ಬಳಸಿಕೊಳ್ಳಬೇಕು, ಜೊತೆಗೆ ಈ ರೀತಿಯಾಗಿ ಇದೂ ಸಹ ಒಂದು ಪ್ರತಿವರ್ತನೆಯಾಗಿರುತ್ತದೆ. ಎಸ್ಟರ್ ಗಳ ವೇಗವರ್ಧನೆ-ಆಧಾರಿತ ಜಲವಿಚ್ಚೇದನದ ವಿಭಜನೆಯಲ್ಲಿ, ಉತ್ಪಾದನೆಯಾದ ಕಾರ್ಬಾಕ್ಸಿಲಿಕ್ ಆಮ್ಲವು ತಕ್ಷಣವೇ ವೇಗವರ್ಧಕದ ಪ್ರತ್ಯಾಮ್ಲದೊಂದಿಗೆ ಪ್ರತಿಕ್ರಿಯಿಸುತ್ತದೆ. ಜೊತೆಗೆ ಈ ರೀತಿಯಾಗಿ ಸಮತೋಲನದ ಕ್ರಿಯೆಯು ಜಲವಿಚ್ಛೇದನದೆಡೆಗೆ ವರ್ಗಾವಣೆಯಾಗುತ್ತದೆ

ವೇಗವರ್ಧಕದ ವೇಗವರ್ಧನೆ ಕ್ರಿಯೆ ಯನ್ನು ಮಾಪನ ಮಾಡುವ SI ಏಕಮಾನವನ್ನು ಕ್ಯಾಟಲ್ ಎಂದು ಕರೆಯಲಾಗುತ್ತದೆ, ಇದು ಪ್ರತಿ ಸೆಕೆಂಡ್ ಗೆ ಒಂದು ಮೋಲ್ ಆಗಿರುತ್ತದೆ. ಒಂದು ವೇಗವರ್ಧಕದ ಕ್ರಿಯೆಯನ್ನು ಟರ್ನ್ ಓವರ್ ನಂಬರ್ (ಅಥವಾ TON) ಹಾಗು ವೇಗವರ್ಧಕ ಸಾಮರ್ಥ್ಯವು ಟರ್ನ್ ಓವರ್ ಫ್ರೀಕ್ವೆನ್ಸಿ (TOF)ನಿಂದ ಉಂಟಾಗುತ್ತದೆ. ಜೀವರಾಸಾಯನಿಕ ಸಮಾನವೆಂದರೆ ಕಿಣ್ವ ಏಕಮಾನ. ಕಿಣ್ವಕ ವೇಗವರ್ಧನೆ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಕಿಣ್ವಗಳ ಮೇಲಿನ ಲೇಖನವನ್ನು ನೋಡಿ.

ವೇಗವರ್ಧಕವು, ಮೂಲದ್ರವ್ಯಗಳನ್ನು ಸ್ಥಿರಗೊಳಿಸುವುದಕ್ಕಿಂತ ಹೆಚ್ಚಾಗಿ ಪರಿವರ್ತನಾ ಸ್ಥಿತಿಯನ್ನು ಸ್ಥಿರಗೊಳಿಸುತ್ತದೆ. ಇದು ಮೂಲದ್ರವ್ಯ ಹಾಗು ಪರಿವರ್ತನಾ ಸ್ಥಿತಿಯ ನಡುವೆ ಶಕ್ತಿಯಲ್ಲಿನ ವ್ಯತ್ಯಾಸ ವನ್ನು ತಗ್ಗಿಸುವುದರ ಮೂಲಕ ಚಲನೆಯ ಪ್ರತಿಬಂಧಕವನ್ನು ಕಡಿಮೆ ಮಾಡುತ್ತದೆ.

ಮಾದರಿ ವೇಗವರ್ಧಕದ ಮೂಲದ್ರವ್ಯಗಳು

[ಬದಲಾಯಿಸಿ]

ವೇಗವರ್ಧಕದ ರಾಸಾಯನಿಕ ಸ್ವಭಾವವು ಸ್ವತಃ ವೇಗವರ್ಧನೆಯ ತರಹ ಭಿನ್ನವಾಗಿದೆ, ಆದಾಗ್ಯೂ ಕೆಲವು ಸಾಮಾನ್ಯ ನಿಯಮಗಳನ್ನು ರೂಪಿಸಬಹುದು. ಬಹುಶಃ ಪ್ರೋಟಾನ್ ಆಮ್ಲಗಳನ್ನು ವೇಗವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ವಿಶೇಷವಾಗಿ ನೀರನ್ನು ಒಳಗೊಂಡ ಹಲವು ಕ್ರಿಯೆಗಳು, ಇದರಲ್ಲಿ ಜಲವಿಚ್ಚೇದನ ಹಾಗು ಅದರ ವಿರುದ್ಧ ಕ್ರಿಯೆಯೂ ಸೇರಿವೆ. ಬಹುಕ್ರಿಯಾತ್ಮಕ ಘನವಸ್ತುಗಳು ಸಾಮಾನ್ಯವಾಗಿ ವೇಗವರ್ಧಕವಾಗಿ ಸಕ್ರಿಯವಾಗಿರುತ್ತವೆ, ಉದಾಹರಣೆಗೆ ಸಿಯೋಲೈಟ್ ಗಳು, ಅಲ್ಯೂಮಿನಿಯಂ ಆಕ್ಸೈಡ್ ಹಾಗು ಗ್ರ್ಯಾಫೈಟಿನಂತಹ ಕಾರ್ಬನ್ ನ ನಿರ್ದಿಷ್ಟ ರೂಪಗಳು. ಪರಿವರ್ತನಾ ಲೋಹಗಳನ್ನು ಸಾಮಾನ್ಯವಾಗಿ ಆಕ್ಸಿಡೀಕರಣದ ಕ್ರಿಯೆಗಳನ್ನು ವೇಗವರ್ಧಿಸಲು ಬಳಸಲಾಗುತ್ತದೆ. (ಆಕ್ಸಿಡೀಕರಣ, ಜಲಜನಕೀಕರಣ) ಹಲವು ವೇಗವರ್ಧಕ ಪ್ರಕ್ರಿಯೆಗಳಲ್ಲಿ, ವಿಶೇಷವಾಗಿ ಜಲಜನಕದ ವೇಗವರ್ಧಕ ಕ್ರಿಯೆಗೆ ಪ್ಲ್ಯಾಟಿನಮ್ ಲೋಹಗಳ ಅಗತ್ಯವಿರುತ್ತದೆ.

ವೇಗವರ್ಧಕಗಳೆಂದು ಕರೆಯಲ್ಪಡುವ ಕೆಲವು ವೇಗವರ್ಧಕಗಳು ವಾಸ್ತವವಾಗಿ(ಪೂರ್ವ ವೇಗವರ್ಧಕಗಳು )ಪ್ರೀಕ್ಯಾಟಲಿಸ್ಟ್ ಗಳಾಗಿರುತ್ತವೆ. ಪ್ರೀಕ್ಯಾಟಲಿಸ್ಟ್ ಗಳು ರಾಸಾಯನಿಕ ಕ್ರಿಯೆಯಲ್ಲಿ ವೇಗವರ್ಧಕಗಳನ್ನು ಪರಿವರ್ತಿಸುತ್ತವೆ. ಉದಾಹರಣೆಗೆ, ವಿಲ್ಕಿನ್ಸನ್ ನ ವೇಗವರ್ಧಕ RhCl (PPh3)3 ಒಂದು ನಿಜವಾದ ವೇಗವರ್ಧಕದ ಚಕ್ರಕ್ಕೆ ಪ್ರವೇಶಿಸುವ ಮುಂಚೆ ಟ್ರೈಫಿನೈಲ್ ಫಾಸ್ಫೈನ್ ಲಿಗಂಡ್ (ಸಂಕೀರ್ಣ ಲವಣವೊಂದರಲ್ಲಿ ಕೇಂದ್ರ ಪರಮಾಣುವಿಗೆ ಬಂಧಿಸಿಕೊಂಡಿರುವ ಪರಮಾಣು ಅಥವಾ ಅಯಾನು)ನ್ನು ಕಳೆದುಕೊಳ್ಳುತ್ತದೆ. ಪ್ರೀಕ್ಯಾಟಲಿಸ್ಟ್ ಗಳನ್ನು ಸಂಗ್ರಹಿಸುವುದು ಬಹಳ ಸುಲಭ, ಆದರೆ ಇದು(ಸಿತು ಇದು ಲ್ಯಾಟಿನ್ ಭಾಷೆಯಲ್ಲಿ ಬಾಹ್ಯಾಕಾಶದ ಬಲದ ವೇಗವರ್ಧಕ) ಸಿತುಗಳಲ್ಲಿ ಸುಲಭವಾಗಿ ಸಕ್ರಿಯಗೊಳ್ಳುತ್ತದೆ. ಈ ಸಕ್ರೀಕರಣಕ್ಕೆ ಮುಂಚಿನ ಹಂತದಿಂದಾಗಿ, ಹಲವು ವೇಗವರ್ಧಕದ ಪ್ರತಿಕ್ರಿಯೆಗಳು ಒಂದು ಚೂಷಣಾ ಅವಧಿಯನ್ನು ಒಳಗೊಂಡಿರುತ್ತವೆ.

ವೇಗವರ್ಧಕದ ಕ್ರಿಯೆಯನ್ನು ಉತ್ತಮಗೊಳಿಸುವ ರಾಸಾಯನಿಕ ವಿಧಗಳನ್ನು ಸಹ-ವೇಗವರ್ಧಕಗಳೆಂದು ಕರೆಯುತ್ತಾರೆ. ಸಹಕಾರಿ ವೇಗವರ್ಧನೆ ಯಲ್ಲಿ ಬರುವ (ಸಹವೇಗವರ್ಧಕಗಳು ) ಅಥವಾ ಪ್ರವರ್ತಕಗಳು .

ವೇಗವರ್ಧನೆಯ ಮಾದರಿಗಳು

[ಬದಲಾಯಿಸಿ]

ವೇಗವರ್ಧಕಗಳು ಮೇಲ್ಮೈನಲ್ಲಿ ಅದೇ ಪ್ರಾವಸ್ಥೆ ದಲ್ಲಿ(ಆರಂಭಿಕದಲ್ಲಿ) ಅಸ್ತಿತ್ವದಲ್ಲಿವೆಯೇ ಎಂಬುದರ ಆಧಾರದ ಮೇಲೆ ಅವುಗಳು ಭಿನ್ನಜಾತಿಯಾಗಿರಬಹುದು ಅಥವಾ ಸಮಜಾತಿಯಾಗಿರಬಹುದು. ಬಯೋಕ್ಯಾಟಲಿಸ್ಟ್ ಗಳನ್ನು ಒಂದು ಪ್ರತ್ಯೇಕ ಗುಂಪೆಂದು ಪರಿಗಣಿಸಲಾಗುತ್ತದೆ.

ಭಿನ್ನಜಾತಿಯ ವೇಗವರ್ಧಕಗಳು

[ಬದಲಾಯಿಸಿ]

ಭಿನ್ನಜಾತ್ಯಾ ವೇಗವರ್ಧಕಗಳು ಕಾರಕಗಳಿಗಿಂತ ಹೆಚ್ಚಾಗಿ ಒಂದು ಭಿನ್ನ ಪ್ರಾವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಹಲವು ಭಿನ್ನಜಾತಿಯ ವೇಗವರ್ಧಗಳು ಘನರೂಪದಲ್ಲಿರುತ್ತವೆ. ಇವುಗಳು ದ್ರಾವಣ ಅಥವಾ ಅನಿಲರೂಪದ ಪ್ರತಿಕ್ರಿಯಾ ಮಿಶ್ರಣದ ಮೇಲ್ಮೈಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಹೊರಹೀರಿಕೆಯು ಹೇಗೆ ನಡೆಯುತ್ತದೆ ಎಂಬುದನ್ನು ಅವಲಂಬಿಸಿ ಮೇಲ್ಮೈಯಲ್ಲಿನ ಪ್ರತಿಕ್ರಿಯೆಗಳಿಗೆ ವಿವಿಧ ವಿಧಾನಗಳಿವೆ. (ಲ್ಯಾಂಗ್ಮುಯಿರ್-ಹಿಂಷೆಲ್ವುಡ್, ಎಲೆಯ್-ರಿಡೀಲ್, ಹಾಗು ಮಾರ್ಸ್-ವ್ಯಾನ್ ಕ್ರೆವೆಲೆನ್).[] ಘನಾಕೃತಿಯ ಒಟ್ಟಾರೆ ಮೇಲ್ಮೈ ಕ್ಷೇತ್ರವು ಪ್ರತಿಕ್ರಿಯೆಯ ಪ್ರಮಾಣದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ವೇಗವರ್ಧಕದ ಕಣದ ಗಾತ್ರವು ಸಣ್ಣದಿದ್ದರೆ, ಕಣದ ಗುಂಪಿಗೆ ದೊಡ್ಡ ಮೇಲ್ಮೈ ಕ್ಷೇತ್ರವನ್ನು ಒದಗಿಸಲಾಗುತ್ತದೆ.

ಉದಾಹರಣೆಗೆ, ಹಬೆರ್ ಪ್ರಕ್ರಿಯೆಯಲ್ಲಿ, ಉತ್ತಮ ರೀತಿಯಲ್ಲಿ ಇಬ್ಬಾಗಗೊಂಡ ಕಬ್ಬಿಣವು ಸಾರಜನಕ ಹಾಗು ಜಲಜನಕದಿಂದ ಅಮೋನಿಯಾ ಸಂಶ್ಲೇಷಣೆಯಲ್ಲಿ ಒಂದು ವೇಗವರ್ಧಕವಾಗಿ ಒದಗಿ ಬರುತ್ತದೆ. ಪ್ರತಿಕ್ರಿಯಿಸುವ ಅನಿಲ ಗಳು ಕಬ್ಬಿಣದ ಕಣಗಳ ಮೇಲೆ ಒಂದಕ್ಕೊಂದು ಸಕ್ರಿಯ ಕ್ಷೇತ್ರದಲ್ಲಿ ಹೊರಹೀರುತ್ತದೆ. ಹೊರಹೀರಿಕೊಂಡ ನಂತರ, ಪ್ರತಿಕ್ರಿಯಿಸುವ ಅಣುಗಳ ನಡುವಿರುವ ಬಂಧನಗಳು ಸಡಿಲಗೊಳ್ಳುತ್ತವೆ, ಜೊತೆಗೆ ಹೊರಬಿದ್ದ ಚೂರುಗಳಿಂದ ಸೃಷ್ಟಿಯಾದ ಹೊಸ ಬಂಧಕಗಳು ಅವುಗಳ ಸಾಮೀಪ್ಯತೆಯ ಕಾರಣವಾಗಿದೆ. ಈ ರೀತಿಯಾಗಿ ವಿಶೇಷ ಬಲವನ್ನು ಹೊಂದಿರುವ ಸಾರಜನಕದ ಮೂರು ಬಂಧಕಗಳು ಸಡಿಲಗೊಳ್ಳುತ್ತವೆ. ಜೊತೆಗೆ ಜಲಜನಕ ಹಾಗು ಸಾರಜನಕದ ಅಣುಗಳು ಅನಿಲದ ಪ್ರಾವಸ್ಥೆಗಿಂತ ಶೀಘ್ರವಾಗಿ ಒಟ್ಟುಗೂಡುತ್ತವೆ, ಈ ರೀತಿಯಾಗಿ ಪ್ರತಿಕ್ರಿಯೆಯ ಪ್ರಮಾಣವು ಅಧಿಕಗೊಳ್ಳುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಭಿನ್ನಜಾತಿಯ ವೇಗವರ್ಧಕಗಳು "ವಿಶೇಷವಾದ ಆಧಾರವನ್ನು" ಹೊಂದಿರುತ್ತವೆ, ಇದರರ್ಥ ವೇಗವರ್ಧಕವು ದ್ವಿತೀಯಕ ದ್ರವ್ಯದ ಮೇಲೆ ಚೆದುರಿರುತ್ತದೆ. ಇದು ಅವುಗಳ ಸಾಮರ್ಥ್ಯವನ್ನು ಅಧಿಕಗೊಳಿಸುತ್ತದೆ ಅಥವಾ ಅವುಗಳ ಬೆಲೆಯನ್ನು ಕಡಿಮೆ ಮಾಡುತ್ತದೆ. ಕೆಲವೊಂದು ಬಾರಿ ಈ ಆಧಾರವು ಕೇವಲ ಮೇಲ್ಮೈಯಾಗಿರುತ್ತದೆ. ಇದನ್ನು ಆಧರಿಸಿ ಮೇಲ್ಮೈ ಕ್ಷೇತ್ರವನ್ನು ಅಧಿಕಗೊಳಿಸಲು ವೇಗವರ್ಧಕವು ವಿಸ್ತಾರಗೊಳ್ಳುತ್ತದೆ. ಸಾಮಾನ್ಯವಾಗಿ, ಆಧಾರ ಹಾಗು ವೇಗವರ್ಧಕವು ಪರಸ್ಪರ ಪರಿಣಾಮಕಾರಿಯಾಗಿರುವುದರ ಜೊತೆಗೆ ವೇಗವರ್ಧಕದ ಪ್ರತಿಕ್ರಿಯೆಯ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ಅಧಿಕ ಮೇಲ್ಮೈ ತಾಣ (ಪ್ರದೇಶ)ಹೊಂದಿರುವ ಈ ಆಧಾರಗಳು ಸರಂಧ್ರ ವಸ್ತುಗಳಾಗಿವೆ, ಇದರಲ್ಲಿ ಸಾಮಾನ್ಯವಾದವೆಂದರೆ ಅಲ್ಯೂಮಿನಿಯಂ ಆಕ್ಸೈಡ್ ಅಥವಾ ಕಾರ್ಬನ್ ನ ವಿವಿಧ ಬಗೆಗಳು. ವಿಶಿಷ್ಟ ಆಧಾರಗಳಲ್ಲಿ ಸಿಲಿಕಾನ್ ಡೈಆಕ್ಸೈಡ್, ಟೈಟೆನಿಯಂ ಡೈಆಕ್ಸೈಡ್, ಕ್ಯಾಲ್ಷಿಯಂ ಕಾರ್ಬೋನೆಟ್, ಹಾಗು ಬೇರಿಯಂ ಸಲ್ಫೇಟ್ ಗಳು ಸೇರಿವೆ.

ಸಮಜಾತಿಯ ವೇಗವರ್ಧಕಗಳು

[ಬದಲಾಯಿಸಿ]

ಸಮಜಾತಿಯ ವೇಗವರ್ಧಕಗಳು ಕಾರಕಗಳ ಮಾದರಿ ಅದೇ ಪ್ರಾವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತವೆ, ಆದರೆ ಭಿನ್ನಜಾತಿಯ ವೇಗವರ್ಧನೆಯಲ್ಲಿ ನೆರವಾಗುವ ಯಾಂತ್ರಿಕ ನಿಯಮಗಳು ಸಾಧಾರಣವಾಗಿ ಉಪಯುಕ್ತವಾಗಿರುತ್ತವೆ. ಮಾದರಿಯಾಗಿ ಸಮಜಾತಿಯ ವೇಗವರ್ಧಕಗಳು ಮೇಲ್ಮೈನಲ್ಲಿ ವಿಲೆಯಕದೊಂದಿಗೆ ಕರಗುತ್ತವೆ. ಸಮಜಾತಿಯ ವೇಗವರ್ಧನೆಯ ಒಂದು ಉದಾಹರಣೆಯಲ್ಲಿ ಎಸ್ಟರ್ ಗಳ ಎಸ್ಟರಿಫಿಕೆಶನ್ ಮೇಲೆ H+ನ ಪ್ರಭಾವವನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ಅಸೀಟಿಕಾಮ್ಲ ಹಾಗು ಮೆತನಾಲ್ ಗಳಿಂದ ಉತ್ಪತ್ತಿಯಾಗುವ ಮೀತೈಲ್ ಆಸಿಟೇಟ್ .[] ಅಜೈವಿಕ ರಸಾಯನಶಾಸ್ತ್ರಜ್ಞರಿಗೆ, ವೇಗವರ್ಧನೆಯು ಸಾಮಾನ್ಯವಾಗಿ ಕಾರ್ಬನಿಕ-ಲೌಹಿಕ ವೇಗವರ್ಧಕಗಳಿಗೆ ಸಮನಾಗಿದೆ.[]

ವಿದ್ಯುತ್ ವೇಗವರ್ಧಕಗಳು

[ಬದಲಾಯಿಸಿ]

ವಿದ್ಯುದ್ರಸಾಯನ ಶಾಸ್ತ್ರದ ಪರಿಸ್ಥಿತಿಯಲ್ಲಿ, ವಿಶೇಷವಾಗಿ ಇಂಧನ ಕೋಶ ಇಂಜಿನಿಯರಿಂಗ್ ನಲ್ಲಿ, ವೇಗವರ್ಧಕಗಳನ್ನು ಒಳಗೊಂಡ ಹಲವಾರು ಲೋಹಗಳನ್ನು, ಇಂಧನ ಕೋಶದಿಂದ ರಚಿತವಾಗಿರುವ ಅರೆ-ಕ್ರಿಯೆಯ ಪ್ರಮಾಣವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇಂಧನ ಕೋಶದ ವಿದ್ಯುತ್ ವೇಗವರ್ಧಕದ ಒಂದು ಸಾಮಾನ್ಯ ಮಾದರಿಯು ಪ್ಲ್ಯಾಟಿನಮ್ ನ ನ್ಯಾನೋ ಪಾರ್ಟಿಕಲ್ಸ್ ಗಳನ್ನು ಆಧರಿಸಿದೆ. ಇವುಗಳಿಗೆ ಇದಕ್ಕಿಂತ ಸ್ವಲ್ಪ ದೊಡ್ಡದಿರುವ ಕಾರ್ಬನ್ ಕಣಗಳು ಆಧಾರವನ್ನು ನೀಡುತ್ತವೆ. ಇಂಧನ ಕೋಶದ ಒಂದು ವಿದ್ಯುದ್ವಾರದೊಂದಿಗೆ ಇದು ಸಂಪರ್ಕಕ್ಕೆ ಬಂದಾಗ, ಈ ಪ್ಲ್ಯಾಟಿನಮ್ ನೀರಿನಲ್ಲಿ ಹೈಡ್ರಾಕ್ಸೈಡ್ ಅಥವಾ ಹೈಡ್ರೋಜನ್ ಪೆರಾಕ್ಸೈಡ್ ಯಾವುದಕ್ಕಾದರೂ ಆಮ್ಲಜನಕದ ಪ್ರಮಾಣವನ್ನು ತಗ್ಗಿಸುತ್ತದೆ.

ಕಾರ್ಬನಿಕ ವೇಗವರ್ಧನೆ

[ಬದಲಾಯಿಸಿ]

ವೇಗವರ್ಧನೆಯ ಅಧ್ಯಯನದಲ್ಲಿ ಪರಿವರ್ತನಾ ಲೋಹಗಳು ಕೆಲವೊಂದು ಬಾರಿ ಹೆಚ್ಚಿನ ಗಮನ ಪಡೆಯುತ್ತವೆ, ಲೋಹಗಳನ್ನು ಹೊಂದಿರದ ಜೈವಿಕ ಅಣುಗಳು ಸಹ ವೇಗವರ್ಧಕ ಲಕ್ಷಣವನ್ನು ಪ್ರದರ್ಶಿಸುತ್ತವೆ. ಏಕೆಂದರೆ ಪರಿವರ್ತನಾ ಲೋಹಗಳು ಹಲವು ಕಿಣ್ವ ರಹಿತವಾಗಿರುತ್ತವೆ ಎಂಬುದು ಸ್ಪಷ್ಟವಾಗಿದೆ. ಮಾದರಿಯಾಗಿ, ಲೋಹ ಆಧಾರಿತ ವೇಗವರ್ಧಕಗಳಿಗಿಂತ ಅಧಿಕವಾಗಿ ಜೈವಿಕ ವೇಗವರ್ಧಕಗಳಿಗೆ ಹೆಚ್ಚಿನ ಹೇರಿಕೆಯ ಅಗತ್ಯವಿರುತ್ತದೆ. (ಅಥವಾ ಕಾರಕದ ಪ್ರತಿ ಏಕಮಾನದ ಮೊತ್ತಕ್ಕೆ ವೇಗವರ್ಧಕದ ಮೊತ್ತವು ಸಮನಾಗಿರುತ್ತದೆ), ಆದರೆ ಈ ವೇಗವರ್ಧಕಗಳು ಸಾಧಾರಣವಾಗಿ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತವೆ, ಇದು ಅದರ ಬೆಲೆಯನ್ನು ಕಡಿಮೆಗೊಳಿಸುತ್ತದೆ. ಇಸವಿ 2000ದ ಆರಂಭದಲ್ಲಿ, ಕಾರ್ಬನಿಕ ವೇಗವರ್ಧಕವನ್ನು "ಹೊಸ ತಲೆಮಾರಿನ" ವೇಗವರ್ಧಕವೆಂದು ಪರಿಗಣಿಸಲಾಗುತ್ತಿತ್ತು; ಜೊತೆಗೆ ಇವುಗಳು ಲೋಹಗಳನ್ನು ಒಳಗೊಂಡ ಸಾಂಪ್ರದಾಯಿಕ ವೇಗವರ್ಧಕಗಳಿಗೆ ಸ್ಪರ್ಧೆಯನ್ನು ಒಡ್ಡಿದವು. ಕಿಣ್ವಕ ಕ್ರಿಯೆಗಳು ಜೈವಿಕ ವೇಗವರ್ಧನೆಯ ನಿಯಮಗಳ ಮೂಲಕ ಕಾರ್ಯ ನಿರ್ವಹಿಸುತ್ತವೆ.

ವೇಗವರ್ಧನೆಯ ಮಹತ್ವ

[ಬದಲಾಯಿಸಿ]

ಸುಮಾರು 90%ನಷ್ಟು ವಾಣಿಜ್ಯಕವಾಗಿ ತಯಾರಾದ ಎಲ್ಲ ರಾಸಾಯನಿಕ ಉತ್ಪನ್ನಗಳು ವೇಗವರ್ಧಕಗಳನ್ನು ಅವುಗಳ ತಯಾರಿಕೆ ಪ್ರಕ್ರಿಯೆಯ ಒಂದಲ್ಲ ಒಂದು ಹಂತದಲ್ಲಿ ಒಳಗೊಂಡಿದೆ ಎಂದು ಅಂದಾಜಿಸಲಾಗಿದೆ.[] ಕಳೆದ 2005ರಲ್ಲಿ, ವೇಗವರ್ಧನೆ ಪ್ರಕ್ರಿಯೆಯು ವಿಶ್ವವ್ಯಾಪಿಯಾಗಿ ಸುಮಾರು $900 ಶತಕೋಟಿ ಉತ್ಪನ್ನಗಳನ್ನು ತಯಾರಿಸಿತು.[೧೦] ವೇಗವರ್ಧನೆಯು ಎಷ್ಟು ವ್ಯಾಪಕವಾಗಿದೆ ಎಂದರೆ ಅದರ ಉಪಕ್ಷೇತ್ರಗಳನ್ನು ಸುಲಭವಾಗಿ ವರ್ಗೀಕರಣ ಮಾಡಲಾಗುವುದಿಲ್ಲ. ನಿರ್ದಿಷ್ಟ ಕೇಂದ್ರೀಕರಣವನ್ನು ಹೊಂದಿರುವ ಕೆಲವು ಕ್ಷೇತ್ರಗಳನ್ನು ಕೆಳಗೆ ಪರಿಶೀಲಿಸಲಾಗಿದೆ.

ಶಕ್ತಿ ಪ್ರಕ್ರಿಯೆ

[ಬದಲಾಯಿಸಿ]

ಪೆಟ್ರೋಲಿಯಂ ಸಂಸ್ಕರಣೆಯು ಆಲ್ಕಿಲೇಶನ್, ವೇಗವರ್ಧಕದ ಭಂಜನೆಗೆ (ದೀರ್ಘ-ಸರಪಳಿಯನ್ನು ಹೊಂದಿರುವ ಹೈಡ್ರೋಕಾರ್ಬನ್ ಗಳನ್ನು ಸಣ್ಣ ತುಂಡುಗಳಾಗಿ ವಿಭಜಿಸುವುದು), ಪೆಟ್ರೋಲಿಯಂನ ಸಂಸ್ಕರಣೆಗೆ ಹಾಗು ಜಲಕಣ ರಾಶಿಯ ಸಂಸ್ಕರಣೆ (ಹೈಡ್ರೋಕಾರ್ಬನ್ ಗಳನ್ನು ಸಂಶ್ಲೇಷಿತ ಅನಿಲವಾಗಿ ಪರಿವರ್ತನೆ ಮಾಡಲಾಗುತ್ತದೆ) ಒಳಗೊಂಡಿರುತ್ತದೆ. ಪಳೆಯುಳಿಕೆ ಇಂಧನಗಳ ದಹನದಿಂದ ಉಂಟಾಗುವ ನಿರ್ವಾತಕರಣವನ್ನು ಸಹ ವೇಗವರ್ಧನೆಯ ಮೂಲಕ ಸಂಸ್ಕರಿಸಲಾಗುತ್ತದೆ: ವಿಶೇಷವಾಗಿ ಪ್ಲ್ಯಾಟಿನಮ್ ಹಾಗು ರೋಡಿಯಂನಿಂದ ರಚಿತವಾದ ವೇಗವರ್ಧಕ ಪರಿವರ್ತಕಗಳು, ಮೋಟಾರು ನಿರ್ವಾತಕರಣದ ಹಾನಿಕರ ಉಪವಸ್ತುಗಳನ್ನು ವಿಭಜಿಸುತ್ತವೆ.

2 CO + 2 NO → 2 CO2 + N2

ಸಂಶ್ಲೇಷಿತ ಇಂಧನಗಳಿಗೆ ಸಂಬಂಧಿಸಿದಂತೆ, ಹಳೆಯದಾದರೂ ಬಹಳ ಮುಖ್ಯವಾದ ಪ್ರಕ್ರಿಯೆಯೆಂದರೆ ಫಿಸ್ಚೆರ್-ಟ್ರೋಪ್ಸ್ಚ್ ಸಂಶ್ಲೇಷಣೆ. ಇದರಲ್ಲಿ ಸಂಶ್ಲೇಷಿತ ಅನಿಲದಿಂದ ಹೈಡ್ರೋಕಾರ್ಬನ್ ಗಳ ಸಂಶ್ಲೇಷಣೆ ಮಾಡಲಾಗುತ್ತದೆ. ಇದು ಸ್ವತಃ ನೀರು-ಅನಿಲದ ವರ್ಗಾವಣೆ ಕ್ರಿಯೆಗಳ ಮೂಲಕ ಕಬ್ಬಿಣದಿಂದ ವೇಗವರ್ಧನೆಗೊಳ್ಳುತ್ತದೆ. (ಜೈವಿಕ)ಬಯೋಡೀಸಲ್ ಹಾಗು ಅದಕ್ಕೆ ಸಂಬಂಧಿಸಿದ ಬಯೋಇಂಧನಗಳು ಅಜೈವಿಕ ಹಾಗು ಬಯೋವೇಗವರ್ಧಕ ಎರಡರ ಮೂಲಕವೂ ಪ್ರಕ್ರಿಯೆಯನ್ನು ಹೊಂದುವ ಅಗತ್ಯವಿದೆ.

ಇಂಧನ ಕೋಶಗಳು ಧನದ್ವಾರ ಹಾಗು ಋಣದ್ವಾರದ ಕ್ರಿಯೆಗಳೆರಡನ್ನೂ ಅವಲಂಬಿಸಿವೆ.

ಭಾರಿ ಪ್ರಮಾಣದ ರಾಸಾಯನಿಕಗಳು

[ಬದಲಾಯಿಸಿ]

ಕೆಲವು ದೊಡ್ಡ ಪ್ರಮಾಣದ ರಾಸಾಯನಿಕಗಳನ್ನು ವೇಗವರ್ಧಕ ಆಕ್ಸಿದೀಕರಣದ ಮೂಲಕ ತಯಾರಿಸಲಾಗುತ್ತದೆ, ಸಾಮಾನ್ಯವಾಗಿ ಆಮ್ಲಜನಕದ ಬಳಕೆಯು ಸೇರಿರುತ್ತದೆ. ಉದಾಹರಣೆಗಳಲ್ಲಿ ನೈಟ್ರಿಕ್ ಆಮ್ಲ(ಅಮೋನಿಯಾದಿಂದ), ಸಲ್ಫ್ಯೂರಿಕ್ ಆಮ್ಲ (ಸಲ್ಫರ್ ಡೈಆಕ್ಸೈಡ್ನಿಂದ ಹಿಡಿದು ಸಲ್ಫರ್ ತ್ರೈಆಕ್ಸೈಡ್ ವರೆಗೂ ಚೇಂಬರ್ ಪ್ರಕ್ರಿಯೆ ಯ ಮೂಲಕ) ಪಿ-ಎಕ್ಸಲಿನ್ ನಿಂದ ಟೆರೆಫ್ಥಾಲಿಕ್ ಆಮ್ಲ, ಹಾಗು ಪ್ರೋಪೇನ್ ಹಾಗು ಅಮೋನಿಯಾದಿಂದ ಅಕ್ರಿಲೋನಿಟ್ರಿಲ್ ಗಳು ಸೇರಿವೆ.

ಇತರ ಹಲವು ರಾಸಾಯನಿಕ ಉತ್ಪನ್ನಗಳು ದೊಡ್ಡ ಪ್ರಮಾಣದ ಸಂಕೊಚನದ ಮೂಲಕ ಉತ್ಪಾದಿಸಲಾಗುತ್ತದೆ, ಸಾಮಾನ್ಯವಾಗಿ ಹೈಡ್ರಾಜನೀಕರಣ ಮೂಲಕ ತಯಾರಿಸಲಾಗುತ್ತದೆ. ದೊಡ್ಡ ಪ್ರಮಾಣದ ಉತ್ಪಾದನೆಯ ಉದಾಹರಣೆಯೆಂದರೆ ಅಮೋನಿಯ, ಇದನ್ನು ಸಾರಜನಕದಿಂದ ಹಬೆರ್ ಪ್ರಕ್ರಿಯೆಯ ಮೂಲಕ ತಯಾರಿಸಲಾಗುತ್ತದೆ. ಕಾರ್ಬನ್ ಮಾನಾಕ್ಸೈಡ್ ನಿಂದ ಮಿತನೋಲ್ ಅನ್ನು ತಯಾರಿಸಲಾಗುತ್ತದೆ.

ಇಥಲಿನ್ ಹಾಗು ಪ್ರೋಪಿಲಿನ್ ನಿಂದ ಉತ್ಪಾದನೆಯಾದ ಭಾರಿ ಪಾಲಿಮರ್ ಗಳನ್ನೂ ಸಾಮಾನ್ಯವಾಗಿ ಜಿಗ್ಲರ್-ನಟ್ಟ ವೇಗವರ್ಧನೆ ಯ ಮೂಲಕ ತಯಾರಿಸಲಾಗುತ್ತದೆ. ಪಾಲಿಯೆಸ್ಟರ್, ಪಾಲಿಯಾಮೈಡ್, ಹಾಗು ಐಸೊಸಯಾನೆಟ್ ಗಳು ಆಸಿಡ್-ಆಧಾರಿತ ವೇಗವರ್ಧನೆಯ ಮೂಲಕ ತಯಾರಿಸಲಾಗುತ್ತದೆ.

ಹಲವು ಕಾರ್ಬನಿಲೆಶನ್ ಪ್ರಕ್ರಿಯೆಗಳಿಗೆ ಲೋಹದ ವೇಗವರ್ಧಕಗಳ ಅಗತ್ಯವಿರುತ್ತದೆ, ಉದಾಹರಣೆಗೆ ಮೊನ್ಸಂಟೋ ಆಸಿಟಿಕ್ ಆಸಿಡ್ ಪ್ರಕ್ರಿಯೆ ಹಾಗು ಹೈಡ್ರೋಫಾರ್ಮಿಲೆಶನ್ ಗಳು ಇದರಲ್ಲಿ ಸೇರಿವೆ.

ಉತ್ಕೃಷ್ಟ ರಾಸಾಯನಿಕಗಳು

[ಬದಲಾಯಿಸಿ]

ಹಲವು ಉತ್ಕೃಷ್ಟ ದರ್ಜೆಯ ರಾಸಾಯನಿಕಗಳನ್ನು ವೇಗವರ್ಧನೆಯ ಮೂಲಕ ತಯಾರಿಸಲಾಗುತ್ತದೆ; ಇದಕ್ಕೆ ಭಾರಿ ಕೈಗಾರಿಕೆಯಲ್ಲಿ ಬಳಸಲ್ಪಡುವ ವಿಧಾನ ಹಾಗು ವಿಶೇಷ ಪ್ರಕ್ರಿಯೆಗಳು ಸೇರಿವೆ. ಇದು ದೊಡ್ಡ ಪ್ರಮಾಣದ ತಯಾರಿಕೆಗೆ ತೊಡಕಾಗುವಷ್ಟು ದುಬಾರಿಯಾಗಿದೆ. ಉದಾಹರಣೆಗೆ ಒಲೆಫಿನ್ ಮೆಟಾಥೀಸಿಸ್ ಗ್ರುಬ್ರ್ಸ್ ವೇಗವರ್ಧಕವನ್ನು, ಹೆಕ್ಕ್ ಪ್ರತಿಕ್ರಿಯೆ ಯನ್ನು, ಹಾಗು ಫ್ರಿಡೆಲ್-ಕ್ರ್ಯಾಫ್ಟ್ ಕ್ರಿಯೆಗಳನ್ನು ಒಳಗೊಂಡಿವೆ.

ಏಕೆಂದರೆ ಹಲವು ಬಯೋಆಕ್ಟಿವ್ ಸಂಯುಕ್ತಗಳು ಅಸಮಮಿತ (ಕೈರಲ್)ವಾಗಿರುತ್ತವೆ, ಹಲವು ಔಷಧಗಳನ್ನು ಇನಾನ್ಟಿಯೋಸೆಲೆಕ್ಟೀವ್ ವೇಗವರ್ಧನೆಯ ಮೂಲಕ ತಯಾರಿಸಲಾಗುತ್ತದೆ.

ಆಹಾರ ಸಂಸ್ಕರಣೆ

[ಬದಲಾಯಿಸಿ]

ವೇಗವರ್ಧನೆಯ ಅತ್ಯಂತ ಸ್ಪಷ್ಟ ಬಳಕೆಯೆಂದರೆ, ನಿಕಲ್ ವೇಗವರ್ಧಕವನ್ನು ಬಳಸಿಕೊಂಡು ಕೊಬ್ಬನ್ನು ಜಲಜನಕೀಕರಣ (ಜಲಜನಕ ಆಮ್ಲದೊಂದಿಗೆ ಕ್ರಿಯೆಗೆ ಒಳಪಡುತ್ತದೆ.) ಮಾಡುವುದರ ಮೂಲಕ ಮಾರ್ಗರಿನ್(ಕೃತಕ ಬೆಣ್ಣೆ)ನನ್ನು ತಯಾರಿಸುವುದು.[೧೧] ಇತರ ಹಲವು ಆಹಾರ ಪದಾರ್ಥಗಳನ್ನು ಬಯೋಕ್ಯಾಟಲಿಸ್ಟ್ ಮೂಲಕ ಸಿದ್ಧಪಡಿಸಲಾಗುತ್ತದೆ. (ಕೆಳಗೆ ನೀಡಲಾಗಿರುವ ವಿವರವನ್ನು ನೋಡಿ).

ಜೀವಶಾಸ್ತ್ರ

[ಬದಲಾಯಿಸಿ]

ಸ್ವಾಭಾವಿಕವಾಗಿ, ಉಪಪಚಾಯಿಕ್ರಿಯೆ ಹಾಗು ಅಪಚಯ ಕ್ರಿಯೆಗಳಲ್ಲಿ ಕಿಣ್ವಗಳು ವೇಗವರ್ಧಕಗಳಾಗಿರುತ್ತವೆ. ಹಲವು ಬಯೋಕ್ಯಾಟಲಿಸ್ಟ್ ಗಳು ಪ್ರೋಟೀನ್-ಆಧಾರಿತವಾಗಿರುತ್ತವೆ, ಅದೆಂದರೆ ಕಿಣ್ವಗಳು, ಆದರೆ ಬಯೋಮಾಲಿಕ್ಯೂಲ್ ಗಳ ಇತರ ವರ್ಗಗಳೂ ಸಹ ವೇಗವರ್ಧನೆಯ ಗುಣಲಕ್ಷಣಗಳನ್ನೂ ಪ್ರದರ್ಶಿಸುತ್ತವೆ, ಇದರಲ್ಲಿ ರಿಬೋಜೈಮ್ ಗಳು ಹಾಗು ಸಂಶ್ಲೇಷಿತ ಡಿಆಕ್ಸಿರಿಬೋಜೈಮ್ ಗಳು ಸೇರಿವೆ.[೧೨]

ಬಯೋಕ್ಯಾಟಲಿಸ್ಟ್ ಗಳನ್ನು ಸಮಜಾತಿಯ ಹಾಗು ಭಿನ್ನಜಾತಿಯ ವೇಗವರ್ಧಕಗಳ ನಡುವಿನ ಮಧ್ಯಂತರವೆಂದು ಪರಿಗಣಿಸಬಹುದು, ಆದಾಗ್ಯೂ ಖಚಿತವಾಗಿ ಹೇಳಬಹುದಾದರೆ ಕರಗಬಲ್ಲ ಕಿಣ್ವಗಳು ಸಮಜಾತಿಯ ವೇಗವರ್ಧಕಗಳಾಗಿದ್ದರೆ ಒಳಪದರದಿಂದ ಆವೃತ್ತವಾದ ಕಿಣ್ವಗಳು ಭಿನ್ನಜಾತಿಯ ವೇಗವರ್ಧಕಗಳಾಗಿರುತ್ತವೆ. ಹಲವಾರು ಅಂಶಗಳು ಕಿಣ್ವಗಳ ಚಟುವಟಿಕೆಗೆ ಅಡ್ಡಿಪಡಿಸುತ್ತವೆ. (ವೇಗವರ್ಧಕಗಳನ್ನು ಹೊರತುಪಡಿಸಿ), ಇದರಲ್ಲಿ, ತಾಪಮಾನ, pH, ಕಿಣ್ವದ ಸಾರೀಕರಣ, ಮೇಲ್ಮೈ, ಹಾಗು ಉತ್ಪನ್ನಗಳು. ಕಿಣ್ವಕ ಕ್ರಿಯೆಯ ಬಹುಮುಖ್ಯ ಕಾರಕವೆಂದರೆ ನೀರು, ಇದು ಹಲವು ಬಂಧಕಗಳನ್ನು ರೂಪಿಸುವ ಕ್ರಿಯೆಗಳ ಉತ್ಪನ್ನವಾಗಿದೆ ಜೊತೆಗೆ ಹಲವು ಬಂಧಕಗಳ ವಿಭಜನಾ ಪ್ರಕ್ರಿಯೆಯಲ್ಲಿ ಒಂದು ಕಾರಕವಾಗಿ ಬಳಸಲ್ಪಡುತ್ತದೆ.

ಕಿಣ್ವಗಳನ್ನು ಹಲವು ಉಪಯುಕ್ತ ರಾಸಾಯನಿಕಗಳನ್ನು ತಯಾರಿಸಲು ಬಳಸಲಾಗುತ್ತದೆ, ಇದರಲ್ಲಿ ಅಧಿಕ-ಫ್ರೂಕ್ಟೋಸ್ ನ್ನು ಹೊಂದಿರುವ ಧಾನ್ಯದ ದ್ರಾವಣ ಹಾಗು ಅಕ್ರಿಲಮೈಡ್

ಪರಿಸರದಲ್ಲಿ

[ಬದಲಾಯಿಸಿ]

ವೇಗವರ್ಧನೆಯು ಕೈಗಾರಿಕಾ ಪ್ರಕ್ರಿಯೆಯ ಸಾಮರ್ಥ್ಯವನ್ನು ಅಧಿಕಗೊಳಿಸುವುದರೊಂದಿಗೆ ಪರಿಸರದ ಮೇಲೆ ಪ್ರಭಾವ ಬೀರುತ್ತದೆ, ಆದರೆ ವೇಗವರ್ಧನೆಯು ಪರಿಸರದ ಮೇಲೆ ನೇರ ಪರಿಣಾಮವನ್ನೂ ಸಹ ಬೀರುತ್ತದೆ. ಒಂದು ಉತ್ತಮ ಉದಾಹರಣೆಯೆಂದರೆ, ಓಜೋನ್ ನ ವಿಘಟನೆಯಲ್ಲಿ ಕ್ಲೋರಿನ್ ನ ಮುಕ್ತ ರಾಡಿಕಲ್ ಗಳ ವೇಗವರ್ಧಕ ಪಾತ್ರ. ಈ ರಾಡಿಕಲ್ ಗಳು ಕ್ಲೋರೋಫ್ಲೋರೋಕಾರ್ಬನ್ ಗಳ(CFCs) ಮೇಲೆ ನೇರಳಾತೀತ ವಿಕಿರಣಗಳ ಕ್ರಿಯೆಯಿಂದ ರೂಪುಗೊಳ್ಳುತ್ತದೆ.

Cl· + O3 → ClO· + O2
ClO· + O· → Cl· + O2

ಇತಿಹಾಸ

[ಬದಲಾಯಿಸಿ]

ಒಂದು ಸಾಮಾನ್ಯ ಅರ್ಥದಲ್ಲಿ, ಪ್ರಕ್ರಿಯೆಯ ಪ್ರಮಾಣವನ್ನು ಅಧಿಕಗೊಳಿಸುವ ಯಾವುದನ್ನಾದರೂ ಒಂದು "ವೇಗವರ್ಧಕ"ವೆಂದು(ಕ್ಯಾಟಲಿಸ್ಟ್)ಕರೆಯಬಹುದು, ಈ ಪದವು ಗ್ರೀಕ್ ಭಾಷೆಯಿಂದ ವ್ಯುತ್ಪತ್ತಿಯನ್ನು ಹೊಂದಿದೆ. καταλύειν, ಇದು "ನಿಷ್ಪರಿಣಾಮಗೊಳಿಸು" ಅಥವಾ "ಕಟ್ಟು ಬಿಚ್ಚು", ಅಥವಾ "ಬೇರ್ಪಡಿಸುವ-ಕ್ರಿಯೆ" ಎಂಬ ಅರ್ಥವನ್ನು ನೀಡುತ್ತದೆ. ವೇಗವರ್ಧಕ ಪ್ರಕ್ರಿಯೆ ಎಂಬ ಪದಗುಚ್ಛವನ್ನು ಜೋನ್ಸ್ ಜೇಕಬ್ ಬರ್ಜೆಲಿಯಸ್ 1836ರಲ್ಲಿ [೧೩] ಸೃಷ್ಟಿಸಿದರು. ಇವರು ಅದಾದ ನಂತರ ವಸ್ತುಗಳಿಂದ ಚುರುಕುಗೊಂಡ ಕ್ರಿಯೆಗಳು ನಂತರ ಬದಲಾವಣೆ ಆಗದೆ ಹಾಗೆ ಉಳಿಯುತ್ತವೆ, ಎಂಬುದನ್ನು ವಿವರಿಸಲು ಈ ಪದಗುಚ್ಛವನ್ನು ಬಳಸಿದರು. ವೇಗವರ್ಧನೆಯ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಇತರ ರಸಾಯನಶಾಸ್ತ್ರಜ್ಞರೆಂದರೆ ಅಲೆಕ್ಸಾಂಡರ್ ಮಿಟ್ಸ್ಚೇರ್ ಲಿಚ್, ಇವರು ಸಂಪರ್ಕ ಪ್ರಕ್ರಿಯೆ ಗಳ ಬಗ್ಗೆ ಸೂಚಿಸುತ್ತಾರೆ; ಜೊತೆಗೆ ಜೊಹಾನ್ ವೊಲ್ಫ್ ಗ್ಯಾಂಗ್ ಡೊಬೆರಿನರ್ ಸಂಪರ್ಕ ಕ್ರಿಯೆ ಯ ಬಗ್ಗೆ ಉಲ್ಲೇಖಿಸುತ್ತಾರೆ. ಜೊತೆಗೆ ಇವರ ಜಲಜನಕ ವನ್ನು ಆಧರಿಸಿದ ಜ್ವಾಲಕ ಹಾಗು ಪ್ಲ್ಯಾಟಿನಮ್ ನ ಸ್ಪಾಂಜ್ 1820ರಲ್ಲಿ ಭಾರಿ ಯಶಸ್ಸನ್ನು ಗಳಿಸಿತು. ಹಂಪ್ರಿ ಡೇವಿ, ವೇಗವರ್ಧನೆಯಲ್ಲಿ ಪ್ಲ್ಯಾಟಿನಮ್ ಅನ್ನು ಬಳಸಬಹುದೆಂದು ಕಂಡುಹಿಡಿದರು. ಇಸವಿ 1880ರಲ್ಲಿ, ಲೆಯಿಪ್ಜಿಗ್ ವಿಶ್ವವಿದ್ಯಾಲಯದ ವಿಲಹೆಲ್ಮ್ ಒಸ್ಟ್ವಾಲ್ಡ್, ಆಮ್ಲಗಳು ಹಾಗು ಪ್ರತ್ಯಾಮ್ಲಗಳ ಉಪಸ್ಥಿತಿಯಿಂದ ವೇಗವರ್ಧನೆಗೊಂಡ ಕ್ರಿಯೆಗಳ ಬಗ್ಗೆ ಒಂದು ವ್ಯವಸ್ಥಿತ ಸಂಶೋಧನೆಯನ್ನು ಆರಂಭಿಸಿದರು, ಜೊತೆಗೆ ರಾಸಾಯನಿಕ ಕ್ರಿಯೆಗಳು ಸೀಮಿತ ಪ್ರಮಾಣದಲ್ಲಿ ಸಂಭವಿಸುತ್ತವೆಂದು ಪತ್ತೆ ಮಾಡಿದರು. ಜೊತೆಗೆ ಈ ಪ್ರಮಾಣಗಳನ್ನು ಆಮ್ಲಗಳು ಹಾಗು ಪ್ರತ್ಯಾಮ್ಲಗಳ ಸಾಮರ್ಥ್ಯವನ್ನು ನಿರೂಪಿಸಲು ಬಳಕೆ ಮಾಡಬಹುದಾಗಿದೆ. ಈ ಸಂಶೋಧನೆಗಾಗಿ, ಒಸ್ಟ್ವಾಲ್ಡ್ ರಿಗೆ 1909ರಲ್ಲಿ ರಸಾಯನಶಾಸ್ತ್ರದಲ್ಲಿ ನೋಬಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.[೧೪]

ಪ್ರತಿರೋಧಕಗಳು, ನಂಜುಗಳು ಹಾಗು ಪ್ರವರ್ತಕಗಳು

[ಬದಲಾಯಿಸಿ]

ವೇಗವರ್ಧಕದ ಕ್ರಿಯೆಯನ್ನು ತಗ್ಗಿಸುವ ವಸ್ತುಗಳು ವ್ಯತ್ಯಾಸ ಸಾಧ್ಯತೆಯನ್ನು ಹೊಂದಿದ್ದರೆ ವೇಗವರ್ಧಕ ಪ್ರತಿರೋಧಕಗಳು ಎಂದು ಕರೆಯಲಾಗುತ್ತದೆ, ಜೊತೆಗೆ ಅದು ಅವ್ಯತ್ಯಸನೀಯತೆಯನ್ನು ಹೊಂದಿದ್ದರೆ ಅವುಗಳನ್ನು ವೇಗವರ್ಧಕ ನಂಜುಗಳೆಂದು ಕರೆಯಲಾಗುತ್ತದೆ. ವೇಗವರ್ಧಕ ಕ್ರಿಯೆಯನ್ನು ಅಧಿಕಗೊಳಿಸುವ ಪದಾರ್ಥಗಳನ್ನು ಪ್ರವರ್ತಕಗಳೆಂದು ಕರೆಯಲಾಗುತ್ತದೆ, ವಿಶೇಷವಾಗಿ ಅವುಗಳು ಸ್ವತಃ ತಮ್ಮಷ್ಟಕ್ಕೆ ವೇಗವರ್ಧಕಗಳಾಗಿಲ್ಲದಿದ್ದಾಗ ಅವುಗಳನ್ನು ಪ್ರವರ್ತಕಗಳೆಂದು ಹೇಳಲಾಗುತ್ತದೆ.

ಪ್ರಮಾಣದ ಜೊತೆಯಲ್ಲಿ ಪ್ರತಿರೋಧಕಗಳು ವಿಶಿಷ್ಟ ತರಂಗ ಸಾಮರ್ಥ್ಯವನ್ನು ಪರಿವರ್ತಿಸಬಹುದು. ಉದಾಹರಣೆಗೆ, ಈಥೈನ್ ನನ್ನು ಈಥೀನ್ ಗೆ ತಗ್ಗಿಸಿದಾಗ, ಪಲೇಡಿಯಂ (Pd)ಎಂಬ ವೇಗವರ್ಧಕದ ಉತ್ಪತ್ತಿಯಾಗುತ್ತದೆ. ಇದು ಸೀಸ (II)ಆಸಿಟೇಟ್(Pb(CH3COO)2)ದಿಂದ ಭಾಗಶಃ "ವಿಷಪೂರಿತವಾಗಿರುತ್ತದೆ". ವೇಗವರ್ಧಕದ ನಿಷ್ಪಟುತ್ವವಿಲ್ಲದೆ, ಉತ್ಪಾದನೆಯಾದ ಈಥೀನ್, ಈಥೇನ್ ನನ್ನು ಮತ್ತಷ್ಟು ತಗ್ಗಿಸುತ್ತದೆ.[೧೫][೧೬]

ಪ್ರತಿರೋಧಕಗಳು ಈ ಪರಿಣಾಮವನ್ನು ಉದಾಹರಣೆಗೆ, ಸಕ್ರಿಯ ಕ್ಷೇತ್ರಗಳಲ್ಲಿ ಕೇವಲ ನಿರ್ದಿಷ್ಟವಾದ ಮಾದರಿಗಳನ್ನು ಆಯ್ಕೆ ಮಾಡಿಕೊಂಡು ನಂಜುಗೊಳಿಸುತ್ತವೆ. ಮತ್ತೊಂದು ಯಂತ್ರಿಕ ವ್ಯವಸ್ಥೆಯೆಂದರೆ ಮೇಲ್ಮೈ ಜಾಮಿತಿಯ ಪರಿವರ್ತನೆ ಮಾಡುತ್ತದೆ. ಉದಾಹರಣೆಗೆ, ಜಲಜನಕೀಕರಣದ ಕಾರ್ಯವಿಧಾನಗಳಲ್ಲಿ, ಲೋಹದ ಮೇಲ್ಮೈಯ ವಿಸ್ತಾರವಾದ ಸಮತಲಗಳು ಹೈಡ್ರೋಜೆನೋಲಿಸಿಸ್ ವೇಗವರ್ಧಕಗಳ ಕ್ಷೇತ್ರಗಳಾಗಿ ಕಾರ್ಯ ನಿರ್ವಹಿಸುತ್ತವೆ. ಸಂಪೂರ್ಣವಲ್ಲದ ಹೈಡ್ರೋಜೆನೆಶನ್ ನ ವೇಗವರ್ಧಕ ಕ್ಷೇತ್ರಗಳು ಸಣ್ಣದಿರುತ್ತವೆ. ಈ ರೀತಿಯಾಗಿ, ಸ್ವೇಚ್ಚೆಯಾಗಿ ಮೇಲ್ಮೈಯನ್ನು ಆವರಿಸುವ ನಂಜು, ಕಲುಷಿತಗೊಳ್ಳದ ಹಲವಾರು ವಿಸ್ತಾರವಾದ ಸಮತಲಗಳನ್ನು ಕಡಿಮೆ ಮಾಡುತ್ತದೆ ಆದರೆ ಸಣ್ಣ ಕ್ಷೇತ್ರಗಳನ್ನು ಪ್ರಮಾಣಾನುಗುಣವಾಗಿ ಮುಕ್ತಗೊಳಿಸುತ್ತದೆ, ಈ ರೀತಿ ಹೈಡ್ರೋಜೆನೆಶನ್ ಗೆ ವಿರುದ್ಧವಾಗಿ ಹೈಡ್ರೋಜೆನೋಲಿಸಿಸ್ ವಿಶಿಷ್ಟ ತರಂಗ ಗ್ರಾಹಕ ಸಾಮರ್ಥ್ಯವು ಬದಲಾಗುತ್ತದೆ. ಇತರ ಹಲವು ಯಾಂತ್ರಿಕ ವ್ಯವಸ್ಥೆಗಳೂ ಸಹ ಸಾಧ್ಯವಾಗುತ್ತವೆ.

ಪ್ರವರ್ತಕಗಳು ಕೋಕಿನ ಜಡೆಗಟ್ಟುವಿಕೆಯನ್ನು ತಡೆಗಟ್ಟಲು ಮೇಲ್ಮೈಯನ್ನು ಸುತ್ತುವರಿಯುತ್ತದೆ, ಅಥವಾ ಅಂತಹ ವಸ್ತುವನ್ನು ಸಕ್ರಿಯವಾಗಿ ತೆಗೆದುಹಾಕುತ್ತದೆ.(ಉದಾಹರಣೆಗೆ ಪ್ಲ್ಯಾಟ್ ಫಾರ್ಮಿಂಗ್ ನಲ್ಲಿ ಪ್ಲ್ಯಾಟಿನಮ್ ನಿಂದ ರೀನಿಯಂ ಅನ್ನು ತೆಗೆದುಹಾಕುತ್ತದೆ). ಇವುಗಳು ವೇಗವರ್ಧಕ ವಸ್ತುವಿನ ಪ್ರಸರಣಕ್ಕೆ ಸಹಾಯ ಮಾಡುತ್ತವೆ ಅಥವಾ ಕಾರಕಗಳಿಗೆ ಬಂಧಿಯಾಗುತ್ತವೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಆಟೋಕ್ಯಾಟಲಿಸಿಸ್
  • BIG-NSE (ಬರ್ಲಿನ್ ಗ್ರ್ಯಾಜುಯೆಟ್ ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸಸ್ ಅಂಡ್ ಇಂಜಿನಿಯರಿಂಗ್)
  • ಕ್ಯಾಟಲಿಸ್ಟ್ಸ್ ಅಂಡ್ ಕ್ಯಾಟಲೈಸ್ಡ್ ರಿಯಾಕ್ಷನ್ಸ್ (ರಸಾಯನಶಾಸ್ತ್ರದ ಒಂದು ಪತ್ರಿಕೆ)
  • ಪರಿಸರಕ್ಕೆ ಸಂಬಂಧಿಸಿದ ಸರಣಿಕ್ರಿಯಾ ಪ್ರವರ್ತಕ
  • ಕಿಣ್ವ ವೇಗವರ್ಧನೆ
  • ಔಷಧ ಸಹಕಾರಿ
  • ಪ್ರಾವಸ್ಥೆ ಗಡಿಯ ವೇಗವರ್ಧನೆ
  • ಪ್ರಾವಸ್ಥೆ ವರ್ಗಾವಣೆ ವೇಗವರ್ಧಕ
  • ರೈಬೋಜೈಮ್ (RNA ಬಯೋಕ್ಯಾಟಲಿಸಿಸ್ )
  • SUMO ಕಿಣ್ವಗಳು
  • ತಾಪಮಾನ-ಯೋಜಿತ ಇಳಿಕೆ
  • ಶಾಖಧಾರಕ ವಿಚೂಷಣ ರೋಹಿತ ದರ್ಶನ
  • ಕೆಲ್ವಿನ್ ಪ್ರೋಬ್ ಫೋರ್ಸ್ ಮೈಕ್ರೋಸ್ಕೋಪ್

ಪರಾಮರ್ಶನಗಳು

[ಬದಲಾಯಿಸಿ]
  1. "The 12 Principles of Green Chemistry". United States Environmental Protection Agency. Archived from the original on 2006-09-23. Retrieved 2006-07-31.
  2. "Genie in a Bottle". University of Minnesota. 2005-03-02.
  3. ಮಸೇಲ್, ರಿಚರ್ಡ್ I. “ಕೆಮಿಕಲ್ ಕೈನೆಟಿಕ್ಸ್ ಅಂಡ್ ಕ್ಯಾಟಲಿಸಿಸ್ " ವಿಲೇಯ್-ಇಂಟರ್ಸೈನ್ಸ್, ನ್ಯೂಯಾರ್ಕ್, 2001. ISBN 0-471-24197-0
  4. ಕೆಮಿಕಲ್ & ಇಂಜಿನಿಯರಿಂಗ್ ನ್ಯೂಸ್, 16 ಫೆಬ್ರವರಿ 2009, "ಮೇಕಿಂಗ್ ವಾಟರ್ ಸ್ಟೆಪ್ ಬೈ ಸ್ಟೆಪ್", ಪುಟ 10
  5. ರಾಬರ್ಟ್ಸನ್, A.J.B. ಕ್ಯಾಟಲಿಸಿಸ್ ಆಫ್ ಗ್ಯಾಸ್ ರಿಯಾಕ್ಷನ್ಸ್ ಬೈ ಮೆಟಲ್ಸ್. ಲೋಗೊಸ್ ಪ್ರೆಸ್, ಲಂಡನ್, 1970.
  6. ಹೆಲ್ಮಟ್ ನೋಜಿಂಗರ್, ಕಾರ್ಲ್ ಕೊಚ್ಲೋಎಲ್ಫ್ "ಹೆಟಿರೋಜೀನಿಯಸ್ ಕ್ಯಾಟಲಿಸಿಸ್ ಅಂಡ್ ಸಾಲಿಡ್ ಕ್ಯಾಟಲಿಸಿಸ್" ಉಲ್ಲ್ಮನ್'ಸ್ ಎನ್ಸೈಕ್ಲೋಪೀಡಿಯ ಆಫ್ ಇಂಡಸ್ಟ್ರಿಯಲ್ ಕೆಮಿಸ್ಟ್ರಿ 2002, ವಿಲೆಯ್-VCH, ವೆಯಿನ್ ಹೆಯಿಂ. [10]. ಆನ್ಲೈನ್ ನಲ್ಲಿ ಲೇಖನದ ಪೋಸ್ಟಿಂಗ್ ದಿನಾಂಕ: ಜನವರಿ 15, 2003
  7. ಅರ್ನೋ ಬೆಹ್ರ್ "ಆರ್ಗನೋಮೆಟಾಲಿಕ್ ಕಾಂಪೌಂಡ್ಸ್ ಅಂಡ್ ಹೊಮೊಜೀನಿಯಸ್ ಕ್ಯಾಟಲಿಸಿಸ್" ಉಲ್ಲ್ಮನ್'ಸ್ ಎನ್ಸೈಕ್ಲೋಪೀಡಿಯಾ ಆಫ್ ಇಂಡಸ್ಟ್ರಿಯಲ್ ಕೆಮಿಸ್ಟ್ರಿ, 2002, ವಿಲೆಯ್-VCH, ವೆಯಿನ್ ಹೆಯಿಂ. doi:10.1002/14356007.a18_215. ಆನ್ಲೈನ್ ನಲ್ಲಿ ಲೇಖನದ ಪೋಸ್ಟಿಂಗ್ ದಿನಾಂಕ: ಜೂನ್ 15, 2000
  8. ಎಲ್ಸ್ಚೆನ್ ಬೋರಿಚ್, C. ”ಆರ್ಗನೋಮೆಟಾಲಿಕ್ಸ್" (2006) ವಿಲೇಯ್-VCH: ವೆಯಿನ್ ಹೆಯಿಂ. ISBN 978-3-29390-6
  9. "ರೆಕಗ್ನೈಸಿಂಗ್ ದಿ ಬೆಸ್ಟ್ ಇನ್ ಇನೋವೇಷನ್: ಬ್ರೇಕ್ ಥ್ರೂ ಕ್ಯಾಟಲಿಸಿಸ್". R&D ಮ್ಯಾಗಜಿನ್ , ಸೆಪ್ಟೆಂಬರ್ 2005, ಪುಟಗಳು 20.
  10. "ಆರ್ಕೈವ್ ನಕಲು" (PDF). Archived from the original (PDF) on 2008-05-17. Retrieved 2010-08-23.
  11. "Types of catalysis". Chemguide. Retrieved 2008-07-09.
  12. ನೆಲ್ಸನ್, D. L.; Cox, M. M. "ಲೆಹ್ ನಿಂಗರ್, ಪ್ರಿನ್ಸಿಪಲ್ಸ್ ಆಫ್ ಬಯೋಕೆಮಿಸ್ಟ್ರಿ" 3ನೇ ಸಂಪುಟ. ವರ್ತ್ ಪಬ್ಲಿಷಿಂಗ್: ನ್ಯೂಯಾರ್ಕ್, 2000. ISBN 1-57259-153-6
  13. K.J. ಲೈಡ್ಲರ್ ಹಾಗು J.H. ಮೆಯಿಸರ್, ಫಿಸಿಕಲ್ ಕೆಮಿಸ್ಟ್ರಿ, ಬೆಂಜಮಿನ್/ಕಂಮಿಂಗ್ಸ್ (1982), ಪುಟ.423
  14. M.W. Roberts (2000). "Birth of the catalytic concept (1800-1900)" (PDF). Catalysis Letters. 67 (1): 1–4. doi:10.1023/A:1016622806065.
  15. W.P. ಜೆನ್ಕ್ಕ್ಸ್, "ಕ್ಯಾಟಲಿಸಿಸ್ ಇನ್ ಕೆಮಿಸ್ಟ್ರಿ ಅಂಡ್ ಎಂಜೈಮಾಲಜಿ" ಮ್ಯಾಕ್ ಗ್ರಾವ್-ಹಿಲ್, ನ್ಯೂಯಾರ್ಕ್, 1969. ISBN 0-07-032305-4
  16. ಮೈರೋನ್ L ಬೆಂಡರ್, ಮಕೊಟೋ ಕೊಮಿಯಾಮ, ರೇಮಂಡ್ J ಬರ್ಜರೋನ್ "ದಿ ಬಯೋಆರ್ಗ್ಯಾನಿಕ್ ಕೆಮಿಸ್ಟ್ರಿ ಆಫ್ ಎಂಜೈಮ್ಯಾಟಿಕ್ ಕ್ಯಾಟಲಿಸಿಸ್" ವಿಲೇಯ್-ಇಂಟರ್ಸೈನ್ಸ್, ಹೊಬೋಕೆನ್, U.S., 1984 ISBN 0-471-05991-9

ಬಾಹ್ಯ ಕೊಂಡಿಗಳು

[ಬದಲಾಯಿಸಿ]