ವೃತ್ತಿಪರ ನೀತಿಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಪ್ಪೋಕ್ರಾಟಿಕ್ ಪ್ರಮಾಣವಚನ

ವೃತ್ತಿಪರ ನೀತಿಶಾಸ್ತ್ರ ವೃತ್ತಿಪರರ ನಿರೀಕ್ಷಿತ ವರ್ತನೆಯ, ವೈಯಕ್ತಿಕ, ಸಾಂಸ್ಥಿಕ ಮತ್ತು ಕಾರ್ಪೊರೇಟ್ ಗುಣಮಟ್ಟವನ್ನು ಒಳಗೊಂಡಿರುತ್ತದೆ.[೧] ಪದ ವೃತ್ತಿಪರತೆ ಎಂಬುದು ಮೂಲತಃ ಧರ್ಮದ ಪದ್ಧತಿಯ ಪ್ರತಿಜ್ಞೆಗಳಿಗೆ ಅನ್ವಯಿಸಲಾಗುತ್ತಿತ್ತು. ಪದ ಜಾತ್ಯತೀತಗೊಳಿಕೆಗೆ ಮತ್ತು ಮೂರು ಕಲಿತ ವೃತ್ತಿಗಳಾದ ದೇವತಾಶಾಸ್ತ್ರ, ಕಾನೂನು, ಮತ್ತು ವೈದ್ಯಕೀಯ ಅನ್ವಯಿಸಲಾಯಿತು.[೨]ಇದೇ ಸಮಯದಲ್ಲಿ ಪದ ವೃತ್ತಿಪರತೆ ಮಿಲಿಟರಿ ವೃತ್ತಿಗೆ ಕೂಡ ಬಳಸಲಾಯಿತು. ವೃತ್ತಿಪರರು ಮತ್ತು ಅಂಗೀಕರಿಸಲ್ಪಟ್ಟ ವೃತ್ತಿಗಳಲ್ಲಿ ಕೆಲಸ ಮಾಡುವವರಿಗೆ ವಿಶೇಷ ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿರುತ್ತಾರೆ. ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವಾಗ ಹೇಗೆ ಈ ಜ್ಞಾನದ ಬಳಕೆಯನ್ನು ನಿರ್ಣಯಿಸಬೇಕು ಎಂಬುದು ಒಂದು ನೈತಿಕ ವಿಷಯವನ್ನಾಗಿ ಪರಿಗಣಿಸುವುದನ್ನು ವೃತ್ತಿಪರ ನೀತಿಶಾಸ್ತ್ರ ಎಂದು ಕರೆಯಲಾಗುತ್ತದೆ.[೩] ವೃತ್ತಿಪರರು ಸಾಮಾನ್ಯ ಸಾರ್ವಜನಿಕರು ಸೂಕ್ತ ತರಭೇತಿ ಪಡೆದಿಲ್ಲದಿರುವ ಕಾರಣ, ಅವರಿಗಾಗದಿರುವ ಸಂದರ್ಭಗಳಲ್ಲಿ ತಮ್ಮ ಕೌಶಲಗಳನ್ನು ಅನ್ವಯಿಸುತ್ತಾ ಮತ್ತು ತಿಳಿವಳಿಕೆಯುಳ್ಳ ತೀರ್ಮಾನ ತೆಗೆದುಕೊಳ್ಳುವತ್ತ ತೀರ್ಮಾನಗಳನ್ನು ಮಾಡುವುದರಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತಾರೆ.[೪] ವೈದ್ಯಕೀಯ ವೈದ್ಯರು ಇಲ್ಲಿಯವರೆಗೂ ಅಂಟಿಕೊಂಡಿರುವ ಹಿಪೊಕ್ರೆಟಿಕ್ ಪ್ರಮಾಣವು ವೃತ್ತಿಪರ ನೀತಿಶಾಸ್ತ್ರಕ್ಕೆ ಆರಂಭಿಕ ಉದಾಹರಣೆಗಳಲ್ಲಿ ಒಂದು.

ಅ೦ಗಗಳು[ಬದಲಾಯಿಸಿ]

ಕೆಲವು ವೃತ್ತಿಪರ ಸಂಸ್ಥೆಗಳು ತಮ್ಮ ನೀತಿಸಂಹಿತೆಯ ಕ್ರಮಗಳನ್ನು ಅನೇಕ ವಿಭಿನ್ನ ಅಂಗಗಳ ಪ್ರಕಾರವಾಗಿ ನಿರೂಪಿಸುವವು.[೫] ಸಾಮಾನ್ಯವಾಗಿ ಅವುಗಳೆಂದರೆ:

 1. ಪ್ರಾಮಾಣಿಕತೆ
 2. ಸಮಗ್ರತೆ
 3. ಪಾರದರ್ಶಕತೆ
 4. ಹೊಣೆಗಾರಿಕೆ
 5. ಗೋಪ್ಯತೆ
 6. ವಸ್ತುನಿಷ್ಠತೆ
 7. ಗೌರವಪೂರ್ಣತೆ
 8. ಕಾನೂನು ವಿಧೇಯತೆ
 9. ನಿಷ್ಠೆ

ಅಳವಡಿಕೆ[ಬದಲಾಯಿಸಿ]

ಹೆಚ್ಚಿನ ವೃತ್ತಿಪರರು ತಮ್ಮ ಗ್ರಾಹಕರ ಶೋಷಣೆಯನ್ನು ತಪ್ಪಿಸಲು ಮತ್ತು ತಮ್ಮ ವೃತ್ತಿಯ ಸಮಗ್ರತೆಯನ್ನು ಉಳಿಸಿಕೊಳ್ಳಲು ವೃತ್ತಿಯ ಸದಸ್ಯರುಗಳು ಪಾಲಿಸುವಂತೆ ಮಾಡಲು ಆಂತರಿಕವಾಗಿ ಆಚರಣೆಯ ನಿಯಮಗಳನ್ನು ಜಾರಿಗೆ ತರುವರು. ಇದು ಕಕ್ಷಿದಾರರಿಗೆ ಅನುಕೂಲವಾಗುವುದಲ್ಲದೆ ವೃತ್ತಿಗೆ ಸೇರಿದ ಎಲ್ಲರಿಗೂ ಒಳಿತಾಗುವುದು. ಶಿಸ್ತಿನ ಕ್ರಮಗಳು ನಡವಳಿಕೆಯ ಒಂದು ಮಾನದಂಡವನ್ನು ನಿರೂಪಿಸಲು ವೃತ್ತಿಗೆ ಅನುಮತಿ ಕೊಡುವುದು, ಅಲ್ಲದೆ ಪ್ರತಿಯೊಬ್ಬ ವೃತ್ತಿಪರರಿಗೆ ಮಾನದಂಡವನ್ನು ತಲುಪಲು ಖಚಿತಪಡಿಸುವುದು. ಅದರಂತೆ ಆಚರಣೆಯಲ್ಲಿ ತರದಿದ್ದರೆ ವೃತ್ತಿಪರ ಸಂಸ್ಥೆಗಳಿಂದ ಶಿಸ್ತಿಗೆ ಒಳಪಡುವವು. ಇವುಗಳು ಸ್ವಲ್ಪವೇ ನೀತಿವಂತರಾಗಿ ಅಳಕಿರುವ ವ್ಯವಹಾರದಲ್ಲಿ ದುರ್ಬಲಗೊಳಿಸುವವರಿಂದ ವೃತ್ತಿಪರರು ಆತ್ಮಸಾಕ್ಷಿಯಿಂದ ಜ್ಞಾನದಲ್ಲಿ ಕೆಲಸ ಮಾಡಲು ಬಿಡುವವು. ಅಲ್ಲದೆ ಇದು ವೃತ್ತಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಿಕೊಳ್ಳುವುದು, ಸಾರ್ವಜನಿಕರನ್ನು ಪ್ರೋತ್ಸಾಹಿಸುತ್ತಾ ಅವರ ಸೇವೆಗಳನ್ನು ಪಡೆದುಕೊಳ್ಳುವುದು ಮುಂದುವರೆಯುವುದು.

ಆಂತರಿಕ ನಿಯಂತ್ರಣ[ಬದಲಾಯಿಸಿ]

ಕೆಲವು ಪ್ರಕರಣಗಳಲ್ಲಿ ವೃತ್ತಿಪರ ಸಂಸ್ಥೆಗಳು ತಮ್ಮ ಸ್ವಂತ ನೀತಿ ಸಂಹಿತೆಗಳನ್ನು ನಿಯಂತ್ರಿಸುತ್ತವೆಯೋ ಆ ಸಂಸ್ಥೆಗಳು ಸ್ವಯಂ ಮಾಡಿಕೊಳ್ಳುವವರಂತಾಗಿ ಪಕ್ಷದ್ರೋಹಿ ಸದಸ್ಯರುಗಳ ಜೊತೆ ವ್ಯವಹಾರ ಮಾಡುವಾಗ ತಮ್ಮ ಸ್ವಂತ ನೀತಿ ಸಂಹಿತೆ ಕ್ರಮಗಳನ್ನು ಅನುಸರಿಸದೆ ವಿಫಲರಾಗುವರು. ಈ ವಿಷಯವು ಅವರು ಸಂಪೂರ್ಣವಾಗಿ ಒಂದು ಜ್ಞಾನದ ಕ್ಷೇತ್ರದಲ್ಲಿ ಹಿಡಿತವನ್ನು ಹೊಂದಿರುತ್ತಾರೋ ಆ ವೃತ್ತಿಯಲ್ಲಿ ಸಂಪೂರ್ಣವಾಗಿ ಸರಿಯಾಗಿರುವುದು. ಉದಾಹರಣೆಗೆ ಇತ್ತೀಚಿನವರೆಗೂ ತಮ್ಮ ಕಾನೂನಿನ ಪ್ರಕರಣ ಮತ್ತು ಶಾಸನದಿಂದ ಹೊರಗಿರುವ ತಮ್ಮ ವೃತ್ತಿಗೆ ಸಂಬಂಧಿತ ವಿ‍ಷಯಗಳ ಮೇಲೆ ವೃತ್ತಿಪರ ಒಮ್ಮತತೆಯನ್ನು ಇಂಗ್ಲೀಷ್ ನ್ಯಾಯಾಲಯಗಳು ತಡೆಹಿಡಿದಿದ್ದವು.[೬] ವೃತ್ತಿಪರ ಎಂದರೆ ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಜ್ಞಾನವನ್ನು ಹೊಂದಿರುವುದು.

ಶಾಸನ ಬದ್ಧ ನಿಯಂತ್ರಣ[ಬದಲಾಯಿಸಿ]

ಬಹಳ ದೇಶಗಳಲ್ಲಿ ವೃತ್ತಿಪರ ನೀತಿಯ ಮಾನದಂಡಗಳ ಶಾಸನಬದ್ದ ನಿಯಂತ್ರಣವಿರುವುದು. ಇಂಗ್ಲೆಂಡ್ ಮತ್ತು ವೇಲ್ ನಲ್ಲಿ ನರ್ಸಿಂಗ್ ಮತ್ತು ಮಿಡ್ ವೈಫೈಯನ್ನು ನಿಯಂತ್ರಿಸುವ ಶಾಸನಬದ್ಧ ಸಂಸ್ಥೆಗಳು ಈ ಮಾನದಂಡಗಳನ್ನು ಅನುಸರಿಸಲು ವಿಫಲರಾಗುವುದೆಂದರೆ ನ್ಯಾಯಾಲಯಕ್ಕೆ ಒಂದು ವಿಷಯವಾದಂತೆ.[೭]

ಉದಾಹರಣೆಗಳು[ಬದಲಾಯಿಸಿ]

ಉದಾಹರಣೆಯೆಂದರೆ, ಕಾರಿನ ಅಪಘಾತದಲ್ಲಿ ನೊಂದವನಿಗೆ ಸಹಾಯ ಪಡೆಯಲು ಪ್ರಯತ್ನಿಸುವ ಹೊಣೆ ಓರ್ವ ಸಾಮಾನ್ಯನಾದ ನಾಗರಿಕನದ್ದಾದರೂ, ನೊಂದ ವ್ಯಕ್ತಿಗೆ ಸೂಕ್ತ ಚಿಕಿತ್ಸೆಕೊಡಿಸಲಾರದೆ ಹೋದನೆಂದು, ಆ ವ್ಯಕ್ತಿಯನ್ನು ಉಳಿಸಲು ವಿಫಲನಾದ ದಕ್ಕೆ ಹೊಣೆಗಾರನನ್ನು ಮಾಡಲು ಬರುವುದಿಲ್ಲ. ಅವರು ನಿರ್ದಿಷ್ಟ ಜ್ಞಾನದಲ್ಲಿ ಬಹುತೇಕ ಸಂಪೂರ್ಣ ಏಕಸ್ವಾಮ್ಯ ಹೊಂದಿರುವ ವೃತ್ತಿಗಳಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ಇತ್ತೀಚಿನವರೆಗೂ, ಇಂಗ್ಲೀಷ್ ನ್ಯಾಯಾಲಯಗಳು ಕಾನೂನು ಮತ್ತು ಶಾಸನ ಹೊರಗೆ ಇರುವ ತಮ್ಮ ವೃತ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ವೃತ್ತಿಪರ ಒಮ್ಮತದ ನಿರ್ಣಯವನ್ನು ಮುಂದೂಡುತ್ತಿದ್ದವು.[೮]

ವಿದ್ಯಾರ್ಥಿ ನೀತಿಸಂಹಿತೆ[ಬದಲಾಯಿಸಿ]

ಯುವಜನರಲ್ಲಿ ಜೀವನದಲ್ಲಿ ಪ್ರೌಢ ಶಿಕ್ಷಣದ ನಂತರ ಕಾಲೇಜು ಶಿಕ್ಷಣವು ಒಂದು ಮಾನದಂಡವೆನಿಸಿದರೂ, ಕಾಲೇಜು-ವಿಶ್ವವಿದ್ಯಾಲಯಗಳು ವ್ಯಾಪಾರದಂತೆ ಆಗುತ್ತಿದೆಯೆಂದು, ವಿದ್ಯಾರ್ಥಿ ಸಮುದಾಯವು ನಿರೀಕ್ಷಿಸಿವುದು. ಇದು ಪರಿಣಾಮಕಾರಿಯಾದಲ್ಲಿ, ಜನರು ಇವುಗಳ ಬಗ್ಗೆ ಭಿನ್ನ ಅಭಿಪ್ರಾಯಗಳು ಹೊಂದಿದ್ದರೂ, ಸಮೀಕ್ಷೆಗಳು ಇದು ವಿಶ್ವವಿದ್ಯಾಲಯದ ಆಡಳಿತಗಾರರ ಗುರಿಯೆಂದು ಸೂಚಿಸುತ್ತವೆ.[೯] ಒಂದು ವ್ಯವಹಾರದ ರೀತಿಯ ವಾತಾವರಣವನ್ನು ನಿರ್ಮಿಸುವುದು ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಪದವಿ ಪಡೆದ ನಂತರ ಪ್ರೌಢಶಾಲೆಯದಂತೆ ಹೆಚ್ಚು ಅರಾಮಾಗಿರುವ ಪ್ರಕೃತಿಯಿಂದ ವ್ಯಾಪಾರ ಪ್ರಪಂಚದಲ್ಲಿ ಏನು ಬೇಕೋ ಅದರ ಕಡೆಗೆ ಸಾಗಲು ಸಹಾಯವಾಗುವುದು.

ನೀತಿ ಸಂಹಿತೆ[ಬದಲಾಯಿಸಿ]

ಸೇಂಟ್ ಕ್ಸೇವಿಯರ್ ಕೋಡ್ ಮುಂತಾದ ನೀತಿ ಸಂಹಿತೆಯು, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಹೆಚ್ಚು ಮುಖ್ಯವಾಗುತ್ತಲಿದೆ.[೧೦] ಇವುಗಳಲ್ಲಿ ಕೆಲವು ನಿಯಮಗಳು ಶೈಕ್ಷಣಿಕವನ್ನು ಆಧರಿಸಿ ಇದ್ದರೂ, ಸಿಬ್ಬಂದಿಯತ್ತ ನಿರೀಕ್ಷಿತ ಗೌರವ ಮಟ್ಟದ ವಿವರಿಸುವ ಮತ್ತು ಜೂಜಿನ ವಿಚಾರಗಳು ಮುಂತಾದ ಇನ್ನೂ ಉಳಿದವುಗಳು ಹಿಂದಿನ ವರ್ಷಗಳಿಗಿಂತ ಹೆಚ್ಚು ಆಳವಾಗಿರುವುದು.

ನೀತಿ ಸಂಹಿತೆಯು ಸ್ವದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವಾಗ ಮಾತ್ರವಲ್ಲದೇ, ವಿದೇಶದಲ್ಲಿ ಅಧ್ಯಯನ ಮಾಡುವಾಗ ಸಹ ಅನ್ವಯಿಸುವುದು, ವಿದ್ಯಾಲಯಗಳು ಬಹಳಷ್ಟು ವಿದ್ಯಾರ್ಥಿಯ ಕೈಪಿಡಿಯಲ್ಲಿ ಕಂಡುಬರುವಂತೆ ವಿದೇಶದ ಅಂತರಾಷ್ಟ್ರೀಯ ಅದ್ಯಯನ ಕಾರ್ಯಕ್ರಮಗಳಿಗೂ ಒಂದು ನೀತಿ ಸಂಹಿತೆಯನ್ನು ಕಾರ್ಯಗತಗೊಳಿಸುವವು.[೧೧]

ಹೆಚ್ಚಿನ ಓದು[ಬದಲಾಯಿಸಿ]

ಇವುಗಳನ್ನೂ ಓದಿ[ಬದಲಾಯಿಸಿ]

Business ethics

ಉಲ್ಲೇಖಗಳು[ಬದಲಾಯಿಸಿ]

 1. Royal Institute of British Architects - Code of professional conduct
 2. "Professionalism and Ethics" (PDF). Archived from the original (PDF) on 2016-07-05.
 3. Ruth Chadwick (1998). Professional Ethics. In E. Craig (Ed.), Routledge Encyclopedia of Philosophy. London: Routledge. Retrieved October 20, 2006, from http://www.rep.routledge.com/article/L077
 4. Caroline Whitbeck, "Ethics in Engineering Practice and Research" Cambridge University Press, 1998 page 40
 5. RICS- MAINTAINING PROFESSIONAL AND ETHICAL STANDARDS
 6. Margaret Brazier, ‘’Medicine, Patients and the Law’’, Penguin, 1987 page 147
 7. "The Bristol Royal Infirmary inquiry-Professional regulation - nursing: the UKCC". Archived from the original on 2012-07-29. Retrieved 2016-03-13.
 8. Margaret Brazier, ‘’Medicine, Patients and the Law’’, Penguin, 1987 page 147
 9. "Are Colleges Preparing Students For The Workplace".
 10. "ಆರ್ಕೈವ್ ನಕಲು". Archived from the original on 2016-03-04. Retrieved 2017-02-18.
 11. "Student Conduct". Archived from the original on 2015-09-06. Retrieved 2017-03-25.