ವೂಶೂ
Jump to navigation
Jump to search
ವೂಶೂ ಅಥವಾ ವುಶು ಕ್ರೀಡೆಯು ಚೀನಾ ದೇಶದ ಸಾಂಪ್ರದಾಯಿಕ ಸಮರಕಲೆಯಾಗಿದೆ. ಇದು ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಕಲೆಯ ಜನಕ ಭೋಧಿಧರ್ಮ ದಕ್ಷಿಣ ಭಾರತೀಯ ಕ್ಷತ್ರಿಯ ಅರಸು. ಈ ಮಹಾನ್ ಭಾರತೀಯ ಚೇತನ ಕಲಿಸಿದ ಕಲರಿ ಕಲೆಯೇ ಇಂದಿನ ಈ ವುಶು.
ಬೌದ್ಧ ಮತ್ತು ತಾವೋ ಧರ್ಮಿಯರು ತಮ್ಮ ಮೇಲೆ ಅನ್ಯ ಧರ್ಮಿಯರು ನಡೆಸುತ್ತಿದ್ದ ಆಕ್ರಮಣಗಳನ್ನು ಎದುರಿಸಲು ಸಮರ ಕಲೆ ‘ವುಶು’ವನ್ನು ಕರಗತ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಕಾಲಾಂತರದಲ್ಲಿ ಮಾರ್ಪಾಡು ಗೊಂಡು ಇಂದು ಕ್ರೀಡಾ ಪ್ರದರ್ಶನ ಕಲೆಯಾಗಿ ಉಳಿದುಕೊಂಡಿದೆ.
೧೯೨೮ರಲ್ಲಿ ಚೀನಿ ವುಶು ಸಂಸ್ಥೆ ಹುಟ್ಟಿಕೊಂಡಿತು. ೧೯೩೬ರಲ್ಲಿ ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ವುಶು ಕ್ರೀಡೆ ಪ್ರದರ್ಶಿಸಲ್ಪಟ್ಟಿತು. ವುಶು ಭಾರತಕ್ಕೆ 1989ರಲ್ಲಿ ಪ್ರವೇಶಿಸಿತು,ಪರುಶುರಾಮ ವಿರಚಿತ ಯುದ್ಧ ಕಲೆಗಳಲ್ಲಿ ಈ ಕಲೆಯನ್ನು ಕರ್ನಾಟಕದಲ್ಲಿ ಕೀಪುಮಾ ಸಮರಕಲೆ ಎಂದು ಕಲೆಯಲಾಗುತ್ತಿದೆ!.