ವೀಣಾ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿರ್ದೇಶಕಿ ಶೃತಿ ನಾಯ್ಡು ರವರ ಚಿ.ಸೌ.ಸಾವಿತ್ರಿ ಕನ್ನಡ ಧಾರಾವಾಹಿಯಲ್ಲಿ ಅಹಲ್ಯಾ ಎಂಬ ಮಹಿಳೆಯ ಪಾತ್ರದಲ್ಲಿ ಅಭಿನಯಿಸುತ್ತಿರುವ ವೀಣಾ ರಾವ್ ತಮ್ಮ ನಟನಾ ಸಾಮರ್ಥ್ಯಕ್ಕಾಗಿ, ಎಲ್ಲರಿಂದ ಮೆಚ್ಚುಗೆ ಗಳಿಸಿದ್ದಾರೆ. ದತ್ತಣ್ಣ ನಂತಹ ಹಿರಿಯ ಕಲಾವಿದರೂ ಲೇವಡಿಗಾಗಿ ವೀಣಾರವರನ್ನು ಲೇಡಿ ವಜ್ರಮುನಿ ಎಂದು ಸಂಬೋಧಿಸುತ್ತಾರೆ. ಜಯಂತಿ, ಬಿ.ವಿ.ರಾಧ ಸೇರಿದಂತೆ, ಇನ್ನಿತರೆ ಹಿರಿಯ ಅಭಿನೇತ್ರಿಯರು ಮತ್ತು ಅಪರಿಚಿತ ಮಹಿಳೆಯರೂ ವೀಣಾ ರಾವ್ ರವರನ್ನು ಕಂಡಾಗ ಚೆನ್ನಾಗಿ ಹೊಡೆದು ಶಿಕ್ಷಿಸುವ ಪ್ರಬಲ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಹೀಗಾಗಿ ಅವರೆಲ್ಲಾ ವೀಣಾರವರ ಅಭಿನಯದ ಮೋಡಿಗೆ ಒಳಗಾಗಿದ್ದಾರೆ.

ಜನನ[ಬದಲಾಯಿಸಿ]

ವೀಣಾ ರಾವ್ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ತಂದೆ, ಲಕ್ಷ್ಮೀ ನರಸಿಂಹಯ್ಯ, ಶಿಕ್ಷಕರು. ಹಾಗಾಗಿ ಅವರಿಂದಾಗಿ ನಾಟಕದಲ್ಲಿ ಆಸಕ್ತಿ ಬೆಳೆಯಿತು. ಶಾಲೆ, ಕಾಲೇಜ್ ನಲ್ಲಿ ಓದುವಾಗ ನಾಟಕ, ನೃತ್ಯಗಳಲ್ಲಿ ಭಾಗವಹಿಸುತ್ತಿದ್ದರು.

ಮದುವೆ[ಬದಲಾಯಿಸಿ]

ವೀಣಾ ರಾವ್ ಸಮಯ ವಾರ್ತಾ ವಾಹಿನಿಯಲ್ಲಿ ವರದಿಗಾರರಾಗಿರುವ ಮಧುಸೂಧನ್ ರವರನ್ನು ಮದುವೆಯಾದರು.

ಗಯ್ಯಾಳಿ ಪಾತ್ರದಲ್ಲಿ[ಬದಲಾಯಿಸಿ]

ತಮ್ಮ ಕಣ್ಣಿನಿಂದಾಗಿ ವೀಣಾ ರಾವ್ ರವರಿಗೆ ಹೆಚ್ಚಾಗಿ ನೆಗೆಟೀವ್ ಪಾತ್ರಗಳೇ ದೊರೆಯುತ್ತಿವೆ. ನೆಗೆಟೀವ್ ಪಾತ್ರಗಳನ್ನು ಅಭಿನಯಿಸುವಾಗ ಕಣ್ಣಿನಪಾತ್ರವೇ ಹೆಚ್ಚಿನದು. ಅವರು ಸುಮಾರು ೨೦೦೪ ರಲ್ಲಿ ಕಿರುತೆರೆಯ ಧಾರಾವಾಹಿಗಳಲ್ಲಿ ಅಭಿನಯಿಸಲು ಅರಂಭಿಸಿದರು. ಗುಪ್ತಗಾಮಿನಿ, ಬದುಕು ಸೇರಿದಂತೆ ಹೆಚ್ಚಿನ ಧಾರಾವಾಹಿಗಳಲ್ಲಿ ನೆಗೆಟೀವ್ ಪಾತ್ರಗಳೇ ಅವರನ್ನು ಅರಸಿಬಂದಿವೆ.

ಕೆಲವು ಪಾತ್ರಗಳಿಗೆ ಬ್ರಾಂಡ್ ಆಗುವ ಸಾಧ್ಯತೆ[ಬದಲಾಯಿಸಿ]

ಆ ಹೆದರಿಕೆ ವೀಣಾರಿಗೂ ಕಾಡಿಸುತ್ತಿದೆ. ಹಾಗೇ ಬರುವ ಅವಕಾಶಗಳನ್ನು ಕೈಬಿಡಬೇಕಾಗುವ ಸಾಧ್ಯತೆಗಳನ್ನು ಅವರು ಪುಷ್ಟೀಕರಿಸುವುದಿಲ್ಲ.

ಒಳ್ಳೇಪಾತ್ರಗಳೂ ಸಿಕ್ಕಿವೆ[ಬದಲಾಯಿಸಿ]

ದಿಲೀಪ್ ರಾಜ್ ಜೋಡಿಯಲ್ಲಿ 'ಗೀತಾ' ಎಂಬ ಪಾತ್ರದಲ್ಲಿ ನಟಿಸಿದ 'ಮಾಂಗಲ್ಯ' ಧಾರಾವಾಹಿಯಲ್ಲಿ, ಸಭ್ಯ ಗೃಣಿಯ ಪಾತ್ರ ಜನಪ್ರಿಯತೆಯನ್ನು ತಂದುಕೊಟ್ಟಿತು.

ಅನಿಸಿಕೆ[ಬದಲಾಯಿಸಿ]

ಮೊದಲ ಧಾರಾವಾಹಿ, ವಠಾರ ಯಲ್ಲಿ 'ವೀಣಾ' ಎನ್ನುವ ಮತ್ತೊಬ್ಬ ಪಾತ್ರಧಾರಿ ಇದ್ದರು. ಇಬ್ಬರ ಮಧ್ಯೆ ಗೊಂದಲವನ್ನು ನಿವಾರಿಸಲು, ಆಗ ರಾವ್ ಎಂಬ ಹೆಸರನ್ನು ಜೊತೆಗೆ ಸೇರಿಸಲು ಯಾರೋ ಸಲಹೆಮಾಡಿದರು. ಅಭಿನಯ ಜಗತ್ತಿಗೆ ಪಾದಾರ್ಪಣೆ ಮಾಡಿದ ಮೇಲೆ ಯಾವ ಪಾತ್ರವನ್ನಾದರೂ ಮಾಡುವ ಮನೋಭಾವ ಇರಬೇಕು. ಪ್ರತಿ ಧಾರಾವಾಹಿಲ್ಲೂ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ತಾವು ಇಚ್ಛಿಸುವುದಾಗಿ ಅಭಿಪ್ರಾಯಪಡುತ್ತಾರೆ.